List: ಗೃಹಲಕ್ಷ್ಮಿ ಯೋಜನೆ ಬಂದ್ ಆಗುತ್ತಾ? ಇನ್ಮುಂದೆ ₹2000 ಹಣ ಬರೋದಿಲ್ಲವಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

GruhaLakshmi: ರಾಜ್ಯದ ಮಹಿಳೆಯರಿಗೆ ಶಾಕಿಂಗ್ ನ್ಯೂಸ್! ರಾಜ್ಯದ ಸಚಿವ ಸಂಪುಟದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಕುರಿತು ಚರ್ಚೆಯಾಗುತ್ತಿದ್ದು, ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಗೊಂದಲಮೂಡುತ್ತಿದೆ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡುತ್ತಾರಾ? ಇಲ್ಲವಾ? ಎನ್ನುವ ಗೊಂದಲಗಳು ಉಂಟಾಗಿದೆ.

ಕರ್ನಾಟಕ ಸರ್ಕಾರವು 2023 ರಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯನ್ನು ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ರೂ. 2000 ಆರ್ಥಿಕ ನೆರವನ್ನು ನೀಡುತ್ತಿದ್ದು, ಈ ಒಂದು ಹಣವನ್ನು ಸಾಕಷ್ಟು ಫಲಾನುಭವಿಗಳು ತಮ್ಮ ವೈಯಕ್ತಿಕ ಖರ್ಚು, ದೈನಂದಿನ ಅಗತ್ಯಗಳು ಹಾಗೂ ಕುಟುಂಬ ನಿರ್ವಹಣೆಗೆ ಉಪಯೋಗಿಸಿಕೊಳ್ಳುತ್ತಿದ್ದರು.

ಈ ಒಂದು ಯೋಜನೆಯು ಆರಂಭಗೊಂಡ ನಂತರದಿಂದ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಆಧಾರವಾಗಿದ್ದು, ಮುಖ್ಯವಾಗಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ಥಿರ ಆದಾಯದ ಮೂಲವಾಗಿತ್ತು ಹಾಗೂ ಇವರುಗಳ ಬದುಕಿಗೆ ದೊಡ್ಡ ಆಸರೆಯಾಗಿತ್ತು. ಆದರೆ, ಈಗ ಈ ಒಂದು ಯೋಜನೆಯನ್ನು ನಿಲ್ಲಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದಾಗಿ ಫಲಾನುಭವಿಗಳಲ್ಲಿ ಇನ್ನಷ್ಟು ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ.

GruhaLakshmi

ಪ್ರಮುಖ ಹೈಲೈಟ್ ಪಾಯಿಂಟ್ಸ್:

* ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ಗೃಹಲಕ್ಷ್ಮಿ ಯೋಜನೆಯನ್ನು ರದ್ದು ಮಾಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ.
* ಇನ್ಮುಂದೆ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮಾ ಆಗುವುದಿಲ್ಲವಾ?
* ಯೋಜನೆ ಜಾರಿಗೊಂಡ ದಿನದಿಂದ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ. 2000 ಹಣ ಜಮಾ ಮಾಡಲಾಗುತ್ತಿತ್ತು.

ಗೃಹಲಕ್ಷ್ಮಿ ಯೋಜನೆಯ ಪರಿಚಯ:

ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಿದ ಸಾಮಾಜಿಕ ಭದ್ರತಾ ಯೋಜನೆಯೇ ಗೃಹ ಲಕ್ಷ್ಮಿ ಯೋಜನೆ. ಈ ಒಂದು ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ರೂ. 2000 ಹಣಕಾಸಿನ ನೆರವನ್ನು ನೀಡುವ ಮೂಲಕ ಅವರಿಗೆ ಆರ್ಥಿಕ ಭದ್ರತೆ, ಸ್ಥಿರತೆ ಹಾಗೂ ಅವರ ಸ್ವಾವಲಂಬನೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಯೋಜನೆಯ ಪ್ರಮುಖ ಗುರಿ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು, ಕುಟುಂಬದ ದಿನನಿತ್ಯದ ಖರ್ಚುಗಳಿಗೆ ಸಹಾಯ ಮಾಡುವುದು ಹಾಗೂ ಮಹಿಳೆಯರ ಸಾಮಾಜಿಕ ಸ್ಥಾನಮಾನಗಳನ್ನು ಬಲಪಡಿಸುವುದಾಗಿದೆ.

ಈವರೆಗೂ ಫಲಾನುಭವಿಗಳಿಗಾದ ಪ್ರಯೋಜನ:

  • ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಮಹಿಳೆಯರಿಗೆ ರೂ. 2000 ನೀಡುತ್ತಿರುವುದರಿಂದ ತಮ್ಮ ಕುಟುಂಬದ ದಿನನಿತ್ಯದ ಖರ್ಚನ್ನು ನಿಭಾಯಿಸಲು ನೆರವಾಗಿದೆ.
  • ಎಷ್ಟೋ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದಿರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ, ಆಹಾರ ಹಾಗೂ ಮನೆ ಖರ್ಚಿಗೆ ಬಳಸಿಕೊಳ್ಳುತ್ತಿದ್ದಾರೆ ಇದರಿಂದ ಪ್ರತಿ ಕುಟುಂಬದ ಆರ್ಥಿಕ ಒತ್ತಡ ಕಡಿಮೆ ಆಗಿದೆ.
  • ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವ ಮೊದಲು ಮಹಿಳೆಯರು ತಮ್ಮ ವೈಯಕ್ತಿಕ ಖರ್ಚನ್ನು ನಿಭಾಯಿಸಿಕೊಳ್ಳಲು ಇತರರ ಮೇಲೆ ಅವಲಂಬಿತರಾಗಿದ್ದರು, ಆದರೆ ಯೋಜನೆ ಜಾರಿಗೊಂಡ ನಂತರದಿಂದ ಮಹಿಳೆಯರು ತಮ್ಮ ವೈಯಕ್ತಿಕ ಖರ್ಚುಗಳನ್ನು ನಿಭಾಯಿಸಿಕೊಳ್ಳುವುದರ ಜೊತೆಗೆ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದಾರೆ.
  • ಇನ್ನು ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದಿರುವ ಹಣವನ್ನು ಕೂಡಿಟ್ಟು ಮನೆಗೆ ಅಗತ್ಯವಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ.
  • ಇನ್ನು ಕೆಲವರು ಗೃಹಲಕ್ಷ್ಮಿ ಹಣದಿಂದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಹೆಚ್ಚು ಆದಾಯವನ್ನು ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮಹಿಳೆಯರಿಗೆ ಯೋಜನೆಯಿಂದಾದ ಸಾಮಾಜಿಕ ಪರಿಣಾಮಗಳು:

ಗೃಹಲಕ್ಷ್ಮಿ ಯೋಜನೆಯಿಂದಾಗಿ ಸಾಕಷ್ಟು ಮಹಿಳೆಯರ ಬದುಕಿನಲ್ಲಿ ಆಳವಾದ ಸಾಮಾಜಿಕ ಬದಲಾವಣೆಗಳು ಹಾಗೂ ಪ್ರಭಾವಗಳು ಬೀರಿದೆ.

  • ಕುಟುಂಬದ ಪ್ರಮುಖ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದೆ:

ಈ ಮೊದಲು ಮಹಿಳೆಯರು ಮನೆಯ ಸಣ್ಣ ಪುಟ್ಟ ಖರ್ಚುಗಳಿಗೂ ಮನೆಯ ಯಜಮಾನನ ಮೇಲೆ ಅವಲಂಬಿತರಾಗುತ್ತಿದ್ದರು. ಆದರೆ ಈ ಯೋಜನೆ ಜಾರಿಗೊಂಡು ಪ್ರತಿ ತಿಂಗಳು ರೂ. 2000 ಹಣವನ್ನು ಗಳಿಸುವ ಮೂಲಕ ಅವರಲ್ಲಿ ಸ್ವಾವಲಂಬನೆ ಹೆಚ್ಚಾಗಿ ತಾವು ಕೂಡ ಕುಟುಂಬದ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಗೌರವಗಳು ಹೆಚ್ಚುತ್ತಿದೆ.

  • ಮಹಿಳೆಯರಲ್ಲಿ ಉದ್ಯಮಶೀಲತೆ ಹುಚ್ಚುತ್ತಿದೆ:

ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಬಂದಿರುವ ಹಣವನ್ನು ಕೂಡಿಟ್ಟು ಅವುಗಳನ್ನು ಸ್ವಂತ ಉದ್ಯೋಮವನ್ನು ಪ್ರಾರಂಭಿಸಲು ಬಡವಾಳವಾಗಿ ಬಳಸಿಕೊಂಡಿದ್ದಾರೆ. ಇದರಿಂದ ಸಾಕಷ್ಟು ಮಹಿಳೆಯರು ಹೊಲಿಗೆಯಂತ್ರ ಖರೀದಿಸಿ ದರ್ಜಿ ಕೆಲಸ ಪ್ರಾರಂಭಿಸಿದರೆ, ಇನ್ನು ಕೆಲವು ಕ್ಯಾಂಟೀನ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

  • ಗ್ರಾಮೀಣ ಭಾಗದ ಜನರು ಸಾಲಭಾದೆಯಿಂದ ಮುಕ್ತಿಯನ್ನು ಹೊಂದಿದ್ದಾರೆ:

ಗ್ರಾಮೀಣ ಭಾಗದ ಜನರು ತುರ್ತು ವೈದ್ಯಕೀಯ ಖರ್ಚುಗಳನ್ನು ನಿಭಾಯಿಸಲು ಹಾಗೂ ದಿನನಿತ್ಯ ಅಗತ್ಯವಾಗುವ ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಹಣ ಇಲ್ಲದಿದ್ದಾಗ ಸಾಲವನ್ನು ಪಡೆದುಕೊಳ್ಳಲು ಲೇವಾದೇವಿಗಾರರ ಮನೆಗೆ ಅಲೆದಾಡುತ್ತಿದ್ದರು. ಆದರೆ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ವರ್ಷ ರೂ. 24,000 ಸಿಗುತ್ತಿದ್ದುದ್ದರಿಂದ ಸಾಲಗಾರರ ಮೇಲೆ ಅವಲಂಬಿತರಾಗುವುದು ಕಡಿಮೆಯಾಗಿದೆ.

  • ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಕೊಂಡುಕೊಳ್ಳಲು ನೆರವಾಗುತ್ತದೆ:

ಗರ್ಭಿಣಿ ಮಹಿಳೆಯರು ಹಾಗೂ ಹೆರಿಗೆಯಾದ ತಾಯಂದಿರು ತಮ್ಮ ಗರ್ಭವಸ್ಥೆಯಲ್ಲಿ ಹಗೂ ಹೆರಿಗೆಯ ನಂತರ ಅಗತ್ಯವಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ಕೊಂಡುಕೊಳ್ಳಲು ಈ ಒಂದು ಯೋಜನೆಯು ನೆರವಾಗಿದೆ. ತಮ್ಮ ಅರೋಗ್ಯವನ್ನು ಸುಧಾರಿಸಿಕೊಳ್ಳಲು ಸಹ ಈ ಒಂದು ಯೋಜನೆಯು ನೆರವಾಗಿದೆ.

ಯೋಜನೆಯನ್ನು ರದ್ದು ಮಾಡಿದರೆ ಮಹಿಳೆಯರಿಗಾಗುವ ಅನಾನುಕೂಲಗಳು:

  • ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿದರೆ, ಪ್ರತಿ ದಿನದ ಖರ್ಚನ್ನು ನಿಭಾಯಿಸುತ್ತಿದ್ದ ಮಹಿಳೆಯರಿಗೆ ಒಂದೇ ಬಾರಿಗೆ ಆರ್ಥಿಕ ಒತ್ತಡ ಎದುರಾಗುತ್ತದೆ.
  • ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತಿದ್ದ ಹಣವನ್ನು ಕರೆಂಟ್ ಬಿಲ್, ಮಕ್ಕಳ ವಿದ್ಯಾಭ್ಯಾಸಕ್ಕೆ, ಇನ್ನಿತರ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದ ಕೋಟ್ಯಂತರ ಕುಟುಂಬಗಳ ಆರ್ಥಿಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆ ಇರುತ್ತದೆ.
  • ಗೃಹಲಕ್ಷ್ಮಿ ಯೋಜನೆಯಿಂದ ಬರುತ್ತಿದ್ದ ಹಣವನ್ನು ತಮ್ಮ ಸ್ವಂತ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದ ಮಹಿಳೆಯರು ಈ ಯೋಜನೆಯನ್ನು ರದ್ದುಗೊಳಿಸಿದರೆ ತಮ್ಮ ಸ್ವಂತ ಖರ್ಚನ್ನು ನಿಭಾಯಿಸಲು ಕುಟುಂಬದ ಇತರ ಸದಸ್ಯರ ಮೇಲೆ ಅವಲಂಬಿತರಾಗಬೇಕಾಗುತ್ತದೆ.
  • ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳು ಸಂಪೂರ್ಣವಾಗಿ ಈ ಒಂದು ಯೋಜನೆಗೆ ಅವಲಂಬಿತರಾಗಿದ್ದು, ತತಕ್ಷಣದಲ್ಲಿ ಯೋಜನೆಯನ್ನು ರದ್ದುಗೊಳಿಸಿದರೆ ಅವರ ಗುಣಮಟ್ಟದ ಜೀವನದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಬಹುದು.
  • ಸಡನ್ ಆಗಿ ಆರ್ಥಿಕ ನೆರವನ್ನು ಒದಗಿಸುತ್ತಿದ್ದ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿದರೆ, ಕೆಲವು ಮಹಿಳೆಯರಲ್ಲಿ ಭವಿಷ್ಯದ ಆರ್ಥಿಕ ಸ್ಥಿರತೆಯ ಬಗ್ಗೆ ಆತಂಕ ಮೂಡಬಹುದು.

ಗೃಹಲಕ್ಷ್ಮಿ ಯೋಜನೆಯನ್ನು ರದ್ದುಗೊಳಿಸುತ್ತಿರುವುದು ನಿಜಾನಾ?

ರಾಜ್ಯದ ಸಾಕಷ್ಟು ಮಹಿಳೆಯರಿಗೆ ಹಾಗೂ ಸಾಕಷ್ಟು ಬಡ ಕುಟುಂಬಗಳಿಗೆ ಆಸರೆ ಆಗಿರುವ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರವು ಯಾವುದೇ ಕಾರಣಕ್ಕೂ ರದ್ದುಗೊಳಿಸುವುದಿಲ್ಲ. ಏಕೆಂದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಾಕಷ್ಟು ಬಾರಿ ಈ ಒಂದು ಯಾಜನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಹಾಗೆಯೇ ಗೃಹಲಕ್ಷ್ಮಿ ಯೋಜನೆಯ 30 ನೇ ಕಂತಿನ ಹಣವನ್ನು ಸಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇವುಗಳನ್ನು ಗಮನಿಸಿದರೆ ಯೋಜನೆಯನ್ನು ರದ್ದುಗೊಳಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಾಗಿದ್ದು, ಜನಸಾಮಾನ್ಯರು ಈ ಒಂದು ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಪ್ರೇರಣೆಯಾಗಿರುವ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆಯನ್ನು ನಿಲ್ಲಿಸುವ ಕುರಿತು ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ. ಈ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ಸುಳ್ಳಾಗಿದ್ದು, ಈ ಒಂದು ವಿಷಯದ ಕುರಿತು ಸರ್ಕಾರವು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಹಾಗಾಗಿ ಅರ್ಹ ಫಲಾನುಭವಿಗಳು ಈ ಒಂದು ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ.


ಇತರೆ ಪ್ರಮುಖ ಲಿಂಕುಗಳು:

Leave a Comment