ನಮಸ್ಕಾರ ಸ್ನೇಹಿತರೆ, ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಯುವಕ ಯುವತಿಯರಿಗೆ ಭಾರತೀಯ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುವ ಸುವರ್ಣಾವಕಾಶ ಒದಗಿಬಂದಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಸೀಮಾ ಬಲ್ 2026 ನೇ ಸಾಲಿನ ಕ್ರೀಡಾ ಕೋಟಾದಡಿಯಲ್ಲಿ ಒಟ್ಟು 404 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
SSB Recruitment 2026
ವಿಶೇಷವಾಗಿ ರಾಷ್ಟೀಯ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳ ಗಮನದಲ್ಲಿಟ್ಟುಕೊಂಡು ಈ ನೇಮಕಾತಿ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಸರ್ಕಾರಿ ಉದ್ಯೋಗದ ಜೊತೆಗೆ ದೇಶ ಸೇವೆ ಮಾಡಲು ಬಯಸುವ ಕ್ರೀಡಾ ಸಾಧಕರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ, ಸರ್ಕಾರದ ಇತರೆ ಭತ್ಯೆಗಳು ಹಾಗೂ ಇತರೆ ಭದ್ರತೆಗಳು ಲಭ್ಯವಾಗುತ್ತದೆ ಜೊತೆಗೆ ತಮ್ಮ ಕ್ರೀಟ ಪ್ರತಿಭೆಯನ್ನು ಮುಂದುವರೆಸಿ ಭಾರತವನ್ನು ಪ್ರತಿನಿಧಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು ಪ್ರಸ್ತುತ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಒಂದಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಹುದ್ದೆಯ ಕಿರು ವಿಮರ್ಶೆ:
| ನೇಮಕಾತಿ ಸಂಸ್ಥೆ | ಸಶಸ್ತ ಸೀಮಾ ಬಲ್ |
| ಹುದ್ದೆಯ ಹೆಸರು | ಕಾನ್ಸ್ಟೇಬಲ್ |
| ಹುದ್ದೆಗಳ ಸಂಖ್ಯೆ | ಒಟ್ಟು 404 ಹುದ್ದೆಗಳು |
| ಉದ್ಯೋಗ ಸ್ಥಳ | ಭಾರತದಾದ್ಯಂತ ಅಥವಾ ವಿದೇಶದಲ್ಲಿ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
ಹುದ್ದೆಯ ಸಂಕ್ಷಿಪ್ತ ಮಾಹಿತಿ:
ಭಾರತೀಯ ಸಶಸ್ತ್ರ ಸೀಮಾ ಬಲ್ ಪ್ರಸ್ತುತ ಸಾಲಿನಲ್ಲಿ ಕ್ರೀಡಾ ಕೋಟದಡಿಯಲ್ಲಿ ಒಟ್ಟು 404 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಭಾಗದಲ್ಲಾಗಲಿ ಅಗತ್ಯವಿದ್ದರೆ ವಿದೇಶಗಳಲ್ಲಾಗಲಿ ಕರ್ತವ್ಯವನ್ನು ನಿರ್ವಹಿಸಲು ಅರ್ಹರಾಗಿರಬೇಕು.
ಹುದ್ದೆಯ ವಿವರ:
ಸಶಸ್ತ ಸೀಮಾ ಬಲ್ ನಲ್ಲಿ ಒಟ್ಟು 404 ಕಾನ್ಸ್ಟೇಬಲ್ ಹುದ್ದೆಗಳು ಲಭ್ಯವಿದ್ದು, ಈ ಹುದ್ದೆಗಳನ್ನು ವಿವಿಧ ಕ್ರೀಡಾ ವಿಭಾಗಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಅವುಗಳ ವಿವರ ಈ ಕೆಳಕಂಡಂತಿದೆ.
| ಕ್ರೀಡಾ ವಿಭಾಗ | ಒಟ್ಟು ಹುದ್ದೆಗಳು | ಪುರುಷರಿಗೆ ಹಂಚಿಕೆ ಮಾಡಲಾದ ಹುದ್ದೆಗಳ ಸಂಖ್ಯೆ | ಮಹಿಳೆರಿಗೆ ಹಂಚಿಕೆ ಮಾಡಲಾದ ಹುದ್ದೆಗಳ ಸಂಖ್ಯೆ |
| ಅಥ್ಲೆಟಿಕ್ಸ್ | 42 ಹುದ್ದೆಗಳು | 20 ಹುದ್ದೆಗಳು | 22 ಹುದ್ದೆಗಳು |
| ಹಾಕಿ | 28 ಹುದ್ದೆಗಳು | 17 ಹುದ್ದೆಗಳು | 11 ಹುದ್ದೆಗಳು |
| ಕುಸ್ತಿ | 27 ಹುದ್ದೆಗಳು | 16 ಹುದ್ದೆಗಳು | 11 ಹುದ್ದೆಗಳು |
| ಫುಟ್ ಬಾಲ್ | 22 ಹುದ್ದೆಗಳು | 11 ಹುದ್ದೆಗಳು | 11 ಹುದ್ದೆಗಳು |
| ಬಾಸ್ಕೆಟ್ ಬಾಲ್ | 21 ಹುದ್ದೆಗಳು | 09 ಹುದ್ದೆಗಳು | 12 ಹುದ್ದೆಗಳು |
| ಬಾಕ್ಸಿಂಗ್ | 18 ಹುದ್ದೆಗಳು | 11 ಹುದ್ದೆಗಳು | 07 ಹುದ್ದೆಗಳು |
| ಹ್ಯಾಂಡ್ ಬಾಲ್ | 16 ಹುದ್ದೆಗಳು | 08 ಹುದ್ದೆಗಳು | 08 ಹುದ್ದೆಗಳು |
| ಕರಾಟೆ | 14 ಹುದ್ದೆಗಳು | 07 ಹುದ್ದೆಗಳು | 07 ಹುದ್ದೆಗಳು |
| ಪೆಂಚಾಕ್ ಸಿಲಾಟ್ | 16 ಹುದ್ದೆಗಳು | 08 ಹುದ್ದೆಗಳು | 08 ಹುದ್ದೆಗಳು |
| ಟೇಕ್ವಾಂಡೋ | 16 ಹುದ್ದೆಗಳು | 08 ಹುದ್ದೆಗಳು | 08 ಹುದ್ದೆಗಳು |
| ವುಶು | 16 ಹುದ್ದೆಗಳು | 09 ಹುದ್ದೆಗಳು | 07 ಹುದ್ದೆಗಳು |
| ಆರ್ಚರಿ | 14 ಹುದ್ದೆಗಳು | 07 ಹುದ್ದೆಗಳು | 07 ಹುದ್ದೆಗಳು |
| ಈಜು ಮತ್ತು ಡೈವಿಂಗ್ | 14 ಹುದ್ದೆಗಳು | 07 ಹುದ್ದೆಗಳು | 07 ಹುದ್ದೆಗಳು |
| ಫೆನ್ಸಿಂಗ್ | 10 ಹುದ್ದೆಗಳು | 06 ಹುದ್ದೆಗಳು | 04 ಹುದ್ದೆಗಳು |
| ಜೂಡೋ | 12 ಹುದ್ದೆಗಳು | 06 ಹುದ್ದೆಗಳು | 06 ಹುದ್ದೆಗಳು |
| ಕಬಡ್ಡಿ | 12 ಹುದ್ದೆಗಳು | 05 ಹುದ್ದೆಗಳು | 07 ಹುದ್ದೆಗಳು |
| ಕ್ಯಾನೋಯಿಂಗ್ | 14 ಹುದ್ದೆಗಳು | 07 ಹುದ್ದೆಗಳು | 07 ಹುದ್ದೆಗಳು |
| ಕಯಾಕಿಂಗ್ | 13 ಹುದ್ದೆಗಳು | 06 ಹುದ್ದೆಗಳು | 07 ಹುದ್ದೆಗಳು |
| ರೋಯಿಂಗ್ | 13 ಹುದ್ದೆಗಳು | 07 ಹುದ್ದೆಗಳು | 06 ಹುದ್ದೆಗಳು |
| ವೇಟ್ ಲಿಫ್ಟಿಂಗ್ | 13 ಹುದ್ದೆಗಳು | 08 ಹುದ್ದೆಗಳು | 05 ಹುದ್ದೆಗಳು |
| ಬ್ಯಾಡ್ಮಿಟನ್ | 06 ಹುದ್ದೆಗಳು | 04 ಹುದ್ದೆಗಳು | 02 ಹುದ್ದೆಗಳು |
| ಸೈಕ್ಲಿಂಗ್ | 04 ಹುದ್ದೆಗಳು | 02 ಹುದ್ದೆಗಳು | 02 ಹುದ್ದೆಗಳು |
| ಕುದುರೆ ಸವರಿ | 05 ಹುದ್ದೆಗಳು | 03 ಹುದ್ದೆಗಳು | 02 ಹುದ್ದೆಗಳು |
| ಜಿಮ್ನಾಸ್ಟಿಕ್ | 04 ಹುದ್ದೆಗಳು | 02 ಹುದ್ದೆಗಳು | 02 ಹುದ್ದೆಗಳು |
| ಪವರ್ ಲಿಫ್ಟಿಂಗ್ | 04 ಹುದ್ದೆಗಳು | 02 ಹುದ್ದೆಗಳು | 02 ಹುದ್ದೆಗಳು |
| ಶೂಟಿಂಗ್ | 04 ಹುದ್ದೆಗಳು | 02 ಹುದ್ದೆಗಳು | 02 ಹುದ್ದೆಗಳು |
| ಟೇಬಲ್ ಟೆನ್ನಿಸ್ | 06 ಹುದ್ದೆಗಳು | 02 ಹುದ್ದೆಗಳು | 04 ಹುದ್ದೆಗಳು |
| ಯೋಗಾಸನ | 06 ಹುದ್ದೆಗಳು | 03 ಹುದ್ದೆಗಳು | 03 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
ಸಶಸ್ತ್ರ ಸೀಮಾ ಬಾಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳು ಕಳೆದ 2 ವರ್ಷಗಳಲ್ಲಿ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು.
- ಖೇಲೋ ಇಂಡಿಯಾ ಯೂತ್ ಗೇಮ್ಸ್, ಖೇಲೋ ಇಂಡಿಯಾ ಯೂನಿವರ್ಸಿಇಟಿ ಗೇಮ್ಸ್ ಅಥವಾ ಶಾಲಾ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸುವ ಸ್ಪರ್ಧೆಯಲ್ಲಿ ಪದಕ ಗೆದ್ದವರು ಸಹ ಅರ್ಹರಾಗಿರುತ್ತಾರೆ.
- ಅಂತರ್ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ತಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯಸ್ಸಿನ ಮಿತಿ:
ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ 23 ವರ್ಷ ವಯೋಮಿತಿಯನ್ನು ಹೊಂದಿರಬೇಕು
ವಯೋಮಿತಿ ಸಡಿಲಿಕೆ ವಿವರ:
ಸರ್ಕಾರದ ನಿಯಮಗಳ ಪ್ರಕಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ ಅವುಗಳ ವಿವರ ಈ ಕೆಳಕಂಡಂತಿದೆ.
- ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ: 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ: 8 ವರ್ಷ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 8 ವರ್ಷ
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ: 10 ವರ್ಷ
- 1984 ದಂಗೆಯ ಸಂತ್ರಸ್ಥರಿಗೆ ಸೇರಿದ ಅಭ್ಯರ್ಥಿಗಳಿಗೂ ವಿವಿಧ ವರ್ಗಗಳ ಅಡಿಯಲ್ಲಿ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ, ಇ.ಡಬ್ಲ್ಯೂ.ಎಸ್ ಮತ್ತು ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ: ರೂ. 100/-
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅಭ್ಯರ್ಥಿಗಳು ಈ ಮೇಲೆ ನೀಡಲಾದ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಹಿಂದಿರುಗಿದುವುದಿಲ್ಲ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಅನ್ವಯ ವೇತನವನ್ನು ನಿಗದಿಪಡಿಸಲಾಗುತ್ತದೆ. ಮಾಸಿಕ ರೂ. 21,700/- ರಿಂದ ರೂ. 69,100/- ರ ವರೆಗೆ ವೇತನವನ್ನು ನಿಗದಿಪಡಿಸಲಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಇತರೆ ಭತ್ಯೆಗಳು ಲಭ್ಯವಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಶಸ್ತ ಸೀಮಾ ಬಾಲ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಅಪ್ಲಿಕೇಶನ್ ನ ಮೊದಲ ಭಾಗದಲ್ಲಿ ನಿಮ್ಮ ಹೆಸರು ನಿಮ್ಮ ಪೋಷಕರ ಹೆಸರು ಹಾಗೂ ಡೇಟ್ ಆಫ್ ಬರ್ತ್ ಹಾಗೂ ಲಿಂಗ ಮತ್ತು ರಾಷ್ಟ್ರಿಯತೆಯನ್ನು ನಮೂದಿಸಿ.
- ನಿಮ್ಮ ಧರ್ಮ, ವರ್ಗ ಹಾಗೂ ವೈವಾಹಿಕ ಸ್ಥಿತಿ ಹಾಗೂ ಆಧಾರ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಪ್ಲಿಕೇಶನ್ ನ ಎರಡನೇ ಭಾಗದಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ, ನಿಮ್ಮ ಸಹಿಯನ್ನು ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಮೊದಲ ಹಂತದಲ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದವರು ಹಾಗೂ ರಾಷ್ಟ್ರಿಯ ಮಟ್ಟದ ಪದಕ ವಿಜೇತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಹಂತದಲ್ಲಿ ಇವರುಗಳ ದಾಖಲೆಗಳನ್ನು ಹಾಗೂ ಕ್ರೀಡಾ ಸಾಧನೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
- ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡ ನಂತರ ಹುದ್ದೆಗಳು ಉಳಿದರೆ ಎರಡನೇ ಹಂತದಲ್ಲಿ ಉಳಿದ ಅಭ್ಯರ್ಥಿಗಳಿಗೆ ಫೀಲ್ಡ್ ಟ್ರಯಲ್ ಹಾಗೂ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಫೀಲ್ಡ್ ಟ್ರಯಲ್ ಒಟ್ಟು 50 ಅಂಕಗಳನ್ನು ಹೊಂದಿದ್ದು, ಅಭ್ಯರ್ಥಿಗಳು ಕನಿಷ್ಠ 60% ಅಂಕವನ್ನು ಗಳಿಸುವುದು ಕಡ್ಡಾಯವಾಗಿದೆ.
- ನಂತರದ ಹಂತದಲ್ಲಿ ಅಭ್ಯರ್ಥಿಗಳ ದೈಹಿಕ ಪ್ರಮಾಣಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಲ್ಲಿ ಅಭ್ಯರ್ಥಿಗಳ ಎತ್ತರ ಹಾಗೂ ಎದೆಯ ಅಳತೆಯನ್ನು ಪರೀಕ್ಷಿಸಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಹಾಗೂ ಪುರುಷ ಅಭ್ಯರ್ಥಿಗಳಿಗೆ 170 ಸೆಂ.ಮೀ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 157 ಸೆಂ.ಮೀ ನಿಗದಿಪಡಿಸಲಾಗುತ್ತದೆ.
- ಈ ಮೇಲಿನ ಎಲ್ಲ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
- ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ಹೊಂದಿರುವ ಕ್ರೀಡಾ ಸಾಧನೆ ಹಾಗೂ ವೈದ್ಯಕೀಯ ಫಿಟ್ನೆಸ್ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 27-04-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 26-05-2026 |
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಸಶಸ್ತ್ರ ಸೀಮಾ ಬಾಲ್ ಪ್ರಸ್ತುತ ಸಾಲಿನಲ್ಲಿ ಒಟ್ಟು 404 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ಮುಂದುವರೆಸಬೇಕೆಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನೀಮಗೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ ನಿಗದಿಪಡಿಸಿದ ಕೊನೆಯ ದಿನಾಂಕ 26-05-2026 ರ ವಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Forest: ಅರಣ್ಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ 2026, 1,075 ಹುದ್ದೆ! ಇಂದು ಅಧಿಸೂಚನೆ ಪ್ರಕಟ
- CESC: ವಿದ್ಯುತ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-05-2026
- VS Bank: ₹92,500/- ವೇತನ! ವೀರಶೈವ ಸಹಕಾರಿ ಬ್ಯಾಂಕ್ ನೇಮಕಾತಿ 2026 । ಮೇ 27 ಕೊನೆಯ ದಿನಾಂಕ
- IRIDO: ₹2,15,900/- ವೇತನ! 6300+ ಹುದ್ದೆಗಳ ಬೃಹತ್ ನೇಮಕಾತಿ! ಮೇ 31 ಕೊನೆಯ ದಿನಾಂಕ
- DCC: ಬೆಳಗಾವಿ DCC ಬ್ಯಾಂಕ್ನಲ್ಲಿ ಭರ್ಜರಿ ಉದ್ಯೋಗಾವಕಾಶ! SDA, FDA, ಡ್ರೈವರ್ ಹುದ್ದೆಗಳು