Indian Army: ಭಾರತೀಯ ಸೇನೆಯಲ್ಲಿ ಬಂಪರ್ ನೇಮಕಾತಿ! ಯಾವುದೇ ಲಿಖಿತ ಪರೀಕ್ಷೆ + ಅರ್ಜಿ ಶುಲ್ಕ ಇಲ್ಲ ।ಆಗಸ್ಟ್ 21 ಕೊನೆಯ ದಿನಾಂಕ

ದೇಶ ಸೇವೆಯನ್ನು ಮಾಡುತ್ತ ಗೌರವಯುತ ಜೀವನವನ್ನು ನಡೆಸುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಿಂದ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಭಾರತೀಯ ಸೇನೆಯು 125 ನೇ ಶಾರ್ಟ್ ಸರ್ವಿಸ್ ಕಮಿಷನ್ NCC ವಿಶೇಷ ಪ್ರವೇಶ ಯೋಜನೆಯ ಕೋರ್ಸ್ ಗಳಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಏಪ್ರಿಲ್ 2027 ರಿಂದ ಆರಂಭವಾಗುವ JAG ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಹಾಗೂ NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

Indian Army SSC Recruitment


ಈ ಪ್ರವೇಶಾತಿಯ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಪ್ರತಿಷ್ಠಿತ SSB ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಾನೂನು ಪದವಿ ಹೊಂದಿರುವ ಅಭ್ಯರ್ಥಿಗಳು JAG ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, SCC, ಸಿ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳು NCC ಸ್ಪೆಷಲ್ ಎಂಟ್ರಿ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇಲ್ಲಿನ ವಿವಿಧ ಕೋರ್ಸ್ ಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಯಾವ ಕೋರ್ಸ್ ಗಳಿಗೆ ಯಾವಾಗ ಅರ್ಜಿ ಸಲ್ಲಿಸಬಹುದು? ಅರ್ಹ ಅಭ್ಯರ್ಥಿಗಳು ಯಾರು? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

Indian Army

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆ ಭಾರತೀಯ ಸೇನೆ
ಕೋರ್ಸ್ ಗಳ ಹೆಸರು 125 ನೇ ಶಾರ್ಟ್ ಸರ್ವಿಸ್ ಕಮಿಷನ್ ಕೋರ್ಸ್, ಏಪ್ರಿಲ್ 2027
ಹುದ್ದೆಯ ಹೆಸರು ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-08-2026
ಅಧಿಕೃತ ವೆಬ್ಸೈಟ್ ಲಿಂಕ್ http://joinindianarmy.nic.in/

ಹುದ್ದೆಯ ಸಂಕ್ಷಿಪ್ತ ವಿವರ:

ಭಾರತೀಯ ಸೇನೆಯ 125 ನೇ ಶಾರ್ಟ್ ಸರ್ವಿಸ್ ಕಮಿಷನ್ NCC ವಿಶೇಷ ಪ್ರವೇಶ ಯೋಜನೆಯ ಕೋರ್ಸ್ ಗಳಿಗೆ ಕಿರು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕಾನೂನು ಪದವಿ ಹೊಂದಿರುವ ಹಾಗೂ NCC ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ.

ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:

  • JAG ಎಂಟ್ರಿ ಸ್ಕೀಮ್ ಕೋರ್ಸ್:

JAG ಎಂಟ್ರಿ ಸ್ಕೀಮ್ ಕೋರ್ಸ್ ಗಳ ಅಡಿಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೂರು ವರ್ಷಗಳ LLB ಪದವಿಯನ್ನು ಪೂರ್ಣಗೊಳಿಸಿರಬೇಕು.

  • NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್:

NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗಳ ಅಡಿಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿಯನ್ನು ಪೂರ್ಣಗೊಳಿಸಿರಬೇಕು. NCC ಸೀನಿಯರ್ ಡಿವಿಷನ್ ವಿಭಾಗದಲ್ಲಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿರಬೇಕು. ಜೊತೆಗೆ ಕಡ್ಡಾಯವಾಗಿ NNC ‘ಸಿ ‘ ಪ್ರಮಾಣಪತ್ರ ಪರೀಕ್ಷೆಯಲ್ಲಿ ಕನಿಷ್ಠ ಬಿ ಗ್ರೇಡ್ ಪಡೆದು ಉತ್ತೀರ್ಣರಾಗಿರಬೇಕು.

ವಯೋಮಿತಿ ವಿವರ:

JAG ಎಂಟ್ರಿ ಸ್ಕೀಮ್ ಕೋರ್ಸ್ ಹಾಗೂ NCC ಸ್ಪೆಷಲ್ ಎಂಟ್ರಿ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 19 ವರ್ಷದಿಂದ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿಯನ್ನು ದಿನಾಂಕ 1-04-2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ.

ವಯೋಮಿತಿ ಸಡಿಲಿಕೆ ವಿವರ:

ಸರ್ಕಾರದ ನಿಯಮಾವಳಿಗಳ ಪ್ರಕಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿ.

ಅರ್ಜಿ ಶುಲ್ಕ:

ಭಾರತೀಯ ಸೇನೆಯ JAG ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಹಾಗೂ NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗಳ ನೇಮಕಾತಿ ಸಂಬಂಧಿಸಿದಂತೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗಾಗಿ ಸಾಮಾನ್ಯ ವರ್ಗಗಳ ಅಭ್ಯರ್ಥಿಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಇತರೆ ಎಲ್ಲ ವರ್ಗಗಳ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅಗತ್ಯ ದಾಖಲೆಗಳು:

  • ಗುರುತಿನ ಚೀಟಿ
  • ಪದವಿ ಪ್ರಮಾಣಪತ್ರ
  • ಪದವಿ ಅಂಕಪಟ್ಟಿ
  • NCC ‘C’ ಪ್ರಮಾಣಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಸಹಿ
  • ಜಾತಿ ಪ್ರಮಾಣಪತ್ರ
  • ಹಾಗೂ ಇತರೆ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಭಾರತೀಯ ಸೇನೆಯ JAG ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಹಾಗೂ NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇರಲಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಿ.

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಭ್ಯರ್ಥಿಗಳ ವೈಯಕ್ತಿಕ ಹಾಗೂ ಮೂಲ ವಿವರಗಳನ್ನು ಬಳಸಿ ಲಾಗಿನ್ ಆಗಿ.
  • JAG ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಹಾಗೂ NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗಳಲ್ಲಿ ನಿಮ್ಮ ಆಯ್ಕೆಯ ಕೋರ್ಸ್ ಗಳಿಗೆ ಆಯ್ಕೆ ಮಾಡಿ.
  • ನಂತರ ಅಲ್ಲಿ ಕೇಳಲಾದ ಶೈಕ್ಷಣಿಕ ವಿವರ, ವೈಯಕ್ತಿಕ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ನಂತರ ಈ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ಎಲ್ಲ ವಿವಿರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಅರ್ಜಿ ಪರಿಶೀಲನೆ
  • SSB ಸಂದರ್ಶನ
  • ವೈದ್ಯಕೀಯ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ಅಂತಿಮ ಮೆರಿಟ್ ಪಟ್ಟಿ

ಪ್ರಮುಖ ದಿನಾಂಕಗಳು:

ಕೋರ್ಸ್ ವಿವರ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ನೇಮಕಾತಿ ಅಧಿಸೂಚನೆ ಪ್ರಕಟಗೊಂಡ ದಿನಾಂಕ 10-07-2026
125 ನೇ SSC JAG ಎಂಟ್ರಿ ಸ್ಕೀಮ್ ಕೋರ್ಸ್ (ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ)ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 17-07-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-08-2026
125 ನೇ SSC NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ (ಪುರುಷ ಅಭ್ಯರ್ಥಿಗಳಿಗೆ )ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 20-07-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-08-2026
125 ನೇ SSC NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ (ಮಹಿಳಾ ಅಭ್ಯರ್ಥಿಗಳಿಗೆ )ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 21-07-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-08-2026

ಇತರೆ ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಏಪ್ರಿಲ್ 2027 ರಿಂದ ಆರಂಭವಾಗುವ ಭಾರತೀಯ ಸೇನೆಯ JAG ಎಂಟ್ರಿ ಸ್ಕೀಮ್ ಕೋರ್ಸ್ ಹಾಗೂ NCC ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗಳಿಗೆ ಕಿರು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಕಾನೂನು ಪದವಿ ಹಾಗೂ ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment