Air Force: ಭಾರತೀಯ ವಾಯುಪಡೆಯಲ್ಲಿ ಬೃಹತ್ ನೇಮಕಾತಿ! PUC ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ । ಜುಲೈ 26 ಕೊನೆಯ ದಿನಾಂಕ

ಭಾರತೀಯ ವಾಯುಪಡೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್! ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಮತ್ತು ಏರ್ ಮೆನ್ ಗ್ರೂಪ್ Y (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Indian Air Force Recruitment 2026


ದೇಶ ಸೇವೆಯ ಜೊತೆಗೆ ಅತ್ಯುತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕೆಂದಿರುವ ಭಾರತದ ಅರ್ಹ ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದ್ದು, ಒಂದು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಜುಲೈ 6 ರಿಂದ ಜುಲೈ 26 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮಾನ್ಯತೆ ಪಡೆದ ಮಂಡಳಿಯಿಂದ PUC ಪೂರ್ಣಗೊಳಿಸಿ ನಿಗದಿತ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ವಾಯುಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಪ್ರಸುತ ಲೇಖನದಲ್ಲಿ ನೀಡಲಾದ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

Air Force

ಹುದ್ದೆಯ ಕಿರು ವಿಮರ್ಶೆ:

ನೇಮಕಾತಿ ಸಂಸ್ಥೆಭಾರತೀಯ ವಾಯು ಪಡೆ
ಹುದ್ದೆಯ ಹೆಸರು ಅಗ್ನಿವೀರ್ ವಾಯು, ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳು
ಹುದ್ದೆಯ ಸಂಖ್ಯೆ ವಿವಿಧ ಹುದ್ದೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ26-07-2026
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಭಾರತೀಯ ವಾಯುಪಡೆಯು ಪ್ರಸ್ತುತ ಸಾಲಿನಲ್ಲಿ ಅಗ್ನಿವೀರ್ ವಾಯು, ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗೆ ಪ್ರತ್ಯೇಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಪಿಯುಸಿ, ಡಿಪ್ಲೊಮಾ ಅಥವಾ ಬಿಎಸ್ಸಿ ಫಾರ್ಮಸಿ ಪೂರ್ಣಗೊಳಿಸಿದ ಗರಿಷ್ಟ 22 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಯ ವಿವರ:

ಭಾರತೀಯ ವಾಯುಪಡೆಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಅಗ್ನಿವೀರ್ ವಾಯು ಹಾಗೂ ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಎಷ್ಟು ಹುದ್ದೆಗಳು ಖಾಲಿ ಇದೆ ಎನ್ನುವ ನಿಖರವಾದ ಮಾಹಿತಿ ಅಧಿಸೂಚನೆಯಲ್ಲಿ ತಿಳಿಸಿಲ್ಲ.

ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ ವಾಯು:

  • ದ್ವಿತೀಯ ಪಿಯುಸಿ ಅಥವಾ ಇಂಟರ್ಮೀಡಿಯೇಟ್ ಪಾಸ್ ಆಗಿರಬೇಕು. ಭೌತಶಾಸ್ತ್ರ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು ಹಾಗೂ ಇಂಗ್ಲಿಷ್ ವಿಷಯದಲ್ಲಿ ಪ್ರತ್ಯೇಕವಾಗಿ 50% ಅಂಕಗಳನ್ನು ಗಳಿಸಿರಬೇಕು
  • ಅಥವಾ, ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 3 ವರ್ಷಗಳ ಇಂಜಿನಿಯರ್ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಕನಿಷ್ಠ 50% ಅಂಕಗಳನ್ನು ಹಾಗೂ ಇಂಗ್ಲಿಷ್ ವಿಷಯದಲ್ಲಿ ಪ್ರತ್ಯೇಕವಾಗಿ 50% ಅಂಕಗಳನ್ನು ಗಳಿಸಿರಬೇಕು.
  • ಅಥವಾ, ಭೌತಶಾಸ್ತ್ರ, ಗಣಿತಗಳೊಂದಿಗೆ 2 ವರ್ಷಗಳ ವೃತ್ತಿಪರ ಕೋರ್ಸ್ ಗಳನ್ನು ಕನಿಷ್ಠ 50% ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು
  • ಅಥವಾ, ವಿಜ್ಞಾನೇತರ ಯಾವುದೇ ಸ್ಟ್ರೀಮ್ ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು.

ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್):

  • ಪಿಯುಸಿ ಅಥವಾ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ 50% ಅಂಕಗಳನ್ನುಗಳಿಸಿ ಪಾಸ್ ಆಗಿರಬೇಕು.
  • ಅಥವಾ, ಭಾರತೀಯ ಫಾರ್ಮಸಿ ಕೌಂಸಿಲ್ ಅಥವಾ ಫಾರ್ಮಸಿ ಕೌಂಸಿಲ್ ಆಫ್ ಇಂಡಿಯಾದಲ್ಲಿ ಮಾನ್ಯತೆ ಪಡೆದ ಡಿಪ್ಲೊಮಾ ಇನ್ ಫಾರ್ಮಸಿ ಅಥವಾ ಬಿಎಸ್ಸಿ ಫಾರ್ಮಸಿ ಪದವಿಯನ್ನು ಕನಿಷ್ಠ 50% ಅಂಕಗಳನ್ನುಗಳಿಸಿ ಪಾಸ್ ಆಗಿರಬೇಕು.

ವಯೋಮಿತಿ ವಿವರ:

ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 22 ವರ್ಷ ವಯೋಮಿತಿಯನ್ನು ಮೀರಿರಬಾರದು ಹಾಗೂ ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 21 ವರ್ಷದಿಂದ 24 ವರ್ಷ ವಯೋಮಿತಿಯನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ ವಿವರ:

ಅಗ್ನಿವೀರ್ ವಾಯು ಹಾಗೂ ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುವುದಿಲ್ಲ.

ಅರ್ಜಿ ಶುಲ್ಕ:

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕೆಳಗೆ ತಿಳಿಸಿರುವಂತೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

  • ಎಲ್ಲ ವರ್ಗಗಳ ಅಭ್ಯರ್ಥಿಗಳಿಗೆ ರೂ. 550/- + 18% GST ಅನ್ನು ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ:

  • ಅಗ್ನಿ ವೀರ್ ವಾಯು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷದಲ್ಲಿ ಪ್ರತಿ ತಿಂಗಳು ರೂ. 30,000/-, 2 ನೇ ವರ್ಷದಲ್ಲಿ ಪ್ರತಿ ತಿಂಗಳು ರೂ. 33,000/-, 3 ನೇ ವರ್ಷದಲ್ಲಿ ಪ್ರತಿ ತಿಂಗಳು ರೂ. 36,500/-, 4 ನೇ ವರ್ಷದಲ್ಲಿ ಪ್ರತಿ ತಿಂಗಳು ರೂ. 40,000/- ವೇತನವನ್ನು ನೀಡಲಾಗುತ್ತದೆ.
  • ಏರ್ ಮೆನ್ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳಿಗೆ ತರಬೇತಿ ಅವಧಿಯಲ್ಲಿ ರೂ. ಸ್ಟೈಫಂಡ್ ಗಳನ್ನು ಹಾಗೂ ತರಬೇತಿ ಮುಗಿದ ನಂತರ ಪ್ರತಿ ತಿಂಗಳು ರೂ. 26,900/- ವೇತನವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂಲ ವೇತನದ ಜೊತೆಗೆ ಸಾರಿಗೆ ಭತ್ಯೆ, ರಜೆ ಪಡಿತರ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ ಸೇರಿದಂತೆ ಇನ್ನಿತರ ಭತ್ಯೆಗಳನ್ನು ಕೂಡ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಮೊದಲು IAF ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  • ಮುಖಪುಟದಲ್ಲಿ ಕಾಣುವ ನೇಮಕಾತಿ ವಿಭಾಗವನ್ನು ತೆರೆದು ನಿಮ್ಮ ಆಯ್ಕೆಯ ಹುದ್ದೆಗಳ ನೇಮಕಾತಿ 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮೂಲ ವಿವರಗಳನ್ನು ಬಳಸಿ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಂತರ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ನಂತರ ಪಾಸ್ ಪೋರ್ಟ್ ಅಳತೆಯ ಫೋಟೋ, ಅಭ್ಯರ್ಥಿಗಳ ಸಹಿ, ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ:

ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ವಸ್ತು ನಿಷ್ಠ ಬಹುಆಯ್ಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಒಂದು ಪರೀಕ್ಷೆಯು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಸ್ಟ್ರೀಮ್ ಗೆ ಅನುಗುಣವಾಗಿ ಅಂಕವನ್ನು ನಿಗದಿಪಡಿಸಲಾಗುತ್ತದೆ.

  • ದೈಹಿಕ ಪರೀಕ್ಷೆ:

ಲಿಖಿತ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ. ಈ ಒಂದು ಹಂತದಲ್ಲಿ ಅಭ್ಯರ್ಥಿಗಳ ದೈಹಿಕ ಗುಣಮಟ್ಟದ ಪರೀಕ್ಷೆ, ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಒಂದು ಹಂತದಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತದೆ.

ಅಗ್ನಿವೀರ್ ವಾಯು ಹುದ್ದೆಗೆ ಪುರುಷ ಅಭ್ಯರ್ಥಿಗಳು ಕನಿಷ್ಠ 152 cm ಮಹಿಳಾ ಅಭ್ಯರ್ಥಿಗಳು ಕನಿಷ್ಠ 152 cm ಎತ್ತರವನ್ನು ಹೊಂದಿರಬೇಕು. ಗುಡ್ಡಗಾಡು ಉತ್ತರಾಖಂಡಗಳಿಗೆ ಹಾಗೂ ಈಶಾನ್ಯ ಭಾಗಗಳ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 147 cm ಎತ್ತರವನ್ನು ಹಾಗೂ ಲಕ್ಷದ್ವೀಪದಲ್ಲಿನ ಮಹಿಳಾ ಅಭ್ಯರ್ಥಿಗಳಿಗೆ 150cm ಎತ್ತರವನ್ನು ನಿಗದಿಪಡಿಸಲಾಗಿದೆ.

ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳು ಕನಿಷ್ಠ 152 cm ಎತ್ತರವನ್ನು ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳಿಗೆ ಇದು ಅನ್ವಹಿಸುವುದಿಲ್ಲ.

ಅಗ್ನಿವೀರ್ ವಾಯು ಹಾಗೂ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳು ಕನಿಷ್ಠ 77 cm ಎದೆಯ ಸುತ್ತಳತೆಯನ್ನು ಹೊಂದಿರಬೇಕು ಹಾಗೂ 5 cm ಎದೆ ಹಿಗ್ಗುವಿಕೆ ಕಡ್ಡಾಯವಾಗಿರುತ್ತದೆ.

ಮಹಿಳೆಯರಿಗೆ ಅಗ್ನಿವೀರ್ ವಾಯು ಹುದ್ದೆಗಳಿಗೆ ಕನಿಷ್ಠ 5 cm ಎದೆ ಹಿಗ್ಗುವಿಕೆ ಕಡ್ಡಾಯವಾಗಿರುತ್ತದೆ.

  • ವೈದ್ಯಕೀಯ ತಪಾಸಣೆ:

ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಹಾಗೂ ದೈಹಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ, ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾಯುಪಡೆಯ ವೈದ್ಯಕೀಯ ತಂಡವು ವೈದ್ಯಕೀಯ ತಪಾಸಣೆಯನ್ನು ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 06-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-07-2026
ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ 22-23 ಸೆಪ್ಟೆಂಬರ್ 2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ಸಂಬಂಧಿಸಿದ ಅಧಿಸೂಚನೆ ಪಿಡಿಎಫ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಭಾರತೀಯ ವಾಯುಪಡೆಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಅಗ್ನಿವೀರ್ ವಾಯು, ಏರ್ ಮೆನ್ ಗ್ರೂಪ್ ವೈ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಜುಲೈ 6 ರಿಂದ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು

Leave a Comment