RDPR: ರೂ. 45,000 ವೇತನ!ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೊಸ ನೇಮಕಾತಿ, 12 ಜಿಲ್ಲೆಗಳಲ್ಲಿ ಉದ್ಯೋಗಾವಕಾಶ!

ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರದ ಗಾಮೀಣಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಒಟ್ಟು 12 ಜಿಲ್ಲೆಗಳಲ್ಲಿ ಓಂಬುಡ್ಸ್ ಪರ್ಸನ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

RDPR Recruitment in Kannada

ಸೇವಾ ಮನೋಭಾವವನ್ನು ಹೊಂದಿರುವ ಹಾಗೂ ಆಡಳಿತಾತ್ಮಕ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಓಂಬುಡ್ಸ್ ಪರ್ಸನ್ ಹುದ್ದೆಗೆ ಅರ್ಜಿ ಸಲ್ಲಿಸಲು 26-03-2026 ರಿಂದ ಅವಕಾಶ ಕಲ್ಪಿಸಿದ್ದು, ಏಪ್ರಿಲ್ 24, 2026 ಕೊನೆಯ ದಿನಾಂಕವಾಗಿದೆ.

ಈ ಒಂದು ಹುದ್ದೆಗೆ ಸಂಬಂಧಿಸಿದ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ, ಪ್ರಸ್ತುತ ಲೇಖನದಲ್ಲಿ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ವೇತನ ಶ್ರೇಣಿ ಹಾಗೂ ಅರ್ಜಿ ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ. ಹಾಗೆಯೇ ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.

RDPR

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆ ಗ್ರಾಮೀಣಾಭಿವೃದ್ದಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ
ಹುದ್ದೆಯ ಹೆಸರು ಓಂಬುಡ್ಸ್ ಪರ್ಸನ್
ಉದ್ಯೋಗ ಸ್ಥಳ ಮೈಸೂರು, ಬಾಗಲಕೋಟೆ ಹಾಗೂ ಬೆಳಗಾವಿ ಸೇರಿದಂತೆ ಇನ್ನಿತರ 12 ಜಿಲ್ಲೆಗಳು
ಅರ್ಜಿ ಸಲ್ಲಿಸುವ ವಿಧಾನಆಫ್ಲೈನ್

ಹುದ್ದೆಯ ಕಿರು ಪರಿಚಯ:

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಒಟ್ಟು 12 ಜಿಲ್ಲೆಗಳಲ್ಲಿ ಓಂಬುಡ್ಸ್ ಪರ್ಸನ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಈ ಒಂದು ಹುದ್ದೆಗೆ ಅಭ್ಯರ್ಥಿಗಳು ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಇನ್ನಿತರ ಸೇವಾ ಅನುಭವಗಳನ್ನು ಹೊಂದಿರಬೇಕು. ಜೊತೆಗೆ ಅಭ್ಯರ್ಥಿಗಳು 66 ದೊಳಗಿನ ವಯೋಮಿತಿಯನ್ನು ಹೊಂದಿರಬೇಕು.

ಹುದ್ದೆಯ ಸಂಕ್ಷಿಪ್ತ ವಿವರ:

ಈ ಮೊದಲೇ ತಿಳಿಸಿರುವಂತೆ ಓಂಬುಡ್ಸ್ ಪರ್ಸನ್ ಹುದ್ದೆಗಳ ನೇಮಕಾತಿಯು ಕರ್ನಾಟಕದ ಪ್ರಮುಖ 12 ಜಿಲ್ಲೆಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳಿಗೆ ಯಾವ ಯಾವ ಜಿಲ್ಲೆಯಲ್ಲಿ ಉದ್ಯೋಗವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ ಎನ್ನುವುದನ್ನು ಈ ಕೆಳಕಂಡಂತೆ ತಿಳಿದುಕೊಳ್ಳೋಣ.

ಓಂಬುಡ್ಸ್ ಹುದ್ದೆ ಖಾಲಿ ಇರುವ ಜಿಲ್ಲೆಗಳು:

  • ಕೊಪ್ಪಳ
  • ಕೋಲಾರ
  • ಶಿವಮೊಗ್ಗ
  • ಮೈಸೂರು
  • ಗದಗ
  • ದಾವಣಗೆರೆ
  • ಬೆಳಗಾವಿ
  • ಬೀದರ್
  • ಚಿತ್ರದುರ್ಗ
  • ಬಾಗಲಕೋಟೆ
  • ಬೆಂಗಳೂರು ಗ್ರಾಮಾಂತರ
  • ಹಾಸನ

ಶೈಕ್ಷಣಿಕ ಅರ್ಹತೆ:

ಓಂಬುಡ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಶೈಕ್ಷಣಿಕ ಅರ್ಹತೆ ಹಾಗೂ ವೃತ್ತಿಪರ ಅನುಭವವನ್ನು ಹೊಂದಿರಬೇಕು.

  • ಅಭ್ಯರ್ಥಿಗಳು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಸಮುದಾಯದ ವಿವಿಧ ಸಂಸ್ಥೆಗಳಲ್ಲಿ ಅಥವಾ ಸಾರ್ವಜನಿಕರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.
  • ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಣಿಕ ಕ್ಷೇತ್ರ, ಸಮಾಜ ಸೇವೆ ಅಥವಾ ಮ್ಯಾನೇಜ್ಮೆಂಟ್ ವಿಭಾಗದಲ್ಲಿ 10 ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.

ವಯೋಮಿತಿ ವಿವರ:

ಓಂಬುಡ್ಸ್ ಪರ್ಸನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 24-04-2026 ರಂದು 66 ವರ್ಷ ಮೀರಿರಬಾರದು. 66 ವರ್ಷ ಒಳಪಟ್ಟ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ ಸಡಿಲಿಕೆ ವಿವರ:

ನೇಮಕಾತಿ ಅಧಿಸೂಚನೆಯಲ್ಲಿ ಓಂಬುಡ್ಸ್ ಪರ್ಸನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಿಲ್ಲ.

ಅರ್ಜಿ ಶುಲ್ಕ:

ನೇಮಕಾತಿ ಅಧಿಸೂಚನೆಯಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಓಂಬುಡ್ಸ್ ಪರ್ಸನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆದುಕೊಂಡು ನಂತರ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕಾಗುತ್ತದೆ.

ವೇತನ ಶ್ರೇಣಿ:

  • ಓಂಬುಡ್ಸ್ ಪರ್ಸನ್ ಹುದ್ದೆಗಳು ಅರೆಕಾಲಿಕ ಹುದ್ದೆಯಾಗಿದ್ದು, ಈ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 10,000 ಗೌರವಧನವನ್ನು ನೀಡಲಾಗುತ್ತದೆ.
  • ಪ್ರತಿ ಸಿಟ್ಟಿಂಗ್ ಗೆ ರೂ 2250 ರಂತೆ ಮಾಸಿಕ ರೂ. 45,000 ಸಂಭಾವನೆಯನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ಓಂಬುಡ್ಸ್ ಪರ್ಸನ್ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಅಭ್ಯರ್ಥಿಗಳು ಮೊದಲು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ https://rdpr.karnataka.gov.in/ ಗೆ ಭೇಟಿ ನೀಡಿ ಓಂಬುಡ್ಸ್ ಪರ್ಸನ್ ಹುದ್ದೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
  • ನಂತರ ನೀವು ಪಡೆದ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ವಿಳಾಸ ಸೇರಿದಂತೆ ಇನ್ನಿತರ ವೈಯಕ್ತಿಕ ವಿವರಗಳನ್ನು, ಶೈಕ್ಷಣಿಕ ವಿವರಗಳನ್ನು ಹಾಗೂ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ನಂತರ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಪದವಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ವೈದಕೀಯ ಪ್ರಮಾಣಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ನಂತರ ಈ ಎಲ್ಲಾ ದಾಖಲೆಗಳ ಜೊತೆಗೆ ಪಬ್ಲಿಕ್ ನೋಟರಿಯಿಂದ ದೃಢೀಕರಿಸಲ್ಪಟ್ಟ ವೈದ್ಯಕೀಯ ಘೋಷಣಾ ಪ್ರಮಾಣಪತ್ರವನ್ನು ಲಗತ್ತಿಸಿ ನಿಗದಿಪಡಿಸಿದ ಕೊನೆಯ ದಿನಾಂಕ 24-04-2026 ರೊಳಗಾಗಿ ಈ ಕೆಳಗೆ ನೀಡಲಾದ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಳಾಸ:
ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ,
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ,
5 ನೇ ಮಹಡಿ, ಕೆ.ಎಸ್.ಐ.ಐ.ಡಿ.ಸಿ ಕಟ್ಟಡ, ಐಟಿ ಪಾರ್ಕ್,
ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು – 560010

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಹಾಗೂ 10 ವರ್ಷಗಳ ವೃತ್ತಿ ಅನುಭವಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
  • ನಂತರ ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳನ್ನು 2 ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ಸೂಚನೆ:

  • ಅಭ್ಯರ್ಥಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸದಿದ್ದರೆ ಅವರನ್ನು ಅವಧಿಗೆ ಮೊದಲಗೆ ಕೆಲಸದಿಂದ ತೆಗೆದು ಹಾಕಲಾಗುವುದು.
  • ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು.
  • ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿರಬಾರದು.

ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:

ಪ್ರಮುಖ ವಿವರಗಳು ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ ಪ್ರಕಟಗೊಂಡ ದಿನಾಂಕ 25-03-2026
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 26-03-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-04-2026

ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು:

ಪ್ರಮುಖ ವಿವರಗಳು ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಕೊನೆಯ ಮಾತು:

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಓಂಬುಡ್ಸ್ ಪರ್ಸನ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ನೀವೇನಾದರೂ ಅತ್ಯುತ್ತಮ ಸೇವಾ ಅನುಭವ ಹಾಗೂ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದರೆ, ಕರ್ನಾಟಕದ ಒಟ್ಟು 12 ಜಿಲ್ಲೆಗಳಲ್ಲಿ ನಿಮ್ಮ ಆದ್ಯತೆಯ ಜಿಲ್ಲೆಯನ್ನು ಅರ್ಜಿಯಲ್ಲಿ ನಮೂದಿಸಿ ಮೇಲೆ ನೀಡಲಾದ ವಿಳಾಸಕ್ಕೆ ಸಲ್ಲಿಸಿ.


ಇತರೆ ಹುದ್ದೆಗಳ ಪ್ರಮುಖ ಲಿಂಕುಗಳು:

2 thoughts on “RDPR: ರೂ. 45,000 ವೇತನ!ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೊಸ ನೇಮಕಾತಿ, 12 ಜಿಲ್ಲೆಗಳಲ್ಲಿ ಉದ್ಯೋಗಾವಕಾಶ!”

Leave a Comment