Application: 297 ಭರವಸೆಗಳು! ಫ್ರೀ ಮನೆ, ಫ್ರೀ ಗ್ಯಾಸ್, ಫ್ರೀ ಫ್ರಿಜ್ – ಮತದಾರರಿಗೆ ಬಿಗ್ ಆಫರ್!

ನಮಸ್ಕಾರ ಸ್ನೇಹಿತರೆ, ಇನ್ನು ಕೆಲವೇ ದಿನಗಳಲ್ಲಿ ತಮಿಳುನಾಡಿನ ವಿಧಾನಸಭೆಯ ಚುನಾವಣೆಯು ಪ್ರಾರಂಭವಾಗಲಿದ್ದು, ಕೆಲವೊಂದು ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪ್ರಮುಖ ಘೋಷಣೆಗಳನ್ನು ಮಾಡುವ ಮೂಲಕ ಅಲ್ಲಿನ ಮತದಾರರ ಗಮನವನ್ನು ಸೆಳೆಯುವಂತೆ ಮಾಡಿದೆ. ಅದರಲ್ಲಿ AIADMK ಪಕ್ಷವಂತೂ ತಮಿಳುನಾಡಿನ ಮತದಾರರಿಗೆ ಭಾರಿ ಕೊಡುಗೆಯ ಮಹಾಪೂರವನ್ನು ಹರಿಸುವ ಮೂಲಕ ಸಾಕಷ್ಟು ಮತದಾರರ ಮನಗೆಲ್ಲುವ ಪ್ರಯತ್ಮ ಮಾಡಿದೆ.

Breaking News: Grand Preparations for the 2026 Assembly Elections

ತಮಿಳುನಾಡಿನ 2026 ರ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 1 ತಿಂಗಳು ಮಾತ್ರ ಇರುವುದರಿಂದ ಎಲ್ಲಾ ಪಕ್ಷಗಳ ಚುನಾವಣಾ ಪ್ರಚಾರವು ಮಹತ್ತರ ಘಟ್ಟಕ್ಕೆ ಬಂದು ತಲುಪಿದೆ. ಇದರಂತೆಯೇ AIADMK ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತಮ್ಮ ಪಕ್ಷದ ಮೊದಲ ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದಾರೆ.

ತಮಿಳುನಾಡಿನ AIADMK ಪಕ್ಷದ ಪ್ರಣಾಳಿಕೆಯು ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯ ಮಾದರಿಯಲ್ಲೇ ಉಚಿತ ಪಯಣ, 2000 ಸಹಾಯಧನ ಸೇರಿದಂತೆ ಇನ್ನು ಅನೇಕ ಭರವಸೆಗಳನ್ನು ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಘೋಷಣೆ ಮಾಡಲಾಗಿದೆ.

Breaking News

AIADMK ಪಕ್ಷವು ಯಾವೆಲ್ಲ ವಿಚಾರಗಳ ಕುರಿತು ಘೋಷಣೆ ಮಾಡಿದೆ? ಈ ಎಲ್ಲಾ ಅಂಶಗಳು ಅಲ್ಲಿನ ಜನ ಸಾಮಾನ್ಯರಿಗೆ ಎಷ್ಟು ಪ್ರಭಾವ ಬೀರುತ್ತದೆ? ಎನ್ನುವುದನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಪ್ರಮುಖ ಹೈಲೈಟ್ಸ್:

* AIADMK ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರು, ರೈತರು, ಬಡ ಕುಟುಂಬದವರು, ಕಾರ್ಮಿಕರು ಹಾಗೂ ಯುವಕರು ಸೇರಿದಂತೆ ಅಲ್ಲಿನ ಎಲ್ಲಾ ವರ್ಗದ ಜನರಿಗೆ ಕಲ್ಯಾಣ ಯೋಜನೆಯನ್ನು ಘೋಷಣೆ ಮಾಡಿದೆ.
* ತಮುಳುನಾಡಿನ ಎಲ್ಲಾ ಕುಟುಂಬಗಳಿಗೂ ಉಚಿತ ಫ್ರಿಜ್ ಕೊಡುವುದಾಗಿ ಘೋಷಣೆ ಮಾಡಲಾಗಿದೆ.
* ಮಹಿಳೆಯರಂತೆ ಪುರುಷರು ಕೂಡ ಸಿಟಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ.
* AIADMK ಪಕ್ಷದ ಪ್ರಣಾಳಿಕೆಯಲ್ಲಿ ಒಟ್ಟು 297 ಘೋಷಣೆಗಳು.

AIADMK ಪಕ್ಷದ ಪ್ರಣಾಳಿಕೆಯ ಪ್ರಮುಖ ಘೋಷಣೆಗಳು:

AIADMK ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ, ಪುರುಷರಿಗೆ ಸೇರಿದಂತೆ ಎಲ್ಲ ವರ್ಗದ ಜನ ಸಾಮಾನ್ಯರಿಗೆ ಅತ್ಯುತ್ತಮ ಭರವಸೆಯನ್ನು ನೀಡುವ ಮೂಲಕ ತಮ್ಮ ಪಕ್ಷದ ಬಲವನ್ನು ವೃದ್ಧಿಸಿಕೊಳ್ಳಲು ಮುಂದಾಗಿದೆ. ಈ ಒಂದು ಪ್ರಣಾಳಿಕೆಯಲ್ಲಿ ಏನೆಲ್ಲಾ ಘೋಷಣೆ ಮಾಡಲಾಗಿದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

  • ಉಚಿತ ರೆಫ್ರಿಜರೇಟರ್:

ತಮಿಳುನಾಡಿನಲ್ಲಿ ಪಡಿತರಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ರೆಫ್ರಿಜರೇಟರ್ ಒದಗಿಸುವುದಾಗಿ AIADMK ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

  • ಮಹಿಳೆಯರಿಗೆ ತಿಂಗಳಿಗೆ ₹2000 ಸಹಾಯಧನ:

ಪಡಿತರ ಚೀಟಿಯನ್ನು ಹೊಂದಿರುವ ಪ್ರತಿ ಕುಟುಂಬದ ಒಡತಿಗೆ ಕುಲವಿಳಕ್ಕು ಯೋಜನೆಯಡಿಯಲ್ಲಿ ಪ್ರತಿ ತಿಂಗಳು ₹2000 ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗೆ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಜಮಾ ಮಾಡುವುದಾಗಿ ತಿಳಿಸಿದೆ.

  • ಪುರುಷರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ:

ಮಹಿಳೆಯರಂತೆ ಪುರುಷರು ಕೂಡ ಉಚಿತವಾಗಿ ಸಿಟಿ ಬಸ್ ಗಳಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡುವ ಮೂಲಕ ತಮುಳುನಾಡಿನ ಪುರುಷರ ವಿಶ್ವಾಸವನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದೆ.

  • ಉಚಿತ ಬೇಳೆಕಾಳು ಮತ್ತು ಅಡುಗೆ ಎಣ್ಣೆ:

ತಮಿಳುನಾಡಿನ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರತಿ ತಿಂಗಳು 1KG ಬೇಳೆಕಾಳು ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.

  • ಪಿಂಚಣಿ ಹಣ ಏರಿಕೆ:

ಹಿರಿಯ ನಾಗರೀಕರಿಗೆ ನೀಡುತ್ತಿದ್ದ ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ₹2000 ಕ್ಕೆ ಏರಿಸುವ ಮೂಲಕ AIADMK ಪಕ್ಷವು ಹಿರಿಯ ನಾಗರೀಕರ ಮನಸೆಳೆಯುವ ಪ್ರಯತ್ನ ಮಾಡಿದೆ.

  • ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ ಭಾಗ್ಯ:

ಸ್ವಂತ ಮನೆಯನ್ನು ಹೊಂದಿರದ ಕುಟುಂಬಗಳಿಗೆ ಅಮ್ಮ ಇಲ್ಲಮ್ ಯೋಜನೆಯಡಿಯಲ್ಲಿ ಉಚಿತವಾಗಿ ಕಾಂಕ್ರೀಟ್ ಮನೆಯನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದೆ.

  • ಶೈಕ್ಷಣಿಕ ಸಾಲ ಮನ್ನಾ:

ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಹಾಗೂ ಪದವೀಧರರು ಬ್ಯಾಂಕ್ ನಿಂದ ಪಡೆದ ಶಿಕ್ಷಣ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.

  • ಕೆಲಸದ ದಿನ ಹೆಚ್ಚಳ:

ವಿ ಬಿಜಿ ರಾಮ್ ಜಿ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಕಾರ್ಮಿಕರಿಗೆ ನಿಗದಿಪಡಿಸಿದ್ದ ಕೆಲಸದ ದಿನವನ್ನು 100 ರಿಂದ 150 ದಿನಕ್ಕೆ ಹೆಚ್ಚಿಗೆ ಮಾಡಲಾಗುತ್ತದೆ.

  • ಉಚಿತ ಗ್ಯಾಸ್ ಸಿಲಿಂಡರ್:

ಸರ್ಕಾರಿ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ.

  • ಇತರೆ ಪ್ರಮುಖ ಭರವಸೆಗಳು:
    • ಮೀನುಗಾರರ ಪರಿಹಾರ ಮೊತ್ತವನ್ನು 12,000 ಕ್ಕೆ ಏರಿಕೆ.
    • ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ ಹಾಗೂ ಪಿಂಚಣಿ ನೀಡುವ ಸಾಧ್ಯತೆ.
    • ಪ್ರತಿ ವರ್ಷ ಪೊಂಗಲ್ ಉಡುಗೊರೆಯಾಗಿ 1000 ನೀಡಲಾಗುವುದು.
    • ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಸಾವನ್ನಪ್ಪುವ ಕ್ರೀಡಾಪಟ್ಟುಗಳ ಕುಟುಂಬಗಳಿಗೆ 1 ಲಕ್ಷ ಆರ್ಥಿಕ ನೆರವನ್ನು ನೀಡಲಾಗುವುದು.
    • ಜನಾಂಗೀಯ ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ದಿಗಾಗಿ ಬಡ್ಡಿ ರಿಯಾಯಿತಿಗಳೊಂದಿಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು.
    • ಪ್ರತಿ ಕುಟುಂಬಕ್ಕೂ ಬೆಲೆ ಏರಿಕೆ ಮತ್ತು ತೆರಿಗೆ ಹೊರೆಯನ್ನು ತಗ್ಗಿಸಲು ಒಂದು ಬಾರಿ 10,000 ನಗದು ಸಹಾಯಧನವನ್ನು ಒದಗಿಸಲಾಗುವುದು.

ಜನಸಾಮಾನ್ಯರ ಮೇಲೆ ಭೀರಲಿರುವ ಪ್ರಭಾವಗಳು:

  • ಕುಲವಿಳಕ್ಕು ಯೋಜನೆಯಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ಸಹಾಯಧನವನ್ನು ನೀಡುವುದರಿಂದ ಅವರ ದೈನಂದಿನ ಖರ್ಚುಗಳನ್ನು ಹಾಗೂ ಮನೆಯ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ನೆರವಾಗುತ್ತದೆ. ಇದು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುತ್ತದೆ ಹಾಗೂ ಕುಟುಂಬದ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸುತ್ತದೆ.
  • ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಉಚಿತವಾಗಿ ರೆಫ್ರಿಜರೇಟರ್ ಹಾಗೂ ಪ್ರತಿ ವರ್ಷ 3 ಗ್ಯಾಸ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಿದರೆ, ಕುಟುಂಬದ ಮಾಸಿಕ ವೆಚ್ಚವು ಗಣನೀಯವಾಗಿ ಕಡಿಮೆ ಆಗುತ್ತದೆ.
  • ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಒದಗಿಸಿದರೆ, ಪ್ರತಿ ದಿನವೂ ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರ ಹಾಗೂ ಬಡ ವರ್ಗದವರ ಸಾರಿಗೆ ವೆಚ್ಚವು ಕಡಿಮೆ ಆಗುತ್ತದೆ.
  • ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ಅವಧಿಯನ್ನು ಹೆಚ್ಚಿಗೆ ಮಾಡಿದರೆ ಕಾರ್ಮಿಕರಿಗೆ ಉದ್ಯೋಗಾವಕಾಶ ಹಾಗೂ ಆದಾಯ ಮಟ್ಟವು ಹೆಚ್ಚುತ್ತದೆ.
  • ವಿದ್ಯಾರ್ಥಿಗಳ ಹಾಗೂ ಪದವೀಧರರ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಿದರೆ ವಿದ್ಯಾರ್ಥಿಗಳು ಕುಟುಂಬದ ಮೇಲಿನ ಸಾಲದ ಹೊರೆಯು ಕಡಿಮೆ ಆಗುತ್ತದೆ.

ಅಂತಿಮ ತೀರ್ಮಾನ:

ತಮಿಳುನಾಡಿನ 2026 ರ ವಿಧಾನಸಭಾ ಚುನಾವಣೆಯ ಪ್ರಯುಕ್ತ AIADMK ಪಕ್ಷವು ಬಿಡುಗಡೆ ಮಡಿದ ಪ್ರಣಾಳಿಕೆಯು ಕೇವಲ ಚುನಾವಣಾ ಭರವಸೆಗಳ ಪಟ್ಟಿಯಲ್ಲ ಬದಲಾಗಿ ಅಲ್ಲಿನ ಜನಸಾಮಾನ್ಯರ ಮನಗೆಲ್ಲಲು ಘೋಷಿಸಿರುವ ರಾಜಕೀಯ ಅಸ್ತ್ರವಾಗಿದೆ. ಒಟ್ಟಾರೆಯಾಗಿ, ತಮಿಳುನಾಡಿನ ಮತದಾರರು AIADMK ಪಕ್ಷದ ಭರವಸೆಗೆ ಮನಸೋತು ಈ ಒಂದು ಪಕ್ಷವನ್ನು ಗೆಲ್ಲಿಸುತ್ತಾರೆ? ಅಥವಾ ಬೇರೆ ಪಕ್ಷವನ್ನು ಗೆಲ್ಲಿಸುತ್ತಾರಾ? ಎನ್ನುವುದನ್ನು ಇನ್ನು ಕೆಲವೇ ದಿನದಲ್ಲಿ ಅಂದರೆ ಚುನಾವಣಾ ಫಲಿತಾಂಶದ ದಿನದ ವರೆಗೂ ಕಾದುನೋಡಬೇಕಿದೆ.


ಇತರೆ ಪ್ರಮುಖ ಲಿಂಕುಗಳು:

Leave a Comment