Gruhalakshmi: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್! ತಿಂಗಳಿಗೆ ರೂ. 200/- ಉಳಿತಾಯ ಮಾಡಿ 3 ಲಕ್ಷದ ವರೆಗೆ ಸಾಲ ಪಡೆಯಲು ಅವಕಾಶ

ನಮಸ್ಕಾರ ಸ್ನೇಹಿತರೆ, ಸ್ವಂತ ಉದ್ಯೋಗವನ್ನು ಮಾಡುವ ಕನಸು ಕಾಣುತ್ತಿದ್ದೀರಾ? ನಿಮಗೆ ಸಾಲ (Loan) ಸೌಲಭ್ಯಗಳ ಅನಿವಾರ್ಯತೆ ಇದೆಯೇ? ನೀವೇನಾದರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರೆ, ಸರ್ಕಾರದ ಕಡೆಯಿಂದ ಭಾರಿ ಮೊತ್ತದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಎನ್ನುವ ಹೊಸ ಸೌಲಭ್ಯವನ್ನು ಆರಂಭಿಸಿದ್ದು, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.

ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಜಾರಿಗೊಳಿಸಲಾಗಿದ್ದು, ಅರ್ಹ ಫಲಾನುಭವಿಗಳು ಈ ಒಂದು ಬ್ಯಾಂಕ್ ಮೂಲಕ ಪ್ರತಿ ತಿಂಗಳು ಸಣ್ಣ ಮೊತ್ತದ ಹಣವನ್ನು ಉಳಿತಾಯ ಮಾಡುವ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಲು ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ರೂ. 3,00,000 ದ ವರೆಗೆ ಸಾಲವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಒಂದು ಬ್ಯಾಂಕ್ ನಲ್ಲಿ ಏನೆಲ್ಲಾ ಸೌಲಭ್ಯಗಳು ಲಭ್ಯ? ಇದರ ಉದ್ದೇಶವೇನು? ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಳ್ಳುವುದು ಹೇಗೆ? ಹಾಗೂ ಇನ್ನಿತರ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

Loan

ಯೋಜನೆಯ ಕಿರು ಪರಿಚಯ:

ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆಯ ಹೆಸರು ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್
ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಫಲಾನುಭವಿಗಳು
ಸಾಲದ ಮೊತ್ತ ರೂ. 30,000 ದಿಂದ ರೂ. 3,00,000 ವರೆಗೆ

ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಯೋಜನೆ ಎಂದರೇನು?

ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಯೋಜನೆಯು ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಫಲಾನುಭವಿಗಳಾದ ಮನೆಯ ಯಜಮಾನಿಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ವಿಶಿಷ್ಟ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಕಡಿಮೆ ಬಡ್ಡಿ ದರದಲ್ಲಿ ರೂ. 3,00,000 ವರೆಗೆ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಇದು ಕೇವಲ ಹಣಕಾಸಿನ ವಹಿವಾಟುಗಳನ್ನು ನಡೆಸುವುದಕ್ಕಾಗಿ ಅಥವಾ ಸಾಲ ವಿತರಣಾ ಯೋಜನೆ ಮಾತ್ರವಲ್ಲದೆ ಮಹಿಳೆಯರಲ್ಲಿ ಆರ್ಥಿಕವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನ ಉದ್ದೇಶ:

  • ಮಹಿಳೆಯರು ಯಾರ ಹಂಗಿಲ್ಲದೆ ಸಣ್ಣ ಉದ್ಯೋಗ, ಹೈನುಗಾರಿಕೆ ಹಾಗೂ ಗೃಹ ಕೈಗಾರಿಗೆ ಸೇರಿದಂತೆ ಇನ್ನಿತರ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅಗತ್ಯವಾದ ಬಂಡವಾಳವನ್ನು ಒದಗಳಿಸಿ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸುವುದು .
  • ಗೃಹಲಕ್ಮಿ ಮಹಿಳೆಯರಿಗೆ ಸಿಗುವ ಗೃಹಲಕ್ಷ್ಮಿ ಹಣವನ್ನು ಸುಮ್ಮನೆ ವ್ಯರ್ಥಮಾಡುವ ಬದಲು ಸಹಕಾರಿ ಬ್ಯಾಂಕ್ ಮೂಲಕ ಪ್ರತಿ ತಿಂಗಳು ಸ್ವಲ್ಪ ಹಣವನ್ನಾದರೂ ಉಳಿತಾಯ ಮಾಡುವ ಮನೋಭಾವನ್ನು ಹೆಚ್ಚಿಸುವುದು.
  • ಖಾಸಗಿ ಲೇವಾದೇವಿಗಾರರೊಂದಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತಿರುವ ಮಹಿಳೆಯರಿಗೆ ಸಹಕಾರಿ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಭಾರೀ ಮೊತ್ತದ ಸಾಲ ಸೌಲಭ್ಯವನ್ನು ಒದಗಿಸಿ ಅವರ ಆರ್ಥಿಕ ಸ್ವಾತಂತ್ರ್ಯ ಹಾಗೂ ಜೀವನಮಟ್ಟವನ್ನು ಸುಧಾರಿಸುವುದು.
  • ಬಡ ಮತ್ತು ಮಾಧ್ಯಮ ವರ್ಗದ ಗೃಹಲಕ್ಷ್ಮಿ ಫಲಾನುಭವಿಗಳು ಯಾವುದೇ ಆಸ್ತಿಯನ್ನು ಅಡಮಾನ ಇಡದೆ ಸುಲಭವಾಗಿ ಸಾಲ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸುವುದು.

ಸಂಘವು ಹೇಗೆ ಕಾರ್ಯ ನಿರ್ವಹಿಸುತ್ತದೆ?

  • ವ್ಯವಹಾರದ ವಿಧಾನ:
    • ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ನಲ್ಲಿ ಸಂಪೂರ್ಣ ನಗದು ರಹಿತ ವಹಿವಾಟಿಗೆ ಒತ್ತು ನೀಡಲಾಗಿದೆ. ಹಾಗೆಯೇ ಅರ್ಹ ಫಲಾನುಭವಿಗಳು ಪಡೆದುಕೊಳ್ಳುವ ಸಾಲದ ಹಣವನ್ನು ಸಂಪೂರ್ಣವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
  • ನೋಂದಣಿ ಪ್ರಕ್ರಿಯೆ:
    • ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಸದಸ್ಯತ್ವ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
  • ಮಾಲೀಕತ್ವ:
    • ಇದು ಸಂಪೂರ್ಣವಾಗಿ ಗೃಹಲಕ್ಷ್ಮಿ ಮಹಿಳೆಯರೇ ನಡೆಸುವ ಬ್ಯಾಂಕ್ ವ್ಯವಸ್ಥೆಯಾಗಿದ್ದು, ತಾವೇ ಠೇವಣಿ ಇಟ್ಟು ತಾವೇ ಸಾಲವನ್ನು ಪಡೆದುಕೊಳ್ಳುವ ವ್ಯವಸ್ಥೆಯಾಗಿದೆ.
  • ಸಾಲ ಮರುಪಾವತಿಯ ಅವಧಿ:
    • ಸಾಲವನ್ನು ಪಡೆದ ಅವಧಿಯಿಂದ ಹಿಡಿದು ಕನಿಷ್ಠ 1 ವರ್ಷದಿಂದ 5 ವರ್ಷಗಳ ವರೆಗೆ ಸಾಲವನ್ನು ಮರುಪಾವತಿಸಬಹುದಾಗಿದೆ.

ಸಹಕಾರಿ ಸಂಘದಲ್ಲಿ ನೀಡುವ ಸಾಲದ ವಿವರ:

ಗೃಹಲಕ್ಷ್ಮಿ ಸಹಕಾರಿ ಸಂಘ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಾತ್ರ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅರ್ಹ ಫಲಾನುಭವಿಗಳು ಕನಿಷ್ಠ ರೂ. 30,000 ದಿಂದ ರೂ. 3,00,000 ವರೆಗೆ ಸಾಲವನ್ನು ಪಡೆಯಬಹುದಾಗಿದೆ. ಪ್ರತಿ ವರ್ಷಕ್ಕೆ ಕನಿಷ್ಠ 7% ಇಂದ 9% ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಸಾಲಗಳನ್ನು ಪಡೆದುಕೊಳ್ಳುವಾಗ ಯಾವುದೇ ಶೂರಿಟಿಯನ್ನು ನೀಡುವ ಅಗತ್ಯ ಇರುವುದಿಲ್ಲ.

ಅರ್ಹತಾ ಮಾನದಂಡಗಳೇನು?

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  • ಸಹಕಾರಿ ಸಂಘಕ್ಕೆ ಸೇರಲು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮಾತ್ರ ಅರ್ಹರಾಗಿರುತ್ತಾರೆ.
  • ಸಂಘದ ಸದಸ್ಯತ್ವವನ್ನು ಪಡೆಯಲು ರೂ. 1250 ಪ್ರವೇಶ ಶುಲ್ಕವನ್ನು ಪಾವತಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು.
  • ಬ್ಯಾಂಕ್ ಸದಸ್ಯರದ ನಂತರ ಕನಿಷ್ಠ 6 ತಿಂಗಳುಗಳ ಕಾಲ ಪ್ರತಿ ತಿಂಗಳು ರೂ. 200 ರಂತೆ ಉಳಿತಾಯ ಮಾಡಿರಬೇಕು.
  • ಸದಸ್ಯತ್ವವನ್ನು ಪಡೆದ ಆರು ತಿಂಗಳ ನಂತರ ಸಾಲವನ್ನು ಪಡೆದುಕೊಳ್ಳಲು ಅವಕಾಶ
  • ಸಣ್ಣ ವ್ಯಾಪಾರ, ಹೈನುಗಾರಿಕೆ, ಗೃಹ ಕೈಗಾರಿಕೆ ಸೇರಿದಂತೆ ಇನ್ನಿತರ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಉದ್ದೇಶದಿಂದ ಸಾಲವನ್ನು ಪಡೆದುಕೊಳ್ಳಬಹುದು.
  • ಸಾಲವನ್ನು ಪಡೆದುಕೊಳ್ಳುವ ಫಲಾನುಭವಿಗಳಿಗೆ ಯಾವುದೇ ಶೂರಿಟಿ ಅಥವಾ ಜಾಮೀನು ಅಗತ್ಯವಿಲ್ಲ.

ಅರ್ಹ ಫಲಾನುಭವಿಗಳು ಸಾಲವನ್ನು ಪಡೆದುಕೊಳ್ಳುವುದು ಹೇಗೆ?

  • ಗೃಹಲಕ್ಷಿ ಫಲಾನುಭವಿಗಳು ಸಂಘಕ್ಕೆ ರೂ 1000 ಷೇರು ಹಣ ಹಾಗೂ 250 ಅರ್ಜಿ ಶುಲ್ಕವನ್ನು ಪಾವತಿಸಿ ಸದಸ್ಯತ್ವವನ್ನು ಖಚಿತಪಡಿಸಿಕೊಳ್ಳಿ.
  • ನಂತರ ಪ್ರತಿ ತಿಂಗಳು ರೂ. 200 ಅನ್ನು ಉಳಿತಾಯ ಖಾತೆಗೆ ಜಮಾ ಮಾಡಿ.
  • ನಿರಂತರವಾಗಿ 6 ತಿಂಗಳುಗಳ ಕಾಲ ಉಳಿತಾಯ ಮಾಡಿದ ನಂತರ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಗೆ ಭೇಟಿ ನೀಡಿ.
  • ಅಲ್ಲಿ ಲಭ್ಯವಿರುವ ಸದಸ್ಯತ್ವ ಫಾರ್ಮ್ ಅನ್ನು ಭರ್ತಿ ಮಾಡಿ.
  • ಎಲ್ಲ ಅಗತ್ಯ ದಾಖಲೆಗಳನ್ನು ಅರ್ಜಿ ಫಾರ್ಮ್ ನೊಂದಿಗೆ ಲಗತ್ತಿಸಿ ಕಚೇರಿಗೆ ಸಲ್ಲಿಸಿ.
  • ಅರ್ಜಿ ಸಲ್ಲಿಸಿದ ನಂತರ ತಕ್ಷಣವೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಾಲ ಮಂಜೂರಾಗುತ್ತದೆ.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ರೂ. 2000 ಆರ್ಥಿಕ ನೆರವನ್ನು ನೀಡುತ್ತಿದ್ದು, ಈ ಒಂದು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಸದತ್ಯತ್ವ ಹೊಂದಿರುವ ಫಲಾನುಭವಿಗಳಿಗಾಗಿ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಎನ್ನುವ ಹೊಚ್ಚ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಯಾವುದೇ ಶೂರಿಟಿ ಇಲ್ಲದೆ ರೂ. 300000 ಲಕ್ಷದ ವರೆಗೆ ಸಾಲವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ನೀವೇನಾದರೂ ಈ ಒಂದು ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದಿದ್ದರೆ, ಇಂದೇ ರೂ. 1250 ಪ್ರವೇಶ ಶುಲ್ಕವನ್ನು ಪಾವತಿಸಿ ಸದಸ್ಯತ್ವವನ್ನು ಪಡೆದುಕೊಂಡು 6 ತಿಂಗಳುಗಳ ಕಾಲ ಪ್ರತಿ ತಿಂಗಳಿಗೆ ರೂ. 200 ಉಳಿತಾಯ ಮಾಡಿ ಸಾಲವನ್ನು ಪಡೆದುಕೊಳ್ಳಿ. ನಿಮ್ಮ ಆರ್ಥಿಕ ಭದ್ರತೆಗೆ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ನಿಮಗೆ ದೊಡ್ಡ ಆಸರೆ ಆಗಲಿದೆ.


ಇತರೆ ಪ್ರಮುಖ ಲಿಂಕುಗಳು:

Leave a Comment