ನಮಸ್ಕಾರ ಸ್ನೇಹಿತರೆ, ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ಭಾರತ ಸರ್ಕಾರವು ಒಂದೊಳ್ಳೆಯ ಮಾತೃತ್ವ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಯಾವುದು ಆ ಯೋಜನೆ ಅಂತ ಯೋಜನೆಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
PMMVY Scheme in Kannada
ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಒದಗಿಸಲು ಹಾಗೂ ಅವರ ಸುಧಾರಣೆಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿ ಗೊಳಿಸಿದ್ದು, ಈ ಒಂದು ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಜಾರಿಗೆ ತರಲಾಗಿದೆ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ಒಟ್ಟು 11,000 ಸಹಾಯಧನವನ್ನು ನೀಡಲಾಗುತ್ತಿದ್ದು, ಈ ಒಂದು ಸಹಾಯಧನವನ್ನು ಪಡೆದುಕೊಳ್ಳಲು ಯಾರು ಅರ್ಹರು? ಅಷ್ಟು ಹಣ ಒಟ್ಟಿಗೆ ಸಿಗುತ್ತದೆಯೇ? ಅಥವಾ ಹಂತ ಹಂತವಾಗಿ ಸಿಗುತ್ತದೆಯೇ? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಯೋಜನೆಯ ಅವಲೋಕನ:
| ಯೋಜನೆಯನ್ನು ಅನುಷ್ಠಾನ ಗೊಳಿಸಿದ ಇಲಾಖೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ |
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ |
| ಅರ್ಹ ಫಲಾನುಭವಿಗಳು | ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರು |
| ಯೋಜನೆಯಡಿಯಲ್ಲಿ ಸಿಗುವ ಸಹಾಯಧನ | ಮೊದಲ ಜೀವಂತ ಮಗುವಿಗೆ ರೂ. 5,000 ಹಾಗೂ ಎರಡನೇ ಜೀವಂತ ಮಗುವಿಗೆ ರೂ. 6000 |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಯೋಜನೆಯ ಕಿರು ಪರಿಚಯ:
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಭಾರತ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಮಾತೃತ್ವ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಮಹಿಳೆಯರು ಅರ್ಹರಾಗಿರುತ್ತಾರೆ.
ಈ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರು ತಮ್ಮ ಮೊದಲ ಜೀವಂತ ಮಗುವಿಗೆ ₹5,000 ಸಹಾಯಧನವನ್ನು ಎರಡು ಕಂತುಗಳ ಮೂಲಕ ಪಡೆದುಕೊಳ್ಳಬಹುದು ಹಾಗೂ ಎರಡನೇ ಮಗುವಿಗೆ ಈ ಒಂದು ಸಹಾಯಧನವು ಮಗುವಿನ ಲಿಂಗದ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಇಲ್ಲಿ ಅರ್ಹ ಮಹಿಳೆಯರು ₹6000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಉದ್ದೇಶ:
- ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಮಾಡುವುದು ಹಾಗೂ ಅವರಿಗೆ ಅಗತ್ಯವಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಗರ್ಭಿಣಿ ಮಹಿಳೆಯರು ನಿಯಮಿತವಾಗಿ ಮಗುವಿನ ಆರೋಗ್ಯದ ಕುರಿತು ತಪಾಸಣೆ ಮಾಡಿಸಲು ಹಾಗೂ ಆಸ್ಪತ್ರೆಯಲ್ಲಿ ಹೆರಿಗೆಯನ್ನು ಮಾಡಿಸಲು ಉತ್ತೇಜನ ನೀಡುವುದು.
- ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸಹಾಯಧನವನ್ನು ನೀಡುವ ಮೂಲಕ ತಮ್ಮ ಗರ್ಭವಸ್ಥೆಯ ಸಮಯದಲ್ಲಿ ಹಾಗೂ ಹೆರಿಗೆಯ ನಂತರ ಕೂಲಿ ಕೆಲಸಕ್ಕೆ ಹೋಗಲಾರದೆ ಅನುಭವಿಸುವ ನಷ್ಟವನ್ನು ಭರಿಸುವುದು ಹಾಗೂ ಈ ಸಮಯದಲ್ಲಿ ಮಹಿಳೆಯರು ಯಾವುದೇ ಚಿಂತೆ ಇಲ್ಲದೆ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ವಿಶೇಷವಾಗಿ ಈ ಒಂದು ಯೋಜನೆಯಡಿಯಲ್ಲಿ ಎರಡನೇ ಮಗುವು ಹೆಣ್ಣಾಗಿದ್ದರೆ ಮಾತ್ರ ಸಹಾಯಧನವನ್ನು ನೀಡುವ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು ಹಾಗೂ ಹೆಣ್ಣು ಮಗುವಿನ ಜನನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಲಿಂಗ ಸಮಾನತೆಗೆ ಅವಕಾಶ ಕಲ್ಪಿಸುವುದು.
ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗಾಗುವ ಪ್ರಯೋಜನ:
- ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಮೊದಲ ಜೀವಂತ ಮಗುವಿಗೆ ₹5,000 ಹಾಗೂ ಎರಡನೇ ಜೀವಂತ ಹೆಣ್ಣು ಮಗುವಿಗೆ ₹6000 ದಂತೆ ಒಟ್ಟು ₹11,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
- ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯಾರಿಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವನ್ನು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
- ಈ ಒಂದು ಯೋಜನೆಯಡಿಯಲ್ಲಿ ಸಿಗುವ ಸಹಾಯಧನದಿಂದ ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರು ತಮಗೆ ಅಗತ್ಯವಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ಖರೀದಿ ಮಾಡಲು ಸಹಾಯವಾಗುತ್ತದೆ. ಇದರಿಂದ ತಮ್ಮ ಹಾಗೂ ತಮ್ಮ ಮಗುವಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಸಿಗುವ ಸಹಾಯಧನದ ಸಂಪೂರ್ಣ ವಿವರ:
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ವಿವಿಧ ಕಂತುಗಳ ಮೂಲಕ ಸಹಾಯಧನವನ್ನು ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಈ ಒಂದು ಸಹಾಯಧನವನ್ನು ತಮ್ಮ ಮೊದಲ ಎರಡು ಜೀವಂತ ಮಕ್ಕಳ ಹೆಸರಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಅವುಗಳ ವಿವರ ಈ ಕೆಳಕಂಡಂತಿದೆ,
ಮೊದಲ ಜೀವಂತ ಮಗುವಿಗೆ:
ಭಾರತ ಸರ್ಕಾರವು ಅರ್ಹ ಫಲಾನುಭವಿಗಳ ಮೊದಲ ಜೀವಂತ ಮಗುವಿಗೆ ಒಟ್ಟು ₹5,000 ಸಹಾಯಧನವನ್ನು ನೀಡುತ್ತದೆ. ಮಹಿಳೆಯರು ಈ ಹಣವನ್ನು ಎರಡು ಕಂತುಗಳ ಮೂಲಕ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
- ಮೊದಲ ಕಂತು: ಗರ್ಭಿಣಿ ಮಹಿಳೆಯರು ತಮ್ಮ ಗರ್ಭಧಾರಣೆಯ ನೋಂದಣಿ ಹಾಗೂ ಪ್ರಸವ ಪೂರ್ವ ತಪಾಸಣೆಯನ್ನು ಮಾಡಿಸಿಕೊಂಡ ನಂತರ ₹3,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
- ಎರಡೇ ಕಂತು: ಮಗುವಿನ ಜನನದ ನೋಂದಣಿ ಹಾಗೂ ಮಗುವಿಗೆ ಮೊದಲ ಲಸಿಕೆಯನ್ನು ಹಾಕಿಸಿದ ನಂತರ ₹2,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಎರಡನೇ ಜೀವಂತ ಮಗುವಿಗೆ:
ಅರ್ಹ ಫಲಾನುಭವಿಗಳಿಗೆ ಜನಿಸಿದ ಎರಡನೇ ಮಗು ಹೆಣ್ಣಾಗಿದ್ದರೆ ಮಾತ್ರ ಎರಡನೇ ಬಾರಿಗೆ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
- ಮಗುವಿನ ಜನನ ನಂತರ ಒಂದೇ ಕಂತಿನಲ್ಲಿ ಈ ಒಂದು ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಈ ಹಂತದಲ್ಲಿ ಒಟ್ಟು ₹6000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:
- ಫಲಾನುಭವಿಗಳು ಗರ್ಭಿಣಿಯರು ಹಾಗೂ ಹಾಲುಣಿಸುವ ಮಹಿಳೆಯರಾಗಿರಬೇಕು.
- ಫಲಾನುಭವಿಗಳು ಕನಿಷ್ಠ 19 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರುಬಿಪಿಎಲ್ ಕಾರ್ಡ್ ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷ ಮೀರಿರಬಾರದು.
- ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಮಗುವಿನ ಜನನ ಪ್ರಮಾಣಪತ್ರ
- ಲಸಿಕೆ ಕಾರ್ಡ್
- ಬಿಪಿಎಲ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ವಿವರ
- ಹಾಗೂ ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
ಫಲಾನುಭವಿಗಳು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅರ್ಜಿದಾರರು PMMVY ಅಧಿಕೃತ ವೆಬ್ಸೈಟ್ https://pmmvy.wcd.gov.in/ ಗೆ ಭೇಟಿ ನೀಡಿ.
- ಬೆನಿಫಿಶಿಯರಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿ.
- ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆದುಕೊಂಡು ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಕೊನೆಯ ಮಾತು:
ಭಾರತ ಸರ್ಕಾರವು ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರ ಆರೋಗ್ಯ ಸುಧಾರಣೆಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಮಹಿಳೆಯರು ತಮ್ಮ ಎರಡು ಜೀವಂತ ಮಗುವಿಗೆ ಮಾತ್ರ ಈ ಒಂದು ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಯಸಿದರೆ ಮೇಲೆ ನೀಡಿರುವಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.