ನಮಸ್ಕಾರ ರೈತಭಾಂದವರೇ, ನೀವು ಬೆಳೆದ ಬೆಳೆಗಳು ಅತಿಯಾದ ಮಳೆ, ಬರ, ಅಥವಾ ಕೀಡ ಬಾದೆಗಳಿಂದ ನಾಶವಾಗಿದೆಯಾ? ಇದರಿಂದ ನೀವು ತುಂಬಾ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದೀರಾ? ಈ ಸಂಕಷ್ಟದ ಸಮಯದಲ್ಲಿ ಸರ್ಕಾರದ ಪರಿಹಾರ ಮೊತ್ತದ ಅಗತ್ಯವಿದೆಯೇ? ನಿಮ್ಮ ನೆರವಿಗೆಂದೇ ಕೇಂದ್ರ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.
PMFBY Scheme for Farmers
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆ, ಪ್ರಕೃತಿ ವಿಕೋಪಗಳು ಹಾಗೂ ಕೀಟಬಾದೆ ಅಥವಾ ರೋಗಗಳ ಕಾರಣದಿಂದ ಬೆಳೆ ನಷ್ಟವಾದರೆ, ಇದಕ್ಕೆ ಅಗತ್ಯವಾದ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಹಾಗಿದ್ದರೆ ಏನಿದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ? ಯೋಜನೆಯ ಪ್ರಯೋಜನಗಳೇನು? ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಸರ್ಕಾರದಿಂದ ರೈತರಿಗೆ ಎಷ್ಟು ಪರಿಹಾರ ದೊರೆಯುತ್ತದೆ? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ |
| ಅರ್ಹ ಫಲಾನುಭವಿಗಳು | ದೇಶದ ಎಲ್ಲ ಸ್ವಂತ ಜಾಮೀನು ಹೊಂದಿರುವ ರೈತರು |
| ಹಂಗಾಮು | ಮುಂಗಾರು 2026 |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಅಥವಾ ಆಫ್ಲೈನ್ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-07-2026 |
ಏನಿದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ?
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎನ್ನುವುದು ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಬೆಳೆ ವಿಮಾ ಯೋಜನೆಯಾಗಿದೆ. ರೈತರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಫೆಬ್ರವರಿ 18, 2016 ಜಾರಿಗೊಳಿಸಿದ್ದು, ಪ್ರಕೃತಿ ವಿಕೋಪಗಳು, ಕೀಟಗಳು, ರೋಗಗಳಿಂದ ಆಗುವ ಬೆಳೆಗಳ ನಾಶಗಳಿಗೆ ರೈತರಿಗೆ ಹಣಕಾಸಿನ ನೆರವನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಕಡಿಮೆ ಪ್ರೀಮಿಯಂ ದರದಲ್ಲಿ ಸಮಗ್ರ ಬೆಳೆ ವಿಮಾ ಸೌಲಭ್ಯವನ್ನು ಒದಗಿಸುವುದು.
ಯೋಜನೆಯ ಉದ್ದೇಶ:
- ಪ್ರಕೃತಿ ವಿಕೋಪಗಳಿಂದ ಬೆಳೆಗಳ ನಷ್ಟ ಅನುಭವಿಸುವ ರೈತರಿಗೆ ಈ ಸಮಯದಲ್ಲಿ ಆರ್ಥಿಕ ಸಹಾಯಧನವನ್ನು ಒದಗಿಸುವ ಮೂಲಕ ಅವರಿಗೆ ಬೆಂಬಲವನ್ನು ನೀಡುವುದು.
- ಬೆಳೆಗಳ ನಷ್ಟವನ್ನು ಅನುಭವಿಸಿದ ನಂತರವೂ ಕೂಡ ರೈತರು ಭರವಸೆಯನ್ನು ಕಳೆದುಕೊಳ್ಳದೆ, ಮುಂದಿನ ವರ್ಷವೂ ಕೂಡ ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಉತ್ತೇಜನ ನೀಡುವುದು.
- ರೈತರಿಗೆ ನಿಗದಿತ ಸಮಯದಲ್ಲಿ ಬೆಳೆ ನಷ್ಟಕ್ಕೆ ವಿಮೆ ಒದಗಿಸುವ ಮೂಲಕ ಅವರು ಸಾಲದ ಸುಳಿಕೆ ಸಿಲುಕುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಹೊಸ ಮತ್ತು ಆಧುನಿಕ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
ಯೋಜನೆಯ ಪ್ರಯೋಜನ:
- ರೈತರು ಅನೀರೀಕ್ಷಿತ ಹವಾಮಾನ ಬದಲಾವಣೆಗಳ ಕಾರಣದಿಂದ ನಷ್ಟವಾಗುವ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಹಣಕಾಸಿನ ನೆರವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು.
- ಈ ಯೋಜನೆಯಡಿಯಲ್ಲಿ ರೈತರು ಕಡಿಮೆ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಹೆಚ್ಚಿನ ಮೊತ್ತದ ಬೆಳೆ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ.
- ರೈತರಿಗೆ ವಿಮಾ ಪರಿಹಾರ ಹಣವನ್ನು ಒದಗಿಸುವ ಮೂಲಕ ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆನಷ್ಟಗಳಿಂದ ಪಾರಾಗಲು ರೈತರು ಸಾಲದ ಸುಳಿಗೆ ಸಿಲುಕುವುದನ್ನು ತಡೆಗಟ್ಟುವುದು.
- ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಡಿಯಲ್ಲಿ ಪರಿಹಾರವನ್ನು ಒದಗಿಸುವುದರಿಂದ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆಯಾಗುತ್ತದೆ ಹಾಗೂ ರೈತರ ಕುಟುಂಬಗಳ ಜೀವನ ಮಟ್ಟವು ಸುಧಾರಿಸುತ್ತದೆ.
ವಿಮಾ ವ್ಯಾಪ್ತಿಗೆ ಬರುವ ಬೆಳೆಗಳು ಯಾವುದು?
ರೈತರು ವಿಮಾ ರಕ್ಷಣೆಯನ್ನು ಪಡೆಯಲು ಅರ್ಹವಾಗಿರುವ ಪ್ರಮುಖ ಬೆಳೆಗಳು ಈ ಕೆಳಕಂಡಂತಿದೆ.
ಧಾನ್ಯಗಳು:
- ಭತ್ತ
- ಮೆಕ್ಕೆ ಜೋಳ
- ಜೋಳ
- ರಾಗಿ
- ಸಜ್ಜೆ
ದ್ವಿದಳ ಧಾನ್ಯಗಳು:
- ಹೆಸರು ಬೆಳೆ
- ಉದ್ದಿನ ಬೆಳೆ
- ತೊಗರಿ
- ಸೋಯಾಬಿನ್
- ಹುರುಳಿ
ಎಣ್ಣೆ ಕಾಳುಗಳು:
- ಶೇಂಗಾ
- ಸೂರ್ಯಕಾಂತಿ
- ಎಳ್ಳು
- ಹರಳು
ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳು:
- ಈರುಳ್ಳಿ
- ಆಲೂಗಡ್ಡೆ
- ಕಬ್ಬು
- ಮೆಣಸಿನ ಕಾಯಿ
- ಹತ್ತಿ
- ಶುಂಠಿ
- ಅರಿಶಿನ
ಬೆಳೆವಾರು ಪ್ರೀಮಿಯಂ ದರದ ವಿವರ:
- ಮುಂಗಾರು ಬೆಳೆಗಳು: ಒಟ್ಟು ವಿಮಾ ಮೊತ್ತ 2%
- ಹಿಂಗಾರು ಬೆಳೆಗಳು: ಒಟ್ಟು ವಿಮಾ ಮೊತ್ತ 1.5%
- ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳು: ಒಟ್ಟು ವಿಮಾ ಮೊತ್ತ 5%
ಯಾವ ಯಾವ ಅಪಾಯಗಳಿಗೆ ವಿಮಾ ರಕ್ಷಣೆ ಸಿಗುತ್ತದೆ?
- ಬರ, ಅತಿವೃಷ್ಟಿ, ಚಂಡಮಾರುತ, ಪ್ರವಾಹ, ಗಾಳಿಮಳೆ ಹಾಗೂ ಭೂ ಕುಸಿತಗಳಂತಹ ಪ್ರಕೃತಿ ವಿಕೋಪಗಳಿಗೆ ವಿಮಾ ರಕ್ಷಣೆ ಸಿಗುತ್ತದೆ.
- ವಿವಿಧ ಬೆಳೆ ರೋಗಗಳಿಗೆ ಹಾಗೂ ಕೀಟ ದಾಳಿಗೆ ವಿಮಾ ರಕ್ಷಣೆ ಸಿಗುತ್ತದೆ.
- ಕೊಯ್ಲಿನ ನಂತರ ಮಳೆ ಅಥವಾ ಇನ್ನಿತರ ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟಗಳಿಗೂ ಸಹ ವಿಮಾ ರಕ್ಷಣೆ ಸಿಗುತ್ತದೆ.
ಅರ್ಹ ಫಲಾನುಭವಿಗಳು ಯಾರು?
- ಪ್ರತಿ ಜಿಲ್ಲೆಗಳಿಗೆ ಸರ್ಕಾರವು ನಿಗದಿಪಡಿಸಿದ ಬೆಳೆಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿರುವ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
- ರೈತರ ಹೆಸರಿನಲ್ಲಿ ಸರಿಯಾದ ಭೂ ದಾಖಲೆಗಳು ಇರಬೇಕು.
- ಪ್ರಸ್ತುತ ಜಮೀನಿನಲ್ಲಿ ಹಂಗಾಮಿ ಬೆಳೆಗಳನ್ನು ಬಿತ್ತನೆ ಮಾಡಿರುವ ಕುರಿತು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಬಿಟ್ಟನ ಪ್ರಮಾಣಪತ್ರವನ್ನು ಹೊಂದಿರಬೇಕು.
- ಗುತ್ತಿಗೆ ಭೂಮಿ ಪಡೆದ ರೈತರು ಭೂ ಮಾಲೀಕರಿಂದ ಮಾಡಿಕೊಂಡ ಒಪ್ಪಂದ ಪ್ರಮಾಣಪತ್ರವನ್ನು ಹೊಂದಿರಬೇಕು.
- ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪ್ರೀಮಿಯಂ ಹಣವನ್ನು ಪಾವತಿಸಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರಬೇಕು.
- ರೈತರ ಹೆಸರಲ್ಲೇ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಇರಬೇಕು ಹಾಗೂ ಇದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಭೂ ದಾಖಲೆಗಳು
- ಬೆಳೆ ಬಿತ್ತನೆ ಪ್ರಮಾಣಪತ್ರ
- ವಾಸಸ್ಥಳ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರವನ್ನು ಪಡೆಯಲು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಫಲಾನುಭವಿಗಳು ಈ ಕೆಳಗಿನ ಹಂತವನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಮೊದಲು PMFBY ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ಫಾರ್ಮರ್ ಕಾರ್ನರ್ ಅನ್ನು ಕ್ಲಿಕ್ ಮಾಡಿ.
- ಹೊಸ ಬಳಕೆದಾರಗಿದರೆ, ಮೊಬೈಲ್ ನಂಬರ್ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಲಾಗಿನ್ ಆಗಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ವೈಯಕ್ತಿಕ ವಿವರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಭೂ ದಾಖಲೆಯ ಸರ್ವೇ ನಂಬರ್ ಹಾಗೂ ಬಿತ್ತನೆ ಮಾಡಿದ ಮುಂಗಾರು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಿ.
- ನಿಗದಿತ ಪ್ರೀಮಿಯಂ ಮೊತ್ತವನ್ನು ಆನ್ಲೈನ್ ಪಾವತಿ ವಿಧಾನಗಳ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಪಾವತಿ ರಶೀದಿಯನ್ನು ಇಟ್ಟುಕೊಳ್ಳಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದ ರೈತರು, ತಮ್ಮ ಹತ್ತಿರದ ಬ್ಯಾಂಕ್ ಖಾತೆ, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಗೆ ಭೇಟಿ ನೀಡಿ.
- ಮೇಲೆ ತಿಳಿಸಲಾದ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಪ್ರೀಮಿಯಂ ಹಣವನ್ನು ನೀಡಿ ಅಲ್ಲಿ ಸಿಬ್ಬಂದಿಗಳ ಮೂಲಕ ವಿಮಾ ನೋಂದಣಿಯನ್ನು ಮಾಡಿಕೊಳ್ಳಿ.
ಕೊನೆಯ ಮಾತು:
ಸರ್ಕಾರವು ರೈತರ ಆರ್ಥಿಕ ಭದ್ರತೆಗಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅತಿವೃಷ್ಟಿಯಿಂದ ಅಥವಾ ಇನ್ನಿತರ ಪ್ರಕೃತಿ ವಿಕೋಪಗಳಿಂದ ನಷ್ಟವಾದ ಬೆಳೆಗಳಿಗೆ ಅನುಗುಣವಾಗಿ ರೈತರಿಗೆ ಬೆಳೆ ಪರಿಹಾರವನ್ನು ನೀಡಲಾಗುತ್ತಿದ್ದು, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಲ್ಲುವುದಕ್ಕೆ ಅರ್ಜಿ ಸಲ್ಲಿಸಲು 31-07-2026 ಕೊನೆಯ ದಿನಾಂಕವಾಗಿರುತ್ತದೆ.
ನೀವು ಬೆಳೆದ ಬೆಳೆಗಳು ಕೂಡ ಪ್ರಕೃತಿ ವಿಕೋಪಗಳಿಂದ ನಾಶವಾಗಿದ್ದು ಸರ್ಕಾರದಿಂದ ಪರಿಹಾರವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಇಂದೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- CET Prize Money ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ₹14,000 ಪ್ರೋತ್ಸಾಹಧನ? ಸಂಪೂರ್ಣ ಮಾಹಿತಿ!
- 20K ಪ್ರತಿಯೊಬ್ಬ ರೈತರ ಹೆಂಡತಿಗೆ ₹20,000/- ಸಹಾಯಧನ? – ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಂಪೂರ್ಣ ಮಾಹಿತಿ?
- TC: DK ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ರೈತರಿಗೆ ದೊಡ್ಡ ಸಿಹಿ ಸುದ್ದಿ! ಉಚಿತ ಟ್ರಾನ್ಸ್ಫಾರ್ಮರ್ ಘೋಷಣೆ
- Bus Pass : ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಯೋಜನೆ 2026 – ಆನ್ಲೈನ್ ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ!