ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರು ತಿಳಿಯಲೇ ಬೇಕಾದ ಯೋಜನೆ ಎಂದರೆ ಇದೇ ನೋಡಿ “ಉದ್ಯೋಗಿನಿ ಯೋಜನೆ”. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಉದ್ಯೋಗ ಸೃಷ್ಟಿಯಾಗುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸಲು ಬರೋಬ್ಬರಿ 3 ಲಕ್ಷದವರೆಗೆ ಸಾಲ ಮತ್ತು ಅರ್ಜಿದಾರರ ಅರ್ಜಿ ಆಯ್ಕೆಯಾದ ಅಭ್ಯರ್ಥಿಗಳಿಗೆ ₹1.50,000 ವರೆಗೆ ಸಬ್ಸಿಡಿ ಪಡೆಯುವ ಅವಕಾಶವನ್ನ ನೀಡಲಾಗಿದೆ. ಇದರಿಂದ ಅವರು ಹಣಕಾಸಿನ ತೊಂದರೆಯನ್ನು ಎದುರಿಸದೆ ಉದ್ಯಮವನ್ನು ಸುಗಮವಾಗಿ ಆರಂಭಿಸಲು ಸಾಧ್ಯವಾಗುತ್ತದೆ.
udyogini yojana in kannada

ಈ ಯೋಜನೆಯ ವಿಶೇಷತೆ ಏನೆಂದರೆ ಹಿಂದುಳಿದ ವರ್ಗದ ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಕಷ್ಟದಲ್ಲಿ ಇರುವ ಮಹಿಳೆಯರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಮಾರ್ಚ್ 2026 ರಿಂದ ಅರ್ಜಿ ಸಲ್ಲಿಕೆ ಇದೀಗ ಆರಂಭವಾಗಿದ್ದು ಆಸಕ್ತ ಮಹಿಳೆಯರು ಕರ್ನಾಟಕದ ಸರ್ಕಾರಿ ಬ್ಯಾಂಕ್ ಅಥವಾ ಮಹಿಳಾ ಅಭಿವೃದ್ಧಿ ನಿಗಮ ಮೂಲಕ ಸರಳವಾಗಿ ಅರ್ಜಿಯನ್ನ ಸಲ್ಲಿಸಬಹುದು. ಈ ಯೋಜನೆಯು ಮಹಿಳೆಯರ ಸ್ವಾವಲಂಬನ ಶಕ್ತಿ ಮತ್ತು ಸಾಮಾಜಿಕ ಆರ್ಥಿಕ ಸ್ಥಿರತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಎಷ್ಟೋ ಜನ ಮಹಿಳೆಯರಿಗೆ ಈ ಒಂದು ವಿಚಾರ ಗೊತ್ತಿಲ್ಲದೆ ಗೌರ್ಮೆಂಟ್ ಇಂದ ಸಿಗುವ ಒಂದೂರಿಂದ ಮೂರು ಲಕ್ಷ ಹಣವನ್ನು ತಗೊಳ್ತಾ ಪಡೆಯುತ್ತಿಲ್ಲ. ಹೌದು ನಾನು ಯಾವ ಯೋಜನೆಯ ಬಗ್ಗೆ ತಿಳಿಸುತ್ತಿದ್ದೇನೆ ಅಂದ್ರೆ ಇದೇ ಉದ್ಯೋಗಿನಿ ಯೋಚನೆ ಬಗ್ಗೆ. ತುಂಬಾ ಜನ ಮಹಿಳೆಯರು ಅನ್ಕೊಂಡಿದ್ದಾರೆ ಈಗಾಗಲೇ ಆನ್ಲೈನ್ ಅರ್ಜಿ ಆರಂಭವಾಗಿ ಕೊನೆಯ ದಿನಾಂಕ ಮುಗಿದು ಹೋಗಿದೆ ಅಂತ ತಿಳ್ಕೊಂಡಿದ್ದಾರೆ. ಆದರೆ ನೀವು ಇಂದಿನಿಂದಲೇ ಈ ಯೋಜನೆಗೆ ಅರ್ಜಿ ಹಾಕೊಂಡ್ರೆ ಮೂರು ಲಕ್ಷದವರೆಗೆ ಸರ್ಕಾರದಿಂದ ಬೆಂಬಲದಿಂದನೇ ಸಾಲ ತಗೋಲ್ಬಾಹುದು. ಗೌರ್ಮೆಂಟ್ ಇಂದ ಸಿಗುವ ಸೌಲಭ್ಯವನ್ನು ಪಡೆಯಿರಿ.
ಯೋಜನೆಯ ಮುಖ್ಯ ಹೈಲೆಟ್ಸ್:
| ಅಂಶ | ವಿವರ |
|---|---|
| ಯೋಜನೆ ಹೆಸರು | ಉದ್ಯೋಗಿನಿ ಯೋಜನೆ (Udyogini Scheme) |
| ಜಾರಿ ಮಾಡಿದವರು | ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ |
| ಸಾಲ ಮಿತಿ | ₹3,00,000 |
| ಸಬ್ಸಿಡಿ | ₹90,000 – ₹1,50,000 (ವರ್ಗ ಪ್ರಕಾರ) |
| ಅರ್ಜಿ ಪ್ರಾರಂಭ | ಮಾರ್ಚ್ 2026 |
| ಆದಾಯ ಮಿತಿ | ಸಾಮಾನ್ಯ ₹1.5 ಲಕ್ಷ, SC/ST ₹2 ಲಕ್ಷ |
| ವರ್ಗ | ಮಹಿಳೆಯರಿಗೆ ಸಬ್ಸಿಡಿ + ಸಾಲ |
ಯೋಜನೆ ಬಗ್ಗೆ ಪರಿಚಯ:
ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 1993 ರಲ್ಲಿ ಸ್ಥಾಪನೆಯಾದ ಬಳಿಕ ಮಹಿಳೆಯರ ಸ್ವಾವಲಂಬನೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯು ಒಂದು. ಇದು 1996-97ರ ಅವಧಿಯಲ್ಲಿ ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸಾಲ ಮತ್ತು ಸಬ್ಸಿಡಿ ಸೌಲಭ್ಯವನ್ನು ಒದಗಿಸಲು ಸರ್ಕಾರವೇ ಜಾರಿಗೆ ತಂದಿದೆ.
ಯೋಜನೆಯ ಉದ್ದೇಶ:
- ಯೋಜನೆ ಗ್ರಾಮೀಣ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಸಹಾಯವಾಗುತ್ತದೆ. ಯಾವ ರೀತಿ ಎಂದರೆ ಆರ್ಥಿಕವಾಗಿ ದುರ್ಬಲ ಮತ್ತು ಹಿಂದುಳಿದ ಸಮುದಾಯದ ಮಹಿಳೆಯರಿಗಾಗಿ ವಿಶೇಷ ಅವಕಾಶವನ್ನ ಈ ಯೋಜನೆ ಮೂಲಕ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
- ಯೋಜನೆ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯ. ಹೇಗೆಂದರೆ ಸ್ವಂತ ಉದ್ಯಮ ಆರಂಭಿಸಲು ಸಾಲ ಮತ್ತು ಸಬ್ಸಿಡಿ ಮೂಲಕ ಹಣಕಾಸಿನ ನೆರವನ್ನು ಈ ಯೋಚನೆ ಒದಗಿಸುತ್ತದೆ.
- ಮಹಿಳೆಯರ ಕುಟುಂಬದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಒಂದು ಮಟ್ಟಿಗೆ ಸುಧಾರಣೆ ಗೊಳಿಸುವ ಮುಖ್ಯ ಉದ್ದೇಶ.
- ಮಹಿಳೆಯರು ಸ್ವಂತ ಉದ್ಯೋಗದ ಮೇಲೆ ವೃತ್ತಿ ಜೀವನವನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು.
- ಸರ್ಕಾರದ ಯೋಜನೆಯಿಂದ ಮಹಿಳೆಯರ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಯೋಜನೆಯ ಅನುಕೂಲ:
ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸಾಲ ಮತ್ತು ಸಬ್ಸಿಡಿಯನ್ನ ಒದಗಿಸುತ್ತದೆ. ಅಷ್ಟೇ ಅಲ್ಲದೆ ಯೋಜನೆಯಲ್ಲಿ ಆಯ್ಕೆಯಾದ ವರ್ಗದ ಮಹಿಳೆಯರಿಗೆ ಸುಮಾರು 3 ಲಕ್ಷದವರೆಗೆ ಸಾಲ ಮತ್ತು ₹1.50 ಸಾವಿರ ಸಬ್ಸಿಡಿ ಸಿಗುತ್ತದೆ. ಮಾರ್ಚ್ 26 ರಿಂದ ಅರ್ಜಿ ಆರಂಭವಾಗಿದೆ ಮಹಿಳೆಯರು ಗಮನವಿಟ್ಟುಕೊಳ್ಳಿ ಮಹಿಳೆಯರು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಬ್ಯಾಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಸಾಲವನ್ನು ಪಡೆಯಬಹುದಾಗಿದೆ. ಹಾಗಿದ್ದರೆ ಈ ಯೋಜನೆಯ ಇಂದ ಮಹಿಳೆಯರಿಗೆ ಆಗುವ ಪ್ರಯೋಜನ ಏನು? ಈ ಕೆಳಗೆ ನೀನು ತಿಳಿಯಬಹುದು.
- ಮಹಿಳೆಯರು ಯಾವುದೇ ಬಡ್ಡಿ ಇಲ್ಲದೆ ಸುಮಾರು ₹3,00,000 ವರೆಗೆ ಸರ್ಕಾರದಿಂದಲೇ ಪಡೆಯಬಹುದು ಮತ್ತು ಕಡಿಮೆ ಬಡ್ಡಿ ಇರುತ್ತದೆ.
- ನೀವೇನಾದರೂ ಅರ್ಜಿ ಸಲ್ಲಿಸಿ ನಿಮ್ಮ ಅರ್ಜಿ ಸರ್ಕಾರದಿಂದ ಅಪ್ರುವಲ್ ಆದರೆ ₹1,50,000 ರವರೆಗೆ ಸರ್ಕಾರದ ಸಬ್ಸಿಡಿ ಸಿಗುತ್ತದೆ.
- ಆರ್ಥಿಕ ಪರಿಸ್ಥಿತಿಯಿಂದಾಗಿ ಮಹಿಳೆಯರು ಒಂದು ಸ್ವಂತವಾಗಿ ಉದ್ಯೋಗವನ್ನು ಸ್ಥಾಪಿಸಲು ಹಣವನ್ನ ಹುಡುಕುತ್ತಿದ್ದರೆ. ಈ ಯೋಜನೆ ಮೂಲಕ ಸ್ವಂತ ಉದ್ಯಮ ಆರಂಭಕ್ಕೆ ಸುಲಭವಾಗಿ ಹಣಕಾಸಿನ ಭರವಸೆ ನಿಮಗೆ ಸಿಗುತ್ತದೆ.
- ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು ಈ ಯೋಜನೆಯಿಂದ ಪ್ರಗತಿಯನ್ನ ಕಾಣಲು ಬಹಳಷ್ಟು ಅನುಕೂಲವಾಗುತ್ತದೆ.
- ಒಂದು ಕುಟುಂಬದಲ್ಲಿ ಮಹಿಳೆಯರಿಗೂ ಒಂದು ಸ್ಥಾನಮಾನ ಗೌರವ ಸಿಗುತ್ತದೆ ಏಕೆಂದರೆ ಈ ಯೋಜನೆಯಿಂದ ಹಣವನ್ನು ಪಡೆದ ಮಹಿಳೆಯರು ಒಂದು ಸ್ವಂತ ಉದ್ಯೋಗವನ್ನು ಆರಂಭಿಸುತ್ತಾರೆ. ಇದರಿಂದ ಮನೆಯಲ್ಲಿ ಒಂದು ಗೌರವ ಸಿಗುತ್ತದೆ.
ಸಬ್ಸಿಡಿ ಮತ್ತು ಸಾಲದ ಪಕ್ಕ ಲೆಕ್ಕಾಚಾರ:
ಕರ್ನಾಟಕದಲ್ಲಿ ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸಲು ಉದ್ಯೋಗಿನಿ ಯೋಜನೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ.
ಈ ಯೋಜನೆಯ ಮೂಲಕ ಮಹಿಳೆಯರು ಸುಲಭವಾಗಿ ಸಾಲ ಪಡೆದು ತಮ್ಮ ಸ್ವಂತ ವ್ಯವಹಾರ ಆರಂಭಿಸಬಹುದು.
ಸಬ್ಸಿಡಿ ಸಹಾಯದಿಂದ ಹಣಕಾಸಿನ ಭಾರ ಕಡಿಮೆಯಾಗಿದ್ದು, ಸ್ವಾವಲಂಬನೆ ಸಾಧಿಸಲು ಇದು ಸಹಾಯಕವಾಗಿದೆ. ಈ ಯೋಜನೆಯ ಸಬ್ಸಿಡಿ ಮತ್ತು ಸಾಲದ ಪಕ್ಕ ಲೆಕ್ಕಾಚಾರವನ್ನ ಉದಾಹರಣೆ ಮೂಲಕ ಕೆಳಗೆ ಚಾರ್ಟ್ ಮೂಲಕ ರಚಿಸಲಾಗಿದೆ.
ಸಬ್ಸಿಡಿ ಮತ್ತು ಸಾಲದ ಲೆಕ್ಕಾಚಾರ (Chart)
| ವರ್ಗ | ಒಟ್ಟು ಸಾಲ | ಸಬ್ಸಿಡಿ | ಮರಳಿ ಕಟ್ಟಬೇಕಾದ ಮೊತ್ತ |
|---|---|---|---|
| SC/ST ಮಹಿಳೆ | ₹3,00,000 | ₹1,50,000 | ₹1,50,000 |
| General / OBC ಮಹಿಳೆ | ₹3,00,000 | ₹90,000 | ₹2,10,000 |
| ಸಣ್ಣ ಸಾಲ (ಎಲ್ಲ ವರ್ಗ) | ₹1,00,000 | ₹30,000 | ₹70,000 |
ಸಾಲದ ಬಡ್ಡಿದರ ವಿವರ:
ಉದ್ಯೋಗಿನಿ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೆ ನಿಖರವಾಗಿ ಹೇಳಿಲ್ಲ ಸಾಮಾನ್ಯವಾಗಿ ಇದು ಕಡಿಮೆ ಬಡ್ಡಿ ದರದ ಸಾಲವಾಗಿರುತ್ತದೆ ಮತ್ತು ಸಬ್ಸಿಡಿಯನ್ನು ನಿರ್ಧರಿಸುತ್ತದೆ.
- ಕೆಲ ವಿಶೇಷ ವರ್ಗಗಳು (SC/ST, ವಿಧವೆ, ಅಂಗವಿಕಲ ಮಹಿಳೆಯರು)ಗೆ ಸಬ್ಸಿಡಿ ಹೆಚ್ಚು ಇರುವುದರಿಂದ ಬಡ್ಡಿ ಭಾರ ಕಡಿಮೆಯಾಗುತ್ತದೆ
- ಕೆಲ ಸಂದರ್ಭಗಳಲ್ಲಿ ಸರ್ಕಾರದ ನೆರವಿನಿಂದ ಬಡ್ಡಿ ಭಾಗಶಃ ಕಡಿತ (interest subsidy) ಇರಬಹುದು
- ಸಾಮಾನ್ಯವಾಗಿ ಬ್ಯಾಂಕ್ ಪ್ರಕಾರ 7% – 12% ಒಳಗೆ ಬಡ್ಡಿದರ ಇರಬಹುದು (ಬ್ಯಾಂಕ್/ಯೋಜನೆ ಆಧಾರ)
ಮುಖ್ಯ ಅಂಶ:
೧ . SC/ST/ಅಲ್ಪಸಂಖ್ಯಾತ/ಹಿಂದುಳಿದ ವರ್ಗದ ಮಹಿಳೆಯರಿಗೆ ₹1,50,000 (50%) ರವರೆಗೆ ಸಬ್ಸಿಡಿ
೨ . ಸಾಮಾನ್ಯ / OBC / ವಿಶೇಷ ವರ್ಗದ ಮಹಿಳೆಯರಿಗೆ ₹90,000 – ₹1,00,000 (30%) ಸಬ್ಸಿಡಿ
ಯಾರು ಅರ್ಹರು? (Eligibility Criteria)
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನ ಕಡ್ಡಾಯವಾಗಿ ಹೊಂದಿರಲೇಬೇಕೆಂದು ಸರ್ಕಾರ ಹೇಳುತ್ತದೆ.
- ಅರ್ಜಿದಾರರು ಮಹಿಳೆಯಾಗಿರಬೇಕು ಮತ್ತು ಕರ್ನಾಟಕದ ನಿವಾಸಿಯಾಗಿರಬೇಕು
- ಅಭ್ಯರ್ಥಿಗಳ ವಯಸ್ಸು ಸಾಮಾನ್ಯವಾಗಿ 18 ರಿಂದ 55 ವರ್ಷಗಳ ನಡುವೆ ಇರಬೇಕು
- ಕುಟುಂಬದ ವಾರ್ಷಿಕ ಆದಾಯ:
• ಸಾಮಾನ್ಯ/OBC: ₹1.5 ಲಕ್ಷ ಒಳಗೆ
• SC/ST: ₹2 ಲಕ್ಷ ಒಳಗೆ - ಹಿಂದುಳಿದ ವರ್ಗ, SC/ST, ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ
- ವಿಧವೆ, ಅಂಗವಿಕಲ ಮಹಿಳೆಯರು ಕೂಡ ಅರ್ಜಿ ಹಾಕಬಹುದು (ಕೆಲವೊಮ್ಮೆ ಆದಾಯ ಮಿತಿ ಸಡಿಲಿಕೆ)
- ಸ್ವಂತ ಉದ್ಯಮ ಆರಂಭಿಸಲು ಯೋಜನೆ (business idea) ಇರಬೇಕು
ಅಗತ್ಯ ದಾಖಲೆಗಳು:
- ಬ್ಯಾಂಕ್ ಪಾಸ್ಬುಕ್ / ಖಾತೆ ವಿವರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ (Address Proof)
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ಉದ್ಯಮ ಯೋಜನಾ ವರದಿ (Project Report)
- ತರಬೇತಿ ಪ್ರಮಾಣ ಪತ್ರ (ಇದ್ದರೆ)
- ಪಾಸ್ಪೋರ್ಟ್ ಸೈಸ್ ಫೋಟೋಗಳು
- ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ:
ಮಹಿಳೆಯರೇ ಮುಖ್ಯವಾಗಿ ನೀವಿಲ್ಲಿ ನೋಡಬಹುದು ಈ ಉದ್ಯೋಗಿನಿ ಎಂಬ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ. ಮೊದಲನೇಯದಾಗಿ ಆಫ್ಲೈನ್ ಮೂಲಕ ಯಾವ ರೀತಿ ಅರ್ಜಿ ಹಾಕಬಹುದು ಎನ್ನುವುದರ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.
ಆಫ್ ಲೈನ್ ಅರ್ಜಿ ವಿಧಾನ:-
- ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ / ಮಹಿಳಾ ಅಭಿವೃದ್ಧಿ ನಿಗಮ ಕಚೇರಿಗೆ ಭೇಟಿ ನೀಡಿ
- ಅಲ್ಲಿ ಉದ್ಯೋಗಿನಿ ಯೋಜನೆಯ ಅರ್ಜಿ ಫಾರ್ಮ್ ಪಡೆಯಿರಿ
- ಫಾರ್ಮ್ನಲ್ಲಿ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಕೇಳಿರುವ ಎಲ್ಲಾ ದಾಖಲೆಗಳನ್ನು ಜೋಡಿಸಿ (ಆಧಾರ್, ಆದಾಯ, ಬ್ಯಾಂಕ್ ಇತ್ಯಾದಿ)
- ಪೂರ್ಣಗೊಂಡ ಅರ್ಜಿಯನ್ನು ಕಚೇರಿ ಅಥವಾ ಸಂಬಂಧಿತ ಬ್ಯಾಂಕ್ಗೆ ಸಲ್ಲಿಸಿ
- ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿ, ಅರ್ಹರಾದವರಿಗೆ ಅನುಮೋದನೆ ನೀಡುತ್ತಾರೆ
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:-
- ಅಧಿಕೃತ ವೆಬ್ಸೈಟ್ ಅಥವಾ ಸಂಬಂಧಿತ ಬ್ಯಾಂಕ್/ಮಹಿಳಾ ಅಭಿವೃದ್ಧಿ ನಿಗಮದ ಪೋರ್ಟಲ್ಗೆ ಲಾಗಿನ್ ಆಗಿ
- “Udyogini Scheme Online Application” ವಿಭಾಗವನ್ನು ಆಯ್ಕೆಮಾಡಿ
- ಅರ್ಜಿದಾರರ ವಿವರಗಳು (ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇಮೇಲ್) ಪೂರ್ತಿ ಭರ್ತಿ ಮಾಡಿ
- ಆಗತ್ಯ ದಾಖಲೆಗಳು (ಆಧಾರ್, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ವಿವರ, ಚಿತ್ರ) ಅಪ್ಲೋಡ್ ಮಾಡಿ
- ಉದ್ಯಮ ಯೋಜನಾ ವರದಿ (Project Report) ಸಲ್ಲಿಸಿ
- ಅರ್ಜಿಯನ್ನು ಪರಿಶೀಲಿಸಿ Submit/ಸಲ್ಲಿಸು ಕ್ಲಿಕ್ ಮಾಡಿ
- ಅರ್ಜಿಯ ಸ್ಥಿತಿ (Status) ಪರಿಶೀಲಿಸಲು ಲಾಗಿನ್ ಮಾಡಬಹುದು, ಸ್ವೀಕೃತ ಅರ್ಜಿಗೆ ಸಬ್ಸಿಡಿ/ಸಾಲ ವಿವರ ನೇರವಾಗಿ ನೋಟಿಫೈ ಆಗುತ್ತದೆ
ಕೊನೆಯ ಮಾತು:
“ನೀವು ಸ್ವಂತ ಉದ್ಯಮ ಆರಂಭಿಸಲು ಬಯಸುತ್ತಿದ್ದೀರಾ? ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ ನಿಮಗೆ ₹3 ಲಕ್ಷವರೆಗೆ ಸಾಲ ಮತ್ತು ಆಯ್ಕೆಯಾದವರಿಗೆ ₹1.5 ಲಕ್ಷ ಸಬ್ಸಿಡಿ ಒದಗಿಸುತ್ತಿದೆ. ಇದು ನಿಮ್ಮ ಹಣಕಾಸಿನ ಭಾರವನ್ನು ಕಡಿಮೆ ಮಾಡಿ, ಸ್ವಾವಲಂಬಿ ಮಹಿಳೆಯಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುತ್ತದೆ. ಮಾರ್ಚ್ 2026 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ, ನಿಮ್ಮ ಹಂತದ ಬ್ಯಾಂಕ್ ಅಥವಾ ಮಹಿಳಾ ಅಭಿವೃದ್ಧಿ ನಿಗಮ ಕಚೇರಿಯೊಂದಿಗೆ ಸಂಪರ್ಕಿಸಿ, ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿಕೊಳ್ಳಿ!”
Home
Loan