ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸಲು ಬಿಮಾ ಸಖಿ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. ದೇಶದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗೆದೆ.
Bima Sakhi Scheme for Women
ಭಾರತದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಾಗಿದೆ. ಆದರೆ ಸಾಕಷ್ಟು ಗ್ರಾಮೀಣ ಭಾಗಗಳಲ್ಲಿನ ಮಹಿಳೆಯರು ಇನ್ನೂ ಕೂಡಾ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಷ್ಟು ಆರ್ಥಿಕ ಸ್ವತಂತ್ರರಾಗಿಲ್ಲ. ಇಂತಹ ಮಹಿಳೆಯರಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಮನೋಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ಜೀವ ವಿಮಾ ನಿಗಮವು ಭೀಮಾ ಸಖಿ ಎನ್ನುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಿದೆ.
ಬಿಮಾ ಸಖಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸಿಗುವ ಮಾಸಿಕ ವೇತನ ಎಷ್ಟು? ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ತರಬೇತಿ ಇರುತ್ತಾ? ಇದ್ದರೆ, ತರಬೇತಿ ಅವಧಿ ಎಷ್ಟು? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳೇನು? ಇನ್ನಿತರ ಸಂಪೂರ್ಣ ಮಾಹಿತಿಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಯೋಜನೆಯ ವಿಮರ್ಶೆ:
| ಯೋಜನೆಯನ್ನು ಅನುಷ್ಠಾನ ಗೊಳಿಸಿದ ಪ್ರಾಧಿಕಾರ | ಭಾರತೀಯ ಜೀವ ವಿಮಾ ನಿಗಮ |
| ಯೋಜನೆಯ ಹೆಸರು | LIC ಬಿಮಾ ಸಖಿ ಯೋಜನೆ |
| ಅರ್ಹ ಫಲಾನುಭವಿಗಳು | ಮಹಿಳೆಯರು |
| ಯೋಜನೆಯ ಲಾಭ | LIC ಏಜೆಂಟ್ ಆಗುವ ಜೊತೆಗೆ 3 ವರ್ಷಗಳ ಕಾಲ ಸ್ಟೈಫಂಡ್ ಪಡೆದುಕೊಳ್ಳಲು ಅವಕಾಶ |
| ನೋಂದಣಿ ಪ್ರಕ್ರಿಯೆ | ಆನ್ಲೈನ್ |
ಏನಿದು LIC ಬಿಮಾ ಸಖಿ ಯೋಜನೆ?
LIC ಬಿಮಾ ಸಖಿ ಯೋಜನೆಯು ಭಾರತೀಯ ಜೀವ ವಿಮಾ ನಿಗಮವು ಅನುಷ್ಠಾನಗೊಳಿಸಿದ ಸರ್ಕಾರಿ ಬೆಂಬಲಿತ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಮಹಿಳೆಯರು ಏಜೆಂಟ್ ಗಳಾಗಿ ನೇಮಕಗೊಂಡು, 3 ವರ್ಷಗಳ ಕಾಲ ಪ್ರತಿ ತಿಂಗಳು ನಿರ್ದಿಷ್ಟ ಸ್ಟೈಫಂಡ್ ಗಳನ್ನು ಪಡೆದುಕೊಳ್ಳಬಹುದಾಗಿದೆ.
LIC ಬಿಮಾ ಸಖಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 9 ಡಿಸೆಂಬರ್ 2024 ರಂದು ಹರಿಯಾಣ ಪಾಣಿಪತ್ ನಲ್ಲಿ ಚಾಲನೆ ತಂದಿದ್ದು, ಈ ಯೋಜನೆಯಡಿಯಲ್ಲಿ 3 ವರ್ಷಗಳ ತರಬೇತಿ ಪಡೆದುಕೊಂಡ ನಂತರ LIC ಏಜೆಂಟ್ ಗಳಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬಿಮಾ ಸಖಿ ಯೋಜನೆಯ ಉದ್ದೇಶ?
- ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು:
ಮಹಿಳೆಯರಿಗೆ ಬಿಮಾ ಸಖಿ ಯೋಜನೆಯಲ್ಲಿ ವಿಶೇಷ ತರಬೇತಿಗಳನ್ನು ನೀಡುವ ಜೊತೆಗೆ ಮಾಸಿಕ ನಿರ್ದಿಷ್ಟ ಸ್ಟೈಫಂಡ್ ಗಳನ್ನು ನೀಡುವ ಮೂಲಕ ಸ್ವಂತ ಉದ್ಯೋಗದ ಜೊತೆಗೆ ನಿರ್ದಿಷ್ಟ ಆದಾಯವನ್ನು ಗಳಿಸುವಂತೆ ಪ್ರೇರೇಪಿಸುವುದು.
- ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ಜಾಗೃತಿಯನ್ನು ಮೂಡಿಸುವುದು:
ಗ್ರಾಮೀಣ ಭಾಗದ ಜನರಿಗೆ ವಿಮಾ ಸಾಕ್ಷರತೆ ಕಡಿಮೆ ಇರುತ್ತದೆ. ಹಾಗಾಗಿ ಅಲ್ಲಿನ ಜನರಿಗೆ ವಿಮಾ ಮಹತ್ವದ ಕುರಿತು ತಿಳುವಳಿಕೆ ನೀಡುವುದು. ವಿಮಾ ಪಾಲಿಸಿಯನ್ನು ಮನೆಯ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಉದ್ಯೋಗಾವಕಾಶ ಕಲ್ಪಿಸುವುದು:
ಉದ್ಯೋಗವನ್ನು ಹುಡುಕುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಬಿಮಾ ಸಖಿ ಯೋಜನೆಯಡಿಯಲ್ಲಿ ಗೌರವಯುತ ಉದ್ಯೋಗವನ್ನು ಕಲ್ಪಿಸಿಕೊಡುವುದು.
ಮಹಿಳೆಯರಿಗಾಗುವ ಪ್ರಯೋಜನಗಳು:
- LIC ಬಿಮಾ ಸಖಿ ಯೋಜನೆಯು ಮೂರು ವರ್ಷಗಳ ಅವಧಿಯಾಗಿದ್ದು, ಈ ಸಮಯದಲ್ಲಿ LIC ಏಜೆಂಟ್ ಗಳಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾದ ತರಬೇತಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
- ಅರ್ಹ ಮಹಿಳೆಯರು ಮೂರು ವರ್ಷಗಳ ಕಾಲ ತರಬೇತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಮಾಸಿಕ ಸ್ಟೈಫಂಡ್ ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಮೊದಲ ವರ್ಷಕ್ಕೆ ಒಟ್ಟು ರೂ. 84,000, ಎರಡನೇ ವರ್ಷ ರೂ. 72,000 ಹಾಗೂ ಮೂರನೇ ವರ್ಷ 66000 ದ ವರೆಗೆ ಸ್ಟೈಫಂಡ್ ಗಳನ್ನು ಪಡೆದುಕೊಳ್ಳಬಹುದಾಗಿದೆ.
- ಅರ್ಹ ಮಹಿಳೆಯರು ವಿಮಾ ಪಾಲಿಸಿಯ ಮಾರಾಟದ ಮೇಲೆ ಸಿಗುವ ಕಮಿಷನ್ ಜೊತೆಗೆ ಸ್ಥಿರವಾಗಿ ಆದಾಯವನ್ನು ಗಳಿಸಲು ಈ ಯೋಜನೆಯು ಸಹಕಾರಿಯಾಗಿದೆ.
- ಅರ್ಹ ಮಹಿಳೆಯರು ಮೂರು ವರ್ಷಗಳ ಕಾಲ ಯಶಸ್ವಿಯಾಗಿ ತರಬೇತಿ ಮುಗಿಸಿದ ನಂತರ ಸಾಮಾನ್ಯ LIC ಏಜೆಂಟ್ ಗಳಾಗಿ ಮುಂದುವರೆಯಲು ಅವಕಾಶ ಇರುತ್ತದೆ.
ಬಿಮಾ ಸಖಿ ಯೋಜನೆಯಡಿಯಲ್ಲಿ ಸಿಗುವ ಸ್ಟೈಫಂಡ್ ವಿವರ:
ಬಿಮಾ ಸಖಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ 3 ವರ್ಷಗಳ ಕಾಲ ಪ್ರತಿ ತಿಂಗಳು ನಿರ್ದಿಷ್ಟ ಸ್ಟೈಫಂಡ್ ಗಳನ್ನು ನೀಡಲಾಗುತ್ತಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.
- ಮೊದಲ ವರ್ಷ: ಅರ್ಹ ಮಹಿಳಾ ಏಜೆಂಟ್ ಗಳಿಗೆ ಮೊದಲ ವರ್ಷ ಪ್ರತಿ ತಿಂಗಳು ರೂ. 7000 ಸ್ಟೈಫಂಡ್ ಗಳನ್ನು ನೀಡಲಾಗುತ್ತದೆ.
- ಎರಡನೇ ವರ್ಷ: ಅರ್ಹ ಮಹಿಳಾ ಏಜೆಂಟ್ ಗಳು ಎರಡನೇ ವರ್ಷದಲ್ಲಿ ಬಿಮಾ ಸಖಿ ಯೋಜನೆಯಡಿಯಲ್ಲಿ 6000 ಸ್ಟೈಫಂಡ್ ಗಳನ್ನು ನೀಡಲಾಗುತ್ತದೆ. ಈ ಸ್ಟೈಫಂಡ್ ಗಳನ್ನು ಪಡೆದುಕೊಳ್ಳಬೇಕಾದರೆ, ಮೊದಲ ವರ್ಷದಲ್ಲಿ ಮಾಡಿದ ಪಾಲಿಸಿಗಳಲ್ಲಿ ಕನಿಷ್ಠ 65% ಪಾಲಿಸಿಗಳು ಎರಡನೇ ವರ್ಷದಲ್ಲಿ ಪ್ರತಿ ತಿಂಗಳು ಚಾಲ್ತಿಯಲ್ಲಿರಬೇಕು.
- ಮೂರನೇ ವರ್ಷ: ಅರ್ಹ ಮಹಿಳಾ ಏಜೆಂಟ್ ಗಳು ಮೂರನೇ ವರ್ಷದಲ್ಲಿ ಬಿಮಾ ಸಖಿ ಯೋಜನೆಯಡಿಯಲ್ಲಿ 5000 ಸ್ಟೈಫಂಡ್ ಗಳನ್ನು ನೀಡಲಾಗುತ್ತದೆ. ಈ ಸ್ಟೈಫಂಡ್ ಗಳನ್ನು ಪಡೆದುಕೊಳ್ಳಬೇಕಾದರೆ, ಎರಡನೇ ವರ್ಷದಲ್ಲಿ ಮಾಡಿದ ಪಾಲಿಸಿಗಳಲ್ಲಿ ಕನಿಷ್ಠ 65% ಪಾಲಿಸಿಗಳು ಮೂರನೇ ವರ್ಷದಲ್ಲಿ ಪ್ರತಿ ತಿಂಗಳು ಚಾಲ್ತಿಯಲ್ಲಿರಬೇಕು.
LIC ಬಿಮಾ ಸಖಿ ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:
- ಬಿಮಾ ಸಖಿ ಯೋಜನೆಯು ಮಹಿಳೆಯರಿಗೆ ಮಾತ್ರ ಮೀಸಲಾಗಿದೆ.
- ಅರ್ಜಿದಾರ ಮಹಿಳೆಯರು ಕನಿಷ್ಠ 18 ರಿಂದ ಗರಿಷ್ಟ 70 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರು ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಯೋಜನೆಯ ಲಾಭವನ್ನು ಪಡೆಯಲು ಯಾರು ಅನರ್ಹರು?
- ಪ್ರಸ್ತುತ LIC ಏಜೆಂಟ್ ಗಳಾಗಿ ಕೆಲಸ ಮಾಡುತ್ತಿರುವ ಮಹಿಳೆಯರು.
- ಈ ಹಿಂದೆ LIC ಏಜೆಂಟ್ ಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಮಹಿಳೆಯರು
- ಸರ್ಕಾರಿ ನೌಕರರ ಕುಟುಂಬದ ಸದಸ್ಯರು
- ಪ್ರಸ್ತುತ LIC ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಅಥವಾ ಏಜೆಂಟ್ ಗಳ ಹತ್ತಿರದ ಸಂಬಂಧಿಕರು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಾಸಸ್ಥಳ ದೃಢೀಕರಣ ಪತ್ರ
- ವಯಸ್ಸಿನ ಪುರಾವೆ
- ಶೈಕ್ಷಣಿಕ ಪ್ರಮಾಣಪತ್ರ
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
LIC ಬಿಮಾ ಸಖಿ ಯೋಜನೆಗೆ ಅರ್ಹ ಫಲಾನುಭವಿಗಳು ಈ ಕೆಳಗೆ ನೀಡಿರುವಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಹ ಫಲಾನುಭವಿಗಳು LIC ಅಧಿಕೃತ ವೆಬ್ಸೈಟ್ https://licindia.in/lic-s-bima-sakhi ಗೆ ಭೇಟಿ ನೀಡಿ.
- ನಂತರ ಅದನ್ನು ಸ್ಕ್ರಾಲ್ ಮಾಡಿ ಕ್ಲಿಕ್ ಹಿಯರ್ ಫಾರ್ ಬಿಮಾ ಸಖಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಮುಂದಿನ ಪುಟದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವಿಳಾಸವನ್ನು ಭರ್ತಿ ಮಾಡಿ ಅಲ್ಲಿ ನೀಡಲಾದ ಕ್ಯಾಪ್ಚ ಕೋಡ್ ಎಂಟರ್ ಮಾಡಿ ಅಪ್ಲೈ ಬಟನ್ ಕ್ಲಿಕ್ ಮಾಡಿ.
- ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ನೀವು ಉದ್ಯೋಗವನ್ನು ಆರಂಭಿಸಲು ಬಯಸುವ ನಗರವನ್ನು ಹಾಗೂ ಶಾಖಾ ಕಚೇರಿಯನ್ನು ಆಯ್ಕೆ ಮಾಡಿ.
- ನಂತರ ಅಪ್ಲೈ ಲೀಡ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅಂತಿಮ ತೀರ್ಮಾನ:
ಭಾರತೀಯ ಜೀವ ವಿಮಾ ನಿಗಮವು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು LIC ಬಿಮಾ ಸಖಿ ಯೋಜನೆಯನ್ನು ಜಾರಿಗೊಳಿಸಿದ್ದು, ನೀವೇನಾದರೂ SSLC ಪಾಸ್ ಆಗಿದ್ದು, ಒಳ್ಳೆಯ ಗೌರವಯುತ ಉದ್ಯೋಗವನ್ನು ಮಾಡಬೇಕೆಂದಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಉಚಿತವಾಗಿ ತರಬೇತಿ ಪಡೆಯುವ ಜೊತೆಗೆ ಸ್ಟೈಫಂಡ್ ಗಳನ್ನು ಪಡೆದುಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Married : ₹3 ಲಕ್ಷ ಸಹಾಯಧನ! ವಧು – ವರರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗಿಫ್ಟ್
- Women Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್! ತಿಂಗಳಿಗೆ ರೂ. 200/- ಉಳಿತಾಯ ಮಾಡಿ 3 ಲಕ್ಷದ ವರೆಗೆ ಸಾಲ ಪಡೆಯಲು ಅವಕಾಶ
- Borewell: ರೈತರಿಗೆ ಗುಡ್ ನ್ಯೂಸ್! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಅಹ್ವಾನ । ಇಂದೇ ಅರ್ಜಿ ಸಲ್ಲಿಸಿ
- Labour: ₹60,000 ಸ್ಕಾಲರ್ಶಿಪ್! ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗಿಫ್ಟ್! ಇಂದೇ ಅಪ್ಲೈ ಮಾಡಿ