Shed: ರೈತರಿಗೆ ಭರ್ಜರಿ ಗುಡ್ ನ್ಯೂಸ್! ಉಚಿತ ಪಶು ಶೆಡ್ ನಿರ್ಮಿಸಿ ಕೊಡುವುದಾಗಿ CM ಘೋಷಣೆ

Shed: ಮೊನ್ನೆ ತಾನೇ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ DK ಶಿವಕುಮಾರ್ ಅವರು, ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಪಶುಸಂಗೋಪನೆ ಕ್ಷೇತ್ರಕ್ಕೆ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.


ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಗೂ ಪಶುಸಂಗೋಪನೆ ಎನ್ನುವುದು ರೈತರ ಆದಾಯ ಮೂಲವಾಗಿದ್ದು, ರೈತರಿಗೆ ಹಾಲು ಉತ್ಪಾದನೆಯಿಂದ ಹಿಡಿದು ರಸ ಗೊಬ್ಬರ ಉತ್ಪಾದನೆ ವರೆಗೂ ಪಶುಸಂಗೋಪನೆಯು ನೆರವಾಗುವ ಮೂಲಕ ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸುತ್ತದೆ. ಈ ಹಿನ್ನಲೆಯಲ್ಲಿ ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಹಸು, ಎಮ್ಮೆ, ಹಾಗೂ ಪಶುಗಳಿಗೆ ಸರಿಯಾದ ಆಶ್ರಯವನ್ನು ಒದಗಿಸುವ ಉದ್ದೇಶದಿಂದ ಫ್ರೀ ಆಗಿ ಶೆಡ್ ನಿರ್ಮಿಸಿಕೊಡಲು ಸರ್ಕಾರವು ಮುಂದಾಗಿದ್ದು, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಎಂಬೆಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

Shed

ಯೋಜನೆಯ ಕಿರು ವಿಮರ್ಶೆ:

ಅನುಷ್ಠಾನ ಗೊಳಿಸಿದ ಇಲಾಖೆ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
ಯೋಜನೆಯ ಹೆಸರು ಪಶುಸಂಗೋಪಕರಿಗೆ ಉಚಿತ ಶೆಡ್ ನಿರ್ಮಾಣ ಯೋಜನೆ
ಅರ್ಹ ಫಲಾನುಭವಿಗಳು ಪಶುಸಂಗೋಪನೆಯಲ್ಲಿ ತೊಡಗಿರುವ ರೈತರು ಮತ್ತು ಪಶುಪಾಲಕರು
ಯೋಜನೆಯ ಉದ್ದೇಶಪಶುಗಳ ಆರೋಗ್ಯ ಸುಧಾರಿಸುವುದು ಹಾಗೂ ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಅಥವಾ ಆಫ್ಲೈನ್

ಯೋಜನೆಯ ಬಗ್ಗೆ:

ಕರ್ನಾಟಕ ಸರ್ಕಾರವು ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ತಾವು ಸಾಕುತ್ತಿರುವ ಪಶುಗಳಿಗೆ ಸುರಕ್ಷತೆಯನ್ನು ಒದಗಿಸಲು ಅಗತ್ಯವಾಗುವ ಶೆಡ್ ಗಳನ್ನು ಉಚಿತವಾಗಿ ನಿರ್ಮಿಸಿಕೊಡುವ ಉದ್ದೇಶದಿಂದ ಉಚಿತ ಶೆಡ್ ನಿರ್ಮಾಣ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಮುಖ್ಯ ಉದ್ದೇಶ, ಪಶುಗಳಿಗೆ ಉತ್ತಮ ಆಶ್ರಯವನ್ನು ಒದಗಿಸುವುದು, ಪಶುಗಳ ಆರೋಗ್ಯವನ್ನು ಸುಧಾರಿಸುವುದು ಹಾಗೂ ರೈತರ ಆದಾಯ ಮಟ್ಟವನ್ನು ಹೆಚ್ಚಿಸುವುದಾಗಿದೆ.

ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ನಿಗದಿತ ಮಾನದಂಡಗಳ ಪ್ರಕಾರ ಸಂಪೂರ್ಣ ಕೊಟ್ಟಿಗೆ ನಿರ್ಮಾಣ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದರಿಂದಾಗಿ ಮಳೆ, ಚಳಿ, ಬಿಸಿಲು ಹಾಗೂ ಇತರೆ ಪ್ರಕೃತಿ ವಿಕೋಪಗಳಿಂದ ಪಶುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಉತ್ತಮ ಗುಣಮಟ್ಟದ ಕೊಟ್ಟಿಗೆಗಳ ನಿರ್ಮಾಣದಿಂದ ಪಶುಗಳ ಆರೋಗ್ಯವು ಸುಧಾರಿಸುವುದರ ಜೊತೆಗೆ ಹಾಲು ಉತ್ಪಾದಕತೆಯು ಹೆಚ್ಚುತ್ತದೆ.

ಯೋಜನೆಯ ಉದ್ದೇಶ:

  • ಪಶುಗಳ ಆರೋಗ್ಯ ಮಟ್ಟವು ಸುಧಾರಿಸುವುದು:

ಪಶುಗಳಿಗೆ ಸೂಕ್ತವಾದ ಹಾಗೂ ಉತ್ತಮ ಗುಣಮಟ್ಟದ ಶೆಡ್ ಗಳನ್ನು ಉಚಿತವಾಗಿ ನಿರ್ಮಿಸಿ ಕೊಡುವ ಮೂಲಕ ಪಶುಗಳು ವಿವಿಧ ರೋಗಗಳಿಗೆ ತುತ್ತಾಗುವುದನ್ನು ತಡೆಗಟ್ಟುವುದು ಹಾಗೂ ಇದರಿಂದಾಗುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ಪಶುಗಳಿಗೆ ಸುರಕ್ಷಿತ ವಾಸಸ್ಥಳಗಳನ್ನು ಒದಗಿಸುವುದು:

ಪಶುಗಳು ಆರೋಗ್ಯಕರವಾಗಿ ಬೆಳೆಯಬೇಕರಾದರೆ, ಅವುಗಳು ಸ್ವಚ್ಛವಾದ ಹಾಗೂ ಸುರಕ್ಷಿತ ವಾತಾವರಣದಲ್ಲಿ ಇರುವುದು ಅಗತ್ಯವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಪಶುಗಳಿಗೆ ಉತ್ತಮ ಗುಣಮಟ್ಟದ ಶೆಡ್ ಗಳನ್ನು ನಿರ್ಮಿಸಿಕೊಡುವ ಮೂಲಕ ಮಳೆ, ಚಳಿ ಹಾಗೂ ಇನ್ನಿತರ ಪ್ರಕೃತಿ ವಿಕೋಪಗಳಿಂದ ರಕ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಪಶುಪಾಲಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:

ಪಶುಗಳಿಗೆ ಶೆಡ್ ಗಳನ್ನು ನಿರ್ಮಾಣ ಮಾಡುವ ವೆಚ್ಚವು ಬಹಳಷ್ಟು ದುಬಾರಿಯಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ಬಡ ರೈತರಿಗೆ ಈ ಒಂದು ವೆಚ್ಚವು ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ರೈತರ ಈ ಒಂದು ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪಶುಸಂಗೋಪನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಫ್ರೀ ಆಗಿ ಪಶು ಶೆಡ್ ನಿರ್ಮಿಸಿಕೊಡಲು ಮುಂದಾಗಿದೆ.

  • ರೈತರ ಜೀವನ ಮಟ್ಟವನ್ನು ಸುಧಾರಿಸುವುದು:

ಸರ್ಕಾರವು ಪಶುಪಾಲನಾ ರೈತರಿಗೆ ಫ್ರೀ ಆಗಿ ಕೊಟ್ಟಿಗೆ ನಿರ್ಮಿಸಿ ಕೊಡುವ ಮೂಲಕ ಪಶುಗಳಿಗೆ ಸುರಕ್ಷತೆಯು ಹೆಚ್ಚತ್ತದೆ ಹಾಗೂ ಪಶುಗಳ ಹಾಲು ಉತ್ಪಾದಕತೆಯು ಹೆಚ್ಚುತ್ತದೆ. ಇದರಿಂದಾಗಿ ರೈತರ ಆದಾಯ ಮಟ್ಟವು ಹೆಚ್ಚುತ್ತದೆ ಹಾಗೂ ಅವರು ಕೂಡ ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಲು ಸಹಾಯವಾಗುತ್ತದೆ.

ಯೋಜನೆಯ ಪ್ರಯೋಜನ:

  • ಸರ್ಕಾರದ ಯೋಜನೆಯಡಿಯಲ್ಲಿ ನಿರ್ಮಿಸಲಾಗುವ ಶೆಡ್ ನಿಂದಾಗಿ ಪಶುಗಳಿಗೆ ಸುರಕ್ಷಿತವಾದ ಹಾಗೂ ಆರಾಮದಾಯಕವಾದ ವಾಸಸ್ಥಳ ಲಭ್ಯವಾಗುತ್ತದೆ. ಇದರಿಂದ ಗಾಳಿ, ಚಳಿ ಹಾಗೂ ಮೆಳೆಗಳಂತಾದ ಪ್ರಕೃತಿ ವಿಕೋಪಗಳಿಂದ ಪಶುಗಳು ಸುರಕ್ಷಿತವಾಗಿರುತ್ತದೆ.
  • ಸ್ವಚ್ಛ ಹಗೂ ಸುಸಜ್ಜಿತ ಶೆಡ್ ಗಳಲ್ಲಿ ಪಶುಗಳು ವಾಸಿಸುವುದರಿಂದ ರೋಗಗಳ ಅಪಾಯ ಕಡಿಮೆಯಾಗುತ್ತದೆ ಹಾಗೂ ಪಶುಗಳು ಹೆಚ್ಚು ಆರೋಗ್ಯವಾಗಿರುತ್ತದೆ. ಇದರಿಂದಾಗಿ ರೈತರ ಮೇಲಿನ ಚಿಕಿತ್ಸಾ ವೆಚ್ಚದ ಹೊರೆಯು ಕಡಿಮೆಯಾಗುತ್ತದೆ.
  • ಯೋಜನೆಯಡಿಯಲ್ಲಿ ಪಶುಗಳಿಗೆ ಉತ್ತಮ ಆಶ್ರಯ ಹಾಗೂ ಉತ್ತಮ ಗುಣಮಟ್ಟದ ವಾತಾವರಣವನ್ನು ಸೃಷ್ಟಿಯಾಗುವುದರಿಂದ ಪಶುಗಳ ಉತ್ಪಾದಕತೆಯು ಹೆಚ್ಚುತ್ತದೆ. ಇದರಿಂದಾಗಿ ಹಾಲಿನ ಉತ್ಪಾದಕತೆಯು ಹೆಚ್ಚಾಗಿ ರೈತರ ಆದಾಯ ಮಟ್ಟವು ಹೆಚ್ಚುತ್ತದೆ.
  • ಸರ್ಕಾರವು ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಇದೇ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುವುದರಿಂದ ರೈತರು ಪಶುಸಂಗೋಪನೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಮಟ್ಟವು ಮತ್ತಷ್ಟು ಹೆಚ್ಚುತ್ತದೆ.
  • ಪಶುಗಳಿಗೆ ಶೆಡ್ ನಿರ್ಮಿಸಲು ಆಗುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದರಿಂದ ರೈತರ ಮೇಲಿನ ದೊಡ್ಡ ಮಟ್ಟದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ರೈತರು ಶೆಡ್ ನಿರ್ಮಾಣ ವೆಚ್ಚವನ್ನು ಉಳಿತಾಯ ಮಾಡಿ ಪಶುಗಳಿಗೆ ಮೇವುಗಳನ್ನು ತರಲು ಈ ಹಣವನ್ನು ಬಳಸಬಹುದಾಗಿದೆ.

ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಕಡ್ಡಾಯವಾಗಿ ಪಶುಸಂಗೋಪನೆಯಲ್ಲಿ ತೊಡಗಿರಬೇಕು.
  • ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಅರ್ಜಿದಾರದ ಹೆಸರಿನಲ್ಲಿ ಸ್ವಂತ ಜಾಗವನ್ನು ಹೊಂದಿರಬೇಕು.
  • ಶೆಡ್ ನಿರ್ಮಾಣ ಮಾಡಲು ಸರ್ಕಾರವು ನಿಗದಿಪಡಿಸಿದ ಸಂಖ್ಯೆಯಲ್ಲಿ ಪಶುಗಳನ್ನು ಹೊಂದಿರಬೇಕು.
  • ಈ ಹಿಂದೆ ಇದೇ ರೀತಿಯ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಲಾಭವನ್ನು ಪಡೆದುಕೊಂಡಿರಬಾರದು.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ನಿವಾಸ ಪ್ರಮಾಣಪತ್ರ
  • ರೈತರು ಸಾಕುತ್ತಿರುವ ಪಶುಗಳ ವಿವರ
  • ಭೂ ದಾಖಲೆಗಳು
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಫಲಾನುಭವಿಗಳು ಉಚಿತ ಕೊಟ್ಟಿಗೆ ನಿರ್ಮಾಣ ಯೋಜನೆಯ ಲಾಭವನ್ನು ಪಡೆಯಲು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ಮೊದಲು ಪಶುಸಂಗೋಪನಾ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಉಚಿತ ಶೆಡ್ ನಿರ್ಮಾಣಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ವಿಭಾಗವನ್ನು ತೆರೆಯಿರಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ನೀಡಲಾದ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಮೊದಲು ಪಶುಸಂಗೋಪನಾ ಇಲಾಖೆಯ ಅಥವಾ ಪಶು ವೈದ್ಯಕೀಯ ಇಲಾಖೆಗೆ ಭೇಟಿ ನೀಡಿ.
  • ಫ್ರೀ ಕೊಟ್ಟಿಗೆ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆಯಿರಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಭೂ ದಾಖಲೆಗಳ ವಿವರ, ವೈಯಕ್ತಿಕ ವಿವರ ಹಾಗೂ ಇನ್ನಿತರ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ನಂತರ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ.
  • ನಂತರ ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಇಲಾಖೆಯ ಸಿಬ್ಬಂದಿಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.

ಅಂತಿಮ ತೀರ್ಮಾನ:

ಸರ್ಕಾರವು ಪಶುಸಂಗೋಪನಾ ಇಲಾಖೆಯ ಅಡಿಯಲ್ಲಿ ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಫ್ರೀಯಾಗಿ ಶೆಡ್ ನಿರ್ಮಿಸಲು ನಿರ್ಧರಿಸಿದ್ದು, ಈ ಮೇಲೆ ನೀಡಲಾದ ಎಲ್ಲಾ ಅರ್ಹತೆಗಳನ್ನು ಪೂರೈಸುವ ರೈತರು ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment