Sewing: ಮಹಿಳೆಯರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಮಹಿಳಾ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಫ್ರೀಆಗಿ ಎಂಬ್ರಾಯ್ಡರಿ ಮಷೀನ್, ಹೊಲಿಗೆ ಯಂತ್ರ, ಕುರ್ಚಿ, ಟೇಬಲ್ ಸಿಕ್ತಾ

Sewing: ಮಹಿಳೆಯರೇ, ನೀವೇನಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಸ್ವಾವಲಂಬಿಯಾಗಿ ಜೀವನ ನಡೆಸುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಕರ್ನಾಟಕ ಸರ್ಕಾರವು ಪ್ರತಿ ಮಹಿಳೆಯರಿಗೂ ಫ್ರೀ ಆಗಿ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಮಷೀನ್, ಟೇಬಲ್ ಹಾಗೂ ಕುರ್ಚಿ ಕೊಡುವುದಕ್ಕೆ ಆನ್ಲೈನ್ ಅರ್ಜಿಯನ್ನು ಆರಂಭಿಸಿದೆ. ಗ್ರಾಮೀಣ ಭಾಗದ ಮಹಿಳೆಯರಿಂದ ಹಿಡಿದು ನಗರ ಭಾಗದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.


ಉದ್ಯೋಗಕ್ಕಾಗಿ ಇತರರನ್ನು ಅವಲಂಬಿಸದೆ, ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಎಂಬ ಉದ್ದೇಶದಿಂದ ಅನೇಕ ಮಹಿಳೆಯರು ಹೊಲಿಗೆ ಮತ್ತು ಎಂಬ್ರಾಯ್ಡರಿ ಕ್ಷೇತ್ರವನ್ನು ಆಯ್ಕೆ ಮಾಡುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾದ ಈ ಉದ್ಯಮವು ಉತ್ತಮ ಆದಾಯ ಗಳಿಸಲು ಸಹ ನೆರವಾಗುತ್ತದೆ.

ಇದೇ ಕಾರಣದಿಂದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಯಂತ್ರ, ಟೇಬಲ್ ಹಾಗೂ ಕುರ್ಚಿಗಳನ್ನು ವಿತರಿಸಲು ರಾಜ್ಯ ಸರ್ಕಾರವು ಮುಂದಾಗಿದ್ದು, ಈ ಯೋಜನೆಯಿಂದ ಮಹಿಳೆಯರು ಮನೆಯಲ್ಲಿಯೇ ಸ್ವಂತ ಉದ್ಯೋಗ ಆರಂಭಿಸಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

Sewing

ಯೋಜನೆಯ ಅವಲೋಕನ:

ಅನುಷ್ಠಾನ ಸರ್ಕಾರ ರಾಜ್ಯ ಸರ್ಕಾರ
ಯೋಜನೆಯ ಹೆಸರು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಮಷೀನ್, ಟೇಬಲ್, ಕುರ್ಚಿ ವಿತರಣೆ
ಅರ್ಹ ಫಲಾನುಭವಿಗಳು ಮಹಿಳಾ ಅಭ್ಯರ್ಥಿಗಳು
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ
ಯೋಜನೆಯ ಉದ್ದೇಶ ಮಹಿಳೆಯರು ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಕುಟುಂಬದ್ ನಿರ್ವಹಣೆಗೆ ಕೈ ಜೋಡಿಸುವಂತೆ ಮಾಡುವುದು.

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್!

ಸಾಕಷ್ಟು ಮಹಿಳೆಯರು ಹೊಲಿಗೆ, ಎಂಬ್ರಾಯ್ಡರಿ ಹಾಗೂ ಇನ್ನಿತರ ಕೌಶಲ್ಯವನ್ನು ಹೊಂದಿದ್ದು, ಸರಿಯಾದ ಹಣಕಾಸಿನ ವ್ಯವಸ್ಥೆ ಹಾಗೂ ಯಂತ್ರೋಪಕರಣ ಇಲ್ಲದ ಕಾರಣ ಸ್ವಂತ ಉದೋಗವನ್ನು ಪ್ರಾರಂಭಿಸಲು ಕಷ್ಟಪಡುತ್ತಾರೆ. ಇಂತಹ ಮಹಿಳೆಯರಿಗೆ ಸರ್ಕಾರದ ವತಿಯಿಂದ ಫ್ರೀ ಆಗಿ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಮಷೀನ್ ಕೊಡುವುದು ಮಾತ್ರವಲ್ಲದೆ, ಫ್ರೀ ಆಗಿ ಕುರ್ಚಿ ಹಾಗೂ ಟೇಬಲ್ ಗಳನ್ನೂ ಸಹ ವಿತರಣೆ ಮಾಡುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅಗತ್ಯವಾದ ಬಂಡವಾಳದ ಕೊರತೆಯು ಕಡಿಮೆಯಾಗುತ್ತದೆ.

ಈ ಒಂದು ಯೋಜನೆಯಿಂದಾಗಿ ಮಹಿಳೆಯರು ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಮೂಲಕ ಕುಟುಂಬದ ನಿರ್ವಹಣೆಗೆ ಕೈ ಜೋಡಿಸಬಹುದು. ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಯಾವುದೇ ಬಂಡವಾಳದ ಅಗತ್ಯವಿಲ್ಲದ ಕಾರಣ ಮಹಿಳೆಯರು ಹಣಕಾಸಿಕ ಖರ್ಚಿಲ್ಲದೆ ಪ್ರಾರಂಭಿಕ ಹಂತದಲ್ಲಿಯೇ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.

ಯೋಜನೆಯ ಉದ್ದೇಶ:

  • ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು:

ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಮನೆಯಲ್ಲಿಯೇ ಹೊಲಿಗೆ ಅಥವಾ ಎಂಬ್ರಾಯ್ಡರಿ ಕೆಲಸ ಆರಂಭಿಸಿ ಸ್ವಂತ ಆದಾಯ ಗಳಿಸಬಹುದು. ಉದ್ಯೋಗಕ್ಕಾಗಿ ಇತರರನ್ನು ಅವಲಂಬಿಸದೆ ತಮ್ಮದೇ ಆದ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಇದು ಸಹಾಯ ಮಾಡುತ್ತದೆ.

  • ಕೌಶಲ್ಯವನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸುವುದು:

ಹೊಲಿಗೆ ಮತ್ತು ಎಂಬ್ರಾಯ್ಡರಿ ಕಲೆ ತಿಳಿದಿರುವ ಮಹಿಳೆಯರ ಪ್ರತಿಭೆಯನ್ನು ಉದ್ಯೋಗದ ರೂಪಕ್ಕೆ ತರಲು ಈ ಯೋಜನೆ ಸಹಾಯ ಮಾಡುತ್ತದೆ. ಮಹಿಳೆಯರ ಕೌಶಲ್ಯಕ್ಕೆ ಸೂಕ್ತವಾದ ಅವಕಾಶವನ್ನು ಒದಗಿಸುತ್ತದೆ.

  • ಆರಂಭಿಕ ಹೂಡಿಕೆಯ ಹೊರೆ ಕಡಿಮೆ ಮಾಡುವುದು:

ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಯಂತ್ರ ಹಾಗೂ ಇತರ ಉಪಕರಣಗಳನ್ನು ಖರೀದಿಸಲು ಹೆಚ್ಚಿನ ಹಣದ ಅಗತ್ಯವಿರುತ್ತದೆ. ಉಚಿತವಾಗಿ ಉಪಕರಣಗಳನ್ನು ನೀಡುವುದರಿಂದ ಮಹಿಳೆಯರ ಮೇಲಿನ ಆರಂಭಿಕ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.

  • ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು:

ಮಹಿಳೆಯರು ಸ್ವಂತ ಆದಾಯ ಹೊಂದುವ ಮೂಲಕ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ತಮ್ಮ ಅಗತ್ಯಗಳನ್ನು ಸ್ವತಃ ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ.

ಯೋಜನೆಯ ಪ್ರಯೋಜನ:

  • ಸ್ವಂತ ಉದ್ಯೋಗ ಆರಂಭಿಸಲು ಅವಕಾಶ:

ಮಹಿಳೆಯರು ತಮ್ಮ ಮನೆಯಲ್ಲಿಯೇ ಹೊಲಿಗೆ ಮತ್ತು ಎಂಬ್ರಾಯ್ಡರಿ ಕೆಲಸ ಆರಂಭಿಸಿ ಆದಾಯ ಗಳಿಸಬಹುದು. ಉದ್ಯೋಗಕ್ಕಾಗಿ ಬೇರೆ ಕಡೆ ಅವಲಂಬಿಸುವ ಅಗತ್ಯ ಕಡಿಮೆಯಾಗುತ್ತದೆ.

  • ಉಚಿತ ಯಂತ್ರೋಪಕರಣಗಳ ಸೌಲಭ್ಯ:

ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಯಂತ್ರ, ಟೇಬಲ್ ಹಾಗೂ ಕುರ್ಚಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರಿಂದ ಉದ್ಯಮ ಆರಂಭಿಸುವ ಆರಂಭಿಕ ವೆಚ್ಚ ಕಡಿಮೆಯಾಗುತ್ತದೆ.

  • ಆರ್ಥಿಕ ಸ್ವಾವಲಂಬನೆಗೆ ನೆರವು:

ಸ್ವಂತ ಆದಾಯ ಹೊಂದುವ ಮೂಲಕ ಮಹಿಳೆಯರು ಕುಟುಂಬದ ಖರ್ಚುಗಳನ್ನು ನಿರ್ವಹಿಸಲು ಸಹಾಯ ಮಾಡಬಹುದು. ಆರ್ಥಿಕವಾಗಿ ಬಲಿಷ್ಠರಾಗಲು ಈ ಯೋಜನೆ ನೆರವಾಗುತ್ತದೆ.

  • ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಅವಕಾಶ:

ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಮಹಿಳೆಯರು ಉದ್ಯೋಗ ಮುಂದುವರಿಸಬಹುದು. ಗೃಹಿಣಿಯರಿಗೆ ಇದು ಉತ್ತಮ ಅವಕಾಶವಾಗಿದೆ.

ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಮಹಿಳೆಯಾಗಿರಬೇಕು.
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ನಿಗದಿಪಡಿಸಿದ ವಯೋಮಿತಿಯೊಳಗೆ ಇರಬೇಕು.
  • ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.
  • ಸ್ವಂತ ಉದ್ಯೋಗ ಆರಂಭಿಸುವ ಆಸಕ್ತಿ ಹೊಂದಿರಬೇಕು.
  • ಹೊಲಿಗೆ ಅಥವಾ ಎಂಬ್ರಾಯ್ಡರಿ ಕೌಶಲ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಮೊಬೈಲ್ ಸಂಖ್ಯೆ
  • ಹೊಲಿಗೆ ಅಥವಾ ಎಂಬ್ರಾಯ್ಡರಿ ತರಬೇತಿ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಫ್ರೀ ಹೊಲಿಗೆ ಯಂತ್ರ, ಎಂಬ್ರಿಯ್ದರಿ ಮಷೀನ್, ಟೇಬಲ್ ಹಾಗೂ ಕುರ್ಚಿ ವಿತರಣೆ ಯೋಜನೆಗೆ ಸಂಬಂದಿಸಿದ ಅರ್ಜಿ ನಮೂನೆಯನ್ನು ಓಪನ್ ಮಾಡಿ.
  • ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ವೈಯಕ್ತಿಕ ವಿವರ, ತರಬೇತಿ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಈ ಮೇಲೆ ತಿಳಿಸಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಅಂತಿಮ ತೀರ್ಮಾನ:

ರಾಜ್ಯ ಸರ್ಕಾರ ಜಾರಿಗೊಳಿಸಿ ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಫ್ರೀ ಆಗಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ ಕರ್ನಾಟಕ ಸರ್ಕಾರವು ಪ್ರತಿ ಮಹಿಳೆಯರಿಗೂ ಫ್ರೀ ಆಗಿ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಮಷೀನ್, ಟೇಬಲ್ ಹಾಗೂ ಕುರ್ಚಿ ಕೊಡುವುದಾಗಿ ಎಲ್ಲಿಯೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹಾಗಾಗಿ ಮಹಿಳೆಯರು ಈ ಮಾಹಿತಿಯನ್ನು ನಂಬುವುದು ಸೂಕ್ತವಲ್ಲ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment