ನಮಸ್ಕಾರ ಸ್ನೇಹಿತರೆ, ನೀವೇನಾದರೂ ಹಳೆ ಮನೆಯನ್ನು ರಿಪೇರಿ ಮಾಡಬೇಕೆಂದಿದ್ದೀರಾ? ಅದಕ್ಕೆ ಅಗತ್ಯವಾಗುವ ಹಣದ ವ್ಯವಸ್ಥೆ ಇಲ್ಲದೆ ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ಕಡೆಯಿಂದ ನಿಮಗೆ ಭಾರಿ ಸಹಾಯಧನ ಸಿಗಲಿದೆ.
Old House Repair Scheme
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಕೇವಲ ಹೊಸ ಮನೆ ನಿರ್ಮಿಸಲು ಮಾತ್ರ ಸಹಾಯಧನವನ್ನು ಒದಗಿಸುವುದು ಮಾತ್ರವಲ್ಲದೆ, ಹಳೆ ಮನೆಯ ದುರಸ್ತಿಗೂ ಕೂಡ ಸಬ್ಸಿಡಿ ದರದಲ್ಲಿ ಬರಿ ಮೊತ್ತದ ಸಹಾಯಧನವನ್ನು ಒದಗಿಸಲಾಗುತ್ತಿದೆ.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆಲ್ಲ ಈ ಸೌಲಭ್ಯ ಸಿಗಲಿದೆ? ಒಟ್ಟು ಎಷ್ಟು ಸಹಾಯಧನ ಸಿಗಲಿದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

ಯೋಜನೆಯ ಕಿರು ವಿಮರ್ಶೆ:
| ಅನುಷ್ಠಾನ ಸಂಸ್ಥೆ | ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ |
| ಯೋಜನೆಯ ಹೆಸರು | ರಾಜೀವ್ ಗಾಂಧಿ ವಸತಿ ಯೋಜನೆ |
| ಅರ್ಹ ಫಲಾನುಭವಿಗಳು | ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು |
| ಒಟ್ಟು ಸಹಾಯಧನದ ಮೊತ್ತ | ₹1.5 ₹2.5 ಲಕ್ಷದ ವರೆಗೆ ಸಹಾಯಧನ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಯೋಜನೆಯ ಪರಿಚಯ:
ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಜಾರಿಗೊಳಿಸಿದ ಮಂತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಹಾಗೂ ಸ್ವಂತ ಮನೆಯನ್ನು ನಿರ್ಮಿಸಬೇಕೆಂದಿರುವ ಹಾಗೂ ಮನೆ ಹೊಂದಿದ್ದರೂ ಕೂಡ ಅದನ್ನು ರಿಪೇರಿ ಮಾಡಿಸಲು ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಆಸರೆ ಆಗುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಒಂದು ಯೋಜನೆಯಡಿಯಲ್ಲಿ ಕರ್ನಾಟಕದ ಖಾಯಂ ನಿವಾಸಿಗಳಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರೂ. 1.5 ಲಕ್ಷದಿಂದ ರೂ. 2.5 ಲಕ್ಷದ ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಯೋಜನೆಯ ಉದ್ದೇಶ:
- ಆರ್ಥಿಕ ಹೊರೆಯನ್ನು ತಗ್ಗಿಸುವುದು:
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಳೆ ಮನೆಯನ್ನು ರಿಪೇರಿ ಮಾಡಿಸಲು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಮನೆಯ ದುರಸ್ತಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
- ಸುರಕ್ಷಿತ ವಸತಿ ವ್ಯವಸ್ಥೆಯನ್ನು ಮಾಡಿಕೊಡುವುದು:
ಬಡ ಅಥವಾ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಳೆಯ ಹಾಗೂ ರಿಪೇರಿಗೆ ಒಳಪಟ್ಟ ಮನೆಯನ್ನು ದುರಸ್ತಿ ಹಾಗೂ ನವೀಕರಣ ಗೊಳಿಸಿ ವಾಸಿಸಲು ಯೋಗ್ಯವಾದ ಪಕ್ಕ ಮನೆಯನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಜೀವನ ಮಟ್ಟವನ್ನು ಸುಧಾರಿಸುವುದು:
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ವಾಸಿಸಲು ಸ್ವಚ್ಛ, ಸುರಕ್ಷಿತ ಹಾಗೂ ಸುಸಜ್ಜಿತ ಮನೆಯನ್ನು ಒದಗಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಪ್ರಯೋಜನ:
- ಪ್ರತಿ ಅರ್ಹ ಫಲಾನುಭವಿಗಳ ಕುಟುಂಬಗಳಿಗೆ ಹಳೆ ಮನೆ ದುರಸ್ತಿಗೆ ರೂ. 1.5 ಲಕ್ಷ ದಿಂದ ರೂ. 2.5 ಲಕ್ಷದ ವರೆಗೆ ಸರ್ಕಾರದಿಂದ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
- ಯೋಜನೆಯಡಿಯಲ್ಲಿ ದುರಸ್ತಿ ಮನೆಗೆ ಸಿಗುವ ಸಹಾಯಧನವು ಸಾಲದ ರೂಪದಲ್ಲಿ ನೀಡುವುದಲ್ಲವಾದ್ದರಿಂದ ಯೋಜನೆಯಡಿಯಲ್ಲಿ ಪಡೆದ ಹಣವನ್ನು ಸರ್ಕಾರವೇ ಭರಿಸುತ್ತದೆ. ಇದರಿಂದ ಫಲಾನುಭವಿಗಳು ಸಾಲದಿಂದ ಮುಕ್ತರಾಗಬಹುದು.
- ಮಳೆ ಮತ್ತು ಗಾಳಿಯಲ್ಲಿ ಬೀಳುವ ಅಥವಾ ಸೋರುವ ಹಂತದಲ್ಲಿರುವ ಹಳೆ ಮನೆಗಳನ್ನು ಸಿಮೆಂಟ್ ಮನೆಗಳನ್ನಾಗಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.
- ಹಳೆ ಮನೆಗಳನ್ನು ದುರಸ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಗಳನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅಂದರೆ ಒಂದು ಕೊಠಡಿಯನ್ನು ಹಾಗೂ ಶೌಚಾಲಯವನ್ನು ನಿರ್ಮಿಸಿಕೊಳ್ಳಬಹುದಾಗಿದೆ.
- ಯೋಜನೆಯಡಿಯಲ್ಲಿ ಸಿಗುವ ಸಹಾಯಧನವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
ಯೋಜನೆಯಡಿಯಲ್ಲಿ ಸಿಗುವ ಸಹಾಯಧನದ ವಿವರ:
ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅವರು ಹೊಂದಿರುವ ವರ್ಗ ಹಾಗೂ ಪ್ರದೇಶಗಳಿಗೆ ಅನುಗುಣವಾಗಿ ರೂ. 1.5 ಲಕ್ಷದಿಂದ ರೂ. 2.5 ಲಕ್ಷದ ವರೆಗೆ ಸಹಾಯಧನ ಲಭಿಸುತ್ತದೆ.
ಯೋಜನೆಯಡಿಯಲ್ಲಿ ಲಾಭವನ್ನು ಅರ್ಹ ಫಲಾನುಭವಿಗಳು ಯಾರು?
- ಫಲಾನುಭವಿಗಳು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಫಲಾನುಭವಿಗಳು ಬಿಪಿಎಲ್ ಕಾರ್ಡ್ ಅನ್ನು ಹೊಂದಿರಬೇಕು.
- ಫಲಾನುಭವಿಗಳು ಹೊಂದಿರುವ ಮನೆಯು ದುರಸ್ತಿಗೆ ಒಳಪಟ್ಟಿರಬೇಕು.
- ಇರುವರೆಗೂ ಕೂಡ ಸರ್ಕಾರದ ವಿವಿಧ ಆಶ್ರಯ ವಸತಿ ಯೋಜನೆಯಡಿಯಲ್ಲಿ ಲಾಭವವನ್ನು ಪಡೆದುಕೊಂಡಿರಬಾರದು.
- ಗ್ರಾಮೀಣ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ. 32,000/- ಮೀರಿರಬಾರದು
- ನಗರ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ. 87,600/- ಮೀರಿರಬಾರದು.
ಅಗತ್ಯ ದಾಖಲೆಗಳು:
ಯಾವುದೇ ಫಲಾನುಭವಿಗಳು ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕೆದರೆ, ಈ ಕಳಗೆ ನೀಡಲಾದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
- ಅರ್ಜಿದಾರರ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬಿಪಿಎಲ್ ರೇಷನ್ ಕಾರ್ಡ್
- ಆದಾಯ ಪ್ರಮಾಣಪತ್ರ
- ಹಳೆಯ ಮನೆಯು ದುರಸ್ತಿಗೆ ಒಳಪಟ್ಟಿರುವ ಸ್ಪಷ್ಟವಾದ ಫೋಟೋ
- ಆದಾಯ ಪ್ರಮಾಣಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಬ್ಯಾಂಕ್ ಖಾತೆಯ ವಿವರ
- ಮನೆಯ ಮಾಲೀಕತ್ವದ ಪುರಾವೆ
- ಹಾಗೂ ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಅರ್ಜಿದಾರರು ಆಶ್ರಯ ಅಧಿಕೃತ ಪೋರ್ಟಲ್ https://ashraya.karnataka.gov.in/ ಗೆ ಭೇಟಿ ನೀಡಿ.
- ಹೊಸದಾಗಿ ಅರ್ಜಿ ಸಲ್ಲಿಸುವವರು ಮೊದಲು ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ಹೊಸ ಖಾತೆಯನ್ನು ಸೃಷ್ಟಿಸಿಕೊಳ್ಳಬೇಕು. ನೋಂದಣಿ ಪೂರ್ಣಗೊಂಡ ನಂತರ ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಸಿ ಪೋರ್ಟಲ್ಗೆ ಪ್ರವೇಶಿಸಬೇಕು.
- ನಂತರ ಮುಖಪುಟದಲ್ಲಿರುವ ಆನ್ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಸಂಸ್ಥೆಯ ಅಡಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಹೊಸದಾಗಿ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳುವವರ ಜೊತೆಗೆ ಬೀಳುವ ಹಂತದಲ್ಲಿರುವ ಹಳೆಯ ಮನೆಯ ದುರಸ್ತಿಗೂ ಸಹ ಸಹಾಯಧನವನ್ನು ನೀಡಲಾಗುತ್ತಿದ್ದು, ನಿಮಗೆ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಅಗತ್ಯವಿದ್ದರೆ, ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Food Kit: BPL ಕುಟುಂಬಗಳಿಗೆ ಭರ್ಜರಿ ಗುಡ್ ನ್ಯೂಸ್! ಅಕ್ಕಿ ಬದಲು ಸಿಗಲಿದೆ ಇಂದಿರಾ ಫುಡ್ ಕಿಟ್ । ಏನೆಲ್ಲಾ ಸಿಗುತ್ತೆ ಗೊತ್ತಾ?
- List: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಗೃಹಲಕ್ಷ್ಮಿ 30ನೇ ಕಂತು ಬಿಡುಗಡೆ! ಖಾತೆಗೆ ₹2000 ಜಮಾ
- Students Kit: ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್! ₹8625 ಮೌಲ್ಯದ ಸ್ಟಡಿ ಕಿಟ್ ಉಚಿತ ವಿತರಣೆ । ಇಂದೇ ಅಪ್ಲೈ ಮಾಡಿ
- Laptop Application: SSLC ವಿದ್ಯಾರ್ಥಿಗಳಿಗೆ ಬಂಪರ್ ಅವಕಾಶ! ಫ್ರೀ ಲ್ಯಾಪ್ಟಾಪ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ
- Post Metric: ₹35,000 ಪ್ರೋತ್ಸಾಹಧನ! ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್!