PMVBRY: ರೂ. 15,000/- ಪ್ರೋತ್ಸಾಹಧನ! ಹೊಸ ಉದ್ಯೋಗಿಗಳಿಗೆ ಪ್ರಧಾನ ಮಂತ್ರಿಯಿಂದ ದೊಡ್ಡ ಗಿಫ್ಟ್ ಘೋಷಣೆ । ಇಂದೇ ಅಪ್ಲೈ ಮಾಡಿ

ದೇಶದ ಅನೇಕ ನಿರುದ್ಯೋಗಿ ಯುವಜನತೆಗೆ ಉದ್ಯೋಗವನ್ನು ಹಾಗೂ ಕೌಶಲ್ಯಾಭಿವೃದ್ಧಿಯನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೊಳಿಸಿದ್ದು, ಆ ಯೋಜನೆಯೇ ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆ.

PMVBRY Scheme 2026


ಈ ಯೋಜನೆಯು ದೇಶದ ಯುವಜನತೆಗೆ ಕೇವಲ ಉದ್ಯೋಗವನ್ನು ಒದಗಿಸುವುದು ಮಾತ್ರವಲ್ಲದೆ, ಆಧುನಿಕ ಮಾರುಕಟ್ಟೆಗೆ ಅಗತ್ಯವಾದ ಕೌಶಲ್ಯವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಯಡಿಯಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡ ಅಭ್ಯರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನವನ್ನು ಹಾಗೂ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಅವರು ಉದ್ಯೋಗ ಕ್ಷೇತ್ರದಲ್ಲಿ ಸ್ಥಿರವಾಗಿ ನೆಲೆಸಲು ಸಹಾಯ ಮಾಡುತ್ತದೆ.

ನಿನ್ನೆ ಅಷ್ಟೇ ಅಂದರೆ 19 ಜೂನ್ 2026 ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಯಡಿಯಲ್ಲಿ ಸುಮಾರು ರೂ. 2,400 ಕೋಟಿ ಮೌಲ್ಯದ ಪ್ರೋತ್ಸಾಹಧನವನ್ನು ವಿತರಣೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಯಾರು ಅರ್ಹರು? ಯೋಜನೆಯಡಿಯಲ್ಲಿ ಸಿಗುವ ಪ್ರೋತ್ಸಾಹಧನ ಹೇಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ? ಎನ್ನುವ ಎಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

PMVBRY

ಯೋಜನೆಯ ವಿವರಣಾತ್ಮಕ ನೋಟ:

ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಭಾರತ ಸರ್ಕಾರ
ಯೋಜನೆಯ ಹೆಸರು ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆ
ಅರ್ಹ ಫಲಾನುಭವಿಗಳು ಹೊಸ ಉದ್ಯೋಗಿಗಳು
ಯೋಜನೆಯಡಿಯಲ್ಲಿ ಇತ್ತೀಚಿಗೆ ಮೀಸಲಿಟ್ಟ ಬಜೆಟ್ ಸುಮಾರು ರೂ. 2,400 ಕೋಟಿ
ಯೋಜನೆಯ ಉದ್ದೇಶ ಯುವಕರಿಗೆ ಉದ್ಯೋಗ ನೀಡುವುದು ಹಾಗೂ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವುದು
ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31-07-2027

ಏನಿದು ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆ?

ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಯು ಕೇಂದ್ರ ಸರ್ಕಾರವು ದೇಶದ ಯುವಕರಿಗೆ ಹೊಸ ಉದ್ಯೋಗಾವಕಾಶವನ್ನು ಸೃಷ್ಟಿಸಲು ಮತ್ತು ಸಣ್ಣ ಕೈಗಾರಿಕೆಗಳಿಗೆ ಬೆಂಬಲ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಒಂದು ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಯೋಜನೆಯನ್ನು ಆಗಸ್ಟ್ 1, 2025 ಕ್ಕೆ ಜಾರಿಗೆ ತರಲಾಗಿದೆ. ಮೊದಲನೆಯದಾಗಿ ಈ ಯೋಜನೆಗೆ ಒಟ್ಟು ರೂ. 99,446 ವೆಚ್ಚವನ್ನು ನಿಗದಿಪಡಿಸಲಾಗಿದೆ.

ಈ ಯೋಜನೆಯ ಬಗ್ಗೆ ಸರಳವಾಗಿ ಹೇಳುವುದಾದರೆ ಹೊಸದಾಗಿ ಉದ್ಯೋಗಕ್ಕೆ ಸೇರಿದ ಯುವಕರಿಗೆ ಹಾಗೂ ಉದ್ಯೋಗವನ್ನು ನೀಡಿದ ಕಂಪನಿಗಳಿಗೆ ಸರ್ಕಾರವೇ ನೇರವಾಗಿ ಆರ್ಥಿಕ ನೆರವನ್ನು ಒದಗಿಸುವುದಾಗಿದೆ. ಮೊದಲ ಬಾರಿಗೆ ಅಧಿಕೃತವಾಗಿ ಕೆಲಸಕ್ಕೆ ಸೇರಿದ ಅಭ್ಯರ್ಥಿಗಳಿಗೆ ಈ ಯೋಜನೆಯಡಿಯಲ್ಲಿ ಎರಡು ಕಂತುಗಳಲ್ಲಿ ರೂ. 15,000/- ಪ್ರೋತ್ಸಾಹ ಧನವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ.

ಜೊತೆಗೆ ಈ ಯೋಜನೆಯಡಿಯಲ್ಲಿ ಯುವಕರನ್ನು ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುವ ಕಂಪನಿ ಅಥವಾ ಸಂಸ್ಥೆಗಳ ಮಾಲೀಕರಿಗೆ ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಯುವಕರ ಹೆಸರಿನಲ್ಲಿ ಸರ್ಕಾರವೇ ರೂ. 3000 ಹಣವನ್ನು ಒದಗಿಸುತ್ತದೆ.

ಯೋಜನೆಯ ಉದ್ದೇಶ:

ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿರುವುದರ ಮುಖ್ಯ ಉದ್ದೇಶಗಳು,

  • ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದು:

ಪಿಎಂ-ವಿ.ಬಿ.ಆರ್.ವೈ ಯೋಜನೆಯಡಿಯಲ್ಲಿ ದೇಶದ ಅಸಂಘಟಿತ ವಲಯಗಳಾದ ಕೈಗಾರಿಕೆ, ಉತ್ಪಾದನಾ ಘಟಕಗಳು, ಸೇವಾ ವಲಯಗಳಲ್ಲಿ ಹೊಸ ನೇಮಕಾತಿ ಅಧಿಸೂಚನೆಯನ್ನು ಉತ್ತೇಜಿಸುವ ಮೂಲಕ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

  • ನಿರುದ್ಯೋಗಿ ಸಮಸ್ಯೆಯನ್ನು ಕಡಿಮೆ ಮಾಡುವುದು:

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿ ಸಮಸ್ಯೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಯುವಕರು ಕೂಡ ಹೊಸದಾಗಿ ಉದ್ಯೋಗವನ್ನು ಕಂಡುಕೊಂಡರೆ ಅವರಿಗೆ ಪ್ರೋತ್ಸಾಹ ಧನವನ್ನು ನೀಡಿ ಉದ್ಯೋಗ ಕ್ಷೇತ್ರದಲ್ಲಿ ಸ್ಥಿರವಾಗಿ ನೆಲೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಯುವಕರ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವುದು:

ಈ ಯೋಜನೆಯಡಿಯಲ್ಲಿ ಉದ್ಯೋಗ ಮಾರುಕಟ್ಟೆಗೆ ಅಗತ್ಯಗಳಿಗೆ ಅನುಗುಣವಾಗಿ ಯುವಕರಲ್ಲಿ ಪ್ರಾಯೋಗಿಕ, ತಾಂತ್ರಿಕ, ವೃತ್ತಿಪರ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ದೇಶದಲ್ಲಿ ಯುವಕರ ಸ್ವಾವಲಂಬನೆಯನ್ನು ಹೆಚ್ಚಿಸುವುದು:

ಈ ಯೋಜನೆಯಡಿಯಲ್ಲಿ ಯುವಕರು ಸ್ವಂತ ಉದ್ಯೋಗವನ್ನು ಕಂಡುಕೊಳ್ಳುವಂತೆ ಉತ್ತೇಜನ ನೀಡಿ ಯುವಕರು ಇತರರ ಮೇಲೆ ಅವಲಂಬಿತರಾಗಿರದೆ ತಮ್ಮ ಜೀವನವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು:

ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಯುವಕರಿಗೂ ಕೂಡ ಸ್ವಂತ ಉದ್ಯೋಗವನ್ನು ಸೃಷ್ಟಿಸಿ, ಅವರ ಆದಾಯ ಮಟ್ಟವನ್ನು ಖರೀದಿ ಮಟ್ಟವನ್ನು ಹೆಚ್ಚಿಸುವುದು. ಇದರಿಂದ ಉತ್ಪಾದನೆ, ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ದೊರೆತು ದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ.

  • ಯುವಕರಿಗೆ ಸಮಾಜಿಕ ಭದ್ರತೆಯನ್ನು ಒದಗಿಸುವುದು:

ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ, ಪಿಂಚಣಿ, ವಿಮೆ ಹಾಗೂ ಇತರೆ ಕಲ್ಯಾಣ ಸೌಲಭ್ಯಗಳ ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಒದಗಿಸುವುದರಿಂದ ಉದ್ಯೋಗಿಗಳ ಭವಿಷ್ಯ ಸುರಕ್ಷಿತವಾಗಿರುತ್ತದೆ.

ಯೋಜನೆಯ ಪ್ರಯೋಜನ:

  • ರೂ. 15,000/- ನೇರ ನಗದು ವರ್ಗಾವಣೆ:

ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಯಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವ ಯುವಕರಿಗೆ ಸರ್ಕಾರದ ಕಡೆಯಿಂದ ರೂ. 15,000/- ಹಣವನ್ನು ಎರಡು ಕಂತುಗಳಲ್ಲಿ ಪ್ರೋತ್ಸಾಹಧನ ನೀಡಲಾಗುತ್ತದೆ.

  • ಉಚಿತ ಭವಿಷ್ಯನಿಧಿ ಸೌಲಭ್ಯ:

ಈ ಯೋಜನೆಯಡಿಯಲ್ಲಿ ಪ್ರತಿ ಉದ್ಯೋಗಿಗಳಿಗೂ ಕೂಡ ಉದ್ಯೋಗಿ ಭವಿಷ್ಯ ನಿಧಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದರಿಂದಾಗಿ ಉದ್ಯೋಗಿಗಳಿಗೆ ಸಿಗುವ ಸಂಬಳ ಹೆಚ್ಚುತ್ತದೆ.

  • ನೇರ ನಗದು ವರ್ಗಾವಣೆ:

ಯೋಜನೆಯಡಿಯಲ್ಲಿ ಸಿಗುವ ಸಹಾಯಧನವನ್ನು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

  • ತಿಂಗಳಿಗೆ ರೂ. 3000/- ಸಬ್ಸಿಡಿ:

ಹೊಸದಾಗಿ ಯುವಕರನ್ನು ತಮ್ಮ ಕಂಪನಿ ಅಥವಾ ಸಂಸ್ಥೆಗೆ ನೇಮಕ ಮಾಡಿಕೊಳ್ಳುವ ಮಾಲೀಕರಿಗೆ ಸರ್ಕಾರದಿಂದ ಪ್ರತಿ ಉದ್ಯೋಗಿಯ ಮೇಲೆ ರೂ. 3000/- ಪ್ರೋತ್ಸಾಹಧನ ನೀಡಲಾಗುತ್ತದೆ.

ಈ ಯೋಜನೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾ?

ಯುವಕರು ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಗೆ ಪ್ರತ್ಯೇಕವಾಗಿ ಕಚೇರಿಗೆ ಭೇಟಿ ನೀಡುವ ಅಥವಾ ಆನ್ಲೈನ್ ಮೂಲಕ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸರಳವಾಗಿದ್ದು, ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಿ.

  • ನೀವು ಹೊಸದಾಗಿ ಒಂದು ಕಂಪನಿ ಅಥವಾ ಸಂಸ್ಥೆಗೆ ಕೆಲಸಕ್ಕೆ ಸೇರಿದಾಗ ಅಲ್ಲಿನ ಎಂಪ್ಲಾಯರ್ ಗಳೇ ನಿಮ್ಮ ವಿವರಗಳನ್ನು ಈ ಯೋಜನೆಯ ಪೊರ್ಟಲ್ https://pmvbry.labour.gov.in/ ನಲ್ಲಿ ನೋಂದಾಯಿಸಿಕೊಳ್ಳುತ್ತಾರೆ.
  • ನಂತರ ನಿಮ್ಮ ಮೊಬೈಲ್ ನಲ್ಲಿ UMANG ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆಯನ್ನು ನಮೂದಿಸಿ ಯುಎನ್ ಸಂಖ್ಯೆಯನ್ನು ಪಡೆದುಕೊಳ್ಳಿ.
  • ನಂತರ ಇಪಿಎಸ್ಓ ವೆಬ್ಸೈಟ್ ನಲ್ಲಿ ನೀಡಲಾಗುವ ಸಣ್ಣ ಆರ್ಥಿಕ ಸಾಕ್ಷರತಾ ಕೋರ್ಸ್ ಗಳನ್ನೂ ಪೂರ್ಣಗೊಳಿಸಿ.
  • ನೀವು ಕೆಲಸಕ್ಕೆ ಸೇರಿಕೊಂಡ ಕಂಪನಿಯು ನೋಂದಣಿ ಪ್ರಕ್ರಿಯೆಯನ್ನು ಮುಗಿಸಿದ ತಕ್ಷಣ ಕೇಂದ್ರ ಸರ್ಕಾರವು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತದೆ.

ಅಂತಿಮ ತೀರ್ಮಾನ:

ಪ್ರಧಾನ ಮಂತ್ರಿ ವಿಕಾಸ ಭಾರತ ರೋಜಗಾರ್ ಯೋಜನೆಯು ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಿ ಯುವಜನರಿಗೆ ಹೊಸ ಅವಕಾಶಗಳ ದಾರಿಯನ್ನು ತೆರೆಯುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದ್ದು, ಯುವಕರಿಗೆ ಕೇವಲ ಉದ್ಯೋಗವಲ್ಲದೆ ಅಗತ್ಯವಾದ ಕೌಶಲ್ಯ ಹಾಗೂ ಸಾಮಾಜಿಕ ಭದ್ರತೆಯನ್ನೂ ಒದಗಿಸಲಾಗುತ್ತದೆ. ಇದರಿಂದ ಅವರು ಆತ್ಮವಿಶ್ವಾಸದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವೇನಾದರೂ ಹೊಸದಾಗಿ ಕಂಪನಿಗೆ ಉದ್ಯೋಗಕ್ಕೆ ಸೇರಿಕೊಂಡರೆ ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment