ಭಾರತದ ಪ್ರತಿಷ್ಠಿತ ಇಂಧನ ಸಂಸ್ಥೆಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ 2026 ನೇ ಸಾಲಿನಲ್ಲಿ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಇಂಜಿನಿಯರಿಂಗ್ ಹಾಗೂ ವೃತ್ತಿಪರ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
BPCL Recruitment 2026
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಟೀಮ್ ಲೀಡ್, ತಾಂತ್ರಿಕ ಅಧಿಕಾರಿ, ಕಂಪನಿ ಸೆಕ್ರೆಟರಿ ಸೇರಿದಂತೆ ಇನ್ನಿತರ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕಾ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ದಿನಾಂಕ 31-05-2026 ರಿಂದ ಆರಂಭಗೊಂಡು 20-06-2026 ಕ್ಕೆ ಕೊನೆಗೊಳ್ಳುತ್ತದೆ. ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 50,000/- ದಿಂದ 2,80,000/- ವರಗೆ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಹುದ್ದೆಯ ವಿವರಣಾತ್ಮಕ ನೋಟ:
| ನೇಮಕಾತಿ ಸಂಸ್ಥೆಯ ಹೆಸರು | ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ |
| ಹುದ್ದೆಯ ಹೆಸರು | ಟೀಮ್ ಲೀಡ್, ತಾಂತ್ರಿಕ ಅಧಿಕಾರಿ, ಕಂಪನಿ ಸೆಕ್ರೆಟರಿ, ಸೈಟ್ ಮ್ಯಾನೇಜರ್ ಹಾಗೂ ವಿವಿಧ ಹುದ್ದೆಗಳು |
| ಹುದ್ದೆಯ ಸಂಖ್ಯೆ | ಒಟ್ಟು 55 ಹುದ್ದೆಗಳು |
| ಉದ್ಯೋಗ ಸ್ಥಳ | ಅಖಿಲ ಭಾರತ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-06-2026 |
ಹುದ್ದೆಯ ಸಂಕ್ಷಿಪ್ತ ವಿವರ:
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 55 ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಹುದ್ದೆಗಳನ್ನು ವಿವಿಧ ವಿಭಾಗಗಳ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. ಅವುಗಳ ವಿವರ ಈ ಕೆಳಕಂಡಂತಿದೆ.
| ವಿವಿಧ ವಿಭಾಗಗಳು | ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಭಾರತ್ ಪೆಟ್ರೋ ರಿಸೋರ್ಸಸ್ ಲಿಮಿಟೆಡ್ | ಟೀಮ್ ಲೀಡ್ – ಪರಿಶೋಧನೆ | 02 ಹುದ್ದೆಗಳು |
| ಟೀಮ್ ಲೀಡ್ – ಆಸ್ತಿ ವ್ಯವಸ್ಥಾಪಕ | 02 ಹುದ್ದೆಗಳು | |
| ಟೀಮ್ ಲೀಡ್ – ಜಲಾಶಯ ಇಂಜಿನಿಯರ್ | 01 ಹುದ್ದೆಗಳು | |
| ಕಂಪನಿ ಕಾರ್ಯದರ್ಶಿ | ಟೀಮ್ ಲೀಡ್ | 02 ಹುದ್ದೆಗಳು |
| ಟೀಮ್ ಮೆಂಬರ್ | 02 ಹುದ್ದೆಗಳು | |
| ಹಣಕಾಸು | ಟೀಮ್ ಲೀಡ್/ ಟೀಮ್ ಮೆಂಬರ್ – ಹಣಕಾಸು | 15 ಹುದ್ದೆಗಳು |
| ಪೆಟ್ರೋ ಕೆಮಿಕಲ್ಸ್ | ಹೆಡ್ ಸೇಲ್ಸ್ -ಪೆಟ್ರೋ ಕೆಮಿಕಲ್ ಕಾರ್ಯಪಡೆ | 01 ಹುದ್ದೆಗಳು |
| ತಾಂತ್ರಿಕ ಅಧಿಕಾರಿ – ಪಾಲಿಮರ್ ಮಾರ್ಕೆಟಿಂಗ್ | 02 ಹುದ್ದೆಗಳು | |
| ವೇಸೈಡ್ ಸೌಲಭ್ಯಗಳು | ಟೀಮ್ ಲೀಡ್ – ಹೆದ್ದಾರಿ ವಿಶ್ರಾಂತಿ ನಿಲ್ದಾಣ | 05 ಹುದ್ದೆಗಳು |
| ಸೈಟ್ ಮ್ಯಾನೇಜರ್ – ಹೆದ್ದಾರಿ ವಿಶ್ರಾಂತಿ ನಿಲ್ದಾಣ | 23 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, Ph.D, ಐಸಿಡಬ್ಲ್ಯೂಎ/ಸಿಎ, ಬಿಇ/ಬಿಟೆಕ್, ಎಲ್.ಎಲ್.ಬಿ, ಎಂಬಿಎ ಹಾಗೂ ಎಂಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
- ಜೊತೆಗೆ ಸಂಬಂಧಿತ ವಲಯದಲ್ಲಿ ಕನಿಷ್ಠ 7 ರಿಂದ 10 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿರಬೇಕು.
ವಯೋಮಿತಿ ವಿವರ:
- ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 35 ವರ್ಷದಿಂದ ಗರಿಷ್ಟ 50 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿಯನ್ನು 01-04-2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ.
ವಯೋಮಿತಿ ಸಡಿಲಿಕೆ ವಿವರ:
| ವರ್ಗಗಳು | ವಯೋಮಿತಿ ಸಡಿಲಿಕೆ ವಿವರ |
| ಒಬಿಸಿ | 3 ವರ್ಷ |
| SC/ST | 5 ವರ್ಷ |
| ಮಾಜಿ ಸೈನಿಕ | 5 ವರ್ಷ |
| ಪಿಡಬ್ಲ್ಯೂಬಿಡಿ | 10 ವರ್ಷ |
ಅರ್ಜಿ ಶುಲ್ಕ:
ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಆನ್ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಯು.ಆರ್, ಒಬಿಸಿ (ಏನ್,ಸಿ,ಎಲ್), ಇ,ಡಬ್ಲ್ಯೂ,ಎಸ್ ಅಭ್ಯರ್ಥಿಗಳಿಗೆ: ರೂ. 1000 + 18% GST
- SC/ST, ಪಿ.ಡಬ್ಲ್ಯೂ.ಬಿ.ಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ವೇತನ ಶ್ರೇಣಿ:
- ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ರೂ. 50,000/- ದಿಂದ ರೂ. 2,80,000/- ವರೆಗೆ ವೇತನವನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ಮೂಲ ದಾಖಲೆಗಳನ್ನು ಬಳಸಿ ರಿಜಿಸ್ಟ್ರೇಷನ್ ಪ್ರೋಸೆಸ್ ಪೂರ್ಣಗೊಳಿಸಿ ನಂತರ ರೆಜಿಸ್ಟರ್ ನಂಬರ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
- ನಂತರ ಅಫ್ಲಿಕೇಷನ್ ಫಾರ್ಮ್ ನಲ್ಲಿ ಶೈಕ್ಷಣಿಕ ವಿವರ, ವಯೋಮಿತಿ ವಿವರ, ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ನಂತರ ಅಭ್ಯರ್ಥಿಗಳ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಅಭ್ಯರ್ಥಿಗಳ ಸಹಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಸೇರಿದಂತೆ ಇನ್ನಿತರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ವೈಯಕ್ತಿಕ ಸಂದರ್ಶನ
- ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 31-05-2026 |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-06-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 20-06-2026 |
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ತಾಂತ್ರಿಕ ಅಧಿಕಾರಿ, ಟೀಮ್ ಲೀಡ್ ಸೇರಿದಂತೆ ಇನ್ನಿತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಹುದ್ದೆಗೆ ಸಂಬಂಧಿಸಿದ ಅರ್ಹತೆಯನ್ನು ಖಚಿತಪಡಿಸಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- CET Prize Money ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ₹14,000 ಪ್ರೋತ್ಸಾಹಧನ? ಸಂಪೂರ್ಣ ಮಾಹಿತಿ!
- 20K ಪ್ರತಿಯೊಬ್ಬ ರೈತರ ಹೆಂಡತಿಗೆ ₹20,000/- ಸಹಾಯಧನ? – ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಂಪೂರ್ಣ ಮಾಹಿತಿ?
- TC: DK ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ರೈತರಿಗೆ ದೊಡ್ಡ ಸಿಹಿ ಸುದ್ದಿ! ಉಚಿತ ಟ್ರಾನ್ಸ್ಫಾರ್ಮರ್ ಘೋಷಣೆ
- Bus Pass : ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಯೋಜನೆ 2026 – ಆನ್ಲೈನ್ ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ!