Solar: ನಿಮಗೆ ವಿದ್ಯುತ್ ಬಿಲ್ ಕಟ್ಟಿ ಕಟ್ಟಿ ಸುಸ್ತಾಗಿದೀಯಾ? ಹಾಗಿದ್ರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ ಫ್ರೀಯಾಗಿ ಸೋಲಾರ್ ನ ಕೊಡಲು ಮುಂದಾಗಿದ್ದು, ಸ್ವಂತ ಮನೆ ಹೊಂದಿರುವ ಪ್ರತಿ ಕುಟುಂಬವು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ವಿದ್ಯುತ್ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಗಳು, ಕಚೇರಿಗಳು, ಕಾರ್ಖಾನೆಗಳು, ಕೃಷಿ ಕ್ಷೇತ್ರ ಎಲ್ಲ ಕಡೆಯಲ್ಲೂ ವಿದ್ಯುತ್ ಅತ್ಯಗತ್ಯವಾಗಿದೆ. ಆದರೆ ವಿದ್ಯುತ್ ದರಗಳ ಏರಿಕೆ ಸಾಮಾನ್ಯ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ತಿಂಗಳ ವಿದ್ಯುತ್ ಬಿಲ್ ಒಂದು ದೊಡ್ಡ ಭಾರವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾಗಿ ಪಿಎಂ ಸೂರ್ಯಘರ್ ಮಾಫ್ಟ್ ಬಿಜ್ಲಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಮನೆಮೇಲೆ ಸೌರ ಪ್ಯಾನಲ್ ಅಳವಡಿಸಿ ಜನರಿಗೆ ಉಚಿತ ಅಥವಾ ಕಡಿಮೆ ವೆಚ್ಚದ ವಿದ್ಯುತ್ ಒದಗಿಸುವುದು. ಇದು ಕೇವಲ ಒಂದು ಸರ್ಕಾರಿ ಯೋಜನೆ ಅಲ್ಲ; ಇದು ಭಾರತದ ಶಕ್ತಿಭದ್ರತೆ ಮತ್ತು ಪರಿಸರ ಸಂರಕ್ಷಣೆಯತ್ತ ಸಾಗುತ್ತಿರುವ ಮಹತ್ವದ ಕ್ರಾಂತಿಯಾಗಿದೆ.
ಕೇಂದ್ರ ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲೆಗಳು ಯಾವುದು? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಯೋಜನೆಯ ಅವಲೋಕನ:
| ಅನುಷ್ಠಾನ ಗೊಳಿಸಿದ ಸರ್ಕಾರ | ಕೇಂದ್ರ ಸರ್ಕಾರ |
| ಯೋಜನೆಯ ಹೆಸರು | ಪಿಎಂ ಸೂರ್ಯಾಘರ್ ಮಾಫ್ಟ್ ಬಿಜಲಿ ಯೋಜನೆ |
| ಅರ್ಹ ಫಲಾನುಭವಿಗಳು | ಸ್ವಂತ ಮನೆಯನ್ನು ಹೊಂದಿರುವ ಪ್ರತಿ ಕುಟುಂಬಗಳು |
| ಯೋಜನೆಯ ಉದ್ದೇಶ | ದೇಶದ ಒಂದು ಕೋಟಿ ಮನೆಗಳಿಗೆ ಫ್ರೀ ಆಗಿ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
ಯೋಜನೆಯ ಬಗ್ಗೆ:
ಕೇಂದ್ರ ಸರ್ಕಾರ ಜನಸಾಮಾನ್ಯರ ವಿದ್ಯುತ್ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಪಿಎಂ ಸೂರ್ಯಘರ್ ಮಾಫ್ಟ್ ಬಿಜ್ಲಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಪ್ಯಾನಲ್ ಅಳವಡಿಸಲು ಸರ್ಕಾರ ಸಬ್ಸಿಡಿ ನೀಡುತ್ತದೆ. ಇದರ ಮೂಲಕ ಜನರು ತಮ್ಮ ಮನೆಗೆ ಬೇಕಾದ ವಿದ್ಯುತ್ ಅನ್ನು ತಾವೇ ಉತ್ಪಾದಿಸಿಕೊಳ್ಳಬಹುದು.
ಈ ಯೋಜನೆಯ ಪ್ರಮುಖ ಉದ್ದೇಶ ದೇಶದ ಒಂದು ಕೋಟಿ ಮನೆಗಳಿಗೆ ಸೌರಶಕ್ತಿ ಸಂಪರ್ಕ ಕಲ್ಪಿಸುವುದಾಗಿದೆ. ಸೌರ ಪ್ಯಾನಲ್ ಅಳವಡಿಸಿದ ಬಳಿಕ ಉತ್ಪಾದನೆಯಾಗುವ ವಿದ್ಯುತ್ ಮನೆಯ ಬಳಕೆಗೆ ಉಪಯೋಗವಾಗುತ್ತದೆ. ಇದರಿಂದ ಪ್ರತಿಮಾಸ ಬರುವ ವಿದ್ಯುತ್ ಬಿಲ್ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಕೆಲವೊಂದು ಮನೆಗಳಲ್ಲಿ ವಿದ್ಯುತ್ ಬಿಲ್ ಸಂಪೂರ್ಣ ಶೂನ್ಯವಾಗುವ ಸಾಧ್ಯತೆಯೂ ಇದೆ.
ಸರ್ಕಾರ ಈ ಯೋಜನೆಯಡಿ 1 ಕಿಲೋವಾಟ್‌ನಿಂದ 3 ಕಿಲೋವಾಟ್‌ವರೆಗೆ ಸೌರ ವ್ಯವಸ್ಥೆ ಅಳವಡಿಸಲು ಆರ್ಥಿಕ ನೆರವು ನೀಡುತ್ತಿದೆ. ಪ್ರತಿ ಕಿಲೋವಾಟ್ ಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಬ್ಸಿಡಿ ನೀಡಲಾಗುತ್ತಿದ್ದು ಅವುಗಳ ವಿವರ ಈ ಕೆಳಕಂಡಂತೆ ತಿಳಿಸಲಾಗುತ್ತದೆ.
ಯೋಜನೆಯ ಉದ್ದೇಶ:
- ಜನರ ಆರ್ಥಿಕ ಹೊರೆ ಕಡಿಮೆ ಮಾಡುವುದು:
ಇಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಪ್ರತಿಯೊಂದು ಕುಟುಂಬಕ್ಕೂ ದೊಡ್ಡ ಸಮಸ್ಯೆಯಾಗಿದೆ. ತಿಂಗಳ ಕೊನೆಯಲ್ಲಿ ಬರುವ ಭಾರೀ ಬಿಲ್ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಒತ್ತಡವನ್ನು ಉಂಟುಮಾಡುತ್ತಿದೆ. ಈ ಪರಿಸ್ಥಿತಿಯನ್ನು ಮನಗಂಡ ಕೇಂದ್ರ ಸರ್ಕಾರ, ಜನರು ತಮ್ಮ ಮನೆಗೆ ಬೇಕಾದ ವಿದ್ಯುತ್ ಅನ್ನು ತಾವೇ ಉತ್ಪಾದಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತಿದೆ.
- ಸುರಕ್ಷಿತ ಶಕ್ತಿ ಬಳಕೆಯನ್ನು ಉತ್ತೇಜಿಸುವುದು:
ಉಚಿತ ಶಕ್ತಿಯನ್ನು ಬಳಸಿಕೊಂಡು ಯಾವುದೇ ಮಾಲಿನ್ಯವಿಲ್ಲದೆ ವಿದ್ಯುತ್ ಉತ್ಪಾದಿಸಬಹುದು. ಸೌರಶಕ್ತಿ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಆದ್ದರಿಂದ ಜನರು ಕಲ್ಲಿದ್ದಲು ಹಾಗೂ ಇಂಧನ ಆಧಾರಿತ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಶಕ್ತಿಯತ್ತ ಸಾಗಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
- ಭಾರತವನ್ನು ಶಕ್ತಿಯಲ್ಲಿ ಸ್ವಾವಲಂಬಿಯನ್ನಾಗಿಸುವುದು:
ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಅಪಾರ ಪ್ರಮಾಣದಲ್ಲಿ ಇಂಧನ ಬಳಕೆಯಾಗುತ್ತಿದೆ. ಇವುಗಳಲ್ಲಿ ಬಹಳಷ್ಟು ಸಂಪನ್ಮೂಲಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಸೌರಶಕ್ತಿ ಬಳಕೆ ಹೆಚ್ಚಾದರೆ ದೇಶದ ವಿದ್ಯುತ್ ಉತ್ಪಾದನೆ ಸ್ಥಳೀಯವಾಗಿ ಸಾಧ್ಯವಾಗುತ್ತದೆ. ಇದರಿಂದ ಭಾರತ ಶಕ್ತಿಸ್ವಾವಲಂಬನೆಯತ್ತ ವೇಗವಾಗಿ ಸಾಗಬಹುದು.
- ಗ್ರಾಮೀಣ ಭಾಗಗಳಿಗೆ ನಿರಂತರ ವಿದ್ಯುತ್ ಒದಗಿಸುವುದು:
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ರೈತರು ಹಾಗೂ ಗ್ರಾಮೀಣ ಜನರು ವಿದ್ಯುತ್ ವ್ಯತ್ಯಯದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸೌರಶಕ್ತಿ ಬಳಕೆಯಿಂದ ಹಳ್ಳಿಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ. ರೈತರಿಗೆ ನೀರಾವರಿ ವ್ಯವಸ್ಥೆ ಸುಲಭವಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿಗೆ ಸಹಾಯವಾಗುತ್ತದೆ. ಸಣ್ಣ ಕೈಗಾರಿಕೆಗಳ ಬೆಳವಣಿಗೆಯೂ ಸಾಧ್ಯವಾಗುತ್ತದೆ.
ಯೋಜನೆಯಿಂದ ಪ್ರತಿ ಕುಟುಂಬಕ್ಕೂ ಆಗುವ ಪ್ರಯೋಜನಗಳು:
- ಸರ್ಕಾರದಿಂದ ಆರ್ಥಿಕ ನೆರವು:
ಸಾಮಾನ್ಯ ಜನರು ಸುಲಭವಾಗಿ ಸೌರ ಪ್ಯಾನಲ್ ಅಳವಡಿಸಿಕೊಳ್ಳಲು ಸರ್ಕಾರ ಸಬ್ಸಿಡಿ ರೂಪದಲ್ಲಿ ಆರ್ಥಿಕ ಸಹಾಯ ನೀಡುತ್ತಿದೆ. ಇದರಿಂದ ಆರಂಭಿಕ ವೆಚ್ಚದ ಭಯ ಕಡಿಮೆಯಾಗುತ್ತದೆ. ವಿಶೇಷವಾಗಿ ಮಧ್ಯಮ ವರ್ಗ ಹಾಗೂ ಗ್ರಾಮೀಣ ಕುಟುಂಬಗಳಿಗೆ ಈ ನೆರವು ಬಹಳ ಉಪಯೋಗವಾಗುತ್ತಿದೆ.
- ತಿಂಗಳ ವಿದ್ಯುತ್ ಖರ್ಚು ಕಡಿಮೆಯಾಗುತ್ತದೆ:
ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ವಿದ್ಯುತ್ ಬಿಲ್ ದೊಡ್ಡ ಖರ್ಚಾಗಿರುತ್ತದೆ. ಫ್ಯಾನ್, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಮಿಕ್ಸರ್ ಸೇರಿದಂತೆ ಅನೇಕ ಉಪಕರಣಗಳ ಬಳಕೆಯಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಆದರೆ ಸೌರ ಪ್ಯಾನಲ್ ಅಳವಡಿಸಿದ ಬಳಿಕ ಮನೆಯಲ್ಲೇ ವಿದ್ಯುತ್ ಉತ್ಪಾದನೆಯಾಗುವುದರಿಂದ ತಿಂಗಳ ವಿದ್ಯುತ್ ಬಿಲ್ ಬಹಳಷ್ಟು ಕಡಿಮೆಯಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
- ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ:
ವಿದ್ಯಾರ್ಥಿಗಳು ಓದಿಗೆ ಮತ್ತು ಆನ್‌ಲೈನ್ ತರಗತಿಗಳಿಗೆ ವಿದ್ಯುತ್ ಅವಲಂಬಿತರಾಗಿದ್ದಾರೆ. ಸೌರಶಕ್ತಿಯಿಂದ ರಾತ್ರಿ ವೇಳೆ ಬೆಳಕು ದೊರೆಯುತ್ತದೆ. ಕಂಪ್ಯೂಟರ್ ಹಾಗೂ ಇಂಟರ್ನೆಟ್ ಉಪಯೋಗಿಸಲು ಸಹಾಯವಾಗುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ.
- ಸೂರ್ಯನ ಬೆಳಕಿನಿಂದ ಉಚಿತ ವಿದ್ಯುತ್:
ಸೌರಶಕ್ತಿಯ ದೊಡ್ಡ ವಿಶೇಷತೆ ಎಂದರೆ ಸೂರ್ಯನ ಬೆಳಕು ಸಂಪೂರ್ಣ ಉಚಿತವಾಗಿರುವುದು. ಇದಕ್ಕಾಗಿ ಯಾವುದೇ ಇಂಧನ ಖರೀದಿಸುವ ಅಗತ್ಯವಿಲ್ಲ. ಸೂರ್ಯನ ಕಿರಣಗಳನ್ನು ಬಳಸಿ ನೇರವಾಗಿ ವಿದ್ಯುತ್ ಉತ್ಪಾದಿಸಬಹುದು. ಒಮ್ಮೆ ಸೌರ ವ್ಯವಸ್ಥೆ ಅಳವಡಿಸಿದ ಬಳಿಕ ಹಲವು ವರ್ಷಗಳವರೆಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪಡೆಯಬಹುದು.
ಯೋಜನೆಯಡಿಯಲ್ಲಿ ಸಿಗುವ ಸಬ್ಸಿಡಿ ಸಹಾಯಧನದ ವಿವರ:
ಈ ಒಂದು ಯೋಜನೆಯಡಿಯಲ್ಲಿ ಸ್ವಂತ ಮನೆಯನ್ನು ಹೊಂದಿರುವ ಪ್ರತಿ ಕುಟುಂಬಕ್ಕೂ ಕೂಡ ಫ್ರೀಯಾಗಿ ಸೋಲಾರ್ ಪ್ಯಾನಲ್ ಅಳವಡಿಯಲು ಸಬ್ಸಿಡಿ ಸಹಾಯಧನವನ್ನು ಒದಗಿಸುತ್ತಿದ್ದು, ಅವರು ಎಷ್ಟು ಕಿಲೋವಾಟ್ ಸೋಲಾರ್ ಪ್ಯಾನಲ್ ಅನ್ನು ಅಳವಡಿಕೊಳ್ಳುತ್ತಾರೆ ಅದಕ್ಕೆ ಅನುಗುಣವಾಗಿ ಸಬ್ಸಿಡಿ ದರವನ್ನು ನಿಗದಿಪಡಿಸಲಾಗುತ್ತದೆ. ಅವುಗಳ ವಿವರ ಹೀಗಿದೆ.
- 1 ಕಿಲೋವಾಟ್ ಸೋಲಾರ್ ಪ್ಯಾನಲ್ ಗೆ: ₹30,000/-
- 2 ಕಿಲೋವಾಟ್ ಸೋಲಾರ್ ಪ್ಯಾನಲ್ ಗೆ: ₹60,000/-
- 3 ಕಿಲೋವಾಟ್ ಅಥವಾ ಅದಕ್ಕಿಂತ ಹೆಚ್ಚು ಕಿಲೋವಾಟ್ ನ ಸೋಲಾರ್ ಪ್ಯಾನಲ್ ಗೆ: ₹78,000/-
ಅರ್ಹ ಫಲಾನುಭವಿಗಳು:
- ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬೇಕು.
- ಅರ್ಜಿದಾರರು ಭಾರತದ ನಾಗರೀಕನಾಗಿರಬೇಕು.
- ಮಾನ್ಯ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು
- ಸೋಲಾರ್ ಪ್ಯಾನಲ್ ಅಳವಡಿಸಲು ಸೂಕ್ತವಾದ ಮೇಲ್ಚಾವಾಣಿಯನ್ನು ಹೊಂದಿರಬೇಕು
- ಈ ಹಿಂದೆ ಇದೇ ರೀತಿಯ ಯಾವುದೇ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿರಬಾರದು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಕರೆಂಟ್ ಬಿಲ್
- ಬ್ಯಾಂಕ್ ಪಾಸ್ ಬುಕ್ ವಿವರ
- ಮನೆಯ ಮಾಲೀಕತ್ವ ಹೊಂದಿರುವ ದಾಖಲೆಗಳು
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
- ಫಲಾನುಭವಿಗಳು ಮೊದಲು ಪಿಎಂ ಸೂರ್ಯಾಘರ್ ಮಾಫ್ಟ್ ಬಿಜಲಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ ಮೂಲ ವಿವರಗಳನ್ನು ಬಳಸಿಕೊಂಡು ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
- ನಂತರ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ವೈಯಕ್ತಿಕ ವಿವರ, ಆಧಾರ್ ಸಂಖ್ಯೆ, ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಕೊನೆಯ ಮಾತು:
ಪಿಎಂ ಸೂರ್ಯಘರ್ ಮಾಫ್ಟ್ ಬಿಜ್ಲಿ ಯೋಜನೆ ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತರಬಲ್ಲ ಕ್ರಾಂತಿಕಾರಿ ಯೋಜನೆಯಾಗಿದೆ. ಇದು ಕೇವಲ ವಿದ್ಯುತ್ ಉಳಿತಾಯ ಯೋಜನೆ ಮಾತ್ರವಲ್ಲ; ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುವ ಮಹತ್ವದ ಹೆಜ್ಜೆಯಾಗಿದೆ.
ನೀವೇನಾದರೂ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.