ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯು ಪ್ರಸ್ತುತ ಮಹತ್ವದ ತಿರುವು ಪಡೆದುಕೊಂಡಿದೆ. ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಕೇವಲ ಅಕ್ಕಿಯನ್ನು ಮಾತ್ರವಲ್ಲದೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವ ಉದ್ದೇಶದಿಂದ 5 ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಕಿಟ್ ಗಳನ್ನು ನೀಡುವುದಾಗಿ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರವು ಇಂದಿರಾ ಆಹಾರ ಕಿಟ್ ಯೋಜನೆಯನ್ನು ಜೂನ್ ತಿಂಗಳಲ್ಲೇ ಅಧಿಕೃತವಾಗಿ ಜಾರಿಗೊಳಿಸುವುದಾಗಿ ತಿಳಿಸಿದ್ದು, ರಾಜ್ಯದಲ್ಲಿ BPL ಕಾರ್ಡ್ ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ಈ ಒಂದು ಯೋಜನೆಯು ಬಹಳಷ್ಟು ನೆರವಾಗಲಿದೆ.
ಇಂದಿರಾ ಆಹಾರ ಕಿಟ್ ನಲ್ಲಿ ಯಾವೆಲ್ಲ ಪೌಷ್ಠಿಕಾಂಶಯುಕ್ತ ಆಹಾರಗಳು ಇರುತ್ತದೆ? ಯಾರಿಗೆ ಎಷ್ಟು ಕೆಜಿ ಧಾನ್ಯ ಸಿಗುತ್ತೆ? ಇದಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾ? ಯೋಜನೆಯ ಉದ್ದೇಶವೇನು? ಬಿಪಿಎಲ್ ಕುಟುಂಬಕ್ಕೆ ಈ ಯೋಜನೆಯಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ? ಎನ್ನುವುದನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಯೋಜನೆಯ ಅವಲೋಕನ:
| ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ | ಕರ್ನಾಟಕ ಸರ್ಕಾರ |
| ಯೋಜನೆಯ ಹೆಸರು | ಇಂದಿರಾ ಆಹಾರ ಕಿಟ್ ಯೋಜನೆ |
| ಯೋಜನೆಯ ಚಾಲ್ತಿಗೊಳ್ಳುವ ಸಮಯ | ಜೂನ್ 2026 |
| ಯೋಜನೆಯ ಉದ್ದೇಶ | ಬಡ ಹಾಗೂ ಮಧ್ಯಮ ವರ್ಗಗಳ ಅಭ್ಯರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವುದು |
| ಯೋಜನೆಯಡಿಯಲ್ಲಿ ಸಿಗುವ ಲಾಭ | 5 ಕೆಜಿ ಅಕ್ಕಿ ಬದಲಿಗೆ ಆಹಾರ ಕಿಟ್ ವಿತರಣೆ ಮಾಡುವುದು |
ಯೋಜನೆಯ ಹಿನ್ನೆಲೆ:
ಕರ್ನಾಟಕ ಸರ್ಕಾರವು ಈ ಮೊದಲು ಅನ್ನಭಾಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಕುಟುಂಬಗಳ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿಗಳನ್ನು ನೀಡುತ್ತಿದ್ದು, ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು. ಕಾಲಕ್ರಮೇಣ, ರಾಜ್ಯದ ಪ್ರತಿಯೊಂದು ಕುಟುಂಬಗಳಲ್ಲಿನ ಪೌಷ್ಟಿಕಾಂಶಗಳ ಕೊರತೆ, ಆಹಾರ ಪದ್ದತಿಗಳ ಬದಲಾವಣೆ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದಾಗಿ ಉಂಟಾಗುವ ಆರ್ಥಿಕ ಒತ್ತಡಗಳನ್ನು ಗಮನಿಸಿದ ಸರ್ಕಾರವು ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ನೀಡಿ ಇನ್ನು 5 ಕೆಜಿ ಅಕ್ಕಿ ಬದಲಿಗೆ ಇಂದಿರಾ ಆಹಾರ ಕಿಟ್ ನೀಡುವುದಾಗಿ ನಿರ್ಧರಿಸಿದೆ.
ಇಂದಿರಾ ಆಹಾರ ಕಿಟ್ ಯೋಜನೆಯನ್ನು ಜಾರಿಗೊಳಿಸಿರುವ ಉದ್ದೇಶ:
- ಅಕ್ಕಿಗಳ ದುರುಪಯೋಗಕ್ಕೆ ಹಾಗೂ ಕಳ್ಳ ಸಾಗಾಣಿಕೆಯ ತಡೆ:
ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ತಲಾ ಒಬ್ಬೊಬ್ಬ ಸದಸ್ಯರಿಗೂ ನೀಡುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಹಾಗೂ ಪಕ್ಕದ ರಾಜ್ಯಗಳಿಗೆ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಇದನ್ನು ಮನಗಂಡ ಸರ್ಕಾರವು ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಆಹಾರ ಕಿಟ್ ನೀಡಲು ನಿರ್ಧರಿಸಿದೆ.
- ಪ್ರತಿ ಕುಟುಂಬಕ್ಕೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವುದು:
ಪ್ರತಿ ಕುಟುಂಬಕ್ಕೂ ಸಮತೋಲಿತ ಆಹಾರವನ್ನು ಒದಗಿಸುವ ಉದ್ದೇಶದಿಂದ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ಮೂಲಕ ಬೇಳೆ, ಎಣ್ಣೆ, ಸಿರಿಧಾನ್ಯ ಹಾಗೂ ಸಕ್ಕರೆಗಳನ್ನುವಿತರಿಸಲಾಗುತ್ತದೆ. ಇದು ಮಧ್ಯಮ ಹಾಗೂ ಬಡ ವರ್ಗಗಳ ಕುಟುಂಬಳಿಗೆ ಪ್ರೊಟೀನ್, ವಿಟಮಿನ್ ಹಾಗೂ ಇತರೆ ಖನಿಜಯುಕ್ತ ಆಹಾರಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
- ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:
ಈಗ ಪ್ರತಿ ಒಂದು ದಿನಸಿ ಸಾಮಗ್ರಿಗಳ ಬೆಲೆಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಇದರಿಂದಾಗಿ ಮನೆಗೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗದೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರವು ಅರ್ಹ ಫಲಾನುಭವಿ ಕುಟುಂಬಗಳಿಗೆ ಇಂದಿರಾ ಕಿಟ್ ವಿತರಿಸುವ ಮೂಲಕದಿನಸಿ ವೆಚ್ಚವನ್ನು ಕಡಿಮೆ ಮಾಡಿ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ.
ಇಂದಿರಾ ಆಹಾರ ಕಿಟ್ ನಲ್ಲಿ ಏನೆಲ್ಲಾ ಇರುತ್ತದೆ?
ಕರ್ನಾಟಕ ಸರ್ಕಾರವು ಪ್ರತಿ ಅರ್ಹ ಫಲಾನುಭವಿ ಕುಟುಂಬಗಳ ಸದಸ್ಯರಿಗೆ ಪ್ರತಿ 5 ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ನಿರ್ಧರಿಸಿದ್ದು, ಈ ಒಂದು ಕಿಟ್ ನಲ್ಲಿ ಈ ಕೆಳಗೆ ನೀಡಿರುವ ದಿನಸಿ ಸಾಮಗ್ರಿಗಳು ಇರುತ್ತದೆ.
- ಸಕ್ಕರೆ 1ಕೆಜಿ
- ಉಪ್ಪು 1 ಕೆಜಿ
- ಎಣ್ಣೆ 1 ಲೀಟರ್
- ತೊಗರಿಬೇಳೆ 2 ಕೆಜಿ
ಪ್ರತಿ ಇಂದಿರಾ ಆಹಾರ ಕಿಟ್ ನ ಅಂದಾಜು ಮೊತ್ತ ಎಷ್ಟು?
ಕರ್ನಾಟಕ ಸರ್ಕಾರವು ಅಕ್ಕಿಯ ಬದಲಾಗಿ ವಿತರಿಸುತ್ತಿರುವ ಇಂದಿರಾ ಕಿಟ್ ತೊಗರಿಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆಗಳನ್ನು ಒಳಗೊಂಡಿದ್ದು, ಇಂದಿನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತೊಗರಿಬೇಳೆಯ ಬೆಲೆ ರೂ. 110 ಇರುವುದರಿಂದ ಪ್ರತಿ ಎರಡು ಕೆಜಿಗೆ ರೂ. 220 ಆಗುತ್ತದೆ. ಇದರೊಂದಿಗೆ ಸಕ್ಕರೆಗೆ ಕೆಜಿಗೆ ರೂ. 40 ಉಪ್ಪು ರೂ. 10 ಹಾಗೂ ಅಡುಗೆ ಎಣ್ಣೆಗೆ ರೂ. 100 ಆಗುತ್ತದೆ. ಹಾಗಾಗಿ ಪ್ರತಿ ಕಿಟ್ ನ ಅಂದಾಜು ಮೊತ್ತ ರೂ. 350 ಇರಲಿದೆ ಎಂದು ಅಂದಾಜಿಸಲಾಗಿದೆ.
ಅರ್ಹ ಫಲಾನುಭವಿಗಳು ಯಾರು?
- BPL ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳು
- ಅಂತ್ಯೋದಯ ಕಾರ್ಡ್ ಹೊಂದಿರುವ ಅತ್ಯಂತ ಬಡ ಕುಟುಂಬಗಳು
- ಗ್ರಾಮೀಣ ಹಾಗೂ ನಗರ ಪ್ರದೇಶದ ಕಡಿಮೆ ಆದಾಯದ ಕುಟುಂಬಗಳು ನಿರ್ಗತಿಕರು, ವಿಧವೆಯರು ಮತ್ತು ಹಿರಿಯ ನಾಗರಿಕರಿರುವ ಕುಟುಂಬಗಳು
ಪ್ರತ್ಯೇಕವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾ?
ಸರ್ಕಾರದ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಪಡಿತರ ಚೀಟಿ (Ration Card) ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ಕಿಟ್ ವಿತರಣೆ ನಡೆಯಲಿದೆ ಫಲಾನುಭವಿಗಳ ಡೇಟಾಬೇಸ್ ಅನ್ನು ಅಪ್‌ಡೇಟ್ ಮಾಡಿ ವಿತರಣೆ ವ್ಯವಸ್ಥೆ ಮಾಡಲಾಗುತ್ತದೆ.
BPL ಕುಟುಂಬಗಳಿಗೆ ಈ ಯೋಜನೆಯಿಂದ ಆಗುವ ಪ್ರಯೋಜನಗಳು:
- ಪ್ರತಿ ಕುಟುಂಬಕ್ಕೂ ಕೂಡ ಪೌಷ್ಟಿಕ ಆಹಾರದ ಲಭ್ಯತೆ ಹೆಚ್ಚುತ್ತದೆ.
- ಜೊತೆಗೆ ಪ್ರತಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲೂ ತಿಂಗಳ ದಿನಸಿ ವೆಚ್ಚದಲ್ಲಿ ಕಡಿತಗೊಂಡು ಆರ್ಥಿಕ ಉಳಿತಾಯ ಹೆಚ್ಚುತ್ತದೆ.
- ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಲ್ಲಿ ಈ ಒಂದು ಕಿಟ್ ಮೂಲಕ ಅಪೌಷ್ಟಿಕತೆ ಕಡಿಮೆಯಾಗುತ್ತದೆ. ಇದರಿಂದಾಗಿ ಮಕ್ಕಳಿಂದ ಹಿಡಿದು ವಯಸ್ಕರ ಆರೋಗ್ಯವು ಸುಧಾರಿಸುತ್ತದೆ.
ಅಂತಿಮ ತೀರ್ಮಾನ:
ಇಂದಿರಾ ಆಹಾರ ಕಿಟ್ ಯೋಜನೆ ಜಾರಿಯಾದರೆ, ಅದು ರಾಜ್ಯದ ಲಕ್ಷಾಂತರ BPL ಕುಟುಂಬಗಳಿಗೆ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಎರಡನ್ನೂ ಒದಗಿಸುವ ಮಹತ್ವದ ಹಂತವಾಗಲಿದೆ. ಜೊತೆಗೆ ದಿನಸಿ ವೆಚ್ಚದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಬಡ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸುವ ಸಾಧ್ಯತೆ ಇದೆ.
ಇತರೆ ಪ್ರಮುಖ ಲಿಂಕುಗಳು:
- SBI Scheme: SBI ಗ್ರಾಹಕರಿಗೆ ಗುಡ್ ನ್ಯೂಸ್! ₹100 ಹೂಡಿಕೆ → ₹40 ಲಕ್ಷ ಲಾಭ । ಇಂದೇ ಅಪ್ಲೈ ಮಾಡಿ
- Araike Kit: ಗರ್ಭಿಣಿಯರಿಗೆ ₹4000 ಸಹಾಯಧನ + ಮಡಿಲು ಕಿಟ್ ಉಚಿತ! ಇಂದೇ ಅಪ್ಲೈ ಮಾಡಿ
- Bima Sakhi: LIC ಬಿಮಾ ಸಖಿ ಯೋಜನೆ 2026 । SSLC ಪಾಸ್ ಆಗಿದ್ರೆ ಸಾಕು, ಉಚಿತ ತರಬೇತಿ + ಸ್ಟೈಫಂಡ್!
- Married : ₹3 ಲಕ್ಷ ಸಹಾಯಧನ! ವಧು – ವರರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗಿಫ್ಟ್
- Women Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್! ತಿಂಗಳಿಗೆ ರೂ. 200/- ಉಳಿತಾಯ ಮಾಡಿ 3 ಲಕ್ಷದ ವರೆಗೆ ಸಾಲ ಪಡೆಯಲು ಅವಕಾಶ