Udupi Cochin: ಉಡುಪಿ ಕೊಚ್ಚಿನ್ ಶಿಪ್ಯಾರ್ಡ್‌ನಲ್ಲಿ ಸ್ಟೋರ್ ಕೀಪರ್ ಹುದ್ದೆಗಳ ಬೃಹತ್ ನೇಮಕಾತಿ! ಜೂನ್ 4 ಕೊನೆಯ ದಿನಾಂಕ

ಉಡುಪಿ ಜಿಲ್ಲೆಯ ಪ್ರತಿಷ್ಠಿತ ಮಲ್ಪೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಸಂಸ್ಥೆಯು 2026 ನೇ ಸಾಲಿನಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಸ್ಟೋರ್ ಪೀಕರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

UCSL Recruitment in Kannada

ಯಾವುದೇ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಿರ ವೇತನದ ಜೊತೆಗೆ ಸರ್ಕಾರ ಇತರೆ ಭತ್ಯೆಗಳು ಹಾಗೂ ಉದ್ಯೋಗ ಭದ್ರತೆಗಳು ಲಭಿಸುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

ಪ್ರಸ್ತುತ ಲೇಖನದಲ್ಲಿ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ, ಅರ್ಜಿ ಶುಲ್ಕ, ವೇತನ ಶ್ರೇಣಿ ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಇನ್ನಿತರ ಮಾಹಿತಿಯನ್ನು ನೀಡಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಒಂದಿಕೊಂಡು ಅರ್ಹತೆಯನ್ನು ಖಚಿತಪಡಿಸಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

UCSL

ಹುದ್ದೆಯ ಪರಿಚಯ:

ನೇಮಕಾತಿ ಸಂಸ್ಥೆ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
ಹುದ್ದೆಯ ಹೆಸರು ಸ್ಟೋರ್ ಕೀಪರ್ ಹುದ್ದೆಗಳು
ಹುದ್ದೆಯ ಸಂಖ್ಯೆ 2 ಹುದ್ದೆಗಳು
ಉದ್ಯೋಗ ಸ್ಥಳಮಲ್ಪೆ, ಉಡುಪಿ ಜಿಲ್ಲೆ -ಕರ್ನಾಟಕ
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ ಮೂಲಕ

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಸ್ಟೋರ್ ಕೀಪರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗಳನ್ನು ವಿವರ ವರ್ಗಗಳಿಗೆ ಹಂಚಿಕೆ ಮಾಡಲಾಗಿದೆ. ಯಾವುದೇ ಪದವಿ ಜೊತೆಗೆ ಡಿಪ್ಲೊಮಾ ಪೂರ್ಣಗೊಳಿಸಿದ ಗರಿಷ್ಟ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ:

ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ವಿವಿಧ ವರ್ಗಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದ್ದು ಅವುಗಳ ವಿವರ ಈ ಕೆಳಕಂಡಂತಿದೆ.

ವರ್ಗಗಳು ಹುದ್ದೆಗಳ ಸಂಖ್ಯೆ
ಸಾಮಾನ್ಯ ವರ್ಗ 1 ಹುದ್ದೆ
ಇತೆರೆ ಹಿಂದುಳಿದ ವರ್ಗ 1 ಹುದ್ದೆ

ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:

ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ಜೊತೆಗೆ ಮೆಟಿರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ಸ್, ಮೆಕಾಟ್ರಾನಿಕ್ಸ್ ಮೆರೈನ್, ಶಿಪ್ ಬ್ಯುಲ್ಡಿಂಗ್ ಇಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ 3 ವರ್ಷಗಳ ಡಿಪ್ಲೊಮಾ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಅಭ್ಯರ್ಥಿಗಳು ಯಾವುದೇ ಇಂಜಿನಿಯರಿಂಗ್ ಕಂಪನಿ, ಶಿಪ್ಯಾರ್ಡ್ ಅಥವಾ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಯಲ್ಲಿ ಸ್ಟೋರ್ ಕೀಪಿಂಗ್ ವಿಭಾಗದಲ್ಲಿ ಕನಿಷ್ಠ 4 ವರ್ಷಗಳ ಕಾಲ ಕೆಲಸದ ಅನುಭವವನ್ನು ಹೊಂದಿರಬೇಕು

ವಯೋಮಿತಿ ವಿವರ:

ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ದಿನಾಂಕ 4-6-2026 ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ.

ಅಭ್ಯರ್ಥಿಗಳು ಗರಿಷ್ಟ 35 ವರ್ಷ ವಯೋಮಿತಿಯನ್ನು ಮೀರಿರಬಾರದು. ಅಂದರೆ 5-06-2026 ರ ನಂತರ ಜನಿಸಿರಬೇಕು.

ವಯೋಮಿತಿ ಸಡಿಲಿಕೆ ವಿವರ:

  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
  • ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ. ಆದರೆ ಅಭ್ಯರ್ಥಿಗಳ ಗರಿಷ್ಟ ವಯೋಮಿತಿ ಯಾವುದೇ ಸಂದರ್ಭದಲ್ಲೂ 45 ವರ್ಷ ವಯೋಮಿತಿಯನ್ನು ಮೀರಿರಬಾರದು.

ಅರ್ಜಿ ಶುಲ್ಕ:

ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬೇಕಾಗುತ್ತದೆ.

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  • ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 400/-

ವೇತನ ಶ್ರೇಣಿ:

UCSL ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ W4 ಗ್ರೇಡ್ ಅಡಿಯಲ್ಲಿ ವೇತನವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಸಿಗುವ ವೇತನ ಶ್ರೇಣಿ ರೂ. 17,000 ದಿಂದ ರೂ. 61,020 ವೇತನವನ್ನು ನೀಡಲಾಗುತ್ತದೆ.

ಮೂಲ ವೇತನ ರೂ. 17,000/- ತುಟ್ಟಿ ಭತ್ಯೆ ರೂ. 9,197/- ಮನೆ ಬಾಡಿಗೆಯ ಭತ್ಯೆ ರೂ. 1,700/- ಇಂಧನ ಮರುಪಾವತಿ ರೂ. 1,600/- ಬಟ್ಟೆ ಒಗೆಯುವ ಭತ್ಯೆ ರೂ. 500/- ಈ ಎಲ್ಲ ಭತ್ಯೆಗಳು ಸೇರಿ ಒಟ್ಟು ವೇತನ ರೂ. 29,997/- ಹಾಗೂ ಇವುಗಳ ಜೊತೆಗೆ ರಾಷ್ಟೀಯ ಪಿಂಚಣಿ ಯೋಜನೆ, ಭವಿಷ್ಯ ನಿಧಿ, ಗ್ರಾಚುಟಿ ಹಾಗೂ ರಜೆ ನವೀಕರಣ ಸೌಲಭ್ಯಗಳು ಲಭಿಸುತ್ತದೆ.

ಅಗತ್ಯ ದಾಖಲೆಗಳು:

  • ಪದವಿ ಹಗೂ ಡಿಪ್ಲೊಮಾ ಪ್ರಮಾಣಪತ್ರ
  • ಶೈಕ್ಷಣಿಕ ಅಂಕಪಟ್ಟಿ
  • ಅನುಭವ ಪ್ರಮಾಣಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಅಭ್ಯರ್ಥಿಗಳ ಸಹಿ
  • ಜನ್ಮ ದಿನಾಂಕ ಪ್ರಮಾಣಪತ್ರ
  • ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಆಸಕ್ತ ಅಭ್ಯರ್ಥಿಗಳು ಮೊದಲು ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ಕೆರಿಯರ್ ವಿಭಾಗದಲ್ಲಿ ಕಾಣುವ UCSL ಮಲ್ಪೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮೊದಲು ಅಗತ್ಯ ವಿವರಗಳೊಂದಿಗೆ ರಿಜಿಸ್ಟ್ರೇಷನ್ ಪ್ರೋಸೆಸ್ ಪೂರ್ಣಗೊಳಿಸಿ ಲಾಗಿನ್ ಆಗಿ.
  • ನಿಮ್ಮ ಶೈಕ್ಷಣಿಕ ವಿವರ, ವೈಯಕ್ತಿಕ ವಿವರ ಹಾಗೂ ಅನುಭವ ವಿವರಗಳನ್ನು ಭರ್ತಿಮಾಡಿ.
  • ಶೈಕ್ಷಣಿಕ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಫೋಟೋ, ಸಹಿ ಹಾಗೂ ಮೇಲೆ ನೀಡಲಾದ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ವಸ್ತುನಿಷ್ಠ ಮಾದರಿಯ ಪರೀಕ್ಷೆ:

ಈ ಒಂದು ಪರೀಕ್ಷೆಯು ಒಟ್ಟು 70 ಅಂಕಗಳನ್ನು ಒಳಗೊಂಡಿದ್ದು, ಈ ಪರೀಕ್ಷಯಲ್ಲಿ ಸಾಮಾನ್ಯ ಜ್ಞಾನ, ರೀಸನಿಂಗ್, ಇಂಗ್ಲಿಷ್ ಹಾಗೂ ಹುದ್ದೆಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಶ್ನೆಗಳನ್ನು ನೀಡಲಾಗುತ್ತದೆ. ಈ ಪರೀಕ್ಷಗೆ ಒಟ್ಟು 75 ನಿಮಿಷಗಳನ್ನು ನೀಡಲಾಗಿದ್ದು, ತಪ್ಪು ಉತ್ತರಕ್ಕೆ ಯಾವುದೇ ಋಣಾತ್ಮಕ ಅಂಕಗಳು ಇರುವುದಿಲ್ಲ.

  • ವಿವರಣಾತ್ಮಕ ಮಾದರಿ ಪರೀಕ್ಷೆ:

ಈ ಪರೀಕ್ಷೆಯು ಒಟ್ಟು 30 ಅಂಕಗಳನ್ನು ಒಳಗೊಂಡಿದ್ದು, ಇಲ್ಲಿ ಹುದ್ದೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು ಪರೀಕ್ಷಾ ಸಮಯ 60 ನಿಮಿಷ.

ಈ ಎರಡು ಪರೀಕ್ಷೆಯಲ್ಲೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳನ್ನು ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಠ 45% ಅಂಕವನ್ನು ಗಳಿಸಿರಬೇಕು. ಅಂತಿಮವಾಗಿ ಅಭ್ಯರ್ಥಿಗಳು ಎರಡು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ರಾಂಕ್ ಲಿಸ್ಟ್ ಸಿದ್ದಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ11-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04-06-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 04-06-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಫಾರ್ಮ್ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಸಂಸ್ಥೆಯು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಸ್ಟೋರ್ ಕೀಪರ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಸರ್ಕಾರಿ ಸಂಸ್ಥೆಯಲ್ಲಿ ಸ್ಥಿರ ಉದ್ಯೋಗ ಕಂಡುಕೊಳ್ಳಬೇಕೆಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನೀವೇನಾದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಅರ್ಹತೆಯನ್ನು ಖಚಿತಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆಯನ್ನು ಮಾಡಿಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Comment