App: ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಾಸಿಕ ರೂ. 2000 ಆರ್ಥಿಕ ನೆರವನ್ನು ಪಡೆಯುತ್ತಿದ್ದ ಅರ್ಹ ಫಲಾನುಭವಿ ಮಹಿಳೆಯರು ಇನ್ನು ಮುಂದೆ ಸರ್ಕಾರದ ಆರ್ಥಿಕ ನೆರವನ್ನು ಪಡೆಯಬೇಕಾದರೆ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯದ ಲಕ್ಷಾಂತರ ಕುಟುಂಬಗಳ ಯಜಮಾನಿಯರಿಗೆ ಆರ್ಥಿಕ ನೆರವನ್ನು ನೀಡಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ. 2000 ಹಣವನ್ನು ಜಮಾ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಣವನ್ನು ಪಡೆಯಲು ಬಯೋ ಮೆಟ್ರಿಕ್ ಪ್ರಕ್ರಿಯೆ ಕಡ್ಡಾಯವಾಗಿದೆ.
ರಾಜ್ಯ ಸರ್ಕಾರವು ಯೋಜನೆಯ ದುರುಪಯೋಗವನ್ನು ತಡೆಯಲು ಹಾಗೂ ಅರ್ಹ ಫಲಾನುಭವಿ ಮಹಿಳೆಯರಿಗೆ ಮಾತ್ರ ಯೋಜನೆಯಡಿಯಲ್ಲಿ ಹಣ ತಲುಪುವಂತೆ ಮಾಡಲು ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಪ್ರಸ್ತುತ ಲೇಖನದಲ್ಲಿ ಬಯೋ ಮೆಟ್ರಿಕ್ ಪ್ರಕ್ರಿಯೆ ಏಕೆ ಅಗತ್ಯ? ಅದು ಹೇಗೆ ಕೆಲಸ ಮಾಡುತ್ತದೆ? ಯಾರಿಗೆ ಇದು ಅನ್ವಹಿಸುತ್ತದೆ? ಫಲಾನುಭವಿಗಳು ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸಬಹುದು? ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅರ್ಹ ಫಲಾನುಭವಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಬಯೋ ಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಿ.

ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಗೃಹಲಕ್ಷ್ಮಿ ಯೋಜನೆ |
| ಅರ್ಹ ಫಲಾನುಭವಿಗಳು | ಪ್ರತಿ ಕುಟುಂಬದ ಯಜಮಾನಿಯರು |
| ಮಾಸಿಕ ಧನಸಹಾಯ | ರೂ. 2000/- |
| ಹೊಸ ನಿಯಮ | ಬಯೋ ಮೆಟ್ರಿಕ್ ಈ ಕೆವೈಸಿ ಕಡ್ಡಾಯ |
| ಬಯೋ ಮೆಟ್ರಿಕ್ ಪ್ರಕ್ರಿಯೆ ವಿಧಾನ | ಹೆಬ್ಬೆಟ್ಟಿನ ಗುರುತು ಹಾಗೂ ಕಣ್ಣಿನ ಐರಿಸ್ ಸ್ಕ್ಯಾನ್ |
| ಬಯೋ ಮೆಟ್ರಿಕ್ ಪ್ರಕ್ರಿಯೆಯ ಉದ್ದೇಶ | ಅಕ್ರಮ ಫಲಾನುಭವಿಗಳ ತಡೆ ಹಾಗೂ ಪಾರದರ್ಶಕತೆ |
ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು?
ಗೃಹಲಕ್ಷ್ಮಿ ಯೋಜನೆ ಎನ್ನುವದು ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಜಾರಿ ಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ರೂ. 2000 ಹಣಕಾಸಿನ ನೆರವನ್ನು ನೀಡಿ, ಅವರ ಜೀವನ ಮಟ್ಟವನ್ನು ಸುಧಾರಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಪ್ರಮುಖ ಉದ್ದೇಶ, ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದಾಗಿದೆ. ಹಾಗೂ ಈ ಯೋಜನೆಯಡಿಯಲ್ಲಿ ಮನೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಗೆ ನೇರ ಹಣಕಾಸಿನ ನೆರವನ್ನು ನೀಡುವುದರಿಂದ ಕುಟುಂಬದ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ.
ಈ ಯೋಜನೆಯಿಂದಾಗಿ ಮನೆಯ ಯಜಮಾನಿಯರಿಗೆ ಮಾಸಿಕ ರೂ. 2000/- ಹಣಕಾಸಿನ ನೆರವನ್ನು ಒದಗಿಸುವುದರಿಂದ ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ. ಮಹಿಳೆಯ ಸ್ವಾವಲಂಬನೆಯೂ ಹೆಚ್ಚುತ್ತದೆ. ಕುಟುಂಬದ ಖರ್ಚು ಭರಿಸಲು ನೆರವಾಗುತ್ತದೆ ಹಾಗೂ ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರ ನಡುವೆ ಆರ್ಥಿಕ ಸಮಾನತೆ ಹೆಚ್ಚುತ್ತದೆ.
ಬಯೋ ಮೆಟ್ರಿಕ್ ಪ್ರಕ್ರಿಯೆ ಎಂದರೇನು?
ಬಯೋ ಮೆಟ್ರಿಕ್ ಪ್ರಕ್ರಿಯೆ ಎಂದರೆ ವ್ಯಕ್ತಿಯ ವಿಶಿಷ್ಟ ಗುರುತುಗಳನ್ನು ಬಳಸಿ, ವ್ಯಕ್ತಿಯ ಗುರುತನ್ನು ಸಾಬೀತು ಪಡಿಸುವ ಆಧುನಿಕ ತಂತ್ರಜ್ಞಾನವಾಗಿದೆ.
ಈ ಒಂದು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯಾವುದೇ ಕಾಗದಗಳ ದಾಖಲೆಗಳ ಹಾಗೂ ಸಹಿಗಳ ಅಗತ್ಯ ಇರುವುದಿಲ್ಲ. ಬದಲಾಗಿ ವ್ಯಕ್ತಿಯ ದೇಹದ ಭಾಗಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ದೇಹದ ಗುರುತು ಬೇರೆ ಬೇರೆ ಆಗಿರುವುದರಿಂದ ಯಾವುದೇ ರೀತಿಯ ವಂಚನೆಗಳನ್ನು ಮೋಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಬೆರಳಚ್ಚು, ಕಣ್ಣು ಮಿಂಚಿನ ಗುರುತು, ಮುಖ ಗುರುತಿಸುವಿಕೆ ಮೂಲಕ ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಏಕೆ ಕಡ್ಡಾಯಗೊಳಿಸಲಾಗಿದೆ?
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದ್ದರಿಂದ, ಹಲವಾರು ಅಕ್ರಮಗಳು ಹಾಗೂ ಸಮಸ್ಯೆಗಳು ಎದುರಾಗಿತ್ತಿದ್ದವು. ಇವುಗಳನ್ನು ತಡೆಗಟ್ಟುವ ಹಾಗೂ ಸರಿ ಪಡಿಸುವ ಉದ್ದೇಶದಿಂದ ಸರ್ಕಾರವು ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಜಾರಿಗೊಳಿಸಿತು.
ಈ ಒಂದು ಪ್ರಕ್ರಿಯೆಯಿಂದಾಗಿ ನಕಲಿ ಫಲಾನುಭವಿಗಳ ಪ್ರವೇಶವನ್ನು ತಡೆಗಟ್ಟಲು, ನಕಲಿ ದಾಖಲೆಗಳನ್ನು ನೀಡಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿರುವವರು, ಬ್ಯಾಂಕ್ ಖಾತೆಯ ದೋಷಗಳನ್ನು ತಡೆಗಟ್ಟಬಹುದು ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಗಟ್ಟಬಹುದಾಗಿದೆ. ಈ ಎಲ್ಲ ಸಮಸ್ಯೆಗಳನ್ನು ತಡೆಗಟ್ಟಲು ಬಯೋ ಮೆಟ್ರಿಕ್ ದೃಢೀಕರಣ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.
ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಕಡ್ಡಾಯ ಗೊಳಿಸಿರುವುದರಿಂದ:
- ಅರ್ಹ ಫಲಾನುಭವಿಗಳಿಗೆ ಮಾತ್ರ ಹಣ ತಲುಪುತ್ತದೆ:
ಬಯೋ ಮೆಟ್ರಿಕ್ ಪ್ರಕ್ರಿಯೆಯಲ್ಲಿ ಮಹಿಳೆಯರ ಹೆಬ್ಬೆರಳ ಗುರುತು ಹಾಗೂ ಕಣ್ಣಿನ ಸ್ಕ್ಯಾನ್ ಪಡೆಯಲಾಗುತ್ತದೆ. ಪ್ರತಿಯೊಬ್ಬರ ದೇಹದ ಗುರುತು ವಿಭಿನ್ನವಾಗಿರುವುದರಿಂದ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು ಹಣ ಪಡೆಯಲು ಸಾಧ್ಯವಿಲ್ಲ.
- ಪಾರದರ್ಶಕತೆ ಹೆಚ್ಚುತ್ತದೆ:
ಡಿಜಿಟಲ್ ಇ- ಕೆವೈಸಿ ಪ್ರಕ್ರಿಯೆಯಿಂದಾಗಿ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಈ ಒಂದು ಪ್ರಕ್ರಿಯೆಯಿಂದಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನಿಖರವಾಗಿ ಲಿಂಕ್ ಆಗಿರುವುದರಿಂದ ಯಾರ ಹಸ್ತಕ್ಷೇಪವಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಜಮಾ ಆಗುತ್ತದೆ.
- ಯೋಜನೆ ವಿಶ್ವಾಸಾರ್ಹತೆ ಹೆಚ್ಚುತ್ತದೆ:
ಶ್ರೀಮಂತರು ಹಾಗೂ ಆದಾಯ ತೆರಿಗೆ ಪಾವತಿಸುತ್ತಿರುವವರು ಸುಳ್ಳು ಮಾಹಿತಿ ನೀಡಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರು. ಬಯೋ ಮೆಟ್ರಿಕ್ ವ್ಯವಸ್ಥೆಯಿಂದ ಈ ಎಲ್ಲ ವಂಚನೆಗಳನ್ನು ತಡೆಗಟ್ಟಲಾಗುತ್ತದೆ. ಕೇವಲ ಅರ್ಹ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳ ಯಜಮಾನಿಯರಿಗೆ ಮಾತ್ರ ಸರ್ಕಾರದ ಸೌಲಭ್ಯ ಸಿಗುತ್ತದೆ. ಹಾಗಾಗಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯ ಮೇಲೆ ನಂಬಿಕೆ ಹಾಗೂ ಗೌರವ ಹೆಚ್ಚುತ್ತದೆ.
- ಸರ್ಕಾರಕ್ಕಾಗುತ್ತಿದ್ದ ನಷ್ಟವನ್ನು ತಪ್ಪಿಸಬಹುದಾಗಿದೆ:
ಬಯೋ ಮೆಟ್ರಿಕ್ ಪ್ರಕ್ರಿಯೆಯಿಂದ ಲಕ್ಷಾಂತರ ಮೃತಪಟ್ಟ ಮಹಿಳೆಯರ ಖಾತೆಗೆ ಹಾಗೂ ಅನರ್ಹ ಖಾತೆಗೆ ಜಮಾ ಆಗುತ್ತಿದ್ದ ಕೋಟ್ಯಾಂತರ ರೂಪಾಯಿ ಉಳಿತಾಯ ಆಗುತ್ತೆ. ಈ ರೀತಿ ಉಳಿತಾಯವಾದ ಹಣವನ್ನು ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಅಥವಾ ರಾಜ್ಯದ ಇತರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ.
ಬಯೋ ಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳುತ್ತಿರುವ ಫಲಾನುಭವಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಅರ್ಹ ಫಲಾನುಭವಿಗಳು ಮೊದಲು ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
- ನಿಮ್ಮ ಮೂಲಕ ಆಧಾರ್ ಕಾರ್ಡ್ ಅನ್ನು ಹಾಗೂ ಗೃಹಲಕ್ಷ್ಮಿ ಐಡಿ ಅನ್ನು ಅಲ್ಲಿನ ಸಿಬ್ಬಂದಿಗೆ ನೀಡಿ.
- ಅವರು ನಿಮ್ಮ ವಿವರಗಳನ್ನು ಕಂಪ್ಯೂಟರ್ ನಲ್ಲಿ ಪರಿಶೀಲಿಸಿ, ಇಲಾಖೆಯ ಫಾರ್ಮ್ ಅನ್ನು ಭರ್ತಿ ಮಾಡುತ್ತಾರೆ.
- ನಂತರ ಅಲ್ಲಿನ ಬಯೋ ಮೆಟ್ರಿಕ್ ಸಾಧನಗಳ ಮೂಲಕ ನಿಮ್ಮ ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.
- ಒಂದು ವೇಳೆ ರೇಖೆಗಳು ಸವೆದಿದ್ದು, ಬೆರಳಚ್ಚು ಮ್ಯಾಪ್ ಆಗದಿದ್ದರೆ, ನಿಮ್ಮ ಕಣ್ಣಿನ ಐರನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
- ನಂತರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರವು ಐದು ರೂಪಾಯಿಗಳನ್ನು ನಿಗದಿಪಡಿಸಿದ್ದು, ಈ ಶುಲ್ಕವನ್ನು ಕಚೇರಿಗೆ ನೀಡಿ.
ಯಾರಿಗೆ ಈ ಪ್ರಕ್ರಿಯೆ ಕಡ್ಡಾಯ?
- ಪ್ರಸ್ತುತ ಹಣ ಪಡೆಯುತ್ತಿರುವವರು:
ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ರೂ. 2000/- ಹಣ ಪಡೆಯುತ್ತಿರುವವರು, ಮುಂದಿನ ತಿಂಗಳುಗಳಲ್ಲಿ ಈ ಹಣ ಪಡೆಯಬೇಕಾದರೆ ಬಯೋ ಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
- ಹೊಸದಾಗಿ ಅರ್ಜಿ ಸಲ್ಲಿಸಿದವರು:
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸಿ ಮೊದಲ ಕಂತಿನ ಹಣವನ್ನು ಪಡೆಯಲು ಕಾಯುತ್ತಿರುವ ಫಲಾನುಭವಿಗಳು ಬಯೋ ಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
- ಹಣ ಬರುವುದು ಸ್ಥಗಿತಗೊಂಡವರು:
ತಾಂತ್ರಿಕ ಕಾರಣಗಳಿಂದ ಹಲವಾರು ತಿಂಗಳುಗಳಲ್ಲಿ ಯೋಜನೆಯಡಿಯಲ್ಲಿ ಸಿಗುವ ಹಣವನ್ನು ಪಡೆಯಲು ಸಾಧ್ಯವಾಗದ ಮಹಿಳೆಯರು ಕೂಡ ಬಯೋ ಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಅಂತಿಮ ತೀರ್ಮಾನ:
ಗೃಹಲಕ್ಷ್ಮಿ ಯೋಜನೆಯಡಿ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಿರುವುದು ಯೋಜನೆಯ ಪ್ರಯೋಜನಗಳು ಅರ್ಹ ಮಹಿಳೆಯರಿಗೆ ಮಾತ್ರ ತಲುಪುವಂತೆ ಮಾಡುವ ಮಹತ್ವದ ಕ್ರಮವಾಗಿದೆ. ಈ ಪ್ರಕ್ರಿಯೆಯ ಮೂಲಕ ಫಲಾನುಭವಿಗಳ ಗುರುತನ್ನು ನಿಖರವಾಗಿ ಪರಿಶೀಲಿಸಬಹುದಾಗಿದ್ದು, ವಂಚನೆ, ನಕಲಿ ದಾಖಲೆಗಳು ಹಾಗೂ ಅನಗತ್ಯ ದೋಷಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಆದ್ದರಿಂದ ಎಲ್ಲಾ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸರಿಯಾಗಿ ನವೀಕರಿಸಿಕೊಂಡು, ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ. ಇದರಿಂದ ಮಾಸಿಕ ಹಣದ ಜಮೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಸರ್ಕಾರದ ಈ ಕ್ರಮವು ಯೋಜನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದರ ಜೊತೆಗೆ ಮಹಿಳೆಯರ ಆರ್ಥಿಕ ಭದ್ರತೆ ಮತ್ತು ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯವನ್ನು ಮಾಡುತ್ತಿದೆ.
ಹಾಗಾಗಿ ಅರ್ಹ ಫಲಾನುಭವಿಗಳು ತಡ ಮಾಡದೇ ಬೇಗ ಬಯೋ ಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- SR Jindal: PUC, ITI, Degree ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಪ್ರತಿ ತಿಂಗಳು ₹3,200 ವರೆಗೆ ಸ್ಕಾಲರ್ಶಿಪ್ । ಇಂದೇ ಅರ್ಜಿ ಸಲ್ಲಿಸಿ
- Farm: ₹1,80,000 ಸಹಾಯಧನ! ಹೆಣ್ಣು ಮಕ್ಕಳ ಆರ್ಥಿಕ ಭದ್ರತೆಗೆ ಸರ್ಕಾರದ ಮಹತ್ವದ ಯೋಜನೆ ಜಾರಿ । ಇಂದೇ ಅರ್ಜಿ ಸಲ್ಲಿಸಿ
- DRPS: 10th ಹಾಗೂ PUC ಪಾಸ್ ವಿದ್ಯಾರ್ಥಿಗಳಿಗೆ ₹30,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನಾಂಕ
- SSP Application: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ । ಜೂನ್ 30 ಕೊನೆಯ ದಿನಾಂಕ