Open Rally: ಭಾರತೀಯ ಸೇನೆಯಲ್ಲಿ ಸಿವಿಲಿಯನ್ ಪೋರ್ಟರ್ ಹುದ್ದೆಗಳ ನೇಮಕಾತಿ! SSLC/ITI ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ

Open Rally: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಹಂಬಲ ಹೊಂದಿರುವ ಅಭ್ಯರ್ಥಿಗಳಿಗೆ ಯುವಕರಿಗೆ ಒಂದು ಸುವರ್ಣಾವಕಾಶ! ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ವಲಯದಲ್ಲಿ ಖಾಲಿ ಇರುವ ಒಟ್ಟು 600 ಸಿವಿಲಿಯನ್ ಪೋರ್ಟರ್ ಹುದ್ದೆಗಳ ಭರ್ತಿಗೆ ಭಾರತೀಯ ಸೇನೆಯು ಬೃಹತ್ ಓಪನ್ ರ್ಯಾಲಿಯನ್ನು ಆಯೋಜಿಸಿದ್ದು, ಜಸ್ಟ್ SSLC ಅಥವಾ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ರ್ಯಾಲಿಗೆ ಭಾಗವಹಿಸಬಹುದಾಗಿದೆ.

Indian Army Civilian Porter Recruitment 2026


ಈ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು 18 ವರ್ಷದಿಂದ 40 ವರ್ಷದೊಳಗೆ ವಯೋಮಿತಿಯನ್ನು ಹೊಂದುವುದು ಕಡ್ಡಾಯವಾಗಿದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 25.000/- 31,140/- ವರೆಗೆ ವೇತನವನ್ನು ಪಡೆದುಕೊಳ್ಳಬಹುದು. ದೇಶದ ಗಡಿಭಾಗದಲ್ಲಿ ಕೆಲಸ ಮಾಡಲು ಬಯಸುವ ಹಾಗೂ ದೈಹಿಕವಾಗಿ ಸದೃಢರಾಗಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಸಿವಿಲಿಯನ್ ಪೋರ್ಟರ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಓಪನ್ ರ್ಯಾಲಿಯು ದಿನಾಂಕ 28-07-2026 ದಿಂದ 30-07-2026 ವರೆಗೆ ನಡೆಯಲಿದ್ದು, ಒಂದೊಂದು ದಿನ ಒಂದೊಂದು ಸ್ಥಳದಲ್ಲಿ ರ್ಯಾಲಿ ನಡೆಯಲಿದೆ. ಪ್ರಸ್ತುತ ಲೇಖನದಲ್ಲಿ ರ್ಯಾಲಿ ನಡೆಯುವ ಸ್ಥಳಗಳು ಯಾವುದು? ರ್ಯಾಲಿಗೆ ಭಾಗವಹಿಸುವ ಅಭ್ಯರ್ಥಿಗಳು ಯಾವೆಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Open Rally

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆಯ ಹೆಸರು ಭಾರತೀಯ ಸೇನೆ
ಹುದ್ದೆಯ ಹೆಸರು ಸಿವಿಲಿಯನ್ ಪೋರ್ಟರ್
ಹುದ್ದೆಯ ಸಂಖ್ಯೆ ಒಟ್ಟು 600 ಹುದ್ದೆಗಳು
ಉದ್ಯೋಗ ಸ್ಥಳ ಅಖಿಲ ಭಾರತ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-07-2026

ಹುದ್ದೆಯ ಕಿರು ಪರಿಚಯ:

ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಅಖ್ನೂರಿನಲ್ಲಿ ಖಾಲಿ ಇರುವ ಸಿವಿಲಿಯನ್ ಪೋರ್ಟರ್ ಹುದ್ದೆಗಳ ಭರ್ತಿಗೆ ಬೃಹತ್ ಮುಕ್ತ ರ್ಯಾಲಿಯನ್ನು ಆಯೋಜಿಸಿದ್ದು, ಇಲ್ಲಿ ಒಟ್ಟು 600 ಹುದ್ದೆಗಳು ಖಾಲಿ ಇದೆ. 28-07-2026 ರಿಂದ 30-07-2026 ವರೆಗೆ ನಡೆಯಲಿರುವ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ SSLC ಅಲ್ಲಿ ಹಾಗೂ ಐಟಿಐ ನಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನಿಷ್ಠ 18 ವರ್ಷದಿಂದ 40 ವರೆಗೆ ವಯೋಮಿತಿಯನ್ನು ಹೊಂದಿರಬೇಕು.

ಹುದ್ದೆಯ ವಿವರ:

ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಜಮ್ಮು ಮತ್ತು ಕಾಶ್ಮೀರದ ಅಖ್ನೂರಿನಲ್ಲಿ ಖಾಲಿ ಇರುವ ಸಿವಿಲಿಯನ್ ಪೋರ್ಟರ್ ಹುದ್ದೆಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸಿವಿಲಿಯನ್ ಪೋರ್ಟರ್ 600 ಹುದ್ದೆಗಳು

ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:

ಜಮ್ಮು ಮತ್ತು ಕಾಶ್ಮೀರದ ಅಖ್ನೂರಿನಲ್ಲಿ ಖಾಲಿ ಇರುವ ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಈ ಕೆಳಗೆ ತಿಳಿಸಿರುವಂತೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

  • ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC ಉತ್ತೀರ್ಣರಾಗಿರಬೇಕು. ಹಾಗೂ ಮಾನ್ಯತೆ ಪಡೆದ ತಾಂತ್ರಿಕ ಮಂಡಳಿಯಿಂದ ಐಟಿಐ ಪ್ರಮಾಣ ಪಾತ್ರವನ್ನು ಹೊಂದಿರಬೇಕು.

ವಯೋಮಿತಿ ವಿವರ:

ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ ವಿವರ:

ಸರ್ಕಾರದ ನಿಯಮಾನುಸಾರ ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಜಮ್ಮು ಮತ್ತು ಕಾಶ್ಮೀರದ ಅಖ್ನೂರಿನಲ್ಲಿ ಖಾಲಿ ಇರುವ ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಅಭ್ಯರ್ಥಿಗಳು ಉಚಿತವಾಗಿ ನಿಗದಿಪಡಿಸಿದ ದಿನಾಂಕದಂದು ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ರ್ಯಾಲಿಗೆ ಭಾಗವಹಿಸಬಹುದಾಗಿದೆ.

ವೇತನ ಶ್ರೇಣಿ:

ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 25,000/- ದಿಂದ ರೂ. 31,140/- ವರೆಗೆ ವೇತನವನ್ನು ನೀಡಲಾಗುತ್ತದೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣಪತ್ರ
  • ವಯಸ್ಸಿನ ಪುರಾವೆ
  • ಪೊಲೀಸ್ ಪರಿಶೀಲನಾ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಶೈಕ್ಷಣಿಕ ಪ್ರಮಾಣಪತ್ರ
  • 8 ಪಾಸ್ ಪೋರ್ಟ್ ಅಳತೆಯ ಫೋಟೋ
  • ಹಾಗೂ ಇತರೆ ಅಗತ್ಯ ದಾಖಲೆಗಳು

ರ್ಯಾಲಿಗೆ ಅಭ್ಯರ್ಥಿಗಳ ಸಿದ್ಧತೆ ಹೇಗಿರಬೇಕು:

  • ಅಭ್ಯರ್ಥಿಗಳು ಮೊದಲು ಹುದ್ದೆಗೆ ಸಂಬಂಧಿಸಿದ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಿ.
  • ನಂತರ ಈ ಮೇಲೆ ತಿಳಿಸಲಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
  • ನಂತರ ರ್ಯಾಲಿ ನಡೆಯುವ ದಿನಾಂಕದಂದು ನಿಗದಿತ ಸ್ಥಳಕ್ಕೆ ಭೇಟಿ ನೀಡಿ ರ್ಯಾಲಿಗೆ ಭಾಗವಹಿಸಿ.

ದಿನಾಂಕವರು ರ್ಯಾಲಿ ನಡೆಯುವ ಸ್ಥಳಗಳು:

ಪ್ರಮುಖ ದಿನಾಂಕಗಳು ರ್ಯಾಲಿ ನಡೆಯುವ ಸ್ಥಳಗಳು
28-07-2026ಜಮ್ಮು ಜಿಲ್ಲೆ (ಅಖ್ನೂರ್, ಅರ್ನಿಯಾ, ಬಹು, ಬಹಲ್ವಾಲ್, ಭೀಷ್ಮ, ಚೌಕಿಚೋರ, ದಾನ್ಸಾಲ್, ಜಮ್ಮು ಉತ್ತರ, ಜಮ್ಮು ಪಶ್ಚಿಮ, ಜಮ್ಮು, ಜಮ್ಮು ದಕ್ಷಿಣ, ಜೌರಿಯನ್, ಕೌರ್ ಮತ್ತು ಹತ್ತಿರದ ಪ್ರದೇಶಗಳು)
29-07-2026ಜಮ್ಮು ಜಿಲ್ಲೆ (ಮೈರಾ ಮಾಂಡ್ರಿಯನ್, ಮಂಡಲ್, ಮಾರ್ಹ್, ನಗೋಟ್ರ, ರಣಬೀರ್ ಸಿಂಗ್ ಪುರ, ಪ್ರಾಗ್ವಾಲ್, ಸುಚೇತ್ ಗಡ್) ಮತ್ತು ರಾಜೌರಿ ಜಿಲ್ಲೆ
30-07-2026ಪೂಂಚ್ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರದ ಇತರೆ ಜಿಲ್ಲೆಗಳು, ಭಾರತದ ಇತರ ರಾಜ್ಯಗಳು

ಆಯ್ಕೆ ಪ್ರಕ್ರಿಯೆ:

  • ದಾಖಲೆಗಳ ಪರಿಶೀಲನೆ:

ಮೊದಲ ಹಂತದಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಈ ಹಂತದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ SSLC ಅಂಕಪಟ್ಟಿ, ಐಟಿಐ ಪ್ರಮಾಣಪತ್ರ, ಪೊಲೀಸ್ ವೆರಿಫಿಕೇಷನ್, ಆಧಾರ್ ಕಾರ್ಡ್, ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

  • ದೈಹಿಕ ಸಾಮರ್ಥ್ಯ ಪರೀಕ್ಷೆ:

ಸಿವಿಲಿಯನ್ ಪೋರ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 160 ಸೆಂ.ಮೀ ಎತ್ತರವನ್ನು ಹೊಂದಿರಬೇಕು. ಎದೆಯ ಸುತ್ತಳತೆಯು 77 ಸೆಂ. ಮೀ ಇರಬೇಕು. ಜೊತೆಗೆ ಅಭ್ಯರ್ಥಿಗಳು 20 ಕೆಜಿಯನ್ನು ಹೊತ್ತುಕೊಂಡು ಕಡಿದಾದ ಇಳಿಜಾರಿ ಅಥವಾ ಬೆಟ್ಟದ ಹಾದಿಯಲ್ಲಿ 100 ಮೀಟರ್ ದೂರ ಕ್ರಮಿಸಬೇಕು.

  • ವೈದ್ಯಕೀಯ ತಪಾಸಣೆ:

ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಕರೆಯಲಾಗುತ್ತದೆ. ಈ ಹಂತದಲ್ಲಿ ಮಿಲಿಟರ್ ಮಿಲಿಟರ್ ವೈದ್ಯರು ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ನಡೆಸುತ್ತಾರೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ರ್ಯಾಲಿಗೆ ಭಾಗವಹಿಸಲು ಪ್ರಾರಂಭಿಕ ದಿನಾಂಕ28-07-2026
ರ್ಯಾಲಿಗೆ ಭಾಗವಹಿಸಲು ಕೊನೆಯ ದಿನಾಂಕ30-07-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಅಖ್ನೂರಿನಲ್ಲಿ ಖಾಲಿ ಇರುವ ಸಿವಿಲಿಯನ್ ಪೋರ್ಟರ್ ಹುದ್ದೆಗಳ ಭರ್ತಿಗೆ ಓಪನ್ ರ್ಯಾಲಿಯನ್ನು ಆಯೋಜಿಸಿದ್ದು, ಭಾರತೀಯ ಸೇನೆಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಸಂಬಂಧಪಟ್ಟ ಸ್ಥಳಕ್ಕೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ರ್ಯಾಲಿಗೆ ಭಾಗವಹಿಸಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು

Leave a Comment