Farm: ನಿಮ್ಮ ಮನೆಯಲ್ಲಿ 7 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ ಸರ್ಕಾರದ ಯೋಜನೆ ಮೂಲಕ ನಿಮ್ಮ ಮಗಳ ಹೆಸರಿನಲ್ಲಿ ಅರ್ಜಿ ಹಾಕಿ ಆ ಹೆಣ್ಣು ಮಗುವಿಗೆ 19 ತುಂಬಿದ ನಂತರ 150,000 ಹಣ ಸಿಗುತ್ತೆ, ಅದೇ ಹಣವನ್ನು ಹೆಣ್ಣು ಮಗುವಿಗೆ 21 ವರ್ಷ ಪೂರ್ಣಗೊಂಡಾಗ ಹಿಂಪಡೆದರೆ 1,80,000 ವರೆಗೆ ಸಿಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಒಂದು ಸಂದೇಶವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವುದರಿಂದ ಹೆಣ್ಣುಮಕ್ಕಳಿರುವ ಪೋಷಕರಿಗೆ ಹೆಚ್ಚು ಆಸಕ್ತಿ ಹಾಗೂ ಕುತೂಹಲ ಮೂಡಿಸುತ್ತದೆ. ಜೊತೆಗೆ ಪೋಷಕರಲ್ಲಿ ಹಲವಾರು ಪ್ರಶ್ನೆಗಳು ಕೂಡ ಸೃಷ್ಟಿಯಾಗುತ್ತದೆ.
ನಿಜವಾಗಿಯೂ ಈ ಯೋಜನೆ ಜಾರಿಯಲ್ಲಿದೆಯಾ? ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಎಂಬೆಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.
ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಹೆಣ್ಣು ಮಕ್ಕಳ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಮಹತ್ವದ ಯೋಜನೆಯನ್ನು ಪರಿಚಯಿಸಿದ ಸರ್ಕಾರ. * ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. * 7 ವರ್ಷದೊಳಗಿನ ಹೆಣ್ಣು ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅರ್ಹರು. * ಯೋಜನೆಗೆ ಅರ್ಜಿ ಸಲ್ಲಿಸಿದ ಹೆಣ್ಣು ಮಕ್ಕಳಿಗೆ 19 ವರ್ಷ ಪೂರ್ಣಗೊಂಡಾಗ 150000 ಹಣವನ್ನು ಅವಳ ಹೆಸರಿನಲ್ಲಿ ನೀಡಲಾಗುತ್ತದೆ ಹಾಗೂ 21 ವರ್ಷ ಪೂರ್ಣಗೊಂಡಾಗ ಹಣವನ್ನು ಹಿಂಪಡೆದರೆ 180000 ಹಣವನನು ನೀಡಲಾಗುತ್ತದೆ. |
ಹೆಣ್ಣು ಮಕ್ಕಳ ಆರ್ಥಿಕ ಭದ್ರತೆಗೆ ಮಹತ್ವದ ಯೋಜನೆ ಘೋಷಣೆ:
ಇತ್ತೀಚಿಗಷ್ಟೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿ ಕುಟುಂಬದಲ್ಲಿ 7 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ ಸರ್ಕಾರದ ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಹೆಣ್ಣು ಮಗುವಿಗೆ 19 ವರ್ಷ ಪೂರ್ಣಗೊಂಡಾಗ 150000 ವರೆಗೆ ಹಣವನ್ನು ನೀಡಲಾಗುತ್ತದೆ ಹಾಗೂ 21 ವರ್ಷ ಪೂರ್ಣಗೊಂಡಾಗ ಹಣ ಪಡೆದರೆ 180000 ವರೆಗೆ ಹಣವನ್ನು ನೀಡಲುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶ, ದೇಶದಲ್ಲಿ ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವುದು, ಶಿಕ್ಷಣವನ್ನು ಖಚಿತಪಡಿಸುವುದು ಹಾಗೂ ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದಾಗಿದೆ. ದೇಶದ ಕೆಲವೆಡೆ ಇನ್ನು ಕೂಡ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಗುತ್ತಿಲ್ಲ, ದಿನೇ ದಿನೇ ವಾರ್ತೆಗಳಲ್ಲಿ ಹೆಣ್ಣು ಬೃಣ ಹತ್ಯೆ, ಸಾಮಾಜಿಕ ಕಿರುಕುಳ ಇನ್ನಿತರ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ.
ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ನೀಡಲು ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಳಿಸಿದ್ದು, ಈ ಯೋಜನೆಯಿಂದಾಗಿ ಬಡ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಹೆಣ್ಣು ಮಕ್ಕಳ ಭವಿಷ್ಯವು ಕೂಡ ಉಜ್ವಲವಾಗುತ್ತದೆ.
ಯೋಜನೆಯ ಉದ್ದೇಶ:
- ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವುದು:
ಇನ್ನು ಕೂಡ ಕೆಲವು ಕುಟುಂಬಗಳಲ್ಲಿ ಗಂಡು ಮಗುವಿಗೆ ಹೆಚ್ಚಿನ ಆದ್ಯತೆಗಳನ್ನು ನೀಡುವುದನ್ನು ಕಾಣಬಹುದು. ಸರ್ಕಾರವು ಈ ಎಲ್ಲ ಮನೋಭಾವವನ್ನು ಸುಳ್ಳು ಮಾಡಬೇಕೆನ್ನುವ ಉದ್ದೇಶದಿಂದ ಹೆಣ್ಣು ಮಗುವು ಕೂಡ ಪ್ರತಿ ಕುಟುಂಬದ ಭವಿಷ್ಯಕ್ಕೆ ಸಮಾನ ಕೊಡುಗೆಗಳನ್ನು ನೀಡುತ್ತಾಳೆ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
- ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆ ಒದಗಿಸುವುದು:
ಎಷ್ಟೋ ಬಡ ಮತ್ತು ಆರ್ಥಿಕ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ಹಾಗೂ ಭವಿಷ್ಯದ ವೆಚ್ಚವನ್ನು ಭರಿಸುವುದು ಸವಾಲಾಗಿ ಪರಿಣಮಿಸುತ್ತದೆ. ಸರ್ಕಾರವು ಈ ಒಂದು ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಹೆಣ್ಣು ಮಗುವಿಗೆ ನಿಗದಿತ ವಯೋಮಿತಿಗೆ ಮಗುವು ತಲುಪುವಾಗ ಸಹಾಯಧನವನ್ನು ಒದಗಿಸುವ ಮೂಲಕ ಕುಟುಂಬದ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಹಾಗೂ ಹೆಣ್ಣು ಮಗುವಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
- ಬಾಲ್ಯ ವಿವಾಹವನ್ನು ತಡೆಗಟ್ಟುವುದು:
ಈ ಯೋಜನೆಯಡಿಯಲ್ಲಿ 7 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಅರ್ಜಿ ಸಲ್ಲಿಸಿದರೆ, ಮೆಚುರಿಟಿ ಅವಧಿ ಮುಗಿದ ನಂತರವೇ ಸಹಾಯಧನವನ್ನು ನೀಡುವುದರಿಂದ, ಹೆಣ್ಣು ಮಕ್ಕಳು ತಮ್ಮ ಬಾಲ್ಯದಲ್ಲಿಯೇ ವಿವಾಹವಾಗುವುದನ್ನು ತಡೆಗಟ್ಟಲಾಗುತ್ತದೆ.
- ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವುದು:
ಈ ಯೋಜನೆಯನ್ನು ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿದ್ದು, ಈ ಯೋಜನೆ ಮುಖ್ಯ ಉದ್ದೇಶ ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಯಾರ ಮೇಲು ಅವಲಂಭಿತರಾಗದೆ ಸಮಾಜದಲ್ಲಿ ಸ್ವತಂತ್ರವಾಗಿ ಜೀವನವನ್ನು ನಡೆಸಲು ಅವಕಾಶ ಕಲ್ಪಿಸುವುದಾಗಿದೆ.
ಅರ್ಹತಾ ಮಾನದಂಡಗಳು:
- ಹೆಣ್ಣು ಮಗುವು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
- ಮಗುವಿನ ಜನನ ನೋಂದಣಿಯಾಗಿರಬೇಕು
- ನಿಗದಿತ ವಯೋಮಿತಿಯೊಳಗೆ ಅರ್ಜಿ ಸಲ್ಲಿಸಬೇಕು
- ಕುಟುಂಬವು ಬಿಪಿಎಲ್ (BPL) ವರ್ಗಕ್ಕೆ ಸೇರಿದವರಾಗಿರಬೇಕು
- ಬಾಲ್ಯ ವಿವಾಹವಾಗಿರಬಾರದು
- ಬಾಲಕಾರ್ಮಿಕರಾಗಿರಬಾರದು
- ಹೆಣ್ಣು ಮಗು ಮಾತ್ರ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅಗತ್ಯ ದಾಖಲೆಗಳು:
- ಜನನ ಪ್ರಮಾಣಪತ್ರ
ಹೆಣ್ಣು ಮಗುವಿನ ಜನನವನ್ನು ದೃಢೀಕರಿಸುವ ಅಧಿಕೃತ ಜನನ ದಾಖಲೆ ಕಡ್ಡಾಯ.
- ಆಧಾರ್ ಕಾರ್ಡ್
ಮಗು ಮತ್ತು ಪೋಷಕರ ಆಧಾರ್ ಕಾರ್ಡ್ ಗುರುತಿನ ಪ್ರಮಾಣವಾಗಿ ಅಗತ್ಯ.
- ಬಿಪಿಎಲ್ ರೇಷನ್ ಕಾರ್ಡ್
ಕುಟುಂಬವು ಬಡತನ ರೇಖೆಗಿಂತ ಕೆಳಗಿನ ವರ್ಗಕ್ಕೆ ಸೇರಿದುದನ್ನು ದೃಢೀಕರಿಸಲು.
- ನಿವಾಸ ಪ್ರಮಾಣಪತ್ರ
ಕುಟುಂಬವು ಕರ್ನಾಟಕ ರಾಜ್ಯದ ನಿವಾಸಿ ಎಂದು ಸಾಬೀತುಪಡಿಸಲು.
- ಬ್ಯಾಂಕ್ ಖಾತೆ ವಿವರಗಳು
ಮಗುವಿನ ಅಥವಾ ಪೋಷಕರ ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿ.
- ಪೋಷಕರ ಗುರುತಿನ ದಾಖಲೆ
ವೋಟರ್ ಐಡಿ, ಆಧಾರ್ ಅಥವಾ ಇತರೆ ಮಾನ್ಯ ಗುರುತಿನ ದಾಖಲೆ.
- ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿದಾರರ ಇತ್ತೀಚಿನ ಫೋಟೋ ಅಗತ್ಯವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಪೋಷಕರು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್ ಗೆ ಭೇಟಿ ನೀಡಿ.
- ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆದುಕೊಳ್ಳಿ.
- ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ
- ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಅವುಗಳನ್ನು ಕಚೇರಿಯ ಸಿಬ್ಬಂದಿಗೆ ನೀಡಿ.
- ಇವುಗಳ ಜೊತೆಗೆ ಮೊದಲ ಠೇವಣಿಯನ್ನು ಪಾವತಿಸಿ.
- ಅರ್ಜಿ ಹಾಗೂ ಠೇವಣಿಯನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯು ಪ್ರಕ್ರಿಯೆ ಗೊಳಿಸುತ್ತದೆ.
- ಈ ಒಂದು ಪ್ರಕಿಯೆ ಪೂರ್ಣಗೊಂಡಾಗ ನಿಮ್ಮ ಮಗಳಿಗೆ 19 ವರ್ಷ ಪೂರ್ಣಗೊಂಡ ನಂತರ ರೂ. 1,50,000/- ಸಿಗುತ್ತದೆ.
ಅಂತಿಮ ತೀರ್ಮಾನ:
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ, 7 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿದರೆ 19 ಮತ್ತು 21 ವರ್ಷದಲ್ಲಿ ₹1.5 ಲಕ್ಷದಿಂದ ₹1.8 ಲಕ್ಷ ಸಿಗುತ್ತದೆ. ನಿಮ್ಮ ಮನೆಯಲ್ಲೂ ಕೂಡ 7 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ ಇಂದೇ ನಿಮ್ಮ ಹತ್ತಿರದ ಅಂಚೆ ಕಚೇರಿ ಹಾಗೂ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ನಿಮ್ಮ ಹೆಣ್ಣು ಮಗುವಿನ ಭವಿಷಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- PM YASASVI: ₹20,000 ಸ್ಕಾಲರ್ಶಿಪ್! ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಇಂದೇ ಅರ್ಜಿ ಸಲ್ಲಿಸಿ
- Naati Koli: ₹1,20,000 ಸಹಾಯಧನ! ನಾಟಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಭಾರಿ ನೆರವು ಜೊತೆಗೆ ನಾಟಿ ಕೋಳಿ ಮರಿ ವಿತರಣೆ
- PUC Students: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! 26,000 ಪ್ರೋತ್ಸಾಹಧನ | ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- SCSS: ಹಿರಿಯ ನಾಗರೀಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್! ನಿವೃತ್ತಿ ಹಣ ಹೂಡಿಕೆ ಮಾಡಿ, ಖಚಿತ ಆದಾಯ ಪಡೆಯಿರಿ!
- Application: CM ಘೋಷಣೆ, ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಮತ್ತು ಮನೆ ಹಂಚಿಕೆ 2026 । ಇಂದೇ ಅರ್ಜಿ ಸಲ್ಲಿಸಿ