KTM Duke: ನಮಸ್ಕಾರ ಸ್ನೇಹಿತರೆ, ನೀವೇನಾದರೂ ನ್ಯೂ ಮಾಡೆಲ್ ಬೈಕ್ ಅನ್ನು ಖರೀದಿಸಬೇಕೆಂದಿದ್ದೀರಾ? ಆಧುನಿಕ ಫೀಚರ್, ಶಕ್ತಿಶಾಲಿ ಪರ್ಫಾರ್ಮೆನ್ಸ್ ಹಾಗೂ ಸ್ಟೈಲಿಶ್ ಲುಕ್ ಇರುವ ಬೈಕ್ ಅನ್ನು ಖರೀದಿಸುವುದು ನಿಮ್ಮ ಕನಸೇ? ಹಾಗಿದ್ದರೆ ನಿಮ್ಮ ಈ ಕನಸನ್ನು ನನಸು ಮಾಡಿಕೊಳ್ಳಲು ಇದು ಸರಿಯಾದ ಸಮಯ.
ಇಂದಿನ ಕಾಲಘಟ್ಟದಲ್ಲಿ ಎಲ್ಲರೂ ಬೈಕ್ ಅನ್ನು ಕೇವಲ ಪ್ರಯಾಣದ ಸಾಧನವಾಗಿ ಮಾತ್ರ ಬಳಸುತ್ತಿಲ್ಲ. ಈಗ ಇದು ಪ್ರತಿಯೊಬ್ಬರ ಜೀವನ ಶೈಲಿ, ಅಟಿಟ್ಯೂಡ್ ಹಾಗೂ ಸ್ಟೈಲ್ ಅನ್ನು ಪ್ರತಿಬಿಂಬಿಸುವ ಭಾಗವಾಗಿ ಮಾರ್ಪಾಡಾಗಿದೆ. ಹಾಗಾಗಿ ಗ್ರಾಹಕರು ಯಾವುದೇ ವಾಹನವನ್ನು ಖರೀದಿಸುವಾಗ ಕೇವಲ ಮೈಲೇಜ್ ಹಾಗೂ ಬೆಲೆಗಳನ್ನು ಮಾತ್ರ ನೋಡದೆ ಅವುಗಳ ಸ್ಟೈಲ್ ಹಾಗೂ ಲುಕ್ ಅನ್ನು ಕೂಡ ಗಮನಿಸುತ್ತಾರೆ.
ಗ್ರಾಹಕ ಈ ಎಲ್ಲ ಬೇಡಿಕೆಯನ್ನು ಗಮನಿಸಿದ KTM ಕಂಪನಿ ಗ್ರಾಹಕರ ಆಕರ್ಷಣೆಗೆ ತಕ್ಕಂತಹ ಒಂದೊಳ್ಳೆಯ ಮಾಡೆಲ್ ಬೈಕ್ ಅನ್ನು ಅಪ್ಡೇಟ್ ಮಾಡುವ ಮೂಲಕ ಇದೀಗ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪರಿಚಯಿಸಿದೆ. KTM ಕಂಪನಿ ಪರಿಚಯಿಸಿದ ಬೈಕ್ ನ ಬೆಲೆ ಎಷ್ಟು? ಅವುಗಳ ವಿನ್ಯಾಸ ಹೇಗಿದೆ? ಕರ್ನಾಟಕದ ಯಾವೆಲ್ಲ ಜಿಲ್ಲೆಗಳಲ್ಲಿ ಲಭ್ಯ ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರಮುಖ ಹೈಲೈಟ್ ಪಾಯಿಂಟ್ಸ್:
| * KTM ಕಂಪನಿಯ ಹೊಸ ಮಾಡೆಲ್ ಬೈಕ್ ಇದೀಗ ಕರ್ನಾಟಕದಲ್ಲಿ ಲಭ್ಯ. * ಗ್ರಾಹಕರ ಕೈಗೆಟಕುವ ದರದಲ್ಲಿ ಗುಡ್ ಕ್ವಾಲಿಟಿ ಮಾಡೆಲ್ ಬೈಕ್ ಮಾರುಕಟ್ಟೆಗೆ ಎಂಟ್ರಿ. * ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುವ ಅತ್ಯಾಕರ್ಷಕ ಲುಕ್, ಸ್ಪೀಡ್ ಹೊಂದಿರುವ KTM ಡ್ಯೂಕ್ 200 ಬೈಕ್ |
ಮಾರುಕಟ್ಟೆಯಲ್ಲಿ KTM ಬ್ರಾಂಡ್ ನ ಜನಪ್ರಿಯತೆ ಹೇಗಿದೆ?
ಪ್ರತಿಯೊಬ್ಬ ಯುವಕರಿಗೂ ಕೂಡ KTM ಎನ್ನುವ ಹೆಸರು ಕೇಳಿದರೆ ಸ್ಟೈಲ್, ವೇಗ ಹಾಗೂ ರೇಸಿಂಗ್ ಅನುಭವಗಳು ಮೊದಲು ನೆನಪಾಗುತ್ತದೆ. KTM ಎನ್ನುವುದು ಆಸ್ಟ್ರಿಯಾದ ಪ್ರಸಿದ್ಧ ಬೈಕ್ ತಯಾರಿಕಾ ಸಂಸ್ಥೆಯಾಗಿದ್ದು, ಈ ಕಂಪನಿಯ ಮುಖ್ಯ ಉದ್ದೇಶ ಯುವಕರಿಗೆ ರೇಸಿಂಗ್ ಅನುಭವ ನೀಡುವ ಬೈಕ್ ಅನ್ನು ಅತ್ಯಂತ ಕಡಿಮೆ ದರದಲ್ಲಿ ಒದಗಿಸುವುದಾಗಿದೆ. ಹಾಗಾಗಿ ಇದು ವಿಶ್ವದಾದ್ಯಂತ ತಮ್ಮ ಸ್ಪೋರ್ಟ್ಸ್ ಬೈಕ್ ಗೆ ಹೆಸರುವಾಸಿಯಾಗಿದೆ. ಹಾಗಾಗಿ ಈ ಒಂದು ಕಂಪನಿ ಸಾಕಷ್ಟು ಯುವಕರ ಹೃದಯವನ್ನು ಗೆದ್ದಿದೆ.
KTM ಡ್ಯೂಕ್ 200 ನ ವಿನ್ಯಾಸ:
KTM ಡ್ಯೂಕ್200 ನ ಸಂಪೂರ್ಣ ವಿನ್ಯಾಸವು ಸ್ಟ್ರೀಟ್ ಫೈಬರ್ ನಿರ್ಮಿತವಾಗಿದ್ದು, ಮೊದಲ ನೋಟದಲ್ಲೇ ಗ್ರಾಹಕರನ್ನು ಹೆಚ್ಚು ಆಕರ್ಷಿತರನ್ನಾಗಿ ಮಾಡುತ್ತದೆ. ಈ ಒಂದು ಬೈಕ್ ನ ಅತ್ಯಾಕರ್ಷಕ ಆಕರ್ಷಣೆ ಅದರ 199.5cc ಲಿಕ್ವಿಡ್ ಕೂಲ್ಡ್ ಎಂಜಿನ್ ಆಗಿದೆ. ಅಗ್ರೆಸಿವ್ ಲೆಡ್ ಹೆಡ್ ಲ್ಯಾಂಪ್, ಶಾರ್ಪ್ ಬಾಡಿ ಡಿಸೈನ್ ಹಾಗೂ ಬಲಿಷ್ಠ ಹಾಗೂ ದೊಡ್ಡ ಫ್ಯುಯೆಲ್ ಟ್ಯಾಂಕ್ ನಿಂದ ಕಾಣುವ ಸ್ಪೋರ್ಟಿ ಗ್ರಾಫಿಕ್ಸ್ ಲುಕ್ ಈ ಒಂದು ಬೈಕ್ ಗೆ ವಿಭಿನ್ನ ಆಕರ್ಷಣೆ ನೀಡುತ್ತದೆ.
KTM ಡ್ಯೂಕ್ 200 ಬೈಕ್ ಸ್ಪ್ಲಿಟ್ ಸೀಟ್ ವಿನ್ಯಾಸವನ್ನು ಹೊಂದಿದ್ದು, ಬೈಕ್ ಗೆ ರಿಚ್ ಲುಕ್ ನೀಡುವುದರ ಜೊತೆಗೆ ರೈಡಿಂಗ್ ಕಂಫರ್ಟ್ ಗೂ ಸಹ ಸಹಾಯವಾಗುತ್ತದೆ. ಈ ಒಂದು ಬೈಕ್ ಗ್ರೇ ಕಲರ್ ಫಿನಿಶಿಂಗ್ ಹೊಂದಿರುವುದರಿಂದ ಅತ್ಯಾಕರ್ಷಕ ಅಟಿಟ್ಯೂಡ್ ಹಾಗೂ ಪ್ರೀಮಿಯಂ ಲುಕ್ ನೀಡುತ್ತದೆ.
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಒಂದು ಮಾಡೆಲ್ ಬೈಕ್ ಲಭ್ಯ:
ಹೊಸ ಅಪ್ಡೇಟ್ ಗಳೊಂದಿದೆ KTM ಡ್ಯೂಕ್ 200 ಬೈಕ್ ಇದೀಗ ಕರ್ನಾಟಕದ ಕೆಲವು ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಅಂದರೆ ಮೈಸೂರು, ಬೆಂಗಳೂರು, ಶಿವಮೊಗ್ಗ, ಮಂಡ್ಯ ಗಳಲ್ಲಿ ಲಭ್ಯವಿದ್ದು, ಈಗಾಗಲೇ ಸಾಕಷ್ಟು ಗ್ರಾಹಕರು ಬೈಕ್ ಶೋರೂಮ್ ಗಳಲ್ಲಿ ಮುಗಿಬಿದ್ದಿದ್ದಾರೆ. ಸಾಕಷ್ಟು ಗ್ರಾಹಕರು ಎಸ್ಟ್ರಿರಿಯರ್ ಗ್ರೇ ಕಲರ್ ಫಿನಿಶಿಂಗ್ ಗೆ ಮನಸೋತಿದ್ದು, ಈ ಒಂದು ಮಾಡೆಲ್ ಬೈಕ್ ಖರೀದಿಸುವವರಲ್ಲಿ ವಯಸ್ಕ ಯುವಕರ ಸಂಖ್ಯೆಯು ಹೆಚ್ಚಿದೆ. ನಿಮಗೂ ಕೂಡ ಅಪ್ಡೇಟೆಡ್ ನ್ಯೂ ಮಾಡೆಲ್ ಬೈಕ್ ಬೇಕು ಅಂದ್ರೆ ಇಂದೇ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಿ.
ಬೈಕ್ ನ ಎಂಜಿನ್ ಸಾಮರ್ಥ್ಯ ಹಾಗೂ ಪರ್ಫಾರ್ಮೆಸ್ ಹೇಗಿದೆ?
KTM ಡ್ಯೂಕ್ 200 ಬೈಕ್ ನ ದೊಡ್ಡ ಸ್ಟ್ರೆಂಥ್ ಅದರ ಪರ್ಫಾರ್ಮೆನ್ಸ್ ಓರಿಯೆಂಟೆಡ್ ಎಂಜಿನ್ ಅಲ್ಲಿ ಇದೆ. ಇದು ಸುಮಾರು 199.5cc ಸಿಂಗಲ್ ಸಿಲಿಂಡರ್ ಹಾಗೂ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, ಈ ಎಂಜಿನ್ ಸುಮಾರು 25 PS ಪವರ್ ಅನ್ನು ಹೊಂದಿದೆ. ಇದರಿಂದಾಗಿ ಬೈಕ್ ಗೆ ವೇಗದ ಆಕ್ಸಿಲರೇಷನ್ ಹಾಗೂ ಉತ್ತಮ ಪಿಕಪ್ ಸಿಗುತ್ತದೆ. ಆದ್ದರಿಂದಾಗಿ ನಗರ ರಸ್ತೆಗಳಲ್ಲೂ ಹಾಗೂ ಹೆದ್ದಾರಿಗಳಲ್ಲೂ ಕೂಡ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತದೆ. ಜೊತೆಗೆ ಸ್ಮೂತ್ ಗೇರ್ ಶಿಫ್ಟಿಂಗ್ ರೈಡರ್ ಗೆ ರೇಸಿಂಗ್ ಅನುಭವ ನೀಡುತ್ತದೆ.
ಬುಕ್ಕಿಂಗ್ ಮಾಡುವುದು ಹೇಗೆ?
KTM ಕಂಪನಿಯು ಈಗಾಗಲೇ KTM ಡ್ಯೂಕ್ 200 ಮಾಡೆಲ್ ಬೈಕ್ ಅನ್ನು ಕರ್ನಾಟಕದ ಮಾರುಕಟ್ಟೆಯಲ್ಲೂ ಪರಿಚಯಿಸಿದ್ದು, ನಿಮಗೆ ಈ ನ್ಯೂ ಮಾಡೆಲ್ ಬೇಕು ಅಂದರೆ,
- ನಿಮ್ಮ ಸಮೀಪದ KTM ಶೋರೂಮ್ ಗೆ ಭೇಟಿ ನೀಡಿ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಪ್ರೈಸ್ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.
- ಬೈಕ್ ಖರೀದಿಸುವ ಮೊದಲು ಬೈಕ್ ನ ಪರ್ಫಾರ್ಮೆನ್ಸ್ ಅನುಭವಿಸಲು ಟೆಸ್ಟ್ ರೈಡಿಂಗ್ ತೆಗೆದುಕೊಳ್ಳಿ. ಇದರಿಂದ ನಿಮಗೆ ಈ ಒಂದು ಬೈಕ್ ಅನ್ನು ಖರೀದಿಸುವುದು ಸೂಕ್ತವೋ ಇಲ್ಲವೋ ಎನ್ನುವುದು ತಿಳಿಯುತ್ತದೆ.
- ಬುಕ್ಕಿಂಗ್ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ವಿಳಾಸ ವಿವರಗಳನ್ನು ನೀಡಿ ಬುಕಿಂಗ್ ಮಾಡಿಕೊಳ್ಳಿ.
ಅತಿ ಕಡಿಮೆ ಬೆಲೆಯಲ್ಲಿ KTM ಡ್ಯೂಕ್ 200 ಬೈಕ್ ಲಭ್ಯ:
ಅತ್ಯಾಕರ್ಷಕ ವಿನ್ಯಾಸ, ಮೈಲೇಜ್ ಹಾಗೂ ಫಿನಿಶಿಂಗ್ ಹೊಂದಿರುವ KTM ಡ್ಯೂಕ್ 200 ಬೈಕ್ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆ ಎಟಕುವ ದರದಲ್ಲಿ ಲಭ್ಯವಿದೆ.
ಹೊಚ್ಚ ಹೊಸ ಮಾಡೆಲ್ ನ KTM ಬೈಕ್ ಈಗ ಕೇವಲ ರೂ. 1,20,000 ದಿಂದ ಪ್ರಾರಂಭಗೊಂಡು ರೂ. 1,50,000 ರೇಂಜ್ ನಲ್ಲಿ ಇದೆ. ಹಾಗಾಗಿ ರೇಸಿಂಗ್ ಫೀಲ್ ನೀಡುವ ಹಾಗೂ ತಮ್ಮ ಅಟಿಟ್ಯೂಡ್ ಗೆ ತಕ್ಕಂತಹ ಈ ಒಂದು ಬೈಕ್ ಅನ್ನು ಖರೀದಿಸುವ ಗ್ರಾಹಕರ ಸಂಖ್ಯೆಯು ಹೆಚ್ಚಿದ್ದು, ಈ ಒಂದು ಬೈಕ್ ಖರೀದಿಸುವ ಸಂದರ್ಭದಲ್ಲಿ ಕಂಪನಿ ಕಡೆಯಿಂದ ಅತ್ಯಾಕರ್ಷಕ ಆಫರ್ ನೀಡುವುದರಿಂದ ಗ್ರಾಹಕರು ಫುಲ್ ಖುಷಿಯಿಂದ ಕರಿದುಸುತ್ತಿದ್ದಾರೆ.
ಅತ್ಯಾಕರ್ಷಕ ಆಫರ್ ಗಳಿಗೆ ಗ್ರಾಹಕರು ಫುಲ್ ಫಿದಾ!
KTM ಡ್ಯೂಕ್ 200 ಮಾಡೆಲ್ ಬೈಕ್ ಅನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಕೂಡ 10% ಡಿಸ್ಕೌಂಟ್ ರೂಪದಲ್ಲಿ ಬೈಕ್ ಅನ್ನು ಸೇಲ್ ಮಾಡುತ್ತಿದ್ದು, ಜೊತೆಗೆ ವಿಶೇಷ ಫೈನಾನ್ಸ್ ಸೇವೆಗಳನ್ನು ಕೂಡ ನೀಡಲಾಗುತ್ತಿದೆ.
ಜೊತೆಗೆ ಅತ್ಯಾಕರ್ಷಕ ಎಕ್ಸ್ಚೇಂಜ್ ಆಫರ್ ಗಳನ್ನೂ ನೀಡಿದ್ದು, ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಿದೆ. ಜೊತೆಗೆ ಕೆಲವೊಂದು ಶೋರೂಮ್ ಗಳಲ್ಲಿ ಫ್ರೀ ಸರ್ವಿಸ್ ಸೇವೆಗಳನ್ನು ಒದಗಿಸಲಾಗುತ್ತಿದೆ.
ಜೊತೆಗೆ EMI ಸೌಲಭ್ಯವನ್ನು ಒದಗಿಸಿದ್ದು, ಗ್ರಾಹಕರು ಕಡಿಮೆ ಡೌನ್ ಪೇಮೆಂಟ್ ಮೂಲಕ ಸುಲಭವಾಗಿ ಬೈಕ್ ಅನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಅಂತಿಮ ತೀರ್ಮಾನ:
ಬೈಕ್ ಯುವಕರಿಗೆ ಸ್ಟೈಲ್, ಪವರ್ ಮತ್ತು ಆಧುನಿಕ ತಂತ್ರಜ್ಞಾನವನ್ನು ಒಂದೇ ವೇದಿಕೆಯಲ್ಲಿ ನೀಡುವ ಅತ್ಯುತ್ತಮ ಸ್ಪೋರ್ಟ್ಸ್ ಬೈಕ್ ಆಗಿದೆ. ಇದರ ಆಕರ್ಷಕ ಗ್ರೇ ಕಲರ್ ವಿನ್ಯಾಸ, ಶಕ್ತಿಶಾಲಿ ಎಂಜಿನ್, ಉತ್ತಮ ಪರ್ಫಾರ್ಮೆನ್ಸ್ ಹಾಗೂ ಪ್ರೀಮಿಯಂ ಲುಕ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.
ಇದೀಗ ಲಭ್ಯವಿರುವ ಡಿಸ್ಕೌಂಟ್ ಆಫರ್‌ಗಳು, EMI ಸೌಲಭ್ಯ ಮತ್ತು ಸುಲಭ ಬುಕ್ಕಿಂಗ್ ವ್ಯವಸ್ಥೆಯಿಂದ ಗ್ರಾಹಕರು ಈ ಬೈಕ್‌ನ್ನು ಇನ್ನಷ್ಟು ಆಸಕ್ತಿಯಿಂದ ಖರೀದಿಸುತ್ತಿದ್ದಾರೆ. ವಿಶೇಷವಾಗಿ ಯುವಕರಲ್ಲಿ ಈ ಬೈಕ್ ಒಂದು ಸ್ಟೈಲ್ ಐಕಾನ್ ಆಗಿ ಗುರುತಿಸಿಕೊಂಡಿದೆ. ನೀವು ಕೂಡ ಖರೀದಿಸಲು ಆಸಕ್ತಿ ಹೊಂದಿದರೆ ಇಂದೇ ಬುಕಿಂಗ್ ಮಾಡಿಕೊಂಡು ಬೈಕ್ ಅನ್ನು ಖರೀದಿಸಿ.
ಇದನ್ನು ಗಮನಿಸಿ: Room: ಕೇವಲ ₹235ಕ್ಕೆ ಮಂತ್ರಾಲಯದಲ್ಲಿ ರೂಮ್ ಬುಕ್ಕಿಂಗ್! ಕಡಿಮೆ ದರದಲ್ಲಿ AC & Non-AC ರೂಮ್‌ಗಳು