App: ನಮಸ್ಕಾರ ಸ್ನೇಹಿತರೆ, ನಿಮಗೆ 18 ವರ್ಷ ಪೂರ್ಣಗೊಂಡಿದೆಯೇ? ಇನ್ನು ಕೂಡ ವೋಟರ್ ಐಡಿ ಕಾರ್ಡ್ ಮಾಡಿಸಿಕೊಂಡಿಲ್ಲವೇ? ವೋಟರ್ ಐಡಿ ಮಾಡಿಸಿಕೊಳ್ಳಲು ಪದೇ ಪದೇ ಕಚೇರಿಗೆ ಅಲೆದಾಡಬೇಕಲ್ಲಾ ಅಂತ ಯೋಚಿಸುತ್ತಿದ್ದೀರಾ? ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯ ಇಲ್ಲ. ನಿಮಗಾಗಿ ಭಾರತೀಯ ಚುನಾವಣಾ ಆಯೋಗವು ವೋಟರ್ ಐಡಿಗೆ ಅಪ್ಲೈ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಸುಲಭಗೊಳಿಸಿದ್ದು, ಅರ್ಹ ನಾಗರೀಕರು ಮನೆಯಲ್ಲಿಯೇ ಕುಳಿತು ಕೆಲವೇ ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ವೋಟರ್ ಐಡಿಗೆ ಅಪ್ಲಿಕೇಶನ್ ಹಾಕಬಹುದು.
ದೇಶದಲ್ಲಿ ಉತ್ತಮ ಆಡಳಿತ ಮತ್ತು ಜನಪರ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ನಾಗಿರೀಕನಿಗೂ ಇದೆ. ಆದರೆ ಈ ಹಕ್ಕನ್ನು ಚಲಾಯಿಸಲು ನಾಗರೀಕರು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು.
18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ನಾಗರೀಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಪ್ರಸ್ತುತ ಲೇಖನದಲ್ಲಿ ಹೊಸದಾಗಿ ವೋಟರ್ ಐಡಿ ಮಾಡಿಸಿಕೊಳ್ಳುವ ವಿಧಾನ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ, ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಅಪ್ಲಿಕೇಶನ್ ಹಾಕಬಹುದು. * 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರೀಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು. |
ವೋಟರ್ ಐಡಿ ಎಂದರೇನು?
ವೋಟರ್ ಐಡಿ ಎನ್ನುವುದು ಭಾರತೀಯ ಚುನಾವಣಾ ಆಯೋಗದಿಂದ ನೀಡಲಾಗುವ ಅಧಿಕೃತ ಗುರುತಿನ ದಾಖಲೆಗಳಾಗಿವೆ. ಈ ಒಂದು ವೋಟರ್ ಐಡಿಯು ಮತ ಚಲಾಯಿಸುವ ಹಕ್ಕನ್ನು ದೃಢೀಕರಿಸುವ ಪ್ರಮುಖ ದಾಖಲೆಯಾಗಿದೆ. ಜೊತೆಗೆ ವಿವಿಧ ಸರ್ಕಾರಿ ಅಥವಾ ಖಾಸಗಿ ಸೇವೆಗಳನ್ನು ಪಡೆಯಲು ಸಹ ಮುಖ್ಯ ದಾಖಲೆಗಳಾಗಿವೆ. 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ವೋಟರ್ ಐಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಮತದಾರರ ಗುರುತಿನ ಚೀಟಿಯ ಮಹತ್ವ:
- ವೋಟರ್ ಐಡಿ ಎನ್ನುವುದು ಪ್ರತಿಯೊಬ್ಬ ನಾಗರೀಕನ ಮತದಾನದ ಹಕ್ಕನ್ನು ದೃಢೀಕರಿಸುವ ಪ್ರಮುಖ ದಾಖಲೆಯಾಗಿದ್ದು, ಉತ್ತಮ ಆಡಳಿತ ಮತ್ತು ಜನಪರ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳಲು ಸಹಾಯಮಾಡುವ ಪ್ರಮುಖ ಸಾಧನವಾಗಿದೆ.
- ಯಾವುದೇ ಒಬ್ಬ ನಾಗರೀಕನು ಸರ್ಕಾರಿ ಅಥವಾ ಖಾಸಗಿ ಸೇವೆಯನ್ನು ಪಡೆದುಕೊಳ್ಳಲು ಪ್ರಮುಖ ದಾಖಲೆಯಾಗಿ ವೋಟರ್ ಐಡಿಯನ್ನು ಬಳಸಿಕೊಳ್ಳಬಹುದು.
- ಸರಿಯಾದ ಮತದಾರರ ನೋಂದಣಿಯು ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ನೆರವಾಗುತ್ತದೆ.
ಹೊಸದಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು
- ನಾಗರೀಕರು ಭಾರತೀಯ ಪ್ರಜೆಯಾಗಿರಬೇಕು.
- ಅಭ್ಯರ್ಥಿಗಳು 18 ವರ್ಷ ಪೂರ್ಣಗೊಳಿಸಿರಬೇಕು ಅಥವಾ ಅದಕ್ಕಿಂತ ಹೆಚ್ಚಿನ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರು ಯಾವ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಬಯಸುತ್ತಾರೋ ಆ ಕ್ಷೇತ್ರದಲ್ಲಿ ವಾಸವಿರಬೇಕು.
- ಈ ಮೊದಲು ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಣಿ ಮಾಡಿಸಿಕೊಂಡಿರಬಾರದು.
- ವೋಟರ್ ಐಡಿ ಮಾಡಿಸಲು ಸರಿಯಾದ ದಾಖಲೆಗಳನ್ನು ಹಾಗೂ ವಿವರಗಳನ್ನು ನೀಡಬೇಕು.
- ಕಾನೂನು ಬದ್ದವಾಗಿ ಮತದಾನದ ಹಕ್ಕಿಗೆ ಬದ್ಧನಾಗಿರಬೇಕು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಡ್ರೈವಿಂಗ್ ಲೈಸನ್ಸ್ (ಅನ್ವಹಿಸಿದರೆ)
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜನನ ಪ್ರಮಾಣಪತ್ರ
- SSLC ಅಂಕಪಟ್ಟಿ
- ಪೋಷಕರ ವೋಟರ್ ಐಡಿ
- ವಾಸಸ್ಥಳ ದೃಢೀಕರಣ ಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
ಆನ್ಲೈನ್ ಮೂಲಕ ಹೊಸದಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಹಂತವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಿ.
- ಅಭ್ಯರ್ಥಿಗಳು ಭಾರತೀಯ ಚುನಾವಣಾ ಆಯೋಗದ ಅಧಿಕೃತ ಮತದಾರರ ಸೇವಾ ಪೋರ್ಟಲ್ ಗೆ ಭೇಟಿ ನೀಡಿ.
- ಮೊಬೈಲ್ ಸಂಖ್ಯೆಯ ಹಾಗೂ ಇಮೇಲ್ ಐಡಿಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ ನಂತರ ಮೊಬೈಲ್ ಗೆ ಬರುವ OTP ನಮೂದಿಸಿ ಲಾಗಿನ್ ಆಗಿ.
- ನ್ಯೂ ರಿಜಿಸ್ಟ್ರೇಷನ್ ಫಾರ್ ಜನರಲ್ ಎಲೆಕ್ಟರ್ಸ್ ಆಯ್ಕೆಯನ್ನು ಆರಿಸಿಕೊಳ್ಳಿ.
- ನಂತರ ನಿಮ್ಮ ಪೂರ್ಣ ಹೆಸರು, ಜನ್ಮ ದಿನಾಂಕ, ಲಿಂಗ, ತಂದೆಯ ಅಥವಾ ತಾಯಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಅಡಿಯನ್ನು ನಮೂದಿಸಿ.
- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜನನ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ಎಲ್ಲ ಮಾಹಿತಿಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
- ನಂತರ ಅರ್ಜಿಯ ರೆಫರೆನ್ಸ್ ನಂಬರ್ ಸಿಗುತ್ತೆ. ನಂತರ ನಿಮ್ಮ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನಂತರ ನಿಮ್ಮ ಅರ್ಜಿ ಅನುಮೋದನೆಯಾದ ಬಳಿಕ ನಿಮ್ಮ ಹೆಸರು ಮತದಾರರ ಪಟ್ಟಿಗೆ ಸೇರುತ್ತದೆ. ನಂತರ ನಿಮಗೆ EPIC ನಂಬರ್ ಅನ್ನು ನೀಡಲಾಗುತ್ತದೆ.
ಅರ್ಜಿ ಸ್ಥಿತಿಯನ್ನು ಪರಿಶೀಲಿಸುವ ವಿಧಾನ:
- ಅಭ್ಯರ್ಥಿಗಳು ಭಾರತೀಯ ಚುನಾವಣಾ ಆಯೋಗದ ಅಧಿಕೃತ ಮತದಾರರ ಸೇವಾ ಪೋರ್ಟಲ್ ಗೆ ಭೇಟಿ ನೀಡಿ.
- ವೆಬ್ಸೈಟ್ ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ನೀವು ಅರ್ಜಿ ಸಲ್ಲಿಸುವಾಗ ನೀಡಲಾದ ರೆಫರೆನ್ಸ್ ನಂಬರ್ ಅನ್ನು ನಮೂದಿಸಿ.
- ಅಲ್ಲಿ ಕೇಳಲಾಗುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನಂತರ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ನೀವು ಪರದೆಯ ಮೇಲೆ ಕಾಣಬಹುದು.
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು:
- ನಿಮ್ಮ ಹೆಸರನ್ನು ಆಧಾರ್ ಕಾರ್ಡ್ ನಲ್ಲಿರುವಂತೆ ನಮೂದಿಸಿ.
- ಅರ್ಜಿ ಸಲ್ಲಿಸುವಾಗ ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆಯನ್ನು ನೀಡಿ.
- ಅರ್ಜಿ ಸಲ್ಲಿಸುವಾಗ ನೀಡಲಾಗುವ ದಾಖಲೆಗಳು ಸರಿಯಾಗಿರಲಿ.
- ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವಾಗ ಸರಿಯಾದ ವಿವರಗಳನ್ನು ಭರ್ತಿ ಮಾಡಿ.
- ಅರ್ಜಿ ಸಲ್ಲಿಸುವಾಗ ಸಿಗುವ ರೆಫರೆನ್ಸ್ ನಂಬರ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಅಂತಿಮ ತೀರ್ಮಾನ:
ಮತದಾರರ ಗುರುತಿನ ಚೀಟಿ ಎನ್ನುವುದು ಕೇವಲ ಒಂದು ಗುರುತಿನ ದಾಖಲೆಯಲ್ಲ, ಅದು ಪ್ರತಿಯೊಬ್ಬ ಭಾರತೀಯ ನಾಗರಿಕನ ಪ್ರಜಾಪ್ರಭುತ್ವದ ಹಕ್ಕು ಮತ್ತು ಜವಾಬ್ದಾರಿಯ ಸಂಕೇತವಾಗಿದೆ. 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು ವೋಟರ್ ಐಡಿ ಪಡೆಯುವುದು ಅತ್ಯಂತ ಮುಖ್ಯವಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಹೊಸದಾಗಿ ಮತದಾರರ ಗುರುತಿನ ಚೀಟಿ ಪಡೆಯುವ ಪ್ರಕ್ರಿಯೆ ಆನ್‌ಲೈನ್ ಮೂಲಕ ಅತ್ಯಂತ ಸುಲಭ ಮತ್ತು ವೇಗವಾಗಿದೆ. ಸರಿಯಾದ ದಾಖಲೆಗಳನ್ನು ಸಿದ್ಧಪಡಿಸಿ, ನಿಖರವಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿದರೆ ಯಾವುದೇ ತೊಂದರೆಯಿಲ್ಲದೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Parihaara : ಬರಗಾಲದ ನಡುವೆ ರೈತರಿಗೆ ಸಿಹಿ ಸುದ್ದಿ! ಬೆಳೆ ವಿಮೆ ಅಂತಿಮ ಕಂತು ಬಿಡುಗಡೆ – ಮುಂದಿನ 10 ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆ
- Tractor: ಭೂಮಿಪುತ್ರ ನರ್ಸರಿಯಿಂದ ರೈತರಿಗೆ ಭರ್ಜರಿ ಕೊಡುಗೆ! ಪ್ರತಿ ರೈತರಿಗೆ ಸಿಗಲಿದೆ ಉಚಿತ ಟ್ರ್ಯಾಕ್ಟರ್ । ಇಂದೇ ಅಪ್ಲೈ ಮಾಡಿ
- 80000: ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಭಾರೀ ನೆರವು! ಇಂದೇ ಅಪ್ಲೈ ಮಾಡಿ
- Free Money: ನಿಮ್ಮ ಮನೆಯಲ್ಲಿ ಐದು ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ, ಸರ್ಕಾರದಿಂದ ಸಿಗುತ್ತೆ 5 ಲಕ್ಷ ಸಹಾಯಧನ
- Free: ಏರ್ಟೆಲ್ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್! 3 ತಿಂಗಳ ಉಚಿತ ರೀಚಾರ್ಜ್ ಆಫರ್ । ಇಲ್ಲಿದೆ ಸಂಪೂರ್ಣ ಮಾಹಿತಿ
- Name: ಮೊಬೈಲ್ ಇದ್ದರೆ ಸಾಕು! ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆ ಕೆಲವೇ ನಿಮಿಷಗಳಲ್ಲಿ