Naati Koli: ನೀವೇನಾದರೂ ನಾಟಿ ಕೋಳಿ ಸಾಕಾಣಿಕೆ ಮಾಡಿ ಸ್ಥಿರ ಆದಾಯವನ್ನು ಗಳಿಸಬೇಕೆಂದಿದ್ದೀರಾ? ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಇನ್ನೊಬ್ಬರ ಹಂಗಿಲ್ಲದೆ ಜೀವನ ನಡೆಸಬೇಕೆಂದಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ರಾಜ್ಯ ಸರ್ಕಾರವು ನಿಮಗಾಗಿ ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಪ್ರತಿ ಮಹಿಳೆಯರಿಗೆ ರೂ. 1,20,000 ಸಹಾಯಧನವನ್ನು ನೀಡಲಾಗುತ್ತದೆ.
ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡಬೇಕೆಂದಿರುವ ಮಹಿಳೆಯರಿಗಾಗಿ ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಏನಿದು ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆ? ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಯೋಜನೆ ಉದ್ದೇಶವೇನು ಎಂಬೆಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆ |
| ಅರ್ಹ ಫಲಾನುಭವಿಗಳು | ಗ್ರಾಮೀಣ ಪ್ರದೇಶದ ಮಹಿಳೆಯರು |
| ಸಿಗುವ ಸಹಾಯಧನದ ವಿವರ | ರೂ. 1,20,000/- |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
| ಯೋಜನೆಯ ಉದ್ದೇಶ | ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ ಸ್ವಂತ ಉದ್ಯೋಗವನ್ನು ಕಲ್ಪಿಸುವುದು |
ಯೋಜನೆಯ ಬಗ್ಗೆ:
ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರವು ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಪ್ರತಿ ಮಹಿಳೆಯರಿಗೂ ಕೂಡ ರೂ. 1,20,000 ಸಹಾಯಧನವನ್ನು ಒದಗಿಸಲಾಗುತ್ತದೆ.
ಮಹಿಳೆಯರು ಮನೆಯಲ್ಲೇ ಕುಳಿತು ಕಡಿಮೆ ಬಂಡವಾಳದಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡುವುದರಿಂದ ಹೆಚ್ಚು ಲಾಭವನ್ನು ಗಳಿಸಬಹುದು ಹಾಗೂ ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ. ಇದರಿಂದಾಗಿ ಮಹಿಳೆಯರ ಜೀವನ ಮಟ್ಟವು ಸುಧಾರಿಸುತ್ತದೆ.
ಮಹಿಳೆಯರು ಈ ಯೋಜನೆಯಡಿಯಲ್ಲಿ ಸಿಗುವ ಸಹಾಯಧನದಿಂದ ನಾಟಿ ಕೋಳಿ ಖರೀದಿ, ಕೋಳಿ ಶೆಡ್ ಗಳನ್ನು ನಿರ್ಮಿಸಿಕೊಳ್ಳುವುದು ಇನ್ನಿತರ ಪ್ರಾಥಮಿಕ ನಿರ್ವಹಣೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಉದ್ದೇಶ:
- ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಉತ್ತೇಜನ ನೀಡುವುದು:
ಗ್ರಾಮೀಣ ಭಾಗದ ಮಹಿಳೆಯರಿಗೆ ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆಯಡಿಯಲ್ಲಿ 1,20,0000 ಸಹಾಯಧನವನ್ನು ಒದಗಿಸಿವ ಮೂಲಕ ಮಹಿಳೆಯರು ಬಂಡವಾಳದ ವೆಚ್ಚವನ್ನು ಭರಿಸುವ ಆತಂಕವಿಲ್ಲದ ಸುಲಭವಾಗಿ ನಾಟಿ ಕೋಳಿ ಸಾಕಾಣಿಕೆ ಮಾಡಲು ಅವಕಾಶ ಕಲ್ಪಿಸುವುದು.
- ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು:
ಸರ್ಕಾರವು ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸ್ವಂತವಾಗಿ ತಮ್ಮ ಮನೆಯಲ್ಲೇ ಕುಳಿತು ನಾಟಿ ಕೋಳಿ ಸಾಕಾಣಿಕೆ ಮಾಡಲು ಸಹಾಯಧನವನ್ನು ಒದಗಿಸುವ ಮೂಲಕ ಸ್ಥಿರವಾದ ಆದಾಯವನ್ನು ಗಳಿಸಲು ಅವಕಾಶ ಕಲ್ಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
- ಮಹಿಳಾ ಸಬಲೀಕರಣವನ್ನು ಬಲಪಡಿಸುವುದು:
ಸರ್ಕಾರವು ವಿಶೇಷವಾಗಿ ಮಹಿಳೆಯರಿಗೆ ಮಾತ್ರ ಈ ಒಂದು ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ತಮ್ಮ ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಂಡವಾಳದ ನೆರವನ್ನು ನೀಡವುವ ಮೂಲಕ ಶಾಶ್ವತ ಆದಾಯದ ಮೂಲವನ್ನು ಸೃಷ್ಟಿಸಿ ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಲು ಅವಕಾಶ ಕಲ್ಪಿಸುವುದು.
- ಪೌಷ್ಟಿಕ ಆಹಾರದ ಉತ್ಪಾದನೆಯನ್ನು ಉತ್ತೇಜಿಸುವುದು:
ನಾಟಿ ಕೋಳಿ ಮೊಟ್ಟೆ ಹಾಗೂ ಮಾಂಸಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ಈ ಯೋಜನೆಯಡಿಯಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡಲು ಸಹಾಯಧನವನ್ನು ಒದಗಿಸಿ ಗ್ರಾಮೀಣ ಭಾಗದ ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ನಾಟಿ ಕೋಳಿ ಸಾಕಾಣಿಕೆಯ ಪ್ರಮುಖ ಪ್ರಯೋಜನಗಳು:
- ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು:
ನಾಟಿ ಕೋಳಿ ಸಾಕಾಣಿಕೆ ಮಾಡಲು ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ. ಪ್ರಾರಂಭಿಕ ಹಂತದಲ್ಲಿ ಕಡಿಮೆ ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡುವ ಮೂಲಕ ಉದ್ಯೋಗವನ್ನು ವಿಸ್ತರಿಸಬಹುದಾಗಿದೆ.
- ಆಹಾರದ ವೆಚ್ಚ ಕಡಿಮೆ:
ನಾಟಿ ಕೋಳಿಗಳಿಗೆ ನಿರ್ದಿಷ್ಟ ಆಹಾರದ ಅಗತ್ಯ ಇರುವುದಿಲ್ಲ. ಮಹಿಳೆಯರು ಮನೆಗಳಲ್ಲಿ ಸುಲಭವಾಗಿ ಸಿಗುವ ಧಾನ್ಯಗಳು, ಹಸಿರು ಆಹಾರಗಳನ್ನು ನೀಡಿ ಅವುಗಳ ಸಾಕಾಣಿಕೆ ಮಾಡಬಹುದಾಗಿದೆ. ಇದರಿಂದಾಗಿ ನಾಟಿ ಕೋಳಿ ಸಾಕಾಣಿಕೆಗೆ ಆಹಾರದ ವೆಚ್ಚ ಕಡಿಮೆ ಇರುತ್ತದೆ.
- ಮೊಟ್ಟೆ ಹಾಗೂ ಮಾಂಸಗಳಲ್ಲಿ ಎರಡರಲ್ಲೂ ಕೂಡ ಆದಾಯವನ್ನು ಗಳಿಸಬಹುದಾಗಿದೆ:
ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆಯೂ ಹೆಚ್ಚಿರುತ್ತದೆ. ಜನರು ಹೆಚ್ಚಾಗಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದರಿಂದ ನೈಸರ್ಗಿಕವಾಗಿ ಬೆಳೆಯುವ ನಾಟಿ ಕೋಳಿ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತದೆ. ಮಹಿಳೆಯರು ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಎರಡು ಮೂಲಗಳಲ್ಲೂ ಕೂಡ ಆದಾಯವನ್ನು ಗಳಿಸಬಹುದಾಗಿದೆ.
- ಸ್ಥಿರವಾದ ಆದಾಯವನ್ನು ಗಳಿಸಬಹುದು:
ಮಹಿಳೆಯರು ನಾಟಿ ಕೋಳಿ ಸಾಕಾಣಿಕೆಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ವರ್ಷಪೂರ್ತಿ ಮೊಟ್ಟೆ ಹಾಗೂ ಮಾಂಸಗಳಿಂದ ಸ್ಥಿರ ಮತ್ತು ನಿರಂತರ ಆದಾಯವನ್ನು ಗಳಿಸಬಹುದಾಗಿದೆ.
ಯೋಜನೆಯಿಂದಾಗುವ ಪ್ರಯೋಜನ:
ಇಂದಿನ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಕೂಡ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಅವರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸೂಕ್ತವಾದ ವೇದಿಕೆ ಲಭ್ಯವಾಗುವುದಿಲ್ಲ. ಹಾಗಾಗಿ ಸರ್ಕಾರವು ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆಯಡಿಯಲ್ಲಿ ಸಹಾಯಧನವನ್ನು ಒದಗಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಿದೆ.
ಈ ಯೋಜನೆಯಿಂದಾಗಿ ಮಹಿಳೆಯರು ತಮ್ಮ ಮನೆಯಲ್ಲಿ ಕುಳಿತು ಯಾವುದೇ ತೊಂದರೆಗಳಿಲ್ಲದೆ ಕೋಳಿ ಸಾಕಾಣಿಕೆ ಮಾಡುವ ಮೂಲಕ ಸ್ಥಿರವಾದ ಆದಾಯವನ್ನು ಗಳಿಸಬಹುದು ಹಾಗೂ ಈ ಉದ್ಯೋಗವನ್ನು ಪ್ರಾರಂಭಿಸಲು ಯಾವುದೇ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ. ಜೊತೆಗೆ ಮಹಿಳೆಯರು ಶಾಶ್ವತವಾಗಿ ಆದಾಯವನ್ನು ಗಳಿಸುವ ಮೂಲಕ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಬಹುದಾಗಿದೆ.
ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಮಹಿಳೆಯರಾಗಿರಬೇಕು.
- ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರಬೇಕು
- ಅರ್ಜಿದಾರರು ಕಡ್ಡಾಯವಾಗಿ BPL ಕಾರ್ಡ್ ಹೊಂದಿರಬೇಕು.
- ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರಬೇಕು.
- ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರಬೇಕು
- ನಾಟಿ ಕೋಳಿ ಸಾಕಾಣಿಕೆ ಮಾಡಲು ತಮ್ಮ ಮನೆಯಲ್ಲಿ ಸಣ್ಣ ಜಾಗ ಇರಬೇಕು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವಾಸಸ್ಥಳ ದೃಢೀಕರಣ ಪತ್ರ
- ಬಿಪಿಎಲ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಫೋಟೋ
- ಆದಾಯ ಮತ್ತು ಜಾತಿ ಪ್ರಮಾಣಪತ್ರ
- ಸಕ್ರಿಯ ಮೊಬೈಲ್ ನಂಬರ್
- ನಾಟಿ ಕೋಳಿ ಶೆಡ್ ನಿರ್ಮಿಸಲು ನಿಗದಿಪಡಿಸಿದ ಜಾಗದ ಫೋಟೋ
- ಹಾಗೂ ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಪಶುಪಾಲನಾ ಇಲಾಖೆಯ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಆಧಾರ್ ಸಂಖ್ಯೆ ಬಳಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
- ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
- ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ವೈಯಕ್ತಿಕ ವಿವರ, ವಿಳಾಸ, ಬ್ಯಾಂಕ್ ಖಾತೆ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅಂತಿಮ ತೀರ್ಮಾನ:
ನಾಟಿ ಕೋಳಿ ಸಾಕಾಣಿಕೆ ಸಹಾಯಧನ ಯೋಜನೆ ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶದ ಮಹಿಳೆಯರಿಗೆ ಸ್ವಾವಲಂಬಿಗಳಾಗಿ ಜೀವನವನ್ನು ನಡೆಸಲು ನೆರವಾಗುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ಮನೆಯಲ್ಲೇ ಸಣ್ಣ ಉದ್ಯಮವನ್ನು ಆರಂಭಿಸಿ ನಿಯಮಿತ ಆದಾಯ ಪಡೆಯುವ ಅವಕಾಶವನ್ನು ಹೊಂದಿದ್ದಾರೆ.
ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾದ ಈ ಉದ್ಯಮವು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗುತ್ತದೆ. ಸರ್ಕಾರ ನೀಡುವ ಆರ್ಥಿಕ ನೆರವು ಆರಂಭಿಕ ಹಂತದ ಖರ್ಚುಗಳನ್ನು ಕಡಿಮೆ ಮಾಡಿ ಮಹಿಳೆಯರಿಗೆ ಉದ್ಯಮ ಆರಂಭಿಸಲು ಉತ್ತೇಜನ ನೀಡುತ್ತದೆ. ನಿಮಗೇನಾದರೂ ಸ್ವಂತ ಉದ್ಯೋಗ ಮಾಡುವ ಆಸಕ್ತಿ ಇದ್ದರೆ, ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- PUC Students: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! 26,000 ಪ್ರೋತ್ಸಾಹಧನ | ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Application: CM ಘೋಷಣೆ, ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಮತ್ತು ಮನೆ ಹಂಚಿಕೆ 2026 । ಇಂದೇ ಅರ್ಜಿ ಸಲ್ಲಿಸಿ
- PMFBY: ರೈತರಿಗೆ ಸಿಹಿ ಸುದ್ದಿ! ಬೆಳೆ ನಷ್ಟಕ್ಕೆ ನೇರ ಪರಿಹಾರ ಯೋಜನೆ ಆರಂಭ । ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ
- CET Prize Money ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ₹14,000 ಪ್ರೋತ್ಸಾಹಧನ? ಸಂಪೂರ್ಣ ಮಾಹಿತಿ!
- 20K ಪ್ರತಿಯೊಬ್ಬ ರೈತರ ಹೆಂಡತಿಗೆ ₹20,000/- ಸಹಾಯಧನ? – ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಂಪೂರ್ಣ ಮಾಹಿತಿ?