DHFWS: ₹60,000 ವೇತನ! ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ! ಯಾವುದೇ ಲಿಖಿತ ಪರೀಕ್ಷೆ + ಅರ್ಜಿ ಶುಲ್ಕ ಇಲ್ಲ

ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಭರ್ಜರಿ ಗುಡ್ ನ್ಯೂಸ್ ನೀಡಿದೆ! ಪ್ರಸ್ತುತ ಸಾಲಿನಲ್ಲಿ ಖಾಲಿ ಇರುವ ವೈದ್ಯಕೀಯ ಅಧಿಕಾರಿ, ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್, ಫಾರ್ಮಸಿಸ್ಟ್ ಆಫೀಸರ್, ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಹುದ್ದೆಗಳ ನೇರ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

DHFWS Kolar Recruitment 2026


SSLC, PUC, ಡಿಪ್ಲೊಮಾ, ನರ್ಸಿಂಗ್, ಪದವಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ, ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಆಗಿರುವ ಅಭ್ಯರ್ಥಿಗಳು ಪ್ರತಿ ಸೋಮವಾರ ನಡೆಯುವ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ. ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ವಾಕ್ ಇನ್ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,667/- ದಿಂದ ರೂ. 60,000/- ವರೆಗೆ ವೇತನವನ್ನು ನೀಡಲಾಗುತ್ತದೆ.

ಹಾಗಿದ್ದರೆ, ಈ ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಯಾವ ಯಾವ ವಿಭಾಗಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

DHFWS

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆಯ ಹೆಸರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೋಲಾರ
ಹುದ್ದೆಯ ಹೆಸರು ವೈದ್ಯಕೀಯ ಅಧಿಕಾರಿ, ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್, ಫಾರ್ಮಸಿಸ್ಟ್ ಆಫೀಸರ್, ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್
ಹುದ್ದೆಯ ಸಂಖ್ಯೆ ಒಟ್ಟು 15 ಹುದ್ದೆಗಳು
ಉದ್ಯೋಗ ಸ್ಥಳ ಕೋಲಾರ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್

ಹುದ್ದೆಯ ವಿಶ್ಲೇಷಣೆ:

ಕೋಲಾರ ಜಿಲ್ಲಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಪಿಎಂ- ಅಭಿಮ್ ಯೋಜನೆಯಡಿಯಲ್ಲಿ ಖಾಲಿ ಇರುವ ವೈದ್ಯಕೀಯ ಅಧಿಕಾರಿ, ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್, ಫಾರ್ಮಸಿಸ್ಟ್ ಆಫೀಸರ್, ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಡಿಪ್ಲೊಮಾ, ಬಿಎಸ್ಸಿ ನರ್ಸಿಂಗ್, MBBS ಪದವಿ ಪೂರ್ಣಗೊಳಿಸಿದ ಗರಿಷ್ಠ 40 ವರ್ಷದಿಂದ 60 ವರ್ಷದೊಳಗೆ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಸಂಕ್ಷಿಪ್ತ ವಿವರ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ 1 ಹುದ್ದೆ
ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್2 ಹುದ್ದೆಗಳು
ಫಾರ್ಮಸಿಸ್ಟ್ ಆಫೀಸರ್ 4 ಹುದ್ದೆಗಳು
ವೈದ್ಯಕೀಯ ಅಧಿಕಾರಿ 8 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್:

ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಆಗಿರಬೇಕು, ಕೆಎಂಟಿಸಿ ತರಬೇತಿಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ್ ಸಾಕ್ಷರತಾ ಜ್ಞಾನವನ್ನು ಹೊಂದಿರಬೇಕು.

  • ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್:

ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC/ PUC ಮತ್ತು ಡಿ.ಎಂ.ಎಲ್.ಟಿ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಆಗಿರಬೇಕು ಹಾಗೂ ಕಂಪ್ಯೂಟರ್ ಸಾಕ್ಷರತಾ ಜ್ಞಾನವನ್ನು ಹೊಂದಿರಬೇಕು.

  • ಫಾರ್ಮಸಿಸ್ಟ್ ಆಫೀಸರ್:

ಫಾರ್ಮಸಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರಬೇಕು ಹಾಗೂ GNM ನರ್ಸಿಂಗ್ ನಲ್ಲಿ ಕೆ.ಏನ್.ಸಿ ನೋಂದಣಿ ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

  • ವೈದ್ಯಕೀಯ ಅಧಿಕಾರಿ:

ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್ ಪದವಿಯನ್ನು ಹೊಂದಿರಬೇಕು ಹಾಗೂ ಕರ್ನಾಟಕ ವೈದ್ಯಕೀಯ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು.

ವಯೋಮಿತಿ ವಿವರ:

ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.

  • ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಟ 40 ವರ್ಷದೊಳಗೆ ವಯೋಮಿತಿಯನ್ನು ಹೊಂದಿರಬೇಕು.
  • ಜೂನಿಯರ್ ಲ್ಯಾಬ್ ಟೆಕ್ನಿಷಿಯನ್ ಹಾಗೂ ಫಾರ್ಮಸಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 45 ವರ್ಷದೊಳಗೆ ವಯೋಮಿತಿಯನ್ನು ಹೊಂದಿರಬೇಕು.
  • ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 60 ವರ್ಷದೊಳಗೆ ವಯೋಮಿತಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ:

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಯಾವುದೇ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸದೆ, ಪ್ರತಿ ಸೋಮವಾರ ನಡೆಯುವ ವಾಕ್ ಇನ್ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ.

ವೇತನ ಶ್ರೇಣಿ:

  • ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,667/- ವೇತನವನ್ನು ನೀಡಲಾಗುತ್ತದೆ.
  • ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್ ಹಾಗೂ ಫಾರ್ಮಸಿಸ್ಟ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 16,067/- ವರೆಗೆ ವೇತನವನ್ನು ನೀಡಲಾಗುತ್ತದೆ.
  • ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಭ್ಯರ್ಥಿಗಳು ಪ್ರತಿ ಸೋಮವಾರ ನಡೆಯುವ ಸಂದರ್ಶನಕ್ಕೆ ಭಾಗವಹಿಸಿದರೆ ಸಾಕಾಗುತ್ತದೆ.

  • ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆ ಭಾಗವಹಿಸುವುದಕ್ಕಿಂತ ಮುಂಚೆ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ಐಡಿ ಪ್ರೂಫ್, ಶೈಕ್ಷಣಿಕ ಅಂಕಪಟ್ಟಿ, ಶೈಕ್ಷಣಿಕ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಫೋಟೋ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಸಂದರ್ಶನಕ್ಕೆ ಭಾಗವಹಿಸಿ.
ಸಂದರ್ಶನ ನಡೆಯುವ ಸ್ಥಳ:

“ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೋಲಾರ”

ಆಯ್ಕೆ ಪ್ರಕ್ರಿಯೆ:

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

  • ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಿ ನಂತರ ದಾಖಲೆಗಳನ್ನು ಪರಿಶೀಲಿಸಿ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕ 17-07-2026
ಸಂದರ್ಶನ ನಡೆಯುವ ದಿನ ಪ್ರತಿ ಸೋಮವಾರ
ಸಂದರ್ಶನ ನಡೆಯುವ ಸಮಯ ಬೆಳಿಗ್ಗೆ 11 ಗಂಟೆಯಿಂದ

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಜುಲೈ 17 ರಂದು ಇಲ್ಲಿ ಖಾಲಿ ಇರುವ ವೈದ್ಯಕೀಯ ಅಧಿಕಾರಿ, ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್, ಜೂನಿಯರ್ ಪ್ರೈಮರಿ ಹೆಲ್ತ್ ಕೇರ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಒಂದು ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಲು ಇಚ್ಛಿಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಅರ್ಹತೆಯನ್ನು ಖಚಿತಪಡಿಸಿಕೊಂಡು ಪ್ರತಿ ಸೋಮವಾರ ನಡೆಯುವ ಸಂದರ್ಶನಕ್ಕೆ ಭಾಗವಹಿಸಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಹುದ್ದೆಗಳ ಪ್ರಮುಖ ಲಿಂಕುಗಳು:

Leave a Comment