ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಾಣುತ್ತಿರುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಭಾರತೀಯ ಟೆರಿಟೋರಿಯಲ್ ಆರ್ಮಿ 2026 ನೇ ಸಾಲಿನಲ್ಲಿ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Territorial Army Recruitment in Kannada
ಟೆರಿಟೋರಿಯಲ್ ಆರ್ಮಿಯ ನೇಮಕಾತಿ ಅಭಿಯಾನದಡಿ ದೇಶದಾದ್ಯಂತ ಒಟ್ಟು 3806 ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್ ಹಾಗೂ ಟ್ರೇಡ್ಸ್ ಮೆನ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಒಂದು ನೇಮಕಾತಿ ಪ್ರಕ್ರಿಯೆಯು ರ್ಯಾಲಿಗಳ ಮೂಲಕ ನಡೆಯುತ್ತದೆ. ಈ ಒಂದು ನೇಮಕಾತಿಯು ಈಗಾಗಲೇ ಅಂದರೆ ಮಾರ್ಚ್ ತಿಂಗಳಲ್ಲೇ ಪ್ರಮುಖ ರಾಜ್ಯಗಳಲ್ಲಿ ಆರಂಭಗೊಂಡಿದೆ. ಆಗಾಗಿ ಅಭ್ಯರ್ಥಿಗಳು ನೇಮಕಾತಿಗಾಗಿ ರ್ಯಾಲಿಗೆ ಹೋಗುವುದು ಕಡ್ಡಾಯವಾಗಿದೆ.
ನೀವೇನಾದರೂ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಆಸಕ್ತಿಯನ್ನು ಹೊಂದಿದ್ದರೆ, ಈ ಒಂದು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ದೈಹಿಕ ಮಾನದಂಡ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಆಯ್ಕೆ ಪ್ರಕ್ರಿಯೆ ಹೇಗೆಲ್ಲ ನಡೆಯುತ್ತದೆ ಎನ್ನುವುದನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಹುದ್ದೆಯ ಕುರಿತು ಪ್ರಮುಖ ಹೈಲೈಟ್ಸ್ ಪಾಯಿಂಟ್ಸ್:
| ಹುದ್ದೆಯ ಹೆಸರು | ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್ ಹಾಗೂ ಟ್ರೇಡ್ಸ್ ಮೆನ್ ಹುದ್ದೆಗಳು |
| ಹುದ್ದೆಯ ಸಂಖ್ಯೆ | ಒಟ್ಟು 3806 ಹುದ್ದೆಗಳು |
| ರ್ಯಾಲಿ ಆರಂಭಿಕ ದಿನಾಂಕ | ಮಾರ್ಚ್ 2026 |
| ರ್ಯಾಲಿ ಕೊನೆಯ ದಿನಾಂಕ | ಆಗಸ್ಟ್ 2026 |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
ಹುದ್ದೆಯ ಸಂಕ್ಷಿಪ್ತ ವಿವರ:
ಟೆರಿಟೋರಿಯಲ್ ಆರ್ಮಿ 2026 ನೇ ಸಾಲಿನ ನೇಮಕಾತಿಯಲ್ಲಿ ಒಟ್ಟು 3806 ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್ ಹಾಗೂ ಟ್ರೇಡ್ಸ್ ಮೆನ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಒಂದು ನೇಮಕಾತಿಯು ವಲಯವಾರು ನಡೆಯಲಿದ್ದು, ಮಾರ್ಚ್ ನಿಂದ ಪ್ರಾರಂಭಗೊಂಡು ಆಗಸ್ಟ್ ವರೆಗೂ ನಡೆಯಲಿದೆ. ಜೊತೆಗೆ ಜಮ್ಮು ಮತ್ತು ಕಶ್ಮೀರ, ಪಂಜಾಬ್, ಉತ್ತರಖಂಡ್, ಉತ್ತರಪ್ರದೇಶ, ರಾಜಸ್ತಾನ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿ ವಿವಿಧ ರಾಜ್ಯಗಳಲ್ಲಿ ಈ ಒಂದು ನೇಮಕಾತಿ ನಡೆಯಲಿದೆ.
ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:
1. ಶೈಕ್ಷಣಿಕ ಅರ್ಹತೆ:
- ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗಳು:
ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 45% ಅಂಕಗಳೊಂದಿಗೆ SSLC ಅಲ್ಲಿ ಉತ್ತೀರ್ಣರಾಗಿರಬೇಕು.
- ಸೋಲ್ಜರ್ ಕ್ಲರ್ಕ್ ಹುದ್ದೆಗಳು:
ಸೋಲ್ಜರ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರಬೇಕು. ಜೊತೆಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಹಿಡಿತವನ್ನು ಹೊಂದಿರಬೇಕು.
- ಟ್ರೇಡ್ಸ್ ಮೆನ್ ಹುದ್ದೆಗಳು:
ಟ್ರೇಡ್ಸ್ ಮೆನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 8 ನೇ ತರಗತಿಯಲ್ಲಿ ಅಥವಾ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
2. ದೈಹಿಕ ಮಾನದಂಡಗಳು:
- ದೈಹಿಕ ಸಾಮರ್ಥ್ಯ ಪರೀಕ್ಷೆ:
- ಒಂದು ಮೈಲಿ ಓಟ:
- 18 ರಿಂದ 30 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಒಂದು ಮೈಲಿ ಓಟವನ್ನು 5 ನಿಮಿಷ 30 ಸೆಕೆಂಡ್ ಒಳಗೆ ಪೂರ್ಣಗೊಳಿಸಿ ಉತ್ತೀರ್ಣರಾಗಿರಬೇಕು.
- 31 ರಿಂದ 42 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಒಂದು ಮೈಲಿ ಓಟವನ್ನು 6 ನಿಮಿಷ 15 ಸೆಕೆಂಡ್ ಒಳಗೆ ಪೂರ್ಣಗೊಳಿಸಿ ಉತ್ತೀರ್ಣರಾಗಿರಬೇಕು.
- ಪುಲ್ – ಅಪ್ ಗಳು:
- ಅಭ್ಯರ್ಥಿಗಳು ಕನಿಷ್ಠ 7 ರಿಂದ 10 ಪುಲ್ – ಅಪ್ ಗಳನ್ನು ತೆಗೆಯುವುದು ಕಡ್ಡಾಯವಾಗಿದೆ. ಇದು ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಹಾಗೂ ವಯಸ್ಸಿನ ಮೇಲೆ ಡಿಪೆಂಡ್ ಆಗಿರುತ್ತದೆ.
- ಒಂದು ಮೈಲಿ ಓಟ:
- ಭೌತಿಕ ಅಳತೆಗಳು:
- ಅಭ್ಯರ್ಥಿಗಳು ಕನಿಷ್ಠ 50 ಕೆಜಿ ತೂಕವನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಕನಿಷ್ಠ 160 ಸೆಂ.ಮೀ ಎತ್ತರವನ್ನು ಹೊಂದಿರಬೇಕು.
- ಅಭ್ಯರ್ಥಿಗಳ ಎದೆಯ ಸುತ್ತಳತೆಯು ಕನಿಷ್ಠ 77 ಸೆಂ.ಮೀ ಇರಬೇಕು.
ವಯೋಮಿತಿ ವಿವರ:
ಟೆರಿಟೋರಿಯಲ್ ಆರ್ಮಿ ನೇಮಕಾತಿಯಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ವಯೋಮಿತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
- ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂರದಿರಬೇಕು ಹಾಗೂ
- ಗರಿಷ್ಟ 42 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
- ಸಾಮಾನ್ಯ, ಒಬಿಸಿ ಹಾಗೂ ಇ.ಡಬ್ಲ್ಯೂ.ಎಸ್ ವರ್ಗಕ್ಕೆ ಸರಿದ ಅಭ್ಯರ್ಥಿಗಳಿಗೆ ರೂ. 100/-
- ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ವೇತನ ಶ್ರೇಣಿ:
ಟೆರಿಟೋರಿಯಲ್ ಆರ್ಮಿ ನೇಮಕಾತಿಯಡಿಯಲ್ಲಿ ವಿವಿಧ ಹುದ್ದೆಗಿಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,500 ದಿಂದ ರೂ. 69,400 ರ ವರೆಗೆ ವೇತನವನ್ನು ನೀಡಲಾಗುತ್ತದೆ. ಇವುಗಳ ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆಯ ಭತ್ಯೆ, ವೈದ್ಯಕೀಯ ಭತ್ಯೆ ಹಾಗೂ ಅಪಾಯ ಭತ್ಯೆಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಅಗತ್ಯ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್
- ನಿವಾಸ ಪ್ರಮಾಣಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಅವಿವಾಹಿತ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಹಾಗೂ ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ಟೆರಿಟೋರಿಯಲ್ ಆರ್ಮಿ ನೇಮಕಾತಿಯು ನೇರ ರ್ಯಾಲಿ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
- ಅಭ್ಯರ್ಥಿಗಳು ನೇಮಕಾತಿ ನಡೆಯುವ ನಿಗದಿತ ದಿನಾಂಕದಂದು ನೇರವಾಗಿ ನೇಮಕಾತಿ ರ್ಯಾಲಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಭಾಗವಹಿಸುವ ಸಂದರ್ಭದಲ್ಲಿ ಮೇಲೆ ನೀಡಲಾದ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
ರ್ಯಾಲಿ ನಡೆಯುವ ಪ್ರಮುಖ ದಿನಾಂಕಗಳು:
| ಪ್ರಮುಖ ಪ್ರದೇಶಗಳು | ರ್ಯಾಲಿ ನಡೆಯುವ ದಿನಾಂಕ |
| ಪಂಜಾಬ್ ಪ್ರದೇಶ | ಮಾರ್ಚ್ 2026 |
| ಉತ್ತರ ಪ್ರದೇಶ | ಮಾರ್ಚ್ 2026 ರಿಂದ ಸೆಪ್ಟೆಂಬರ್ 2026 |
| ಜಮ್ಮು ಮತ್ತು ಕಾಶ್ಮೀರ ಪ್ರದೇಶ | ಜುಲೈ 2026 ರಿಂದ ಆಗಸ್ಟ್ 2026 |
| ದೆಹಲಿ ಮತ್ತು NCR | ಆಗಸ್ಟ್ 2026 |
| ರಾಜಸ್ಥಾನ ಹಾಗೂ ಹರಿಯಾಣ ಪ್ರದೇಶ | ಆಗಸ್ಟ್ 2026 ರಿಂದ ಸೆಪ್ಟೆಂಬರ್ 2026 |
ಆಯ್ಕೆ ಪ್ರಕ್ರಿಯೆ:
- ದಾಖಲಾತಿ ಪರಿಶೀಲನೆ
- ದೈಹಿಕ ಸಾಮರ್ಥ್ಯ ಪರೀಕ್ಷೆ
- ಲಿಖಿತ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಅಭ್ಯರ್ಥಿಗಳು ಈ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿದ್ದರೆ ಮಾತ್ರ ಟೆರಿಟೋರಿಯಲ್ ಆರ್ಮಿ ನೇಮಕಾತಿಯಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾಗುತ್ತಾರೆ.
ಅಂತಿಮ ತೀರ್ಮಾನ:
ಟೆರಿಟೋರಿಯಲ್ ಆರ್ಮಿ ನೇಮಕಾತಿಯು ಒಟ್ಟು 3806 ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್ ಹಾಗೂ ಟ್ರೇಡ್ಸ್ ಮೆನ್ ಹುದ್ದೆಗಳ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ದೇಶ ಸೇವೆಯ ಜೊತೆಗೆ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಅಲ್ಲಿಸಬೇಕೆಂದಿದ್ದರೆ ಈಗಿನಿಂದಲೇ ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- ECIL: ₹55,000/- ವೇತನ! ಪರೀಕ್ಷೆ ಇಲ್ಲದೆ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ಭರ್ಜರಿ ನೇಮಕಾತಿ
- KSRSS: ಸೈನಿಕ್ ಶಾಲೆಯಲ್ಲಿ ಭರ್ಜರಿ ಉದ್ಯೋಗಾವಕಾಶ! 10th + ಡಿಗ್ರಿ ಪಾಸ್, ಏಪ್ರಿಲ್ 6 ಕೊನೆಯ ದಿನಾಂಕ
- PSB Job: ರೂ. 85920/- ವೇತನ! 1000 ಹುದ್ದೆಗಳ ಭರ್ಜರಿ ನೇಮಕಾತಿ 2026, ಏಪ್ರಿಲ್ 20 ಕೊನೆಯ ದಿನಾಂಕ
- RRB ALP ನೇಮಕಾತಿ 2026 – 11,127 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ!
- Udupi CSL: ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ನೇಮಕಾತಿ 2026! PUC + ITI, ಏಪ್ರಿಲ್ 20 ಕೊನೆಯ ದಿನಾಂಕ
Plz application last date announce