ನಮಸ್ಕಾರ ಸ್ನೇಹಿತರೆ, ನೀವೇನಾದರೂ SBI ಗ್ರಾಹಕರಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗ್ರಾಹಕರಿಗೆ ಮತ್ತೊಂದು ಆಕರ್ಷಕ ಯೋಜನೆಯನ್ನು ಜಾರಿಗೊಳಿಸುವ ಮೂಲಕ SBI ಗ್ರಾಹಕರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಮುಂದಾಗಿದೆ.
SBI Scheme 2026 in Kannada
SBI ತನ್ನ ಉಳಿತಾಯ ಖಾತೆದಾರರಿಗೆ ಅತ್ಯಂತ ಕಡಿಮೆ ಪ್ರೀಮಿಯಂ ಮೂಲಕ ರೂ. 40 ಲಕ್ಷದ ವರೆಗೆ ವಿಮೆ ಸೌಲಭ್ಯವನ್ನು ಒದಗಿಸುವ ಸಲುವಾಗಿ SBI ಗ್ರೂಪ್ ವೈಯಕ್ತಿಕ ಅಪಘಾತ ವಿಮೆ ಎನ್ನುವ ಹೊಚ್ಚ ಹೊಸ ಯೋಜನೆಯನ್ನು ಪರಿಚಯಿಸಿದೆ.
ಇಂದಿನ ಕಾಲಘಟ್ಟದಲ್ಲಿ ಅಪಘಾತಗಳು ಯಾವಾಗ ಸಂಭವಿಸುತ್ತದೆ? ಹೇಗೆ ಸಂಭವಿಸುತ್ತದೆ? ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ, ಆರ್ಥಿಕ ಭದ್ರತೆಯನ್ನು ಒದಗಿಸುವ ವಿಮಾ ಯೋಜನೆಯು ಅತ್ಯಂತ ಮುಖ್ಯವಾಗಿದೆ. ಇದೇ ಕಾರಣಕ್ಕಾಗಿ SBI ತಮ್ಮ ಗ್ರಾಹಕರ ಹಿತರಕ್ಷಣೆಗೆಂದೇ ಅಪಘಾತ ವಿಮೆಯನ್ನು ಜಾರಿಗೊಳಿಸಿದೆ.

ಈ ಕೆಳಗಿನ ಹಂತಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ವಿಮಾ ಮೊತ್ತ ಎಷ್ಟು? ಯಾರು ಅರ್ಹರು? ಹಾಗೂ ಇನ್ನಿತರ ಕಂಪ್ಲೀಟ್ ಡೀಟೇಲ್ಸ್ ಗಳನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಹೊಸ ಹೊಸ ಅಪ್ಡೇಟ್ ಗಳಿಗಾಗಲಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.
ಯೋಜನೆಯ ವಿಮರ್ಶೆ:
| ಯೋಜನೆಯ ಹೆಸರು | SBI ಗ್ರೂಪ್ ವೈಯಕ್ತಿಕ ಅಪಘಾತ ವಿಮೆ |
| ಜಾರಿಗೊಳಿಸಿದ ಸಂಸ್ಥೆ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
| ಅರ್ಹ ಅಭ್ಯರ್ಥಿಗಳು | SBI ಉಳಿತಾಯ ಖಾತೆದಾರರು |
| ವಿಮಾ ಮೊತ್ತ | ಗರಿಷ್ಟ ರೂ. 40 ಲಕ್ಷ |
| ಪ್ರೀಮಿಯಂ ಮೊತ್ತ | ವಾರ್ಷಿಕ ರೂ. 100 ಇಂದ ಪ್ರಾರಂಭ |
ಏನಿದು ವೈಯಕ್ತಿಕ ಅಪಘಾತ ವಿಮೆ ಯೋಜನೆ?
ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ಅನಿರೀಕ್ಷತ ಘಟನೆಗಳಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ರಕ್ಷಣೆ ನೀಡುವ ಹಣಕಾಸು ವ್ಯವಸ್ಥೆಯನ್ನು ವೈದ್ಯಕೀಯ ಅಪಘಾತ ವಿಮೆ ಎನ್ನಲಾಗುತ್ತದೆ.
SBI ಗ್ರೂಪ್ ವೈದ್ಯಕೀಯ ಅಪಘಾತ ವಿಮೆ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗ್ರಾಹಕರ ಹಾಗೂ ಅವರ ಕುಟುಂಬಸ್ಥರ ಹಿತರಕ್ಷಣೆಗಾಗಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು, ಪ್ರತಿ ವರ್ಷ ರೂ. 100 ರಿಂದ ಪ್ರೀಮಿಯಂ ಹಣವನ್ನು ಪಾವತಿಸಿ ಒಟ್ಟು ರೂ. 40 ಲಕ್ಷದ ವರೆಗೆ ವಿಮಾ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
SBI ಈ ಒಂದು ಯೋಜನೆಯನ್ನು ಜಾರಿಗೊಳಿಸುವುದರ ಹಿಂದಿನ ಉದ್ದೇಶ, ಕಡಿಮೆ ಆದಾಯ ಹೊಂದಿರುವ ಅಭ್ಯರ್ಥಿಗಳೂ ಕೂಡ ಅಪಘಾತ ವಿಮೆಯಂತಹ ಆರ್ಥಿಕ ಭದ್ರತೆಯನ್ನು ಪಡೆಯಲು ಅವಕಾಶ ಕಲ್ಪಿಸುವುದಾಗಿದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯತೆ:
- ಸುಲಭ ಪ್ರಕ್ರಿಯೆ:
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಿಯೂ ಅಲೆದಾಡುವ ಅಗತ್ಯವಿಲ್ಲ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ಸಾಕು.
- ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚಿನ ಕವರ್:
ಬೇರೆಲ್ಲಾ ವಿಮಾ ಕಂಪನಿಗಳಲ್ಲಿ ಪ್ರೀಮಿಯಂ ಮೊತ್ತವು ದುಬಾರಿಯಾಗಿರುತ್ತದೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ, SBI ನಲ್ಲಿ ಕಡಿಮೆ ಪ್ರೀಮಿಯಂ ಪಾವತಿಸುವ ಮೂಲಕ ರೂ. 40 ಲಕ್ಷದ ವರೆಗೆ ವಿಮಾ ಮೊತ್ತವನ್ನು ಪಡೆದುಕೊಳ್ಳಬಹುದು. ಇದರಿಂದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
- ವ್ಯಾಪಕ ರಕ್ಷಣೆ:
SBI ಗ್ರೂಪ್ ವೈಯಕ್ತಿಕ ಅಪಘಾತ ವಿಮೆ ಯೋಜನೆಯು ಕೇವಲ ಅಪಘಾತಗಳಿಗೆ ಮಾತ್ರ ಸೀಮಿತವಾಗಿರದೆ, ಶಾಶ್ವತ ಅಂಗವೈಕಲ್ಯತೆಗೂ ವಿಮಾ ಮೊತ್ತ ಅನ್ವಹಿಸುತ್ತದೆ.
ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು?
- ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸಕ್ರಿಯ ಉಳಿತಾಯ ಖಾತೆ ಗ್ರಾಹಕರಾಗಿರಬೇಕು. ಅಥವಾ ವೈಯಕ್ತಿಕ ಚಾಲ್ತಿ ಖಾತೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ ಖಾಯಂ ನಿವಾಸಿ ಆಗಿರಬೇಕು.
- ಪಾಲಿಸಿಯನ್ನು ಖರೀದಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 65 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಿಮಾ ಹಾಗೂ ಪ್ರೀಮಿಯಂ ಮೊತ್ತ:
SBI ಗ್ರೂಪ್ ವೈಯಕ್ತಿಕ ಅಪಘಾತ ವಿಮೆ ಯೋಜನೆಯಡಿಯಲ್ಲಿ ವಿಮಾ ಮೊತ್ತ ಹೆಚ್ಚಾಗುತ್ತಾ ಹೋದಂತೆ ಪ್ರೀಮಿಯಂ ಹಣವೂ ಹೆಚ್ಚಾಗುತ್ತಾ ಹೋಗುತ್ತದೆ. ಅವುಗಳ ವಿವರ ಈ ಕೆಳಕಂಡಂತಿದೆ.
| ವಿಮಾ ಮೊತ್ತ | ವಾರ್ಷಿಕ ಪ್ರೀಮಿಯಂ |
| ₹2,00,000 | ₹100 |
| ₹4,00,000 | ₹200 |
| ₹10,00,000 | ₹500 |
| ₹20,00,000 | ₹1000 |
| ₹40,00,000 | ₹2000 |
ವಿಮಾ ಯೋಜನೆಯು ಯಾವೆಲ್ಲಾ ಅಪಘಾತಗಳಿಗೆ ರಕ್ಷಣೆ ನೀಡುತ್ತದೆ?
- ರಸ್ತೆ ಮತ್ತು ವಾಹನ ಅಪಘಾತ
- ಭೂಕಂಪ, ಪ್ರವಾಹ ಮುಂತಾದವುಗಳಿಂದ ಆಗುವ ಸಾವು ಅಥವಾ ಗಾಯಗಳಿಗೆ
- ವಿದ್ಯುತ್ ಅಪಘಾತಗಳಿಂದ ಸಂಭವಿಸುವ ಅನಾಹುತಗಳು
- ಬೆಂಕಿ ಅಪಘಾತ ಅಥವಾ ನೀರಿನಲ್ಲಿ ಮುಳುಗುವುದು
- ಚೇಳು ಅಥವಾ ಹಾವು ಕಡಿತ
- ಇನ್ನಿತರ ಅನಿರೀಕ್ಷತ ಅಪಘಾತಗಳು
ಯೋಜನೆಯಡಿಯಲ್ಲಿ ದೊರಕುವ ಪ್ರಮುಖ ಸೌಲಭ್ಯಗಳು:
- ಅಪಘಾತದಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ, ₹40 ಲಕ್ಷ ಸಂಪೂರ್ಣ ಮೊತ್ತವು ನಾಮಿನಿ ಹೆಸರಿಗೆ ವಿಮಾ ಮೊತ್ತವು ಪಾವತಿಯಾಗುತ್ತದೆ.
- ಅಪಘಾತದ ಕಾರಣದಿಂದ ಶಾಶ್ವತ ಸಂಪೂರ್ಣ ಅಂಗವೈಕಲ್ಯತೆ ಹೊಂದಿದ್ದರೆ, ₹40 ಲಕ್ಷ ಸಂಪೂರ್ಣ ಮೊತ್ತವು ಪಾಲಿಸಿದಾರನಿಗೆ ಲಭ್ಯವಾಗುತ್ತದೆ.
- ಪಾಲಿಸಿದಾರರ ಮೊದಲ ಇಬ್ಬರು ಮಕ್ಕಳಿಗೆ ತಲಾ ₹20,000 ದಂತೆ ಶೈಕ್ಷಣಿಕ ನೆರವು ನೀಡಲಾಗುತ್ತದೆ.
- ಅಪಘಾತದ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ವೆಚ್ಚವನ್ನು ಭರಿಸಲು ₹1,200 ಸಿಗುತ್ತದೆ.
- ಅಪಘಾತದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಅಥವಾ ಸಾಗಾಣಿಕೆಗಾಗಿ ರೂ. 10,000 ಸಂಸ್ಕರಣಾ ವೆಚ್ಚವನ್ನು ನೀಡಲಾಗುತ್ತದೆ.
ಈ ಯೋಜನೆ ಯಾವ ಅಪಘಾತಗಳನ್ನು ಒಳಗೊಂಡಿಲ್ಲ?
- ವಯೋಸಹಜ ಕಾರಣಗಳಿಂದ ಅಥವಾ ಅನಾರೋಗ್ಯದಿಂದ ಸಾವು ಸಂಭವಿಸಿದರೆ ಈ ಪಾಲಿಸಿ ಅನ್ವಯವಾಗುವುದಿಲ್ಲ
- ಉದ್ದೇಶಪೂರ್ವಕವಾಗಿ ಮಾಡಿಕೊಂಡ ಗಾಯಗಳಿಗೆ ಹಾಗೂ ಆತ್ಮಹತ್ಯೆಗೆ ಈ ಪಾಲಿಸಿ ಅನ್ವಯಾಗುವುದಿಲ್ಲ.
- ಕಾನೂನು ಬಾಹಿರ ಕೆಲಸಗಳಿಗೆ ತೊಡಗಿರುವ ಆಗುವ ಅಪಘಾತಗಳಿಗೆ ಈ ವಿಮೆ ಅನ್ವಯವಾಗುವುದಿಲ್ಲ.
- ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವನೆ ಮಾಡಿ ವಾಹನ ಚಲಾಯಿಸುವಾಗ ಆಗುವ ಅಪಘಾತಗಳಿಗೆ ವಿಮೆ ಅನ್ವಹಿಸುವುದಿಲ್ಲ.
- ಯಾವುದೇ ಅಪಾಯಕಾರಿ ಸಾಹಸ ಕ್ರೀಡೆಗಳಿಗೆ ಭಾಗವಹಿಸಿರುವ ಸಂದರ್ಭಗಳಲ್ಲಿ ಗಾಯಗಳಾದರೆ ವಿಮೆ ಅನ್ವಯವಾಗುವುದಿಲ್ಲ.
ವಿಮೆಯನ್ನು ಪಡೆಯುವುದು ಹೇಗೆ?
ಬ್ಯಾಂಕ್ ಗೆ ಭೇಟಿ ನೀಡಿ ವಿಮೆ ಪಡೆಯುವುದು:
- SBI ಗ್ರಾಹಕರು ತಮ್ಮ ಹತ್ತಿರದ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಭೇಟಿ ನೀಡಿ “SBI ಗ್ರೂಪ್ ವೈಯಕ್ತಿಕ ಅಪಘಾತ ವಿಮೆ” ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಕೇಳಿ ಪಡೆದು ಫಾರ್ಮ್ ಭರ್ತಿಮಾಡಿ ಕಚೇರಿಗೆ ಸಲ್ಲಿಸಬಹುದು.
- ಆಪ್ ಅಥವಾ ನೆಟ್ ಬ್ಯಾಂಕ್ ಮೂಲಕ ವಿಮೆ ಪಡೆಯುವುದು:
ಪಾಲಿಸಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SBI ನೆಟ್ ಬ್ಯಾಂಕಿಂಗ್ SBI ಯೋನೋ ಆಪ್ ಲಾಗಿನ್ ಆಗಿ. ಇನ್ಶೂರೆನ್ಸ್ ವಿಭಾಗಕ್ಕೆ ಭೇಟಿ ನೀಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಕೆಲವೇ ನಿಮಿಷಗಳಲ್ಲಿ ಸ್ವತಃ ನೀವೇ ಪಾಲಿಸಿಯನ್ನು ಆಕ್ಟಿವೇಟ್ ಮಾಡಬಹುದಾಗಿದೆ.
ವಿಮಾ ಹಣ ಪಡೆಯುವ ವಿಧಾನ:
- ಪೊಲೀಸರಿಗೆ ದೂರು ಸಲ್ಲಿಸುವುದು:
ಅಪಘಾತ ನಡೆದ ಕೂಡಲೇ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಸಲ್ಲಿಸುವುದು ಅಗತ್ಯವಾಗಿದೆ.
- ಆಸ್ಪತ್ರೆ ದಾಖಲೆಗಳು:
ಅಪಘಾತ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು.
- ಮರಣೋತ್ತರ ಪ್ರಮಾಣಪತ್ರ:
ಅಪಘಾತ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ಮರಣ ಸಂಭವಿಸಿದರೆ ಮರಣೋತ್ತರ ಪ್ರಮಾಣಪತ್ರ ಸಲ್ಲಿಸುವುದು ಅಗತ್ಯವಾಗಿದೆ.
- ಕ್ಲೈಮ್ ಗೆ ಅರ್ಜಿ ಸಲ್ಲಿಸುವುದು:
ಅಪಘಾತ ಸಂಭವಿಸಿದ ತಕ್ಷಣ ಅಥವಾ ನಿಗದಿತ ಸಮಯದ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಪಾಲಿಸಿದಾರ ಅಥವಾ ನಾಮಿನಿಯು ಸಂಬಂಧಿತ ಬ್ಯಾಂಕ್ ಖಾತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಂತಿಮ ಮಾತು:
ಯಾವುದೇ ವ್ಯಕ್ತಿಯ ಜೀವನದಲ್ಲಿ ಅಪಘಾತಗಳು ಅಥವಾ ಅನಿರೀಕ್ಷಿತ ಘಟನೆಗಳು ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ನಿಭಾಯಿಸಲು ನಾವು ಇಂದಿನಿಂದಲೇ ಸೂಕ್ತ ಆರ್ಥಿಕ ಭದ್ರತೆ ಯೋಜನೆಗಳನ್ನು ಪರಿಗಣಿಸಬೇಕಾಗುತ್ತದೆ. SBI ನ ಈ ಒಂದು ಯೋಜನೆಯು ಕಡಿಮೆ ಪ್ರೀಮಿಯಂ ಹಣವನ್ನು ಹೊಂದಿದ್ದು, ಭಾರಿ ವಿಮಾ ಮೊತ್ತಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದು ಎಲ್ಲಾ ವರ್ಗಗಳ ಜನಸಾಮಾನ್ಯರೂ ಸೂಕ್ತವಾಗಿದೆ. ಹಾಗಾಗಿ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Araike Kit: ಗರ್ಭಿಣಿಯರಿಗೆ ₹4000 ಸಹಾಯಧನ + ಮಡಿಲು ಕಿಟ್ ಉಚಿತ! ಇಂದೇ ಅಪ್ಲೈ ಮಾಡಿ
- Bima Sakhi: LIC ಬಿಮಾ ಸಖಿ ಯೋಜನೆ 2026 । SSLC ಪಾಸ್ ಆಗಿದ್ರೆ ಸಾಕು, ಉಚಿತ ತರಬೇತಿ + ಸ್ಟೈಫಂಡ್!
- Married : ₹3 ಲಕ್ಷ ಸಹಾಯಧನ! ವಧು – ವರರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗಿಫ್ಟ್
- Women Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್! ತಿಂಗಳಿಗೆ ರೂ. 200/- ಉಳಿತಾಯ ಮಾಡಿ 3 ಲಕ್ಷದ ವರೆಗೆ ಸಾಲ ಪಡೆಯಲು ಅವಕಾಶ