ನಮಸ್ಕಾರ ಸ್ನೇಹಿತರೆ, ನೀವೇನಾದರೂ ದೇಶಸೇವೆಯ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಈ ಒಂದು ಕನಸನ್ನು ನನಸು ಮಾಡಿಕೊಳ್ಳಲು ಅದ್ಬುತ ಅವಕಾಶ ನಿಮ್ಮ ಮುಂದಿದೆ. ಭಾರತೀಯ ವಾಯುಪಡೆಯು 2026 ನೇ ಸಾಲಿನಲ್ಲಿ ಒಟ್ಟು 379 ಕಮಿಷನ್ಡ್ ಆಫೀಸರ್ ಹುದ್ದೆಗಳ ಭರ್ತಿಗೆ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Air Force Job Recruitment in Kannada
ದೇಶ ಸೇವೆಯ ಜೊತೆಗೆ ಗೌರವಯುತ ವೃತ್ತಿಜೀವನವನ್ನು ಕಂಡುಕೊಳ್ಳಬೇಕೆಂದಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ದ್ವಿತೀಯ PUC, ಬಿಎಸ್ಸಿ, ಬಿಇ, ಬಿಟೆಕ್ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ದಿನಾಂಕ 20-05-2026 ರಿಂದ ಆರಂಭಗೊಂಡಿದ್ದು, 19-06-2026 ಕ್ಕೆ ಕೊನೆಗೊಳ್ಳುತ್ತದೆ. ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅವರು ಆಯ್ಕೆ ಮಾಡಿಕೊಳ್ಳುವ ವಿಭಾಗಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಹುದ್ದೆಯ ಕಿರು ಪರಿಚಯ:
| ನೇಮಕಾತಿ ಸಂಸ್ಥೆಯ ಹೆಸರು | ಭಾರತೀಯ ವಾಯುಪಡೆ |
| ಹುದ್ದೆಯ ಹೆಸರು | ಕಮಿಷನ್ಡ್ ಆಫೀಸರ್ |
| ಹುದ್ದೆಗಳ ಸಂಖ್ಯೆ | ಒಟ್ಟು 379 ಹುದ್ದೆಗಳು |
| ಉದ್ಯೋಗ ಸ್ಥಳ | ಅಖಿಲ ಭಾರತ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
ಹುದ್ದೆಗಳ ಸಂಪೂರ್ಣ ವಿವರ:
ಭಾರತೀಯ ವಾಯುಪಡೆಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕಮಿಷನ್ಡ್ ಆಫೀಸರ್ ಹುದ್ದೆಗಳನ್ನು ಈ ಕೆಳಗೆ ನೀಡಿರುವ ವಿಭಾಗಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ.
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಫ್ಲೈಯಿಂಗ್ ಬ್ರಾಂಚ್ | 35 ಹುದ್ದೆಗಳು |
| ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) | 211 ಹುದ್ದೆಗಳು |
| ಗ್ರೌಂಡ್ ಡ್ಯೂಟಿ (ನೋನ್ – ಟೆಕ್ನಿಕಲ್) | 107 ಹುದ್ದೆಗಳು |
| ಏನ್.ಸಿ.ಸಿ ವಿಶೇಷ ಪ್ರದೇಶ | PC ವಿಭಾಗದ ಒಟ್ಟು ಹುದ್ದೆಗಳಲ್ಲಿ 10% ಹಾಗೂ SSC ಅಲ್ಲಿನ ಒಟ್ಟು ಹುದ್ದೆಗಳಲ್ಲಿ 10% |
| ಗೆಟ್ ಸ್ಕೋರ್ ಪ್ರದೇಶ | 26 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
- ಫ್ಲೈಯಿಂಗ್ ಬ್ರಾಂಚ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಹಾಗೂ PUC ಅಲ್ಲಿ ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಓದಿರಬೇಕು.
- ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಂತ್ರಜ್ಞಾನ, ಮೆಕ್ಯಾನಿಕಲ್, ಪ್ರೊಡಕ್ಷನ್ ಅಥವಾ ಇಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕು ವರ್ಷಗಳ ಪದವಿ ಪೂರ್ಣಗೊಳಿಸಿರಬೇಕು. ಹಾಗೂ PUC ಅಲ್ಲಿ ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಕನಿಷ್ಠ 50% ಅಂಕ ಗಳಿಸಿ ಪಾಸ್ ಆಗಿರಬೇಕು.
- ಗ್ರೌಂಡ್ ಡ್ಯೂಟಿ ತಾಂತ್ರಿಕೇತರ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು PUC ಅಲ್ಲಿ ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಓದಿರಬೇಕು. ಜೊತೆಗೆ ಯಾವುದೇ ವಿಷಯದಲ್ಲಿ ಪದವಿ ಅಥವಾ ಬಿಇ, ಬಿಟೆಕ್ ಪದವಿ ಹೊಂದಿರಬೇಕು.
ವಯೋಮಿತಿ ವಿವರ:
- ಫ್ಲೈಯಿಂಗ್ ಬ್ರಾಂಚ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷದಿಂದ ಗರಿಷ್ಟ 24 ವರ್ಷ ವಯೋಮಿತಿ ಹೊಂದಿರಬೇಕು.
- ಗ್ರೌಂಡ್ ಡ್ಯೂಟಿ (ತಾಂತ್ರಿಕ ಹಾಗೂ ತಾಂತ್ರಿಕೇತರ) ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷದಿಂದ ಗರಿಷ್ಟ 26 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ವಯೋಮಿತಿ ಸಡಿಲಿಕೆ ಇರುವುದಿಲ್ಲ.
ಅರ್ಜಿ ಶುಲ್ಕ:
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ, ಸಾಮಾನ್ಯ ವರ್ಗ ಸೇರಿದಂತೆ ಇನ್ನಿತರ ವರ್ಗಗಳಿಗೆ ಸೇರಿದ ಎಲ್ಲಾ ಅಭ್ಯರ್ಥಿಗಳಿಗೆ ರೂ. 500/- ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಗ್ ಸೇರಿದಂತೆ ಇನ್ನಿತರ ಪಾವತಿ ವಿಧಾನವನ್ನು ಬಳಸಿ ಪಾವತಿಸಬೇಕಾಗುತ್ತದೆ.
ವೇತನ ಶ್ರೇಣಿ:
ಭಾರತ ವಾಯುಪಡೆಯಲ್ಲಿ ಖಾಲಿ ಇರುವ ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 56,100 ದಿಂದ ವರೆಗೆ ವೇತನವನ್ನು ನೀಡಲಾಗುತ್ತದೆ.
ಅಗತ್ಯ ದಾಖಲೆಗಳು:
- ಪಾಸ್ ಪೋರ್ಟ್ ಅಳತೆಯ ಫೋಟೋ
- ಅಭ್ಯರ್ಥಿಗಳ ಸಹಿ
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ನಿವಾಸ ಪ್ರಮಾಣಪತ್ರ
- ಪದವಿ ಅಂಕಪಟ್ಟಿ
- PUC ಅಂಕಪಟ್ಟಿ
- ಪದವಿ ಪ್ರಮಾಣಪತ್ರ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯನ್ ಏರ್ ಫೋರ್ಸ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ಕ್ಯಾಂಡಿಡೇಟ್ ಲಾಗಿನ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮ್ಮ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ ಅಪ್ಲಿಕೇಶನ್ ಫಾರ್ಮ್ ಫಿಲ್ಲಿಂಗ್ ಲಿಂಕ್ ಕ್ಲಿಕ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
- ಅಭ್ಯರ್ಥಿಗಳ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಅಭ್ಯರ್ಥಿಗಳ ಸಹಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಸೇರಿದಂತೆ ಇನ್ನಿತರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- AFSB ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 20-05-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 19-06-2026 |
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಭಾರತೀಯ ವಾಯುಪಡೆಯ ಕಮಿಷನ್ಡ್ ಅಧಿಕಾರಿ ಹುದ್ದೆಗಳ ನೇಮಕಾತಿ ರಾಷ್ಟ್ರಸೇವೆಗೆ ಆಸಕ್ತಿ ಹೊಂದಿರುವ ಯುವಕರಿಗೆ ಅತ್ಯುತ್ತಮ ಅವಕಾಶವಾಗಿದೆ. ಆಕರ್ಷಕ ವೇತನ, ಗೌರವಪೂರ್ಣ ಹುದ್ದೆ ಹಾಗೂ ಸುರಕ್ಷಿತ ಭವಿಷ್ಯವನ್ನು ನೀಡುವ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೇ ಅರ್ಜಿ ಸಲ್ಲಿಸುವುದು ಉತ್ತಮ. ವಿಶೇಷವಾಗಿ ಫ್ಲೈಯಿಂಗ್ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಆದರ್ಶ ವೃತ್ತಿ ಅವಕಾಶವಾಗಿದ್ದು, ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ದೇಶ ಸೇವೆಗೆ ಬಳಸಿಕೊಳ್ಳುವ ಸುವರ್ಣಾವಕಾಶವನ್ನು ಒದಗಿಸುತ್ತದೆ.
ಇತರೆ ಪ್ರಮುಖ ಲಿಂಕುಗಳು:
- KEA: ರೂ. 83,700/- ವೇತನ! SDA – FDA ಹುದ್ದೆಗಳ ಬೃಹತ್ ನೇಮಕಾತಿ 2026! ಕೊನೆಯ ದಿನಾಂಕ 03-06-2026
- BOB: 5,000 ಹುದ್ದೆಗಳು! ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರ್ಜರಿ ಉದ್ಯೋಗಾವಕಾಶ । ಪದವೀಧರರಿಗೆ ಗೋಲ್ಡನ್ ಚಾನ್ಸ್
- NHAI: ಭಾರತೀಯ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಬೃಹತ್ ನೇಮಕಾತಿ 2026 | ಕೊನೆಯ ದಿನಾಂಕ ಜೂನ್ 15
- KSP: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ! । ಕೊನೆಯ ದಿನಾಂಕ ಮೇ 24
- KRCL: ರೂ. 47,220/- ವೇತನ! ಕೊಂಕಣ ರೈಲ್ವೆಯಲ್ಲಿ ಬೃಹತ್ ನೇಮಕಾತಿ 2026 । ಯಾವುದೇ ಲಿಖಿತ ಪರೀಕ್ಷೆ + ಅರ್ಜಿ ಶುಲ್ಕವಿಲ್ಲ