IAF: ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಸಿ ಹುದ್ದೆಗಳ ಬೃಹತ್ ನೇಮಕಾತಿ 2026! ಜೂನ್ 1 ಕೊನೆಯ ದಿನಾಂಕ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ದೇಶದ ಅತ್ಯಂತ ಪ್ರತಿಷ್ಠಿತ ರಕ್ಷಣಾ ಸಂಸ್ಥೆಯಾಗಿರುವ ಭಾರತೀಯ ವಾಯುಪಡೆ ಪ್ರಸ್ತುತ 2026 ನೇ ಸಾಲಿನಲ್ಲಿ ಗ್ರೂಪ್ ಸಿ ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

IAF Recruitment 2026

ಭಾರತೀಯ ವಾಯು ಪಡೆಯು ಪ್ರಸ್ತುತ ಸಾಲಿನಲ್ಲಿ ಗ್ರೂಪ್ ಸಿ ಹುದ್ದೆಗಳಾದ ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್, ಚಾಲಕ ಸೇರಿದಂತೆ ಒಟ್ಟು 47 ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ದಿನಾಂಕ 01-06-2026 ಕೊನೆಯ ದಿನಾಂಕವಾಗಿದೆ.

ಜಸ್ಟ್ SSLC ಹಾಗೂ PUC ಅಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದು ಕೇಂದ್ರ ಸರ್ಕಾರದ ಶಾಶ್ವತ ಉದ್ಯೋಗವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ವೇತನ, ವೈದ್ಯಕೀಯ ವ್ಯವಸ್ಥೆ ಹಾಗೂ ಪಿಂಚಣಿ ಸೌಲಭ್ಯಗಳು ಇರುತ್ತದೆ. ಹುದ್ದೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

IAF

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆಯ ಹೆಸರು ಇಂಡಿಯನ್ ಏರ್ ಫೋರ್ಸ್
ಹುದ್ದೆಯ ಹೆಸರು ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್, ಹಾಗೂ ಚಾಲಕ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ ಒಟ್ಟು 47 ಹುದ್ದೆಗಳು
ಉದ್ಯೋಗ ಸ್ಥಳ ಅಖಿಲ ಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-06-2026
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್ ಮೂಲಕ

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಇಂಡಿಯನ್ ಏರ್ ಫೋರ್ಸ್ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 47 ಗ್ರೂಪ್ ಸಿ ಹುದ್ದೆಗಳಾದ ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್, ಡ್ರೈವರ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, SSLC ಹಾಗೂ PUC ಪೂರ್ಣಗೊಳಿಸಿದ ಕನಿಷ್ಠ 18 ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತದೆ.

ಹುದ್ದೆಯ ವಿವರ:

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ
ಲೋವರ್ ಡಿವಿಷನ್ ಕ್ಲರ್ಕ್ 33 ಹುದ್ದೆಗಳು
ಹಿಂದಿ ಟೈಪಿಸ್ಟ್ 11 ಹುದ್ದೆಗಳು
ಡ್ರೈವರ್ 03 ಹುದ್ದೆಗಳು

ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:

  • ಲೋವರ್ ಡಿವಿಷನ್ ಕ್ಲರ್ಕ್:
    • ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 2nd PUC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    • ಜೊತೆಗೆ ಕಂಪ್ಯೂಟರ್ ನಲ್ಲಿ ಪ್ರತಿ ಒಂದು ನಿಮಿಷಕ್ಕೆ ಇಂಗ್ಲಿಷ್ ನಲ್ಲಿ 35 ಪದಗಳನ್ನು ಹಾಗೂ ಹಿಂದಿಯಲ್ಲಿ 30 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕು.
  • ಹಿಂದಿ ಟೈಪಿಸ್ಟ್:
    • ಹಿಂದಿ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
    • ಜೊತೆಗೆ ಕಂಪ್ಯೂಟರ್ ನಲ್ಲಿ ಪ್ರತಿ ಒಂದು ನಿಮಿಷಕ್ಕೆ ಇಂಗ್ಲಿಷ್ ನಲ್ಲಿ 35 ಪದಗಳನ್ನು ಹಾಗೂ ಹಿಂದಿಯಲ್ಲಿ 30 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕು.
  • ಡ್ರೈವರ್:
    • ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
    • ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಲಘು ವಾಹನ ಹಾಗೂ ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
    • ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ವಾಹನ ಚಾಲನಾ ಅನುಭವವನ್ನು ಹೊಂದಿರಬೇಕು.
    • ಜೊತೆಗೆ ಮೋಟರ್ ಕಾರ್ಯ ವಿಧಾನದ ಜ್ಞಾನ ಹಾಗೂ ಚಾಲನೆಯಲ್ಲಿ ವೃತ್ತಿಪರ ಕೌಶಲ್ಯ ಹೊಂದಿರಬೇಕು.

ವಯೋಮಿತಿ ವಿವರ:

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾನ್ಯವಾಗಿ ಕನಿಷ್ಠ 18 ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿಯನ್ನು 01-06-2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ.

ವಯೋಮಿತಿ ಸಡಿಲಿಕೆ ವಿವರ:

ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ಈ ಕೆಳಗೆ ತಿಳಿಸಿರುವಂತೆ ವಯೋಮಿತಿ ಸಡಿಲಿಕೆ ಇರುತ್ತದೆ.

  • ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
  • ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
  • ಭಾರತೀಯ ವಾಯುಪಡೆ ಇಲಾಖೆಯ ಉದ್ಯೋಗಿಗಳಿಗೆ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 45 ವರ್ಷ ಹಾಗೂ ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಇಂಡಿಯನ್ ಏರ್ ಫೋರ್ಸ್ ನಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಉಚಿತವಾಗಿ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ:

ಇಂಡಿಯನ್ ಏರ್ ಫೋರ್ಸ್ ನ ಗ್ರೂಪ್ ಸಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7 ನೇ ವೇತನ ಆಯೋಗದ ಅನ್ವಯ ವೇತನವನ್ನು ನಿಗದಿಪಡಿಸಲಾಗುತ್ತದೆ.

  • ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್, ಡ್ರೈವರ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ 7 CPC ಪೇ ಮೆಟ್ರಿಕ್ ಲೆವೆಲ್ 2 ರ ಅಡಿಯಲ್ಲಿ ವೇತನವನ್ನು ನೀಡಲಾಗುತ್ತದೆ ಹಾಗೂ ಇವುಗಳ ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆಯ ಭತ್ಯೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅಗತ್ಯ ದಾಖಲೆಗಳು:

  • SSLC ಅಂಕಪಟ್ಟಿ
  • PUC ಅಂಕಪಟ್ಟಿ
  • ನಿವಾಸ ಪ್ರಮಾಣಪತ್ರ
  • ಐಡಿ ಪ್ರೂಫ್
  • ಅನುಭವ ಪ್ರಮಾಣಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಅಭ್ಯರ್ಥಿಗಳ ಸಹಿ
  • ಆಧಾರ್ ಕಾರ್ಡ್
  • ಜನ್ಮ ದಿನಾಂಕ ಪ್ರಮಾಣಪತ್ರ
  • ಲಘು/ ಭಾರಿ ವಾಹನ ಚಾಲನಾ ಪರವಾನಗಿ
  • ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಆಸಕ್ತ ಅಭ್ಯರ್ಥಿಗಳು ಮೊದಲು ಇಂಡಿಯನ್ ಏರ್ ಫೋರ್ಸ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲ ದಾಖಲೆಗಳನ್ನು ಅರ್ಜಿ ಪ್ರತಿಯೊಂದಿಗೆ ಲಗತ್ತಿಸಿ. ಅಪ್ಲಿಕೇಶನ್ ಫಾರ್ಮ್ ಮೇಲೆ ನಿಮ್ಮ ಇತ್ತೀಚೀನ ಫೋಟೋವನ್ನು ಅಂಟಿಸಿ. ರೂ. 10 ಅಂಚೆ ಚೀಟಿಯೊಂದಿಗೆ ಒಂದು ಲಕೋಟೆಗೆ ಹಾಕಿ.
  • ಲೋಕೋಟೆಯ ಮೇಲೆ ಆನ್ ಅಪ್ಲಿಕೇಶನ್ ಫಾರ್ ದಿ ಪೋಸ್ಟ್ ಆಫ್ …. ಅಂಡ್ ಕೆಟಗರಿ … ಎಂದು ಬರೆದು ಸಂಬಂಧಿತ ವಾಯುಪಡೆ ನಿಲ್ದಾಣ ಘಟಕದ ಅಂಚೆ ವಿಳಾಸಕ್ಕೆ ಕಳುಹಿಸಿ.

ಆಯ್ಕೆ ಪ್ರಕ್ರಿಯೆ:

  • ಅರ್ಜಿಗಳ ಪರಿಶೀಲನೆ:

ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಹಾಗೂ ಅವರ ವಯೋಮಿತಿಯನ್ನು ಅಳೆಯಲು ಅರ್ಜಿಯನ್ನು ಪರಿಶೀಲನೆ ನಡೆಸಲಾಗುತ್ತದೆ. ಸರಿಯಾದ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ.

  • ಲಿಖಿತ ಪರೀಕ್ಷೆ:

ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯ, ಸಾಮಾನ್ಯ ತಿಳುವಳಿಕೆ, ಸಾಮಾನ್ಯ ಜ್ಞಾನ, ಗಣಿತ ಸಾಮರ್ಥ್ಯದ ಕುರಿತು ಪ್ರಶ್ನೆಗಳು ಇರುತ್ತದೆ.

  • ಕೌಶಲ್ಯ ಪರೀಕ್ಷೆ:

ಲಿಖಿತ ಪರೀಕ್ಷಯಲ್ಲಿ ನಿರ್ದಿಷ್ಟ ಅಂಕವನ್ನು ಗಳಿಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಕಂಪ್ಯೂರ್ಟರ್ ನಲ್ಲಿ ಟೈಪಿಂಗ್ ಟೆಸ್ಟ್ ಹಾಗೂ ಡ್ರೈವಿಂಗ್ ಟೆಸ್ಟ್ ಗಳನ್ನು ನಡೆಸಲಾಗುತ್ತದೆ.

  • ಮೆರಿಟ್ ಪಟ್ಟಿ:

ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅಧಿಕೃತ ಅಧಿಸೂಚನೆ ಹೊರಡಿಸಿದ ದಿನಾಂಕ 02-05-2026
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ02-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ01-06-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಫಾರ್ಮ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಭಾರತೀಯ ವಾಯು ಪಡೆಯು ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್, ಡ್ರೈವರ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಜಸ್ಟ್ 10th ಹಾಗೂ PUC ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ


ಇತರೆ ಪ್ರಮುಖ ಲಿಂಕುಗಳು:

Leave a Comment