ECIL: ₹55,000/- ವೇತನ! ಪರೀಕ್ಷೆ ಇಲ್ಲದೆ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ಭರ್ಜರಿ ನೇಮಕಾತಿ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಉದ್ಯೋಗಾವಕಾಶ! ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಕ್ 2026 ರಲ್ಲಿ ಪ್ರಾಜೆಕ್ಟ್ ಇಂಜಿನಿಯರ್, ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್, ತಾಂತ್ರಿಕ ಅಧಿಕಾರಿ ಹಾಗೂ ಹಿರಿಯ ಕುಶಲಕರ್ಮಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳನ್ನು ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ECIL Recruitment in Kannada

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಭಾರತದಾದ್ಯಂತ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಲ್ಲಿ ಐಟಿಐ, ಡಿಪ್ಲೊಮಾ, ಬಿ.ಇ, ಬಿ.ಟೆಕ್ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಾಜೆಕ್ಟ್ ಇಂಜಿನಿಯರ್, ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್, ತಾಂತ್ರಿಕ ಅಧಿಕಾರಿ ಹಾಗೂ ಹಿರಿಯ ಕುಶಲಕರ್ಮಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಂದು ವರ್ಷಗಳ ಒಪ್ಪಂದದ ಆಧಾರದ ಮೇಲೆ ನೇಮಕಮಾಡಿಕೊಳ್ಳಲಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆಗೆ ಅನುಗುಣವಾಗಿ ನೇಮಕಾತಿಯನ್ನು ನಾಲ್ಕು ವರ್ಷದ ವರೆಗೆ ವಿಸ್ತರಣೆ ಮಾಡಬಹುದಾಗಿದೆ.

ECIL

ಹುದ್ದೆಯ ಕಿರು ವಿಮರ್ಶೆ:

ಆಡಳಿತ ಇಲಾಖೆ ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆ
ನೇಮಕಾತಿ ಸಂಸ್ಥೆ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಯ ಹೆಸರು ಪ್ರಾಜೆಕ್ಟ್ ಇಂಜಿನಿಯರ್, ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್, ತಾಂತ್ರಿಕ ಅಧಿಕಾರಿ ಹಾಗೂ ಹಿರಿಯ ಕುಶಲಕರ್ಮಿ ಹುದ್ದೆಗಳು
ಹುದ್ದೆಯ ಸಂಖ್ಯೆ ಒಟ್ಟು 32 ಹುದ್ದೆಗಳು
ಉದ್ಯೋಗ ಸ್ಥಳ ಅಖಿಲ ಭಾರತ
ಆಯ್ಕೆ ವಿಧಾನ ವಾಕ್ – ಇನ್ ಸಂದರ್ಶನ

ಹುದ್ದೆಯ ಸಂಕ್ಷಿಪ್ತ ನೋಟ:

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 2026ರ ನೇಮಕಾತಿಯಲ್ಲಿ ಒಟ್ಟು 32 ಪ್ರಾಜೆಕ್ಟ್ ಇಂಜಿನಿಯರ್, ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್, ತಾಂತ್ರಿಕ ಅಧಿಕಾರಿ, ಹಿರಿಯ ಕುಶಲಕರ್ಮಿ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಗರಿಷ್ಟ 30 ವರ್ಷದಿಂದ 33 ವರ್ಷ ವಯೋಮಿತಿಯನ್ನು ಹೊಂದಿರುವ ಐಟಿಐ, ಡಿಪ್ಲೊಮಾ, ಬಿ.ಇ, ಬಿ.ಟೆಕ್ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಯ ಸಂಕ್ಷಿಪ್ತ ವಿವರ:

ECIL ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಈ ಕೆಳಗೆ ನೀಡಿರುವಂತೆ ಹಂಚಿಕೆ ಮಾಡಲಾಗಿದೆ.

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ
ಪ್ರಾಜೆಕ್ಟ್ ಇಂಜಿನಿಯರ್ 14 ಹುದ್ದೆಗಳು
ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್ 03 ಹುದ್ದೆಗಳು
ತಾಂತ್ರಿಕ ಅಧಿಕಾರಿ 08 ಹುದ್ದೆಗಳು
ಹಿರಿಯ ಕುಶಲಕರ್ಮಿ 07 ಹುದ್ದೆಗಳು

ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:

  • ಪ್ರಾಜೆಕ್ಟ್ ಇಂಜಿನಿಯರ್:
    • ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಇನ್ನಿತರ ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಬಿ.ಇ ಅಥವಾ ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷದ ಅನುಭವವನ್ನು ಹೊಂದಿರಬೇಕು.
  • ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್:
    • ಅಭ್ಯರ್ಥಿಗಳು ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪೂರ್ಣ ಸಮಯದ ಡಿಪ್ಲೊಮಾವನ್ನು ಹೊಂದಿರಬೇಕು. ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವವನ್ನು ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ:
    • ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಇನ್ನಿತರ ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಬಿ.ಇ ಅಥವಾ ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವವನ್ನು ಹೊಂದಿರಬೇಕು.
  • ಹಿರಿಯ ಕುಶಲಕರ್ಮಿ:
    • ಸಂಬಂಧಿತ ವ್ಯಾಪಾರದಲ್ಲಿ ಪೂರ್ಣ ಸಮಯದ ಐಟಿಐ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರಬೇಕು. ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷದ ಅನುಭವವನ್ನು ಹೊಂದಿರಬೇಕು.

ವಯೋಮಿತಿ ವಿವರ:

  • ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 33 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 30ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಹಿರಿಯ ಕುಶಲಕರ್ಮಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳಿಗೆ: 3 ವರ್ಷ
  • SC/ ST ಅಭ್ಯರ್ಥಿಗಳಿಗೆ: 5 ವರ್ಷ
  • PwBD ಅಬ್ಯಾರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನೇಮಕಾತಿ ಅಧಿಸೂಚನೆಯಲ್ಲಿ ಯಾವುದೇ ಅರ್ಜಿ ಶುಲ್ಕದ ಬಗ್ಗೆ ಉಲ್ಲೇಖಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸದೆ ನೇರವಾಗಿ ವಾಕ್ – ಇನ್ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ.

ವೇತನ ಶ್ರೇಣಿ:

  • ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ ರೂ. 40,000/- ಎರಡನೇ ವರ್ಷ ರೂ. 45,000/- ಮೂರನೇ ವರ್ಷ ರೂ. 50,000/- ನಾಲ್ಕನೇ ವರ್ಷ ರೂ. 55,000/- ವೇತನವನ್ನು ನೀಡಲಾಗುತ್ತದೆ. ಹಾಗೂ ಒಂದು ಬಾರಿ ಉಡುಗೆ ಭತ್ಯೆಯಾಗಿ ರೂ. 8,400 ನೀಡಲಾಗುತ್ತದೆ.
  • ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 25,506
  • ತಾಂತ್ರಿಕ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ ರೂ. 25,000/- ಎರಡನೇ ವರ್ಷ ರೂ. 28,000/- ಮೂರನೇ ವರ್ಷ ರೂ. 31,000/- ನಾಲ್ಕನೇ ವರ್ಷ ರೂ. 31,000/- ವೇತನವನ್ನು ನೀಡಲಾಗುತ್ತದೆ ಹಾಗೂ ಒಂದು ಬಾರಿ ಉಡುಗೆ ಭತ್ಯೆಯಾಗಿ ರೂ. 8,400 ನೀಡಲಾಗುತ್ತದೆ.
  • ಹಿರಿಯ ಕುಶಲಕರ್ಮಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 23,368/- ವೇತನವನ್ನು ನೀಡಲಾಗುತ್ತದೆ.

ಅಗತ್ಯ ದಾಖಲೆಗಳು:

  • ಶೈಕ್ಷಣಿಕ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಅನುಭವ ಪ್ರಮಾಣಪತ್ರ
  • ವಯಸ್ಸಿನ ಪುರಾವೆ
  • ಜಾತಿ ಪ್ರಮಾಣಪತ್ರ
  • ಹಾಗೂ ಇತರೆ ದಾಖಲೆಗಳು

ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆಸಿದ್ಧತೆ ಮಾಡಿಕೊಳ್ಳುವುದು ಹೇಗೆ?

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ECIL ಅಧಿಕೃತ ವೆಬ್ಸೈಟ್ https://esic.gov.in/ ಗೆ ಭೇಟಿ ನೀಡಿ ನೇಮಕಾತಿ ವಿಭಾಗವನ್ನು ತೆರೆದು ಹುದ್ದೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆದುಕೊಂಡು ಅವುಗಳ ಪ್ರಿಂಟ್ ತಗೆದುಕೊಳ್ಳಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ, ವೃತ್ತಿಪರ ವಿವರಗಳನ್ನು ಭರ್ತಿ ಮಾಡಿ.
  • ನಂತರ ವೃತ್ತಿಪರ ರೆಸೂಮ್ ಅನ್ನು ಸಿದ್ಧಪಡಿಸಿಕೊಳ್ಳಿ.
  • ನಂತರ ನಿಮ್ಮ ಸಹಿ, ಪಾಸ್ಪೋರ್ಟ್ ಅಳತೆಯ ಫೋಟೋ, SSLC ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿ, ಪದವಿ ಪ್ರಮಾಣಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ಈ ಎಲ್ಲಾ ಡಾಕ್ಯುಮೆಂಟ್ಸ್ ಹಾಗೂ ಅಪ್ಲಿಕೇಶನ್ ಫಾರ್ಮ್ ಅನ್ನು ಜಾಗರೂಕತೆಯಿಂದ ಇಟ್ಟುಕೊಂಡು ಸಂದರ್ಶನ ನಡೆಯುವ ದಿನದಂದು ತೆಗೆದುಕೊಂಡು ಹೋಗಿ.

ವಾಕ್ – ಇನ್ ಸಂದರ್ಶನ ನಡೆಯುವ ದಿನಾಂಕ ಮತ್ತು ಸ್ಥಳ:

ಪ್ರಮುಖ ವಲಯಗಳು ವಾಕ್ – ಇನ್ ಸಂದರ್ಶನ ನಡೆಯುವ ದಿನಾಂಕಗಳು ವಾಕ್ – ಇನ್ ಸಂದರ್ಶನ ನಡೆಯುವ ದಿನಾಂಕ
ಬೆಂಗಳೂರು (ದಕ್ಷಿಣ ವಲಯ)09-04-2026ECIL ವಲಯ ಕಚೇರಿ, 2 ನೇ ಮಹಡಿ,
LIC ಕಟ್ಟಡ, ಸಂಪಿಗೆ ರಸ್ತೆ, ಮಲ್ವೇಶ್ವರಂ, ಬೆಂಗಳೂರು – 560 003
ಮುಂಬೈ (ಪಶ್ಚಿಮ ವಲಯ)09-04-2026ECIL ವಲಯ ಕಚೇರಿ, ವೀರ ಸಾವರ್ಕರ್ ಮಾರ್ಗ, ದಾದರ್, ಮುಂಬೈ – 400 028
ನವದೆಹಲಿ (ಉತ್ತರ ವಲಯ)09-04-2026ECIL ವಲಯ ಕಚೇರಿ, DDA ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್, A ಬ್ಲಾಕ್, ರಿಂಗ್ ರಸ್ತೆ, ನಾರೈನ, ನವದೆಹಲಿ – 110 028
ಚೆನ್ನೈ (ದಕ್ಷಿಣ ವಲಯ)18-04-2026ECIL ವಲಯ ಕಚೇರಿ, ಎಕನಾಮಿಕ್ಸ್ ಹೌಸ್, ಇಂಡಸ್ಟ್ರಿಯಲ್ ಎಸ್ಟೇಟ್, ಗಿಂಡಿ, ಚೆನ್ನೈ – 600 032

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಮೇಲೆ ಶೇಕಡಾ 20% ಅಂಕಗಳನ್ನು ಹಾಗೂ ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಮೇಲೆ ಶೇಕಡಾ 30% ಅಂಕಗಳನ್ನು ಹಾಗೂ ವೈಯಕ್ತಿಕ ಸಂದರ್ಶನದಲ್ಲಿ ಗಳಿಸಿದ ಅಂಕವನ್ನು ಶೇಕಡಾ 50% ಗೆ ಕನ್ವರ್ಟ್ ಮಾಡಿ ಈ ಮೂರು ಹಂತಗಳನ್ನು ಒಟ್ಟುಗೂಡಿಸಿದಾಗ ಹೆಚ್ಚು ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ.

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ಪ್ರಾಜೆಕ್ಟ್ ಇಂಜಿನಿಯರ್, ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್, ತಾಂತ್ರಿಕ ಅಧಿಕಾರಿ, ಹಿರಿಯ ಕುಶಲಕರ್ಮಿ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ನೀವೇನಾದರೂ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ಅರ್ಹತಾ ಮಾನದಂಡವನ್ನು ಪೂರೈಸಿದರೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ವಾಕ್ ಇನ್ ಸಂದರ್ಶನಕ್ಕೆ ಭಾಗವಹಿಸಿ.


ಇತರೆ ಪ್ರಮುಖ ಲಿಂಕುಗಳು:

1 thought on “ECIL: ₹55,000/- ವೇತನ! ಪರೀಕ್ಷೆ ಇಲ್ಲದೆ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ಭರ್ಜರಿ ನೇಮಕಾತಿ”

Leave a Comment