Name: ಮೊಬೈಲ್ ಇದ್ದರೆ ಸಾಕು! ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆ ಕೆಲವೇ ನಿಮಿಷಗಳಲ್ಲಿ

Name: ಇನ್ನು ಮುಂದೆ ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾಯಿಸಿಕೊಳ್ಳಲು ಬೆಸ್ಕಾಂ ಕಚೇರಿಗೆ ಅಲೆದಾಡುವ ದಿನಗಳು ಮುಗಿದಿವೆ. ರಾಜ್ಯದ ಲಕ್ಷಾಂತರ ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ಬೆಸ್ಕಾಂ ಮಹತ್ವದ ಡಿಜಿಟಲ್ ಸೇವೆಯನ್ನು ಜಾರಿಗೆ ತಂದಿದ್ದು, ಈಗ ಮನೆಯಲ್ಲೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ವಿದ್ಯುತ್ ಸಂಪರ್ಕದ ಹೆಸರನ್ನು ಬದಲಾಯಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಕೆಲವೇ ನಿಮಿಷಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಈ ವ್ಯವಸ್ಥೆಯಿಂದ ಸಮಯ, ಹಣ ಹಾಗೂ ಶ್ರಮ ಮೂರನ್ನೂ ಉಳಿಸಿಕೊಳ್ಳಬಹುದು.


ಇದುವರೆಗೆ ಮನೆ ಖರೀದಿ, ಆಸ್ತಿ ವರ್ಗಾವಣೆ ಅಥವಾ ವಾರಸುದಾರರ ಹೆಸರಿಗೆ ವಿದ್ಯುತ್ ಸಂಪರ್ಕವನ್ನು ಬದಲಾಯಿಸಬೇಕಾದರೆ ಬೆಸ್ಕಾಂ ಕಚೇರಿಗೆ ಹಲವು ಬಾರಿ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ದಾಖಲೆಗಳ ಪರಿಶೀಲನೆ, ಅರ್ಜಿ ಸಲ್ಲಿಕೆ ಹಾಗೂ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತಿತ್ತು. ಇದೀಗ ಆ ಎಲ್ಲಾ ಹಂತಗಳನ್ನು ಡಿಜಿಟಲ್ ರೂಪಕ್ಕೆ ತರಲಾಗಿದ್ದು, ಗ್ರಾಹಕರು ಯಾವುದೇ ತೊಂದರೆಯಿಲ್ಲದೆ ತಮ್ಮ ಮೊಬೈಲ್‌ನಿಂದಲೇ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಹಾಗಿದ್ದರೆ ಈ ಹೊಸ ಆನ್‌ಲೈನ್ ಸೇವೆಯಿಂದ ಗ್ರಾಹಕರಿಗೆ ಯಾವೆಲ್ಲ ಪ್ರಯೋಜನಗಳು ದೊರೆಯಲಿವೆ? ವಿದ್ಯುತ್ ಬಿಲ್‌ನಲ್ಲಿನ ಹೆಸರನ್ನು ಬದಲಾಯಿಸಲು ಯಾವ ದಾಖಲೆಗಳು ಅಗತ್ಯ? ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವೇನು? ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರಗತಿಯನ್ನು ಹೇಗೆ ಪರಿಶೀಲಿಸಬಹುದು? ಹೆಸರು ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕೇ? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

Name

ಪ್ರಮುಖ ಹೈಲೈಟ್ ಪಾಯಿಂಟ್ಸ್:

* ಬೆಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಬೆಸ್ಕಾಂ ಸಂಸ್ಥೆಯು ಆನ್ಲೈನ್ ಪೋರ್ಟಲ್ ಓಪನ್ ಮಾಡಿದೆ.
* ಬೆಸ್ಕಾಂ ಗ್ರಾಹಕರು ಆನ್ಲೈನ್ ಮೂಲಕ ಸುಲಭವಾಗಿ ತಮ್ಮ ಮನೆಯಲ್ಲಿಯೇ ಕುಳಿತು ವಿದ್ಯುತ್ ಬಿಲ್ ನಲ್ಲಿ ತನ್ನ ಹೆಸರು ಬದಲಾಯಿಸಿಕೊಳ್ಳಬಹುದು.
* ಈ ಹಿಂದೆ ವಿದ್ಯುತ್ ಬಿಲ್ ನಲ್ಲಿನ ಹೆಸರು ಬದಲಾವಣೆಗಾಗಿ ಕಚೇರಿಗೆ ಅಲೆದಾಡುತ್ತಿದ್ದ ಗ್ರಾಹಕರು ಇನ್ನು ಮುಂದೆ ತಮ್ಮ ಫೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಹೆಸರನ್ನು ಬದಲಾಯಿಸಿಕೊಳ್ಳಬಹುದು.
* ಗ್ರಾಗ್ರಾಹಕರು ಹೆಸರು ಬದಲಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ನಂತರ ಅದರ ಪ್ರಕ್ರಿಯೆಯನ್ನು ಆನ್ಲೈನ್ ವೆಬ್ಸೈಟ್ ನಲ್ಲಿಯೇ ಪರಿಶೀಲಿಸಬಹುದು.

ವಿದ್ಯುತ್ ಬಿಲ್ ನಲ್ಲಿ ಹೆಸರು ಬದಲಾಯಿಸುವುದು ಏಕೆ ಮುಖ್ಯ?

ಆಸ್ತಿ ಅಥವಾ ಮನೆಯ ಮಾಲೀಕತ್ವ ಬದಲಾದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕದ ದಾಖಲೆಯಲ್ಲಿರುವ ಹೆಸರನ್ನು ಕೂಡ ನವೀಕರಿಸುವುದು ಅತ್ಯಂತ ಮುಖ್ಯವಾಗಿದೆ. ಹೊಸ ಮಾಲೀಕರ ಹೆಸರಿನಲ್ಲಿ ವಿದ್ಯುತ್ ಬಿಲ್ ಇದ್ದರೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿರುತ್ತವೆ. ಮುಂದೆ ಆಸ್ತಿ ಮಾರಾಟ, ಬ್ಯಾಂಕ್ ಸಾಲ ಪಡೆಯುವುದು, ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಇತರ ಅಧಿಕೃತ ಕೆಲಸಗಳ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ.

ಬಹುತೇಕ ಸಂದರ್ಭಗಳಲ್ಲಿ ಮನೆ ಖರೀದಿಸಿದ ನಂತರವೂ ವಿದ್ಯುತ್ ಬಿಲ್ ಹಳೆಯ ಮಾಲೀಕರ ಹೆಸರಿನಲ್ಲಿಯೇ ಮುಂದುವರಿಯುತ್ತದೆ. ಇದರಿಂದ ಭವಿಷ್ಯದಲ್ಲಿ ಮಾಲೀಕತ್ವದ ಬಗ್ಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಮನೆ ಖರೀದಿ, ವಾರಸುದಾರರಿಗೆ ಆಸ್ತಿ ವರ್ಗಾವಣೆ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ವಿದ್ಯುತ್ ಸಂಪರ್ಕ ಬದಲಾವಣೆ ಮಾಡಿದ ತಕ್ಷಣವೇ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ.

ವಿದ್ಯುತ್ ಬಿಲ್‌ನಲ್ಲಿ ಸರಿಯಾದ ಹೆಸರು ದಾಖಲಾಗಿರುವುದರಿಂದ ಗ್ರಾಹಕರಿಗೆ ತಮ್ಮ ಸಂಪರ್ಕದ ಮೇಲೆ ಅಧಿಕೃತ ದಾಖಲೆ ಸಿಗುತ್ತದೆ. ಅಲ್ಲದೆ ಬೆಸ್ಕಾಂನಿಂದ ಮುಂದಿನ ದಿನಗಳಲ್ಲಿ ಯಾವುದೇ ಸೇವೆ ಪಡೆಯುವಾಗ ದಾಖಲೆ ಪರಿಶೀಲನೆ ಸುಲಭವಾಗುತ್ತದೆ. ಹೀಗಾಗಿ ಆಸ್ತಿ ಮಾಲೀಕತ್ವ ಬದಲಾದ ಕೂಡಲೇ ವಿದ್ಯುತ್ ಬಿಲ್‌ನಲ್ಲಿನ ಹೆಸರನ್ನು ಬದಲಾಯಿಸಿಕೊಳ್ಳುವುದು ಸುರಕ್ಷಿತ ಮತ್ತು ಅಗತ್ಯ ಕ್ರಮವಾಗಿದೆ.

ಬೆಸ್ಕಾಂ ಸಂಸ್ಥೆಯು ಆನ್ಲೈನ್ ಪೋರ್ಟಲ್ ಓಪನ್ ಮಾಡಿರುವುದರಿಂದ ಗ್ರಾಹಕರಿಗಾದ ಪ್ರಯೋಜನಗಳೇನು?

  • ಬೆಸ್ಕಾಂ ಗ್ರಾಹಕರು ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ವಿದ್ಯುತ್ ಬಿಲ್ ನಲ್ಲಿನ ಹಳೆಯ ಮಾಲೀಕರ ಹೆಸರನ್ನು ಸುಲಭವಾಗಿ ಬದಲಾಯಿಸುವ ಮೂಲಕ ಸಮಯವನ್ನು ಉಳಿಸಬಹುದು ಹಾಗೂ ಕಚೇರಿಗೆ ಅಲೆದಾಡುವ ತಲೆಬಿಸಿ ಇರುವುದಿಲ್ಲ.
  • ಬೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್ ನಲ್ಲಿನ ಹಳೆಯ ಮಾಲೀಕರ ಹೆಸರನ್ನು ಬದಲಾಯಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಗತಿಯನ್ನು ಸುಲಭವಾಗಿ ಮೊಬೈಲ್ ಮೂಲಕವೇ ಪರಿಶೀಲಿಸಬಹುದಾಗಿದೆ.
  • ಈ ಮೊದಲು ಕಚೇರಿ ಸಮಯದಲ್ಲಿ ಮಾತ್ರ ಗ್ರಾಹಕರು ವಿದ್ಯುತ್ ಬಿಲ್ ನಲ್ಲಿ ಹೆಸರನ್ನು ಬದಲಾಯಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತಹ ಸಮಯಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅರ್ಜಿಯ ಪ್ರತಿ ಹಂತದ ಮಾಹಿತಿಯು ಗ್ರಾಹಕರಿಗೆ ಲಭ್ಯವಾಗುವುದರಿಂದ ಭರ್ತಿ ಮಾಡುವ ವಿವರಗಳಲ್ಲಿ ಹಾಗೂ ಅಪ್ಲೋಡ್ ಮಾಡುವ ದಾಖಲೆಗಳಲ್ಲಿ ಯಾವುದೇ ತಪ್ಪುಗಳಾಗುವುದಿಲ್ಲ ಬದಲಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸ್ಪಷ್ಟವಾಗಿರುತ್ತದೆ.

ಯಾವ ಸಂದರ್ಭಗಳಲ್ಲಿ ವಿದ್ಯುತ್ ಬಿಲ್ ನಲ್ಲಿನ ಹೆಸರನ್ನು ಬದಲಾಯಿಸುವುದು ಕಡ್ಡಾಯ?

  • ಹೊಸ ಮನೆ ಅಥವಾ ಫ್ಲಾಟ್ ಖರೀದಿಸಿದಾಗ.
  • ನೋಂದಾಯಿತ ಮಾರಾಟ ಪತ್ರದ ಮೂಲಕ ಆಸ್ತಿ ವರ್ಗಾವಣೆಯಾದಾಗ.
  • ವಾರಸುದಾರರ ಹೆಸರಿಗೆ ಆಸ್ತಿ ಬಂದಾಗ.
  • ಕುಟುಂಬ ಸದಸ್ಯರ ಹೆಸರಿಗೆ ಸಂಪರ್ಕ ವರ್ಗಾಯಿಸಬೇಕಾದಾಗ.
  • ಹಳೆಯ ಮಾಲೀಕರ ಹೆಸರಿನಲ್ಲೇ ವಿದ್ಯುತ್ ಬಿಲ್ ಬರುತ್ತಿರುವಾಗ.
  • ನ್ಯಾಯಾಲಯದ ಆದೇಶ ಅಥವಾ ಇತರ ಕಾನೂನುಬದ್ಧ ಕಾರಣಗಳಿಂದ ಹೆಸರು ಬದಲಾವಣೆ ಅಗತ್ಯವಾದಾಗ.

ಅಗತ್ಯವಾದ ದಾಖಲೆಗಳು:

ಬೆಸ್ಕಾಂ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ನಲ್ಲಿರುವ ಹಳೆಯ ಮಾಲೀಕರ ಹೆಸರನ್ನು ಆನ್ಲೈನ್ ವೆಬ್ಸೈಟ್ ಮೂಲಕ ಬದಲಾಯಿಸಿಕೊಳ್ಳಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಹೊಂದಿರಬೇಕು.

  • ಆಧಾರ್ ಕಾರ್ಡ್
  • ಇತ್ತೀಚಿನ ವಿದ್ಯುತ್ ಬಿಲ್
  • ಮಾಲೀಕತ್ವದ ದಾಖಲೆ
  • ವಿಳಾಸ ಪುರಾವೆ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
  • ಹಾಗೂ ಇತರೆ ಅಗತ್ಯ ದಾಖಲೆಗಳು

ಮೊಬೈಲ್ ಮೂಲಕ ಸುಲಭವಾಗಿ ಹೆಸರು ಬದಲಾಯಿಸುವ ವಿಧಾನ:

ವಿದ್ಯುತ್ ಬಿಲ್ ನಲ್ಲಿರುವ ಹಳೆಯ ಮಾಲೀಕರ ಹೆಸರನ್ನು ಬದಲಾಯಿಸಲು ಇಚ್ಛಿಸುವವರು ಈ ಕೆಳಗಿನ ಹಂತವನ್ನು ಅನುಸರಿಸಿ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

  • ಮೊದಲು ಬೆಸ್ಕಾಂ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಇತರೆ ಸೇವೆಗಳು ವಿಭಾಗದಲ್ಲಿರುವ ನೇಮ್ ಚೇಂಜ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಯೂಸರ್ ಐಡಿ, ಪಾಸ್ ವರ್ಡ್ ಬಳಸಿ ಹಾಗೂ ಕ್ಯಾಪ್ಚ ವನ್ನು ನಮೂದಿಸಿ ಲಾಗಿನ್ ಆಗಿ.
  • ಅಲ್ಲಿ ಕೇಳಲಾಗುವ ಎಲ್ಲ ವೈಯಕ್ತಿಕ ವಿವರ, ವಿದ್ಯುತ್ ಬಿಲ್ ನಲ್ಲಿ ಇನ್ನು ಮುಂದೆ ಯಾರ ಹೆಸರು ಇರಬೇಕು ಅವರ ಹೆಸರನ್ನು ಭರ್ತಿ ಮಾಡಿ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಭರ್ತಿ ಮಾಡಿರುವ ಎಲ್ಲ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.

ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?

ಬೆಸ್ಕಾಂ ಗ್ರಾಹಕರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಮತ್ತೆ ಕಚೇರಿಗೆ ಹೋಗುವ ಅಗತ್ಯವಿಲ್ಲ. ಬೆಸ್ಕಾಂ ವೆಬ್‌ಸೈಟ್‌ನಲ್ಲಿಯೇ ಅಪ್ಲಿಕೇಶನ್ ಸ್ಟೇಟಸ್ ಆಯ್ಕೆಯ ಮೂಲಕ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಸಾರ್ವಜನಿಕ ಸೇವೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾಯಿಸಲು ಇನ್ನು ಮುಂದೆ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಅರ್ಜಿ ಸಲ್ಲಿಸಿ, ಅದರ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸುವ ಅವಕಾಶ ದೊರೆತಿರುವುದು ಗ್ರಾಹಕರಿಗೆ ನಿಜಕ್ಕೂ ಸಿಹಿಸುದ್ದಿಯಾಗಿದೆ. ನಿಮ್ಮ ವಿದ್ಯುತ್ ಬಿಲ್ ಇನ್ನೂ ಹಳೆಯ ಮಾಲೀಕರ ಹೆಸರಿನಲ್ಲಿದ್ದರೆ, ವಿಳಂಬ ಮಾಡದೆ ಈ ಆನ್‌ಲೈನ್ ಸೌಲಭ್ಯವನ್ನು ಬಳಸಿಕೊಂಡು ಹೆಸರು ಬದಲಾಯಿಸಿಕೊಳ್ಳಿ


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment