DK Scheme: ನಿನ್ನೆ ತಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ಡಿ .ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಹಮ್ಮಿಕೊಂಡಿದ್ದ ಸಚಿವ ಸಂಪುಟದಲ್ಲಿ ಗ್ರಾಮೀಣ ಮತ್ತು ನಗರದ ಯುವಕರ ಅಭಿವೃದ್ದಿಗಾಗಿ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ, ಸ್ವಾವಲಂಬಿಯಾಗಿಸುವ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ರೂಪಿಸಲಾಗಿದ್ದು, ಯುವಕರ ಆರ್ಥಿಕ ಸಬಲೀಕರಣದಿಂದ ಕರ್ನಾಟಕ ರಾಜ್ಯವನ್ನು ಅತ್ಯಂತ ಪ್ರಗತಿಪರ ರಾಜ್ಯವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ.
ಕರ್ನಾಟಕ ಸರ್ಕಾರವು ಯುವಕರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಭಾರತ್ ಜೋಡೋ ಸಂಘವನ್ನು ಸ್ಥಾಪಿಸಿ ಪ್ರತಿ ಸಂಘಕ್ಕೆ ರೂ. 10 ಲಕ್ಷ ಸಹಾಯಧನ ನೀಡಲು ಮುಂದಾಗಿದೆ.
ಪ್ರಸ್ತುತ ಲೇಖನದಲ್ಲಿ ಯೋಜನೆಯ ಉದ್ದೇಶ, ಯೋಜನೆಯ ಪ್ರಯೋಜನ ಹಾಗೂ ಇನ್ನಿತರ ಮಾಹಿತಿಯನ್ನು ನೀಡಲಾಗಿದ್ದು, ಈ ಕೆಳಗಿನ ಹಂತದಲ್ಲಿ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಚಿವ ಸಂಪುಟದಲ್ಲಿ ರಾಜ್ಯದಾದ್ಯಂತ ಒಟ್ಟು, 10,000 ಭಾರತ್ ಜೋಡೋ ಯುವಕರ ಸಂಘವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. * ನಗರ ಪ್ರದೇಶದ ವಾರ್ಡ್ ಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರತಿ ಗ್ರಾಮ ಪಂಚಾಯಿತ್ ಮಟ್ಟದಲ್ಲಿ ರಚನೆಯಾಗುವ ಪ್ರತಿ ಸಂಘಕ್ಕೆ ಸರ್ಕಾರದಿಂದ ತಲಾ ರೂ. 10 ಲಕ್ಷ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. * ಪ್ರತಿ ಯುವಕರ ಸಂಘದಲ್ಲಿ ಅಂದಾಜು 120 ರಿಂದ 200 ಸದಸ್ಯರನ್ನು ಒಳಗೊಂಡಿರಬೇಕು ಎಂದು ಅಂದಾಜಿಸಲಾಗಿದೆ. |
ಏನಿದು ಭಾರತ್ ಜೋಡೋ ಯುವಕರ ಸಂಘ ಯೋಜನೆ?
ಭಾರತ್ ಜೋಡೋ ಯುವಕರ ಸಂಘ ಯೋಜನೆಯು ಯುವಕರ ಅಭಿವೃದ್ದಿಗಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿದ ಮಹತ್ವದ ಯೋಜನೆಯಾಗಿದ್ದು, ಈ ಒಂದು ಯೋಜನೆಯಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಹಾಯಧನವನ್ನು ಒದಗಿಸುವುದಿಲ್ಲ ಬದಲಾಗಿ ಪ್ರತಿ ಯುವಕರ ಸಮೂಹಕ್ಕೆ ನೀಡಲಾಗುವ ಸಹಾಯಧನವಾಗಿದೆ.
ಈ ಒಂದು ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ಒಟ್ಟು 10,000 ಭಾರತ್ ಜೋಡೋ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಸಂಘಕ್ಕೆ ರೂ. 10 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಘವು ಕೂಡ 150 ರಿಂದ 200 ಯುವಕರನ್ನು ಒಳಗೊಂಡಿರುತ್ತದೆ.
ಯೋಜನೆಯ ಉದ್ದೇಶ:
- ಯುವಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು:
ಭಾರತ್ ಜೋಡೋ ಸಂಘದಡಿಯಲ್ಲಿ ಯುವಕರಿಗೆ ಆರ್ಥಿಕ ನೆರವನ್ನು ಒದಗಿಸಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆರ್ಥಿಕವಾಗಿ ಸದೃಢರಾದ ಯುವಕರು ತಮ್ಮ ಕುಟುಂಬದ ಜೊತೆಗೆ ಸಮಾಜದ ಅಭಿವೃದ್ಧಿಗೂ ಕೂಡ ಶ್ರಮಿಸುತ್ತಾರೆ ಎನ್ನುವುದು ಈ ಯೋಜನೆಯ ಆಶಯವಾಗಿದೆ.
- ಯುವಕರಿಗೆ ಸ್ವಂತ ಉದ್ಯೋಗಾವಕಾಶವನ್ನು ಸೃಷ್ಟಿಸುವುದು:
ಭಾರತ್ ಜೋಡೋ ಸಂಘ ಯೋಜನೆಯಡಿಯಲ್ಲಿ ಪ್ರತಿ ಸಂಘಕ್ಕೆ ರೂ. 10 ಲಕ್ಷ ಸಹಾಯಧನವನ್ನು ಒದಗಿಸುವ ಮೂಲಕ ಯುವಕರು ಸಣ್ಣ ಮಟ್ಟದ ಉದ್ಯಮವನ್ನು ಪ್ರಾರಂಭಿಸಲು ಮಾರ್ಗರ್ಶನವನ್ನು ಹಾಗೂ ಬಂಡವಾಳವನ್ನು ಒದಗಿಸುವುದು. ಯುವಕರು ಇತರ ಮೇಲೆ ಅವಲಂಬಿತರಾಗಿ ಉದ್ಯೋಗವನ್ನು ಮಾಡುವ ಬದಲು ಸ್ವಂತ ಉದ್ಯೋಗವನ್ನು ಪ್ರಾರಂಭಿಸುವಂತೆ ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ನಿರುದ್ಯೋಗಿ ಸಮಸ್ಯೆಯನ್ನು ನಿವಾರಿಸುವುದು:
ಯುವಕರಿಗೆ ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಂಡವಾಳವನ್ನು ಒದಗಿಸುವ ಮೂಲಕ ಅವರೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಿ, ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿ ಸಮಸ್ಯೆಯನ್ನು ಕಡಿಮೆ ಮಾಡುವುದು ಹಾಗೂ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಹಾಗೂ ಅವರ ಉದ್ಯಮಶೀಲತೆಯನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಗ್ರಾಮೀಣ ಯುವಕರ ಅಭಿವೃದ್ಧಿ:
ವಿಶೇಷವಾಗಿ ಗ್ರಾಮೀಣ ಭಾಗದ ಯುವಕರಿಗೆ ಭಾರತ್ ಜೋಡೋ ಯೋಜನೆಯಡಿಯಲ್ಲಿ ಸಂಘವನ್ನು ನಿರ್ಮಿಸಿ ಸಹಾಯಧನವನ್ನು ಒದಗಿಸುವ ಮೂಲಕ ಗ್ರಾಮೀಣ ಭಾಗದ ಯುವಕರು ತಮ್ಮ ಊರಿನಲ್ಲಿಯೇ ಉದೋಗವನ್ನು ಸೃಷ್ಟಿಸಿಕೊಂಡು ಆದಾಯಗಳನ್ನು ಗಳಿಸಲು ಅವಕಾಶ ಕಲ್ಪಿಸುವುದು.
- ವಲಸೆ ಹೋಗುವುದನ್ನು ತೆಡೆಗಟ್ಟುವುದು:
ಭಾರತ್ ಜೋಡೋ ಸಂಘದಡಿಯಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಸಹಾಯಧನವನ್ನು ಒದಗಿಸುವ ಮೂಲಕ ಗ್ರಾಮೀಣ ಭಾಗದ ಯುವಕರು ಉದ್ಯೋಗಾವಕಾಶಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಬರುವುದನ್ನು ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಪ್ರಯೋಜನ:
- ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗಾವಕಾಶ ಸೃಷಿತಿಯಾಗುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿ ಸಮಸ್ಯೆಯು ಬಹಳಷ್ಟು ಮಟ್ಟಿಗೆ ಸುಧಾರಿಸುತ್ತದೆ.
- ಈ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಹಾಗೂ ನಗರ ಭಾಗದ ಯುವಕರಿಗೆ ಸಮಾನವಾದ ಅವಕಾಶವನ್ನು ಕಲ್ಪಿಸುವುದರಿಂದ ಗ್ರಾಮೀಣ ಹಾಗೂ ನಗರ ಪ್ರೆದೇಶಗಳ ಅಭಿವೃದ್ಧಿಯ ಅಂತರ ಕರಿಮೆಯಾಗುತ್ತದೆ.
- ಈ ಯೋಜನೆಯಡಿಯಲ್ಲಿ ಮಹಿಳಾ ಯುವಕರಿಗೂ ಕೂಡ ಸಹಾಯಧನವನ್ನು ಒದಗಿಸುವ ಮೂಲಕ ಅವರು ಸ್ವಂತ ಉದ್ಯೋಗವನ್ನು ಕಂಡುಕೊಳ್ಳಲು ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ.
- ಪ್ರತಿಯೊಬ್ಬ ಯುವಕರಿಗೂ ಕೂಡ ಸ್ವಂತ ಉದ್ಯೋಗವನ್ನು ಕಲ್ಪಿಸಿ ಅವರ ಆದಾಯ ಮಟ್ಟವನ್ನು ಹೆಚ್ಚಿಸುವ ಮೂಲಕ ಅವರ ಕುಟುಂಬದ ಜೀವನ ಮಟ್ಟವು ಸುಧಾರಿಸುತ್ತದೆ.
- ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಯುವಕರಿಗೆ ಬಂಡವಾಳದ ರೂಪದಲ್ಲಿ ಸಹಾಯಧನ ಸಿಗುವುದರಿಂದ ಯುವಕರು ತಮ್ಮದೇ ಆದ ಅಂಗಡಿ, ಸೇವಾ ಕೇಂದ್ರ, ಕೃಷಿ ಆಧಾರಿತ ವ್ಯವಹಾರವನ್ನು ಆರಂಭಿಸಲು ಸಾಧ್ಯವಾಗುತ್ತದೆ.
ಭಾರತ್ ಜೋಡೋ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಯಾರು ಅರ್ಹರು?
ಭಾರತ್ ಜೋಡೋ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಯುವಕರಿಗೂ ಕೂಡ ಬೇರೆ ಬೇರೆ ಯಾಗಿ ಸಹಾಯಧನವನ್ನು ಒದಗಿಸುವುದಿಲ್ಲ ಬದಲಾಗಿ ಯುವಕರ ಗುಂಪುಗಳಾಗಿ ಒಂದು ಸಂಘವನ್ನು ನಿರ್ಮಿಸಿ ಪ್ರತಿ ಸಂಘಕ್ಕೆ ಸಹಾಯಧನವನ್ನು ನೀಡಲಾಗುತ್ತದೆ. ಈ ಒಂದು ಸಂಘದ ಸದಸ್ಯರಾಗಲು ಯುವಕರು ಈ ಕೆಳಗಿನ ಅರ್ಹತಾ ಮಾನದಂಗಳನ್ನು ಪೂರೈಸಿರಬೇಕು.
- ಯುವಕರು ಕನಿಷ್ಠ 15 ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಪ್ರತಿ ಸಂಘದಲ್ಲಿ ಒಟ್ಟು 150 ರಿಂದ 200 ಯುವಕರು ಸದಸ್ಯತ್ವವನ್ನು ಹೊಂದಿರಬೇಕು.
- ಗ್ರಾಮೀಣ ಭಾಗದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಒಂದು ಸಂಘವನ್ನು ನಿರ್ಮಿಸಬೇಕು. ಅಲ್ಲಿನ ಯುವಕರೇ ಈ ಸಂಘದ ಸದಸ್ಯರಾಗಿರಬೇಕು.
- ನಗರ ಪ್ರದೇಶದಲ್ಲಿ ಆಯಾ ವರ್ಗಳಲ್ಲಿ ಸಂಘವನ್ನು ನಿರ್ಮಿಸಬೇಕಾಗುತ್ತದೆ.
ಸಂಘದ ಸದಸ್ಯತ್ವವನ್ನು ಹೊಂದಲು ಯುವಕರು ಹೊಂದಿರಬೇಕಾದ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ವಯಸ್ಸಿನ ದೃಢೀಕರಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- ಮೊಬೈಲ್ ಸಂಖ್ಯೆ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರ
- ಇನ್ನಿತರ ದಾಖಲೆಗಳು
ಸಂಘದ ಸದಸ್ಯತ್ವವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
- ಯುವಕರು ಮೊದಲು ತಮ್ಮ ಗ್ರಾಮ ಪಂಚಾಯಿತಿಯ ಅಥವಾ ವಾರ್ಡ್ ಮಟ್ಟದಲ್ಲಿ ಒಟ್ಟು 150 ರಿಂದ 200 ಯುವಕರನ್ನು ಒಳಗೊಂಡ ಗೂಪುಗಳನ್ನು ರಚಿಸಿಕೊಳ್ಳಬೇಕು.
- ಸರ್ಕಾರವು ಮುಂದೆ ತೆರೆಯುವ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ಉದ್ಯೋಗ ಸ್ಥಿತಿ ಹಾಗೂ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಯ ವಿವರಗಳನ್ನು ನಮೂದಿಸಬೇಕು.
- ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸೇರಿಸಬೇಕು. ಇದರಲ್ಲಿ ಗುರುತಿನ ಚೀಟಿ, ವಿಳಾಸದ ಪುರಾವೆ, ಬ್ಯಾಂಕ್ ಖಾತೆ ಮಾಹಿತಿ, ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು ಹಾಗೂ ಸಂಘದ ಸದಸ್ಯತ್ವದ ದಾಖಲೆಗಳು ಒಳಗೊಂಡಿರುತ್ತವೆ. ಸ್ವಯಂ ಉದ್ಯೋಗ ಅಥವಾ ಉದ್ಯಮ ಆರಂಭಿಸಲು ಅರ್ಜಿ ಸಲ್ಲಿಸುವವರು ಯೋಜನಾ ಪ್ರಸ್ತಾವನೆಯನ್ನೂ ಲಗತ್ತಿಸಬೇಕು.
- ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಸಂಘದ ಸಂಬಂಧಿತ ಸಮಿತಿಗಳು ಹಂತ ಹಂತವಾಗಿ ಪರಿಶೀಲಿಸುತ್ತವೆ. ಅರ್ಜಿದಾರರ ಅರ್ಹತೆ, ದಾಖಲೆಗಳ ನಿಖರತೆ ಮತ್ತು ಯೋಜನೆಯ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.
- ಪರಿಶೀಲನೆಯ ಬಳಿಕ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಯ್ಕೆಯಾದ ಸದಸ್ಯರಿಗೆ ಅಧಿಕೃತ ಪತ್ರ, ಸಂದೇಶ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಅಂತಿಮ ತೀರ್ಮಾನ:
ಯುವಕರಲ್ಲಿ ಅಡಗಿರುವ ಪ್ರತಿಭೆ, ಕೌಶಲ್ಯ ಮತ್ತು ನಾಯಕತ್ವ ಸಾಮರ್ಥ್ಯವನ್ನು ಹೊರತಂದು ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಜನತೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅಗತ್ಯವಾದ ಬೆಂಬಲವನ್ನು ಪಡೆದು ಸ್ವಾವಲಂಬಿಗಳಾಗುವ ಅವಕಾಶವನ್ನು ಇದು ಒದಗಿಸುತ್ತದೆ.
ಈ ಯೋಜನೆಯ ಯಶಸ್ಸು ಸರ್ಕಾರ ಅಥವಾ ಸಂಘದ ನೆರವಿನಲ್ಲಷ್ಟೇ ಅಲ್ಲ, ಯುವಕರ ದೃಢಸಂಕಲ್ಪ, ಪರಿಶ್ರಮ ಮತ್ತು ಸೃಜನಶೀಲತೆಯಲ್ಲಿಯೂ ಅಡಗಿದೆ. ಯೋಜನೆಯ ಸದುಪಯೋಗದಿಂದ ಹೊಸ ಉದ್ಯಮಗಳು ಹುಟ್ಟಿಕೊಂಡು, ಉದ್ಯೋಗಾವಕಾಶಗಳು ಹೆಚ್ಚಾಗಿ, ಸಮಾಜದಲ್ಲಿ ಆರ್ಥಿಕ ಪ್ರಗತಿಯ ಹೊಸ ಅಧ್ಯಾಯ ಆರಂಭವಾಗುವ ನಿರೀಕ್ಷೆಯಿದೆ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Laptop Application: SSLC, PUC, ಡಿಗ್ರಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಆರಂಭ
- DL: ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Saala Manna: DK ಶಿವಕುಮಾರ್ ಅವರಿಂದ ರೈತರಿಗೆ ಬಂಪರ್ ಗುಡ್ ನ್ಯೂಸ್! ₹1.20 ಲಕ್ಷವರೆಗೆ ಸಾಲ ಮನ್ನಾ?
- Home: ಉಚಿತ ಮನೆ ಯೋಜನೆ 2026: ಯಾರು ಅರ್ಹರು? ಹೇಗೆ ಅರ್ಜಿ ಹಾಕಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
- Free cycle: ಸಿಎಂ ಬದಲಾವಣೆ ಬಳಿಕ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸೈಕಲ್ ವಿತರಣೆ! ಇಂದೇ ಅಪ್ಲೈ ಮಾಡಿ