KSRP Application: ರೂ. 76,100/- ವೇತನ! ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2314 ಹುದ್ದೆಗಳ ಭರ್ಜರಿ ನೇಮಕಾತಿ 2026! ಆಗಸ್ಟ್ 10 ಕೊನೆಯ ದಿನಾಂಕ

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಭಾರತೀಯ ಮೀಸಲು ಪಡೆಯಲ್ಲಿ ಖಾಲಿ ಇರುವ ಒಟ್ಟು 2314 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

KSRP Recruitment 2026


ಉಳಿಕೆ ಮೂಲ ವೃಂದಗಳಲ್ಲಿ ಖಾಲಿ ಇರುವ 1455 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಪುರುಷರಿಗೆ 1382 ಹುದ್ದೆಗಳು ಹಾಗೂ ಮಹಿಳೆಯರಿಗೆ 73 ಹುದ್ದೆಗಳನ್ನು ಮೀಸಲಿಡಲಾಗಿದೆ. ಕಲ್ಯಾಣ ಕರ್ನಾಟಕ ವೃಂದಗಳಿಗೆ ಒಟ್ಟು 859 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಭಾರತೀಯ ಮೀಸಲು ಪಡೆಯಲ್ಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ 13-07-2026 ರಿಂದ 10-08-2026 ವರೆಗೆ ಕಾಲಾವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

KSRP

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆಯ ಹೆಸರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್
ಹುದ್ದೆಯ ಹೆಸರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಕಾನ್ಸ್ಟೇಬಲ್
ಹುದ್ದೆಯ ಸಂಖ್ಯೆ ಒಟ್ಟು 2314 ಹುದ್ದೆಗಳು
ಉದ್ಯೋಗ ಸ್ಥಳ ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-08-2026

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಭಾರತೀಯ ಮೀಸಲು ಪಡೆಯಲ್ಲಿ ಖಾಲಿ ಇರುವ ಒಟ್ಟು 2314ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕ 13-07-2026 ರಿಂದ 10-08-2026 ವರೆಗೆ ಕಾಲಾವಕಾಶ ನೀಡಲಾಗಿದೆ. ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ PUC ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಸಂಪೂರ್ಣ ವಿವರ:

ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

ಮಿಕ್ಕುಳಿದ ಮೂಲ ವೃಂದ:

  • ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು:

ಇಲ್ಲಿ ಒಟ್ಟು 1455 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಈ ಕೆಳಕಂಡಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ.

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಪುರುಷ ಅಭ್ಯರ್ಥಿಗಳು)1382 ಹುದ್ದೆಗಳು
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಮಹಿಳಾ ಅಭ್ಯರ್ಥಿಗಳು)73 ಹುದ್ದೆಗಳು

ಕಲ್ಯಾಣ ಕರ್ನಾಟಕ ವೃಂದ:

  • ಕರ್ನಾಟಕ ರಾಜ್ಯ ಮೀಸಲು ಪೊಲೀಸ್:

ಇಲ್ಲಿ ಒಟ್ಟು 334 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಈ ಕೆಳಕಂಡಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ.

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಪುರುಷ ಅಭ್ಯರ್ಥಿಗಳು)284 ಹುದ್ದೆಗಳು
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಮಹಿಳಾ ಅಭ್ಯರ್ಥಿಗಳು)50 ಹುದ್ದೆಗಳು
  • ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ:

ಇಲ್ಲಿ ಒಟ್ಟು 364 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಈ ಕೆಳಕಂಡಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ.

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ಪೊಲೀಸ್ ಕಾನ್ಸ್ಟೇಬಲ್ (ಪುರುಷ ಅಭ್ಯರ್ಥಿಗಳು)274 ಹುದ್ದೆಗಳು
ಪೊಲೀಸ್ ಕಾನ್ಸ್ಟೇಬಲ್ (ಮಹಿಳಾ ಅಭ್ಯರ್ಥಿಗಳು)90 ಹುದ್ದೆಗಳು
  • ಭಾರತೀಯ ಮೀಸಲು ಪಡೆ:
ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ 161 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಭಾರತೀಯ ಮೀಸಲು ಪಡೆ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ PUC ಅಲ್ಲಿ ಪಾಸ್ ಆಗಿರಬೇಕು ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ ವಿವರ:

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಸಿಯುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.

  • ಸಾಮಾನ್ಯ ವರ್ಗಗಳ ಅಭ್ಯರ್ಥಿಗಳು ಗರಿಷ್ಟ 33 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಪ್ರವರ್ಗ -I, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ (ಪ್ರವರ್ಗ 2A, 2B, 3A, 3B) ಅಭ್ಯರ್ಥಿಗಳು ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳು ಗರಿಷ್ಟ 38 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ ವಿವರ:

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸೈನಿಕರಾಗಿ ಸೇವೆ ಸಲ್ಲಿಸಿರುವ ಅವಧಿಯ ಜೊತೆಗೆ ಹೆಚ್ಚುವರಿಯಾಗಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವರ್ಗವಾರು ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

ವಿವಿಧ ವರ್ಗಗಳು ಹುದ್ದೆಗಳ ಸಂಖ್ಯೆ
ಸಾಮಾನ್ಯ ವರ್ಗಗಳ ಹಾಗೂ ಇತರೆ ಹಿಂದುಳಿದ ವರ್ಗಗಳ (ಪ್ರವರ್ಗ 2A, 2B, 3A, 3B) ಅಭ್ಯರ್ಥಿಗಳಿಗೆ ರೂ. 750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಹಾಗೂ ಪ್ರವರ್ಗ -I ಅಭ್ಯರ್ಥಿಗಳಿಗೆ ರೂ. 500/-

ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಆನ್ಲೈನ್ ಪಾವತಿ ವಿಧಾನಗಳ ಮೂಲಕ ಪಾವತಿಸಬೇಕಾಗುತ್ತದೆ. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಹಿಂದಿರುಗಿಸುವುದಿಲ್ಲ.

ವೇತನ ಶ್ರೇಣಿ:

ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಭಾರತೀಯ ಮೀಸಲು ಪಡೆಯಲ್ಲಿ ಖಾಲಿ ಇರುವ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 37,500/- ರಿಂದ ರೂ. 76,100/- ವರೆಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ. ಇವುಗಳ ಜೊತೆಗೆ ಪಿಂಚಣಿ ಸೌಲಭ್ಯಗಳು ಲಭಿಸುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ಮುಖಪುಟದಲ್ಲಿ ಕಾಣುವ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ನ್ಯೂ ರಿಜಿಸ್ಟ್ರೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ದಾಖಲೆಗಳನ್ನು ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ನಂತರ ಯೂಸರ್ ಹಾಗೂ ಐಡಿ ಪಾಸ್ವರ್ಡ್ ಬಳಸಿ ಬಳಸಿ ಲಾಗಿನ್ ಆಗಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ, ಮೀಸಲಾತಿ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ನಂತರ ಪಾಸ್ ಪೋರ್ಟ್ ಅಳತೆಯ ಫೋಟೋ, ಅಭ್ಯರ್ಥಿಗಳ ಸಹಿ, ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ಎಲ್ಲ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಒಟ್ಟು 100 ಆಬ್ಜೆಕ್ಟಿವ್ ಟೈಪ್ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ 30% ಕಡ್ಡಾಯವಾಗಿ ಗಳಿಸಬೇಕಾಗಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಷ್ಟು ಋಣಾತ್ಮಕ ಅಂಕಗಳನ್ನು ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಇತಿಹಾಸ, ಸಂವಿಧಾನ, ಭೂಗೋಳ ಹಾಗೂ ಇನ್ನಿತರ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ.

  • ದೈಹಿಕ ಪರೀಕ್ಷೆ:
  • ದೈಹಿಕ ಗುಣಮಟ್ಟ ಪರೀಕ್ಷೆ:

ಪುರುಷ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಕನಿಷ್ಠ 168 ಸೆಂ. ಮೀ ಎತ್ತರವನ್ನು ಹೊಂದಿರಬೇಕು ಹಾಗೂ ಎದೆಯ ಸುತ್ತಳತೆಯು 86 ಸೆಂ. ಮೀ ಇರಬೇಕು ಹಾಗೂ ಕನಿಷ್ಠ ವಿಸ್ತರಣೆ 5 ಸೆಂ. ಮೀ

ಮಹಿಳಾ ಅಭ್ಯರ್ಥಿಗಳು ಕನಿಷ್ಠ 158 ಸೆಂ. ಮೀ ಎತ್ತರವನ್ನು ಹೊಂದಿರಬೇಕು ಹಾಗೂ ಕನಿಷ್ಠ 45 ಕೆಜಿ ತೂಕವನ್ನು ಹೊಂದಿರಬೇಕು.

ಕರ್ನಾಟಕ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳು ಕನಿಷ್ಠ 155 ಸೆಂ. ಮೀ ಎತ್ತರವನ್ನು ಹೊಂದಿರಬೇಕು ಹಾಗೂ ಎದೆಯ ಸುತ್ತಳತೆಯು 75 ಸೆಂ. ಮೀ ಕಿಂತ ಕಡಿಮೆ ಇರಬಾರದು

ಕರ್ನಾಟಕ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಕನಿಷ್ಠ 150 ಸೆಂ. ಮೀ ಎತ್ತರವನ್ನು ಹೊಂದಿರಬೇಕು ಹಾಗೂ ಕನಿಷ್ಠ 45 ಕೆಜಿ ತೂಕವನ್ನು ಹೊಂದಿರಬೇಕು.

  • ದೈಹಿಕ ಸಹಿಷ್ಣುತೆ ಪರೀಕ್ಷೆ:

ಪುರುಷ ಅಭ್ಯರ್ಥಿಗಳು 6 ನಿಮಿಷ 30 ಸೆಕೆಂಡುಗಳಲ್ಲಿ 1600 ಮೀ. ಹಾಗೂ ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 1 ನಿಮಿಷ 30 ಸೆಕೆಂಡ್ ಗಳಲ್ಲಿ 400 ಮೀ ವರೆಗೆ ಓದಿರಬೇಕು. ಹಾಗೂ ಈ ಹಂತದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ಗುಂಡು ಎಸೆತಗಳಿಗೆ ಒಟ್ಟು ಮೂರು ಅವಕಾಶಗಳನ್ನು ನೀಡಲಾಗುತ್ತದೆ.

  • ವೈದ್ಯಕೀಯ ಪರೀಕ್ಷೆ:

ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಅಂತಿಮ ತಾತ್ಕಾಲಿಕ ಪಟ್ಟಿಯನ್ನು ಸಿದ್ದಪಡಿಸಿ, ವೈದ್ಯಕೀಯ ತಪಾಸಣೆ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ನೇಮಕಾತಿ ಅಧಿಸೂಚನೆ ಪ್ರಕಟಗೊಂಡ ದಿನಾಂಕ 08-07-2026
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 13-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-08-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 11-08-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ (KK)ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ (RPC)ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಭಾರತೀಯ ಮೀಸಲು ಪಡೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ದ್ವಿತೀಯ PUC ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು

Leave a Comment