Ration: ದೇಶದ ಅತ್ಯಂತ ಬಡ ಕುಟುಂಬಗಳ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿ ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಲ್ಲಿ ಪಡಿತರ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಿದ್ದು, ರಾಷ್ಟೀಯ ಆಹಾರ ಭದ್ರತಾ ಕಾಯ್ದೆ 2013 ಕ್ಕೆ ಮಹತ್ವದ ತಿದ್ದುಪಡಿ ತರುವ ಮೂಲಕ ಕುಟುಂಬ ಆಧಾರಿತ ವಿತರಣೆ ಆಗುತ್ತಿದೆ ಪಡಿತರ ಧಾನ್ಯದ ಬದಲಿಗೆ ವ್ಯಕ್ತಿ ಆಧಾರಿತ ವಿತರಣಾ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ಸರ್ಕಾರದ ಈ ಒಂದು ಪ್ರಸ್ತಾವನೆಯ ಕುರಿತು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ನೀಡಲು ಸಾರ್ವಜನಿಕರಿಗೆ ಜುಲೈ 13 ರ ಒಳಗೆ ಕಾಲಾವಕಾಶವನ್ನು ನೀಡಲಾಗಿದೆ. ಸರ್ಕಾರದ ಈ ಒಂದು ಮಹತ್ವದ ನಿರ್ಧಾರಕ್ಕೆ ಮುಖ್ಯ ಕಾರಣ, ಪ್ರಸ್ತುತ ಪಡಿತರ ಹಂಚಿಕೆ ವ್ಯವಸ್ಥೆಯಲ್ಲಿನ ತಾರತಮ್ಯತೆಯನ್ನು ಹಾಗೂ ಅಸಮಾನತೆಯನ್ನು ತೊಡೆದುಹಾಕುವುದಾಗಿದೆ.
ರಾಷ್ಟ್ರಿಯ ಆಹಾರ ಭದ್ರತಾ ಕಾಯ್ದೆಗೆ ಮಹತ್ವದ ತಿದ್ದುಪಡಿ ತರುವುದಿಂದ ಆಗುವ ಅನುಕೂಲಗಳು, ಅನಾನುಕೂಲಗಳು, ತಿದ್ದುಪಡಿಗೆ ಮುಖ್ಯ ಕಾರಣಗಳು ಇನ್ನಿತರ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದ ಕೇಂದ್ರ ಸರ್ಕಾರ. * ಕುಟುಂಬದ ಆಧಾರದ ಮೇಲೆ ವಿತರಣೆ ಮಾಡಲಾಗುತ್ತಿದ್ದ ಅಕ್ಕಿಯನ್ನು ಇನ್ನು ಮುಂದೆ ವ್ಯಕ್ತಿ ಆಧಾರಿತ ವಿತರಿಸಲು ನಿರ್ಧಾರ. * ಪ್ರತಿ ಕುಟುಂಬಕ್ಕೆ 35 kg ಅಕ್ಕಿ ಬದಲಿಗೆ ಇನ್ಮುಂದೆ ಕುಟುಂಬದ ಪ್ರತಿ ಸದಸ್ಯರ ಹೆಸರಿಗೆ ಸಿಗಲಿದೆ 7 kg ಅಕ್ಕಿ. * ಸರ್ಕಾರದ ಈ ಬದಲಾವಣೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಸಾರ್ವಜನಿಕರಿಗೆ ಜುಲೈ 13 ರ ವರೆಗೆ ಕಾಲಾವಕಾಶ ನೀಡಲಾಗಿದೆ. |
ಅಂತ್ಯೋದಯ ಅನ್ನ ಯೋಜನೆಯ ಹಿನ್ನಲೆ:
ಭಾರತದಲ್ಲಿ ಅಪೌಷ್ಟಿಕತೆಯನ್ನು ಹಾಗೂ ಹಸಿವನ್ನು ನೀಡಿಗುವ ಉದ್ದೇಶದಿಂದ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಿಪೇಯಿಯವರು ಡಿಸೆಂಬರ್ 25, 2000 ದಂದು ಈ ಒಂದು ಮಹತ್ವದ ಅಂತ್ಯೋದಯ ಅನ್ನ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಡಿಯಲ್ಲಿ ಮೊದಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪೈಕಿ ಅತ್ಯಂತ ನಿರ್ಗತಿಕರಾಗಿರುವ ಹಾಗೂ ಬಡವರಲ್ಲಿ ಅತ್ಯಂತ ಬಡವರನ್ನು ಗುರುತಿಸಿ ಅವರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಆಹಾರ ಧಾನ್ಯವನ್ನು ಒದಗಿಸುವ ಮೂಲಕ ಅವರಿಗೆ ಆಹಾರ ಭದ್ರತೆಯನ್ನು ಒಡಗಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ನಂತರದ ದಿನಗಳಲ್ಲಿ ಈ ಒಂದು ಯೋಜನೆಯನ್ನು ವಿಸ್ತರಿಸಿದ್ದು, ಪ್ರಸ್ತುತ ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತವಾಗಿ ಧಾನ್ಯಗಳನ್ನು ಒದಗಿಸಲಾಗುತ್ತಿದೆ.
ಪ್ರಸ್ತುತ ವ್ಯವಸ್ಥೆಗಳಲ್ಲಿನ ಬದಲಾವಣೆಯ ಅಗತ್ಯತೆಗಳೇನು?
ಕಳೆದ 25 ವರ್ಷಗಳಿಂದ ಕುಟುಂಬದಲ್ಲಿ ಒಬ್ಬರೇ ಸದಸ್ಯರಿದ್ದರೂ, 8 ಜನ ಸದಸ್ಯರಿದ್ದರೂ ಸಹ ಪ್ರತಿ ಕುಟುಂಬಕ್ಕೆ ತಿಂಗಳಿಗೆ 35kg ಅಕ್ಕಿಯನ್ನು ನೀಡಲಾಗುತ್ತಿತ್ತು. ಇದರಿಂದ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುಟುಂಬಗಳಿಗೆ ತುಂಬಾ ನಷ್ಟವಾಗುತ್ತಿತ್ತು.
- ಕೇವಲ ಇಬ್ಬರು ಸದಸ್ಯರಿರುವ ಸಣ್ಣ ಕುಟುಂಬಗಳಿಗೆ 35 ಕೆಜಿ ಅಕ್ಕಿ ದೊರೆಯುವುದರಿಂದ, ಪ್ರತಿ ತಿಂಗಳು ಕುಟುಂಬದ ಒಬ್ಬ ಸದಸ್ಯರಿಗೆ 17.5 ಕೆಜಿ ಅಕ್ಕಿ ದೊರೆಯುತ್ತಿತ್ತು. ಆದರೆ 7 ಸದಸ್ಯರಿರುವ ಕುಟುಂಬಗಳಿಗೂ ಕೂಡ 35 ಕೆಜಿ ಅಕ್ಕಿ ಒದಗಿಸುತ್ತಿದ್ದುದ್ದರಿಂದ, ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕೇವಲ 5 ಕೆಜಿ ಅಕ್ಕಿ ಮಾತ್ರ ಲಭ್ಯವಾಗುತ್ತದೆ.
- ಕಡಿಮೆ ಜನಸಂಖ್ಯೆ ಹೊಂದಿರುವ ಕುಟುಂಬಗಳಿಗೆ ಅವರ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿ ಪೂರೈಕೆಯಾಗುತ್ತಿದೆ ಕಾರಣ ತಮ್ಮ ಅಗತ್ಯಕ್ಕೆ ತಕ್ಕಷ್ಟು ಅಕ್ಕಿಯನ್ನು ಉಳಿಸಿಕೊಂಡು ಮಿಕ್ಕುಳಿದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ರೀತಿಯ ಪಡಿತರ ಧಾನ್ಯಗಳ ದುರ್ಬಳಕೆ ಹಾಗೂ ಅಕ್ರಮ ಮಾರಾಟವನ್ನು ತಡೆಗಟ್ಟಲು ಈ ಮಹತ್ವದ ಬದಲಾವಣೆಯನ್ನು ತರಲಾಯಿತು.
- ಈ ಮೊದಲು ಹೆಚ್ಚಿನ ಜನಸಂಖ್ಯೆ ಇರುವ ಕುಟುಂಬಗಳ ಒಬ್ಬ ಸದಸ್ಯರಿಗೆ ಕೇವಲ 3-5 ಕೆಜಿ ಅಕ್ಕಿ ಮಾತ್ರ ಪೂರೈಕೆಯಾಗುತ್ತಿತ್ತು. ಇದರಿಂದ BPL ಕಾರ್ಡ್ ಹೊಂದಿರುವ ಕುಟುಂಬಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ಧಾನ್ಯ ಪೂರೈಕೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುಟುಂಬಗಳಿಗೆ ಸರಿಯಾದ ಆಹಾರ ಭದ್ರತೆ ಒದಗಿಸಲಾಗುತ್ತಿರಲಿಲ್ಲ. ಆದರೆ ಇತ್ತೀಚಿನ ಬದಲಾವಣೆ ಪ್ರಕಾರ ಈ ಯೋಜನೆಯಡಿಯಲ್ಲಿ ಪ್ರತಿ ಸದಸ್ಯರ ಹೆಸರಿನಲ್ಲಿ 7 KG ಅಕ್ಕಿಯನ್ನು ನೀಡಲಾಗುತ್ತಿದೆ.
ಯೋಜನೆಯಡಿಯಲ್ಲಿ ಆಗುವ ಅನುಕೂಲಗಳು:
ಸರ್ಕಾರ ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ತಂದರೆ ಕೆಲವು ಫಲಾನುಭವಿಗಳಿಗೆ ಅನೇಕ ರೀತಿಯಲ್ಲಿ ಅನುಕೂಲವಾಗುತ್ತದೆ.
- ಸಮಾನ ವಿತರಣಾ ವ್ಯವಸ್ಥೆ:
ಈ ಮೊದಲು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಕುಟುಂಬಗಳಿಗೂ ಹಾಗೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ಕುಟುಂಬಗಳಿಗೂ ಕುಟುಂಬ ಆಧಾರಿತವಾಗಿ ಪ್ರತಿ ತಿಂಗಳು ರೂ. 35 kg ಪಡಿತರ ಧಾನ್ಯವನ್ನು ನೀಡಲಾಗುತ್ತಿತ್ತು, ಆದರೆ ಈಗ ಈ ಯೋಜನೆಯಡಿಯಲ್ಲಿ ಮಹತ್ವದ ಬದಲಾವಣೆ ತಂದು ಕುಟುಂಬ ಆಧಾರಿತವಾಗಿ ವಿತರಣೆಯಾಗುತ್ತಿದ್ದ ಧಾನ್ಯಗಳನ್ನು ವ್ಯಕ್ತಿ ಆಧಾರಿತ ವಿತರಣೆ ಮಾಡುವ ಮೂಲಕ ಪ್ರತಿ ತಿಂಗಳು ಕುಟುಂಬದ ಒಬ್ಬ ಸದಸ್ಯರ ಹೆಸರಿನಲ್ಲಿ 7 kg ಅಕ್ಕಿ ಲಭ್ಯವಾಗುತ್ತದೆ.
- ಪಡಿತರ ದುರುಪಯೋಗವನ್ನು ತಡೆಗಟ್ಟಬಹುದು:
ಈ ಬದಲಾವಣೆಯಿಂದಾಗಿ ಪ್ರತಿ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಧಾನ್ಯಗಳನ್ನು ವಿತರಣೆ ಮಾಡುವುದರಿಂದ ಹೆಚ್ಚಿನ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವುದನ್ನು ತಡೆಗಟ್ಟಬಹುದು. ಇದರಿಂದ ಸರ್ಕಾರದ ಆಹಾರ ಸಂಪನ್ಮೂಲಗಳ ವ್ಯರ್ಥವೂ ಕಡಿಮೆಯಾಗುತ್ತದೆ.
- ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದು:
ಹೆಚ್ಚು ಜನ ಸಂಖ್ಯೆ ಇರುವ ಬಡವರಲ್ಲಿ ಅತ್ಯಂತ ಬಡವರಿಗೆ ಅಗತ್ಯಕ್ಕೆ ತಕ್ಕಂತೆ ಆಹಾರವನ್ನು ಒದಗಿಸುವ ಮೂಲಕ ಆಹಾರದ ಕೊರೆತೆಯನ್ನು ಕಡಿಮೆ ಮಾಡಿ ಕುಟುಂಬ ಸದಸ್ಯರ ಪೌಷ್ಟಿಕತೆಯ ಮಟ್ಟವನ್ನು ಸುಧಾರಿಸುತ್ತದೆ.
ಅನಾನುಕೂಲಗಳು:
- ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಕುಟುಂಬಗಳಿಗೆ ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಲಭ್ಯವಾಗುತ್ತಿದ್ದ ಪ್ರತಿ ತಿಂಗಳ ಪಡಿತರ ಧಾನ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.
- 5 ಅಥವಾ 5 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುಟುಂಬಗಳಿಗೆ ಹೆಳೆಯ ನಿಯಮಗಳ ಪ್ರಕಾರವೇ ಕೇವಲ 35 ಕೆಜಿ ಪಡಿತರ ಧಾನ್ಯವನ್ನು ನೀಡುವುದರಿಂದ ಈ ಕುಟುಂಬಗಳಿಗೆ ಪ್ರತಿ ತಿಂಗಳು ಕೇವಲ 4 ರಿಂದ 5 ಕೆಜಿ ಅಕ್ಕಿ ಮಾತ್ರ ಲಭ್ಯವಾಗುತ್ತದೆ.
- ಪಡಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದರಿಂದ ಬಡ ಕುಟುಂಬಗಳು ಆಹಾರ ಭದ್ರತೆಗೆ ಧಕ್ಕೆಯಾಗಿ, ಮಾರುಕಟ್ಟೆಯಲ್ಲಿ ಹೆಚ್ಚಿನ ಮೊತ್ತವನ್ನು ನೀಡಿ ಧಾನ್ಯವನ್ನು ಕೊಂಡುಕೊಳ್ಳಬೇಕಾಗುತ್ತದೆ.
ಹೊಸ ನಿಯಮಗಳ ಪ್ರಕಾರ ಪ್ರತಿ ಕುಟುಂಬಕ್ಕೆ ಪಡಿತರ ಧಾನ್ಯವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ?
ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಈ ಹೊಸ ನಿಯಮಗಳ ಅನ್ವಯ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಸಿಗುವ ಪಡಿತ ವಿವರ
- ಒಬ್ಬ ಸದಸ್ಯನಿರುವ ಕುಟುಂಬಗಳಿಗೆ ಪ್ರತಿ ತಿಂಗಳು 7 ಕೆಜಿ ಪಡಿತರ ಧಾನ್ಯವನ್ನು ವಿತರಿಸಲಾಗುತ್ತದೆ.
- ಇಬ್ಬರು ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಪ್ರತಿ ತಿಂಗಳು 14 ಕೆಜಿ ಪಡಿತರ ಧಾನ್ಯವನ್ನು ನೀಡಲಾಗುತ್ತದೆ.
- 3 ಸದಸ್ಯರನ್ನು ಒಳಗೊಂಡಿರುವ ಕುಟುಂಬಗಳಿಗೆ ಪ್ರತಿ ತಿಂಗಳು 21 ಕೆಜಿ ಪಡಿತರ ಧಾನ್ಯವನ್ನು ನೀಡಲಾಗುತ್ತದೆ.
- 4 ಸದಸ್ಯರನ್ನು ಒಳಗೊಂಡಿರುವ ಕುಟುಂಬಗಳಿಗೆ ಪ್ರತಿ ತಿಂಗಳುರ್ 28 ಕೆಜಿ ಪಡಿತರ ಧಾನ್ಯವನ್ನು ನೀಡಲಾಗುತ್ತದೆ.
- 5 ಸದಸ್ಯರು ಅಥವಾ 5 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುಟುಂಬಗಳಿಗೆ 35 ಕೆಜಿ ಪಡಿತರ ಧಾನ್ಯವನ್ನು ನೀಡಲಾಗುತ್ತದೆ.
ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಸಲ್ಲಿಸುವ ವಿಧಾನ:
ಸಾರ್ವಜನಿಕರು ಅಥವಾ ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳುತ್ತಿರುವ ಫಲಾನುಭವಿಗಳು ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಲ್ಲಿ ಆಗಿರುವ ಬದಲಾವಣೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಾಗೂ ಅನಿಸಿಕೆಯನ್ನು ತಿಳಿಸಲು 13-07-2026 ರ ಒಳಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಬರೆದು ಅಧಿಕೃತ ಇಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಸಾರ್ವಜನಿಕರು ಈ ಕರಡು ತಿದ್ದುಪಡಿಯ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ವೆಬ್ಸೈಟ್ ನಲ್ಲಿ ನೋಡಬಹುದಾಗಿದೆ.
ಅಂತಿಮ ತೀರ್ಮಾನ:
ಕೇಂದ್ರ ಸರ್ಕಾರವು ಅಂತ್ಯೋದಯ ಅನ್ನ ಭಾಗ್ಯ ಯೋಜನೆಯಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ಸಾರ್ವಜನಿಕರ ಆಕ್ಷೇಪಣೆ ಹಾಗೂ ಸಲಹೆಗಳನ್ನು ನೀಡಲು ಜುಲೈ 13 ರ ವರೆಗೆ ಕಾಲಾವಕಾಶ ನೀಡಿದೆ. ನಿಗಿದಿತ ಕಾಲಾವಕಾಶ ಮುಗಿದ ನಂತರ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಯನ್ನು ಪರಿಶೀಲಿಸಿ ನಂತರ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಂಡು ನಂತರ ಯೋಜನೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಹಾಗೂ ಫಲಾನುಭವಿಗಳು ಈ ಒಂದು ಬದಲಾವಣೆಯಿಂದ ತಮಗೆ ಅನುಕೂಲ ಆಗುತ್ತಿದೆಯೇ ಅಥವಾ ಅನಾನುಕೂಲವಾಗುತ್ತದೆಯೇ ಎಂದು ಸ್ಪಷ್ಟವಾಗಿ ಬರೆದು ಇಮೇಲ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Bhagyalakshmi: ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಭಾರಿ ದೊಡ್ಡ ಬದಲಾವಣೆ! 5 ವರ್ಷದೊಳಗಿನ ಮಕ್ಕಳಿಗೂ ಅರ್ಜಿ ಸಲ್ಲಿಸಲು ಅವಕಾಶ । ಇಂದೇ ಅಪ್ಲೈ ಮಾಡಿ
- PMVY: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಪಿಎಂ ವಿಶ್ವಕರ್ಮ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಮತ್ತು ತರಬೇತಿ! ಇಂದೇ ಅಪ್ಲೈ ಮಾಡಿ
- 50K ಪ್ರತಿಯೊಬ್ಬ ರೈತರಿಗೆ 50,000 ಸಹಾಯಧನ | ಆನ್ಲೈನ್ ಅರ್ಜಿ ಸಂಪೂರ್ಣ ಮಾಹಿತಿ ಇಲ್ಲಿದೆ! | farmers subsidy 2026 50000
- Hostel: 2026-27ನೇ ಸಾಲಿನಲ್ಲಿ ಹಾಸ್ಟೇಲ್ ಪ್ರವೇಶ ಆರಂಭ! ಉಚಿತ ಹಾಸ್ಟೇಲ್ + ಊಟ + ₹20,000 ಪ್ರೋತ್ಸಾಹಧನ! ಈಗಲೇ ಆನ್ಲೈನ್ ಅರ್ಜಿ ಸಲ್ಲಿಸಿ
- Labour: ₹20,000 ಶೈಕ್ಷಣಿಕ ಪ್ರೋತ್ಸಾಹಧನ! ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್! ಡಿಸೆಂಬರ್ 31 ಕೊನೆಯ ದಿನಾಂಕ