BSNL ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ನೇಮಕಾತಿ 2026 – 120 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ : BSNL Senior Executive Trainee Recruitment 2026

ಬಿಎಸ್ಎನ್ಎಲ್ (BSNL) ನಲ್ಲಿ ಹಲವಾರು ಹುದ್ದೆಗಳಿಗೆ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಬಿಟ್ಟಿದ್ದಾರೆ ನೀವು ಸಹ ಸರ್ಕಾರಿ ಉದ್ಯೋಗವಕಾಶವನ್ನು ಪಡೆದುಕೊಳ್ಳಬೇಕು ಎಂದರೆ ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವ ಎಲ್ಲಾ ವಿಧಾನವನ್ನು ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಭಾರತ್ ಸಂಚಾರ ನಿಗಮ ಎಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿಂಗ್ ಹೊದೆಗಳ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ಈ ಹುದ್ದೆಗಳಿಗೆ ಅಧಿಕೃತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಲು ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ನಿಗದಿತ ದಿನಾಂಕದೊಳಗೆ ರೆಡಿ ಮಾಡಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬಹುದು ಒಟ್ಟು 120 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಇದಾಗಿದ್ದು ಈ ಹುದ್ದೆಗಳಿಗೆ ಸಂಬಂಧಪಟ್ಟಂತ ವಿವರವನ್ನು ಈ ಕೆಳಗಿನ ನೀಡಲಾಗಿದೆ

ಹುದ್ದೆಗಳಿಗೆ ಸಂಬಂಧಿಸಿದ ಅವಲೋಕನ:

ಸಂಸ್ಥೆಯ ಹೆಸರು ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL)
ಹುದ್ದೆಯ ಹೆಸರು ಹಿರಿಯ ಕಾರ್ಯನಿರ್ವಾಹಕ ತರಬೇತಿ (SET) – ನೇರ ನೇಮಕಾತಿ
ಒಟ್ಟು ಹುದ್ದೆಗಳು 120 ಹುದ್ದೆಗಳು
ವಿದ್ಯಾರ್ಹತೆ ಬಿಇ/ಬಿ.ಟೆಕ್ (ಟೆಲಿಕಾಂ) / ಸಿಎ ಅಥವಾ ಸಿಎಂಎ (ಹಣಕಾಸು)
ವಯೋಮಿತಿ 21–30 ವರ್ಷಗಳು (ನಿಯಮಗಳ ಪ್ರಕಾರ ಸಡಿಲಿಕೆ)
ವೇತನ ಶ್ರೇಣಿ ರೂ. 24,900 – 50,500/- (IDA E-3 ಪೇ ಸ್ಕೇಲ್)
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ05/02/2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/04/2026 (ವಿಸ್ತರಿಸಲಾಗಿದೆ)
ಅರ್ಜಿಸಲ್ಲಿಸುವ ವಿಧಾನ ಆನ್ಲೈನ್
ವೆಬ್ಸೈಟ್ https://bsnl.co.in/
BSNL ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ನೇಮಕಾತಿ 2026 - 120 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ : BSNL Senior Executive Trainee Recruitment 2026

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಮೇಲೆ ತಿಳಿಸಿದ ಅವಲೋಕನದ ಪ್ರಕಾರ ಹುದ್ದೆಗಳ ವಿವರವನ್ನು ನೀಡಲಾಗಿದ್ದು ಈ ಕೆಳಗೆ ಅದರ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳಬಹುದು

ಹುದ್ದೆಗಳ ವಿವರಗಳು:

  • ಹಿರಿಯ ಕಾರ್ಯನಿರ್ವಾಹಕ ತರಬೇತಿದಾರ (ಟೆಲಿಕಾಂ ಸ್ಟ್ರೀಮ್)
  • ಹಿರಿಯ ಕಾರ್ಯನಿರ್ವಾಹಕ ತರಬೇತಿ (ಹಣಕಾಸು ವಿಭಾಗ)

ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆ:

  • ಹಿರಿಯ ಕಾರ್ಯನಿರ್ವಾಹಕ ತರಬೇತಿದಾರ (ಟೆಲಿಕಾಂ ಸ್ಟ್ರೀಮ್) – 95
  • ಹಿರಿಯ ಕಾರ್ಯನಿರ್ವಾಹಕ ತರಬೇತಿ (ಹಣಕಾಸು ವಿಭಾಗ) – 25

ವಿದ್ಯಾರ್ಹತೆಯ ವಿವರಗಳು:

ಟೆಲಿಕಾಂ ಸ್ಟ್ರೀಮ್:

ಕನಿಷ್ಠ 60% ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್/ಟೆಲಿಕಾಂ/ಕಂಪ್ಯೂಟರ್ ಸೈನ್ಸ್/ಐಟಿ/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್ ಅಥವಾ ತತ್ಸಮಾನದಲ್ಲಿ ಪೂರ್ಣ ಸಮಯದ ಬಿಇ/ಬಿ.ಟೆಕ್.

ಹಣಕಾಸು ಸ್ಟ್ರೀಮ್:

ಚಾರ್ಟರ್ಡ್ ಅಕೌಂಟೆಂಟ್ (CA) ಅಥವಾ ವೆಚ್ಚ ಮತ್ತು ನಿರ್ವಹಣಾ ಅಕೌಂಟೆಂಟ್ (CMA)

ವಯೋಮಿತಿ ವಿವರಗಳು:

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ವಯೋಮಿತಿ ವಿವರಗಳನ್ನ ಈ ಕೆಳಗೆ ನೀಡಲಾಗಿದ್ದು ಕನಿಷ್ಠ ವಯೋಮಿತಿ ಹಾಗೂ ಗರಿಷ್ಠ ವಯೋಮಿತಿ ಎಷ್ಟಿರಬೇಕು ಹಾಗೂ ಅಭ್ಯರ್ಥಿಗಳು ಅರ್ಹತೆಯನ್ನು ಹೇಗೆ ಪಡೆಯಬಹುದು ಈ ಎಲ್ಲಾ ವಿವರವನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನ ಸಲ್ಲಿಸುವುದು ಪ್ರಮುಖವಾಗುತ್ತದೆ.

  • ಕನಿಷ್ಠ ವಯಸ್ಸು: 21 ವರ್ಷಗಳು
  • ಗರಿಷ್ಠ ವಯಸ್ಸು: 30 ವರ್ಷಗಳು (ಕೊನೆಯ ದಿನಾಂಕ 07-03-2026 ರಂತೆ)

ವಯೋಮಿತಿ ಸಡಿಲಿಕೆ ವಿವರ:

ಭಾರತ ಸಂಚಾರ ನಿಗಮ ಲಿಮಿಟೆಡ್ ಸಂಸ್ಥೆಯ ಪ್ರಕಾರ ವಯೋಮಿತಿ ಸಡಿಲಿಕೆ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ನೋಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕದ ವಿವರ:

  • ಯುಆರ್ / ಒಬಿಸಿ / ಇಡಬ್ಲ್ಯೂಎಸ್ ಗಾಗಿ ರೂ. 2,500/-
  • SC / ST / PwBD ಗಾಗಿ ರೂ. 1,250/-

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣ ವಿವರವನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಿದ ನಂತರ ಬಂದಿರುವ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ವಿವರ:

  • ಅಧಿಸೂಚನೆ ಬಿಡುಗಡೆ ದಿನಾಂಕ 29 ಜನವರಿ 2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 05 ಫೆಬ್ರವರಿ 2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ 31 ಮಾರ್ಚ್ 2026

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ :- ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDF :- ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ :- ಇಲ್ಲಿ ಕ್ಲಿಕ್ ಮಾಡಿ

Leave a Comment