ಭಾರತದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಲು ಕಷ್ಟಪಡುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿನ ಪ್ರಮುಖ ಧಾನಿ ಸಂಸ್ಥೆಯಾದ ಸೀತಾರಾಮ್ ಜಿಂದಾಲ್ ಫೌಂಡೇಷನ್ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಸೀತಾರಾಮ್ ಜಿಂದಾಲ್ ಸ್ಕಾಲರ್ಷಿಪ್ ಯೋಜನೆಯನ್ನು ಪರಿಚಯಿಸಿತು.
SR Jindal Scholarship for Students
ಸೀತಾರಾಮ್ ಜಿಂದಾಲ್ ಸಂಸ್ಥೆಯ ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಕನಸನ್ನು ನನಸು ಮಾಡುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್ ಗಳಿಗೆ ಹಾಗೂ ವಿದ್ಯಾರ್ಥಿಗಳ ಲಿಂಗಗಳಿಗೆ ಅನುಗುಣವಾಗಿ ವಿದ್ಯಾರ್ಥಿವೇತನದ ಮೊತ್ತವು ನಿರ್ಧಾರವಾಗಲಿದ್ದು, PUC ಯಿಂದ ಸ್ನಾತಕೋತ್ತರ ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಹಾಗಿದ್ದರೆ, ಸೀತಾರಾಮ್ ಜಿಂದಾಲ್ ಸ್ಕಾಲರ್ಷಿಪ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಯಾರು ಅರ್ಹರು? ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಷಿಪ್ ಹಣ ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ? ಯೋಜನೆಯ ಪ್ರಯೋಜನಗಳೇನು? ಎಂಬೆಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

ಸ್ಕಾಲರ್ಷಿಪ್ ನ ವಿವರಣಾತ್ಮಕ ನೋಟ:
| ಸಂಸ್ಥೆಯ ಹೆಸರು | ಸೀತಾರಾಮ್ ಜಿಂದಾಲ್ ಫೌಂಡೇಷನ್, ಬೆಂಗಳೂರು |
| ವಿದ್ಯಾರ್ಥಿವೇತನದ ಹೆಸರು | ಸೀತಾರಾಮ ಜಿಂದಾಲ್ ಸ್ಕಾಲರ್ಷಿಪ್ ಯೋಜನೆ |
| ಅರ್ಹ ವಿದ್ಯಾರ್ಥಿಗಳು | ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು |
| ಅರ್ಹ ಕೋರ್ಸ್ ಗಳು | PUC, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ ಮತ್ತು ಇಂಜಿನಿಯರ್ ಕೋರ್ಸ್ ಗಳು |
| ವಿದ್ಯಾರ್ಥಿವೇತನದ ಮೊತ್ತ | ತಿಂಗಳಿಗೆ ರೂ. 500/- ದಿಂದ ರೂ. 3,200/- ವರೆಗೆ |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ ಮೂಲಕ |
ಏನಿದು ಸೀತಾರಾಮ್ ಜಿಂದಾಲ್ ಸ್ಕಾಲರ್ಷಿಪ್?
ಸೀತಾರಾಮ್ ಜಿಂದಾಲ್ ಸ್ಕಾಲರ್ಷಿಪ್ ಯೋಜನೆ ಎನ್ನುವುದು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀತಾರಾಮ್ ಜಿಂದಾಲ್ ಫೌಂಡೇಷನ್ ನೀಡುವ ಆರ್ಥಿಕ ಹಣಕಾಸಿನ ನೆರವಾಗಿದೆ. ಆರ್ಥಿಕ ಸಂಕಷ್ಟದಿಂದ ಯಾವುದೇ ವಿದ್ಯಾರ್ಥಿಗಳು ಕೂಡ ಶಿಕ್ಷಣದಲ್ಲಿ ವಂಚಿತರಾಗಬಾರದು ಎನ್ನುವುದೇ ಈ ಯೋಜನೆಯ ಉದ್ದೇಶವಾಗಿದೆ.
ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್ ಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ರೂ. 500/- ರಿಂದ 3,200/- ಸ್ಕಾಲರ್ಷಿಪ್ ಹಣ ಸಿಗುತ್ತದೆ. ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು PUC, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ ಮತ್ತು ಇಂಜಿನಿಯರ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಸೀತಾರಾಮ್ ಜಿಂದಾಲ್ ಸ್ಕಾಲರ್ಷಿಪ್ ಯೋಜನೆಯಿಂದ ವಿದ್ಯಾರ್ಥಿಗಳಿಗಾಗುವ ಪ್ರಯೋಜನ:
- ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ:
ಸೀತಾರಾಮ್ ಜಿಂದಾಲ್ ಸ್ಕಾಲರ್ಷಿಪ್ ಯೋಜನೆಯಡಿಯಲ್ಲಿ ವಿಶೇಷವಾಗಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದರಿಂದ ಈ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಸಿಗುತ್ತದೆ.
- ಆರ್ಥಿಕ ನೆರವು:
ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 500/- ದಿಂದ ರೂ. 3,200/- ವರೆಗೆ ವಿದ್ಯಾರ್ಥಿವೇತನವನ್ನು ನೀಡುವುದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಖರ್ಚುಗಳನ್ನು ತಾವು ನಿಭಾಯಿಸಿಕೊಳ್ಳಬಹುದು. ಇದರಿಂದ ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
- ಉನ್ನತ ಶಿಕ್ಷಣಕ್ಕೆ ಪ್ರೋತ್ಸಹ:
ಈ ಯೋಜನೆಯಡಿಯಲ್ಲಿ PUC ಯಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಗಳಿಗೆ ಅನುಗುಣವಾಗಿ ಆರ್ಥಿಕ ನೆರವು ಸಿಗುವುದರಿಂದ ಆರ್ಥಿಕ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ.
- ಆತ್ಮವಿಶ್ವಾಸ ಮತ್ತು ಸಾಧನೆ ಮಾಡುವ ಮನೋಭಾವ ಹೆಚ್ಚುತ್ತದೆ:
ಯೋಜನೆಯಡಿಯಲ್ಲಿ ಪ್ರತಿ ತಿಂಗಳು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸ್ಕಾಲರ್ಷಿಪ್ ಹಣ ಜಮಾ ಆಗುವುದರಿಂದ, ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಚಿಂತೆ ಇಲ್ಲದೆ, ತಮ್ಮ ಅಧ್ಯಯನದ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವನ್ನು ಒದಗಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸಾಧನೆ ಮಾಡುವ ಮನೋಭಾವ ಹೆಚ್ಚುತ್ತದೆ.
ಸ್ಕಾಲರ್ಷಿಪ್ ಮೊತ್ತದ ವಿವರ:
ಸೀತಾರಾಮ್ ಜಿಂದಾಲ್ ಯೋಜನೆಯಡಿಯಲ್ಲಿ PUC ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದು, ಪ್ರತಿ ಕೋರ್ಸ್ ಗೆ ಅನುಗುಣವಾಗಿ ಸ್ಕಾಲರ್ಷಿಪ್ ಮೊತ್ತವನ್ನು ನಿಗದಿಪಡಿಸಲಾಗಿದೆ. ಅವುಗಳ ವಿವರ ಈ ಕೆಳಕಂಡಂತಿದೆ.
- PUC ವಿದ್ಯಾರ್ಥಿಗಳಿಗೆ:
ಫಸ್ಟ್ ಪಿಯುಸಿ ಹಾಗೂ ಸೆಕೆಂಡ್ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮಕ್ಕಳಿಗೆ ಪ್ರತಿ ತಿಂಗಳು ರೂ. 500/- ಹಾಗೂ ಹೆಣ್ಣು ಮಕ್ಕಳಿಗೆ 700/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
- ಐಟಿಐ ವಿದ್ಯಾರ್ಥಿಗಳಿಗೆ:
ಸರ್ಕಾರಿ ಕಾಲೇಜುಗಳಲ್ಲಿ ಐಟಿಐ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 500/- ಹಾಗೂ ಖಾಸಗಿ ಕಾಲೇಜುಗಳಲ್ಲಿ ಐಟಿಐ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 700/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
- ಪದವಿ ವಿದ್ಯಾರ್ಥಿಗಳು:
ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಫ್ಎ, ಬಿಬಿಎಂ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ ಪ್ರತಿ ತಿಂಗಳು ರೂ. 1,100/- ಹಾಗೂ ಹುಡುಗಿಯರಿಗೆ 1,400/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
- ಸ್ನಾತಕೋತ್ತರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು:
ಎಂಕಾಂ, ಎಂಎ, ಎಂಬಿಎ, ಎಂಎಸ್ಸಿ ಸೇರಿದಂತೆ ಇನ್ನಿತರ ಸ್ನಾತಕೋತ್ತರ ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ ಪ್ರತಿ ತಿಂಗಳು ರೂ. 1,500/- ಹಾಗೂ ಹುಡುಗಿಯರಿಗೆ 1,800/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
- ಡಿಪ್ಲೊಮಾ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು:
ಡಿಪ್ಲೊಮಾ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ ಪ್ರತಿ ತಿಂಗಳು ರೂ. 1,200/- ಹಾಗೂ ಹುಡುಗಿಯರಿಗೆ 1,000/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
- ಇಂಜಿನಿಯರಿಂಗ್ ಹಾಗೂ ಮೆಡಿಷನ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು:
ಯುವುದೇ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ ಪ್ರತಿ ತಿಂಗಳು ರೂ. 2,000/- ಹಾಗೂ ಹುಡುಗಿಯರಿಗೆ 2,300/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
ಗ್ರ್ಯಾಜುಯೆಟ್ ಇನ್ ಮೆಡಿಷನ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ ಪ್ರತಿ ತಿಂಗಳು ರೂ. 2,500/- ಹಾಗೂ ಹುಡುಗಿಯರಿಗೆ 3,000/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
ಇಂಜಿನೀರಿಂಗ್ ಪಿಜಿ ಕೋರ್ಸ್ ಹಾಗೂ ಮೆಡಿಷನ್ ಪಿಜಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗರಿಗೆ ಪ್ರತಿ ತಿಂಗಳು ರೂ. 2,800/- ಹಾಗೂ ಹುಡುಗಿಯರಿಗೆ 3,200/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
- ಹಾಸ್ಟೇಲ್ ವಿದ್ಯಾರ್ಥಿಗಳು:
ಸೀತಾರಾಮ್ ಜಿಂದಾಲ್ ಫೌಂಡೇಷನ್ ಹಾಸ್ಟೇಲ್ ಗಳಲ್ಲಿ ವಾಸವಿರುವ ಐಟಿಐ, ಡಿಪ್ಲೊಮಾ, ಪದವಿ ಪಿಜಿ ಕೋರ್ಸ್ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 1200/- ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ. 1,800/- ಸ್ಕಾಲರ್ಷಿಪ್ ಹಣ ಸಿಗುತ್ತದೆ.
ಅರ್ಹತಾ ಮಾನದಂಡಗಳೇನು?
- ದೇಶದ ಯಾವುದೇ ರಾಜ್ಯದ ಅಭ್ಯರ್ಥಿಗಳು ಈ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಫಸ್ಟ್ ಪಿಯುಸಿ ಹಾಗೂ ಸೆಕೆಂಡ್ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮಕ್ಕಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 70% ಅಂಕಗಳೊಂದಿಗೆ ಹಾಗೂ ಹೆಣ್ಣು ಮಕ್ಕಳು ಕನಿಷ್ಠ 65% ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಐಟಿಐ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮಕ್ಕಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 45% ಅಂಕಗಳೊಂದಿಗೆ ಹಾಗೂ ಹೆಣ್ಣು ಮಕ್ಕಳು ಕನಿಷ್ಠ 35% ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಸಾಮಾನ್ಯ ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮಕ್ಕಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಹಾಗೂ ಹೆಣ್ಣು ಮಕ್ಕಳು ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಸ್ನಾತಕೋತ್ತರ ಕೋರ್ಸ್ ಗಳಲ್ಲಿ ವ್ಯಾಸಂಗಮಾಡುತ್ತಿರುವ ಗಂಡು ಮಕ್ಕಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಹಾಗೂ ಹೆಣ್ಣು ಮಕ್ಕಳು ಕನಿಷ್ಠ 55% ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಡಿಪ್ಲೊಮಾ ಕೋರ್ಸ್ ಗಳಲ್ಲಿ ವ್ಯಾಸಂಗಮಾಡುತ್ತಿರುವ ಗಂಡು ಮಕ್ಕಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಹಾಗೂ ಹೆಣ್ಣು ಮಕ್ಕಳು ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಇಂಜಿನಿಯರಿಂಗ್ ಹಾಗೂ ಮೆಡಿಷನ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮಕ್ಕಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 65% ಅಂಕಗಳೊಂದಿಗೆ ಹಾಗೂ ಹೆಣ್ಣು ಮಕ್ಕಳು ಕನಿಷ್ಠ 60% ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ವಿದ್ಯಾರ್ಥಿಗಳ ಆಧಾರ್ ಕಾರ್ಡ್
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಹಿಂದಿನ ವರ್ಷ ವ್ಯಾಸಂಗ ಮಾಡಿದ ಕೋರ್ಸ್ ಗಳ ಮಾರ್ಕ್ಸ್ ಕಾರ್ಡ್
- ಶೈಕ್ಷಣಿಕ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ ಪೋರ್ಟ್ ಸೈಜ್ ಫೋಟೋ
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಇಮೇಲ್ ಐಡಿ
- ಹಾಗೂ ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ವಿದ್ಯಾರ್ಥಿಗಳು ಸೀತಾರಾಮ್ ಜಿಂದಾಲ್ ವಿದ್ಯಾರ್ಥಿವೇತನ ಯೋಜನೆಗೆ ಈ ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
- ಅರ್ಹ ವಿದ್ಯಾರ್ಥಿಗಳು ಮೊದಲು ಸೀತಾರಾಮ್ ಜಿಂದಾಲ್ ಫೌಂಡೇಷನ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಅಲ್ಲಿ ಕೇಳಲಾದ ವಿದ್ಯಾರ್ಥಿಗಳ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಹಾಗೂ ಇನ್ನಿತರ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ.
- ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅವುಗಳನ್ನು ಒಂದು ಲಕೋಟೆಗೆ ಹಾಕಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ.
” ಮುಖ್ಯಸ್ಥರು,
ಸೀತಾರಾಮ್ ಜಿಂದಾಲ್ ಫೌಂಡೇಷನ್
ಜಿಂದಾಲ್ ನಗರ, ತುಮಕೂರು ರಸ್ತೆ,
ಬೆಂಗಳೂರು – 560073
ಅಂತಿಮ ತೀರ್ಮಾನ:
ಸೀತಾರಾಮ್ ಜಿಂದಾಲ್ ಫೌಂಡೇಷನ್ ಸಂಸ್ಥೆಯು ಸೀತಾರಾಮ್ ಜಿಂದಾಲ್ ಯೋಜನೆಯಡಿಯಲ್ಲಿ PUC ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಸ್ನಾತಕೋತ್ತರ ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅರ್ಹರಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- DRPS: 10th ಹಾಗೂ PUC ಪಾಸ್ ವಿದ್ಯಾರ್ಥಿಗಳಿಗೆ ₹30,000 ಸ್ಕಾಲರ್‌ಶಿಪ್! ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನಾಂಕ
- PM YASASVI: ₹20,000 ಸ್ಕಾಲರ್‌ಶಿಪ್! ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಇಂದೇ ಅರ್ಜಿ ಸಲ್ಲಿಸಿ
- Naati Koli: ₹1,20,000 ಸಹಾಯಧನ! ನಾಟಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಭಾರಿ ನೆರವು ಜೊತೆಗೆ ನಾಟಿ ಕೋಳಿ ಮರಿ ವಿತರಣೆ
- PUC Students: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! 26,000 ಪ್ರೋತ್ಸಾಹಧನ | ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- SCSS: ಹಿರಿಯ ನಾಗರೀಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್! ನಿವೃತ್ತಿ ಹಣ ಹೂಡಿಕೆ ಮಾಡಿ, ಖಚಿತ ಆದಾಯ ಪಡೆಯಿರಿ!