House: ಸ್ವಂತ ಮನೆ ಕಟ್ಟಲು ಸಿಗಲಿದೆ ₹2 ಲಕ್ಷ! ಇಲ್ಲಿದೆ ಸಂಪೂರ್ಣ ಮಾಹಿತಿ!

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಸ್ವಂತ ಮನೆಯ ಕನಸ್ಸನ್ನು ಕಾಣುತ್ತಿದ್ದೀರಾ? (RGRHCL) ಸ್ವಂತ ಮನೆಯ ಕನಸ್ಸನ್ನು ನನಸ್ಸು ಮಾಡಿಕೊಳ್ಳಲು ಹಣಕಾಸಿನ ಸಮಸ್ಯೆ ಎದುರಾಗುತ್ತಿದೆಯಾ? ಹಾಗಿದ್ದರೆ ಈ ವಿಷಯದ ಕುರಿತು ಇನ್ನು ಚಿಂತಿಸುವ ಅಗತ್ಯವಿಲ್ಲ.

ಕರ್ನಾಟಕ ಸರ್ಕಾರವು ವಸತಿ ರಹಿತರಿಗೆ ಸ್ವಂತ ಮನೆಯನ್ನು ಒದಗಿಸುವ ಉದ್ದೇಶದಿಂದ ಆಶ್ರಯ ವಸತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಇದುವರೆಗೂ ಯಾವುದೇ ಸ್ವಂತ ಮನೆಯನ್ನು ಹೊಂದಿರದ ಬಡತನ ರೇಖೆಗಿಂತ ಕೆಳಗಿರುವವರು ಸ್ವಂತ ಮನೆ ನಿರ್ಮಿಸಿಕೊಳ್ಳಲು ಭಾರೀ ಮೊತ್ತದ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಂತವಾಗಿ ಪಕ್ಕ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ಒದಗಿಸುವ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆಶ್ರಯ ವಸತಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಯಾರು ಅರ್ಹರು? ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಫಲಾನುಭವಿಗಳು ಹೊಂದಿರಬೇಕಾದ ಅರ್ಹತಾ ಮಾನದಂಡಗಳೇನು? ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಅಗತ್ಯ? ಹಾಗೂ ಇನ್ನಿತರ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.

ಯೋಜನೆಯ ಕಿರು ವಿಮರ್ಶೆ:

ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆಯ ಹೆಸರು ಆಶ್ರಯ ವಸತಿ ಯೋಜನೆ
ಅರ್ಹ ಫಲಾನುಭವಿಗಳು ಸ್ವಂತ ಪಕ್ಕ ಮನೆಯನ್ನು ಹೊಂದಿರದ ಅಭ್ಯರ್ಥಿಗಳು
ಸಿಗುವ ಒಟ್ಟು ಸಹಾಯಧನ ₹2,00,000 ಸಹಾಯಧನ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಏನಿದು ಆಶ್ರಯ ವಸತಿ ಯೋಜನೆ?

ಆಶ್ರಯ ವಸತಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಒಂದು ಯೋಜನೆಯನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನ ಗೊಳಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಂತ ಸೂರನ್ನು ಕಟ್ಟಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆಶ್ರಯ ವಸತಿ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಅರ್ಹ ಫಲಾನುಭವಿಗಳಿಗೆ ವಿಭಿನ್ನ ರೀತಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಅವುಗಳ ವಿವರವನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಯೋಜನೆಯ ಉದ್ದೇಶ:

  • ನಿರಾಶ್ರಿತರಿಗೆ ಸ್ವಂತ ಮನೆಯನ್ನು ಒದಗಿಸುವುದು:

ಸ್ವಂತ ಮನೆಯನ್ನು ಹೊಂದಿರದ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುರ್ಟುಂಬಗಳಿಗೆ ಸುಸಜ್ಜಿತ ಸ್ವಂತ ಪಕ್ಕ ಮನೆಯನ್ನು ಒದಗಿಸಿ, ಅವರು ಸ್ಥಿರ ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಹಣಕಾಸಿನ ನೆರವನ್ನು ಒದಗಿಸುವುದು:

ಸ್ವಂತ ಮನೆಯ ಕನಸ್ಸನ್ನು ಹೊಂದಿರುವ ಸಾವಿರಾರು ಕುಟುಂಬಗಳು ಹಣಕಾಸಿನ ಸಮಸ್ಯೆಯಿಂದಾಗಿ ತಮ್ಮ ಕನ್ನಸ್ಸನು ನನಸ್ಸು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಹ ಕುಟುಂಬಗಳಿಗೆ ಸರ್ಕಾರವು ಈ ಒಂದು ಯೋಜನೆಯಡಿಯಲ್ಲಿ ₹2,00,000 ದ ವರೆಗೆ ಸಹಾಯಧನವನ್ನು ನೀಡುವ ಮೂಲಕ ಅವರ ಕನಸ್ಸಿಗೆ ದಾರಿ ದೀಪ ಆಗುವ ಪ್ರಯತ್ನ ಮಾಡಿದೆ.

  • ಜೀವನ ಮಟ್ಟವನ್ನು ಸುಧಾರಿಸುವುದು:

ಕರ್ನಾಟಕ ಸರ್ಕಾರವು ಆಶ್ರಯ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸ್ವಂತ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ಒದಗಿಸುವ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿ ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಲು ಅವಕಾಶ ಕಲ್ಪಿಸುವುದು.

ಯೋಜನೆಯ ಪ್ರಯೋಜನ:

  • ಕಷ್ಟಪಟ್ಟು ಸಂಪಾದಿಸಿದ ಎಲ್ಲಾ ಹಣವನ್ನು ಬಾಡಿಗೆ ಮನೆಗೆ ಸುರಿದು ಸುರಿದು ಸುಸ್ತಾಗಿರುವ ಕುಟುಂಬಗಳು ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವ ಮೂಲಕ, ಬಾಡಿಗೆ ಮನೆಯಿಂದ ಮುಕ್ತಿಯನ್ನು ಹೊಂದಿ ಸ್ವಂತ ಮನೆಯ ಮಾಲೀಕತ್ವವನ್ನು ಹೊಂದಬಹುದಾಗಿದೆ.
  • ಸರ್ಕಾರವು ಆಶ್ರಯ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಸ್ವಂತ ಮನೆಯನ್ನು ನಿರ್ಮಿಸಲು ₹2,00,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಈ ಒಂದು ಸಹಾಯಧನವನ್ನು ಸರ್ಕಾರಕ್ಕೆ ಪುನಃ ಮರು ಪಾವತಿಸುವ ಅಗತ್ಯ ಇರುವುದಿಲ್ಲ.
  • ಅರ್ಹ ಫಲಾನುಭವಿಗಳಿಗೆ ಈ ಒಂದು ಯೋಜನೆಯಡಿಯಲ್ಲಿ ಸಿಗವ ಸಹಾಯಧನವು ನೇರ ನಗದು ವರ್ಗಾವಣೆ ಮೂಲಕ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇದು ಹೆಚ್ಚು ಪಾರದರ್ಶಕತೆಯನ್ನು ಹೊಂದಿದ್ದು, ಇದರಿಂದಾಗಿ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
  • ಅರ್ಹ ಫಲಾನುಭವಿಗಳಿಗೆ ಸಿಗುವ ಈ ಒಂದು ಸಹಾಯಧನವು ಒಂದೇ ಬಾರಿ ಸಿಗುವುದಿಲ್ಲ. ಮನೆ ಕೆಲಸದ ಪ್ರಗತಿಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಇದರಿಂದಾಗಿ ಹಣವು ಒಮ್ಮೆಲೇ ಖರ್ಚಾಗದೆ ಮನೆ ನಿರ್ಮಾಣ ಕೆಲಸವು ಅರ್ಧದಲ್ಲಿ ನಿಲ್ಲದಂತೆ ಪೂರ್ಣಗೊಳಿಸಲು ನೆರವಾಗಿತ್ತದೆ.

ಆಶ್ರಯ ವಸತಿ ಯೋಜನೆಯಡಿಯಲ್ಲಿ ಎಷ್ಟು ಸಹಾಯಧನ ಸಿಗುತ್ತದೆ?

ಆಶ್ರಯ ವಸತಿ ಯೋಜನೆಯಡಿಯಲ್ಲಿ ಕೆಲವು ಪ್ರದೇಶದ ಹಾಗೂ ಕೆಲವು ವರ್ಗಗಳ ಅಭ್ಯರ್ಥಿಗಳಿಗೆ ವಿಭಿನ್ನವಾಗಿ ಸಹಾಯಧನವನ್ನು ನೀಡಲಾಗುತ್ತದೆ. ಅವುಗಳ ವಿವರ ಈ ಕೆಳಕಂಡಂತಿದೆ,

ಫಲಾನುಭವಿಗಳ ವರ್ಗಗಳು ಪ್ರದೇಶ ಸಹಾಯಧನದ ವಿವರ
ಸಾಮಾನ್ಯ ಹಾಗೂ ಹಿಂದುಳಿದ ವರ್ಗಗದ ಫಲಾನುಭವಿಗಳು ಗ್ರಾಮೀಣ ಪ್ರದೇಶ ₹1,20,000
ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಫಲಾನುಭವಿಗಳು ನಗರ ಪ್ರದೇಶ ₹1,50,000 – ₹2,00,000
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶ ₹1,75,000 – ₹2,00,000

ಹಣ ಬಿಡುಗಡೆ ಮಾಡುವ ಪ್ರಮುಖ ಹಂತಗಳು:

ಅರ್ಹ ಫಲಾನುಭವಿಗಳಿಗೆ ಈ ಒಂದು ಯೋಜನೆಯಡಿಯಲ್ಲಿ ಸಿಗುವ ಸಹಾಯಧನವು ಒಂದೇ ಬಾರಿಗೆ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಬದಲಾಗಿದೆ ಮನೆ ಕೆಲಸದ ಪ್ರಗತಿಗೆ ಅನುಗುಣವಾಗಿ ಒಟ್ಟು ನಾಲ್ಕು ಹಂತದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಅವುಗಳ ವಿವರ ಈ ಕೆಳಕಂಡಂತಿದೆ.

  • ಮೊದಲ ಹಂತ:

ಅರ್ಹ ಫಲಾನುಭವಿಗಳು ತಮ್ಮ ಮನೆಯ ಪಾಯದ ಕೆಲಸ ಮುಗಿಸಿದ ನಂತರ ಮೊದಲ ಹಂತದ ಹಣವನ್ನು ಪಡೆದುಕೊಳ್ಳಬಹುದಾಗಿದೆ.

  • ಎರಡನೇ ಹಂತ:

ಗೋಡೆ ಮಟ್ಟದ ನಿರ್ಮಾಣ ಪೂರ್ಣಗೊಂಡ ನಂತರ ಎರಡನೇ ಹಂತದ ಹಣವನ್ನು ಪಡೆದುಕೊಳ್ಳಬಹುದಾಗಿದೆ.

  • ಮೂರನೇ ಹಂತ:

ಮನೆಯ ಮೇಲ್ಚಾವಣಿ ಪೂರ್ಣಗೊಂಡ ನಂತರ ಮೂರನೇ ಹಂತದ ಹಣವನ್ನು ಪಡೆದುಕೊಳ್ಳಬಹುದಾಗಿದೆ.

  • ನಾಲ್ಕನೇ ಹಂತ:

ಮನೆ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ನಾಲ್ಕನೇ ಹಂತದ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

  • ಅರ್ಜಿದಾರರು ಕರ್ನಾಟಕ ಸರ್ಕಾರದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹1.20 ಮೀರಿರಬಾರದು.
  • ಅರ್ಜಿದಾರರು ಕನಿಷ್ಠ 18 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯನ್ನು ಹೊಂದಿರಬೇಕು.
  • ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಆಶ್ರಯ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿರಬಾರದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಬಿಪಿಎಲ್ ಕಾರ್ಡ್
  • ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣಪತ್ರ
  • ವಾಸಸ್ಥಳ ದೃಢೀಕರಣ ಪತ್ರ
  • ಪಾಸ್ಪೋರ್ಟ್ ಅಳತೆಯ ಫೋಟೋ
  • ನಿವೇಶನ ದಾಖಲೆಗಳು
  • ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಫಲಾನುಭವಿಗಳು ಆಶ್ರಯ ವಸತಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಕೆಳಗೆ ನೀಡಿರುವ ರೀತಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

  • ಅರ್ಜಿದಾರರು ಆಶ್ರಯ ಅಧಿಕೃತ ಪೋರ್ಟಲ್ https://ashraya.karnataka.gov.in/ ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ ಆನ್ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ಅಪ್ಲಿಕೇಶನ್ ಫಾರ್ಮ್ ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಅಂತಿಮ ಮಾತು:

ಕರ್ನಾಟಕ ಸರ್ಕಾರವು ಸ್ವಂತ ಮನೆಯನ್ನು ಹೊಂದಿರದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಂತ ಮನೆಯನ್ನು ನಿರ್ಮಿಸಲು ಆಶ್ರಯ ವಸತಿ ಯೋಜನೆಯಡಿಯಲ್ಲಿ ಸಹಾಯಧನವನ್ನು ನೀಡುತ್ತಿದ್ದು, ನೀವೇನಾದರೂ ಈ ವರೆಗೂ ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿಲ್ಲವಾದರೆ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

9 thoughts on “House: ಸ್ವಂತ ಮನೆ ಕಟ್ಟಲು ಸಿಗಲಿದೆ ₹2 ಲಕ್ಷ! ಇಲ್ಲಿದೆ ಸಂಪೂರ್ಣ ಮಾಹಿತಿ!”

  1. I have heard about the news which the Karnataka government is giving some amount of money to build there dream house

    Reply
  2. ಮದ್ದೂರ್ ತಾಲೂಕ್, ಮಂಡ್ಯ ಜಿಲ್ಲೆ ಕೊಪ್ಪ ಹೋಬಳಿ ಚಿಕ್ಕೋಡಿ ಗ್ರಾಮ

    Reply
  3. ಮದ್ದೂರ್ ತಾಲೂಕ್ ಮಂಡ್ಯ ಜಿಲ್ಲೆ ಕೊಪ್ಪ ಹೋಬಳಿ ಚಿಕ್ಕದೊಡ್ಡಿ ಗ್ರಾಮ ಗೂಳೂರು ಪೋಸ್ಟ್

    Reply

Leave a Comment