DL: ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ, ನೀವು ಇನ್ನು ಕೂಡ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿಲ್ವಾ! ಹಾಗಿದ್ದರೆ ಇನ್ನು ಚಿಂತಿಸುವ ಅಗತ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಹಾಗೂ ಕಾನೂನು ಬದ್ದವಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ.


ಡ್ರೈವಿಂಗ್ ಲೈಸೆನ್ಸ್ ಎನ್ನುವುದು ಕೇವಲ ದಾಖಲೆಗಳಲ್ಲ. ಅದು ನಿಮ್ಮ ಜವಾಬ್ದಾರಿಯುತ ಚಾಲನೆಗೆ ಸರ್ಕಾರವು ನೀಡುವ ಅಧಿಕೃತ ಮಾನ್ಯತೆಗಳಾಗಿದೆ. ಇಂದಿನ ದಿನಗಳಲ್ಲಿ ಉದ್ಯೋಗ, ವ್ಯವಹಾರ, ಶಿಕ್ಷಣ ಅಥವಾ ವೈಯಕ್ತಿಕ ಕೆಲಸಗಳಿಗಾಗಿ ವಾಹನವನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಈ ಆಧುನಿಕ ಯುಗದಲ್ಲಿ ವಾಹನ ಚಾಲನೆ ಅಗತ್ಯ ಕೌಶಲ್ಯವಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸಬೇಕಾದರೆ, ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕೂಡ ಅಗತ್ಯವಾಗಿರುತ್ತದೆ.

ಹಾಗಿದ್ದರೆ, ಡ್ರೈವಿಂಗ್ ಲೈಸೆನ್ಸ್ ಅಂದರೇನು? ಡ್ರೈವಿಂಗ್ ಲೈಸೆನ್ಸ್ ನ ಪ್ರಕಾರಗಳು ಯಾವುವು? ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಅರ್ಹರು ಯಾರು? ಡ್ರೈವಿಂಗ್ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು? ಈ ಎಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

DL

ಪ್ರಮುಖ ಹೈಲೈಟ್ ಪಾಯಿಂಟ್ಸ್:

* ಡೈವಿಂಗ್ ಲೈಸನ್ಸ್ ಗೆ ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
* 18 ವರ್ಷ ಮೇಲ್ಪಟ್ಟವರು ಕಾರು ಮತ್ತು ಬೈಕ್ ಲೈಸನ್ಸ್ ಗೆ ಅರ್ಜಿ ಸಲ್ಲಿಸಬಹುದು.
* ಇನ್ನು ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಕಚೇರಿಗೆ ಹಲವು ಬಾರಿ ಭೇಟಿಯಾಗುವ ಅಗತ್ಯ ಇರುವುದಿಲ್ಲ.

ಡ್ರೈವಿಂಗ್ ಲೈಸೆನ್ಸ್ ಅಂದರೇನು?

ಡ್ರೈವಿಂಗ್ ಲೈಸೆನ್ಸ್ ಅನ್ನುವುದು ಬೈಕ್, ಕಾರು ಅಥವಾ ಇತರೆ ವಾಹನವನ್ನು ಕಾನೂನುಬದ್ಧವಾಗಿ ಚಲಾಯಿಸಲು ಸರ್ಕಾರವು ನೀಡುವ ಪರವಾನಗಿ ಪತ್ರವಾಗಿದೆ.

ಡ್ರೈವಿಂಗ್ ಲೈಸನ್ಸ್ ಅನ್ನುವುದು, ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿರ್ದಿಷ್ಟ ವಾಹನವನ್ನು ಚಾಲನೆ ಮಾಡಲು ಕಾನೂನುಬದ್ದ ಅನುಮತಿಯನ್ನು ನೀಡುತ್ತದೆ. ಈ ಒಂದು ಡ್ರೈವಿಂಗ್ ಲೈಸನ್ಸ್ ಅನ್ನು ರಸ್ತೆ ಸಾರಿಗೆ ಅಥವಾ ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ನೀಡಲಾಗುತ್ತದೆ.

ಯಾವುದೇ ಒಬ್ಬ ವ್ಯಕ್ತಿ ಡ್ರೈವಿಂಗ್ ಲೈಸನ್ಸ್ ಹೊಂದಿರದೆ ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಚಲಾಯಿಸಿದರೆ, ಅವರು ದಂಡ ನೀಡಬೇಕಾಗುತ್ತದೆ ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹಾಗಾಗಿ ವಾಹನ ಚಾಲನ ಪರವಾನಗಿ ಹೊಂದುವುದು ಕಡ್ಡಾಯವಾಗಿದೆ.

ಡ್ರೈವಿಂಗ್ ಲೈಸನ್ಸ್ ನ ಪ್ರಕಾರಗಳು:

  • ಲರ್ನರ್ ಲೈಸನ್ಸ್:

ಯಾವುದೇ ಒಬ್ಬ ವ್ಯಕ್ತಿ ವಾಹನ ಚಾಲನೆ ಕಲಿಯುತ್ತಿದ್ದರೆ, ಆ ವ್ಯಕ್ತಿ ಲರ್ನರ್ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಪರ್ಮನೆಂಟ್ ಡ್ರೈವಿಂಗ್ ಲೈಸನ್ಸ್ ಪಡೆಯುವ ಮೊದಲು ಈ ಲೈಸನ್ಸ್ ಪಡೆಯುವುದು ಕೂಡ ಕಡ್ಡಾಯವಾಗಿದೆ. ಈ ಒಂದು ಲೈಸನ್ಸ್ ವಾಹನ ಚಾಲನೆಯನ್ನು ಕಲಿಯಲು ನೀಡಲಾಗುವ ಅಧಿಕೃತ ಪರವಾನಗಿ ಆಗಿರುವುದರಿಂದ ಈ ಲೈಸನ್ಸ್ ಪಡೆದವರು ಸಾರ್ವಜನಿಕ ರಸ್ತೆಯಲ್ಲಿ ಕಾನೂನುಬದ್ಧವಾಗಿ ಚಲಾಯಿಸಲು ಸಾಧ್ಯವಾಗುವುದಿಲ್ಲ.

  • ಶಾಶ್ವತ ಡ್ರೈವಿಂಗ್ ಲೈಸನ್ಸ್:

ಲರ್ನರ್ ಲೈಸನ್ಸ್ ಪಡೆದ ನಂತರ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೀಡಲಾಗುವ ಅಧಿಕೃತ ಪರವಾನಗಿಯಾಗಿದೆ. ಈ ಒಂದು ಡ್ರೈವಿಂಗ್ ಲೈಸನ್ಸ್ ಪಡೆದವರು ಸಾರ್ವಜನಿಕ ರಸ್ತೆಯಲ್ಲಿ ನಿರ್ದಿಷ್ಟ ವಾಹನದಲ್ಲಿ ಚಾಲಾಯಿಸಲು ಕಾನೂನುಬದ್ಧ ಅನುಮತಿಯನ್ನು ಪಡೆಯುತ್ತಾರೆ.

  • ಅಂತರಾಷ್ಟ್ರಿಯ ಚಾಲನಾ ಪರವಾನಗಿ:

ವಿದೇಶಗಳಲ್ಲಿ ವಾಹನ ಚಾಲನೆ ಮಾಡಲು ಬಯಸುವ ಭಾರತೀಯ ನಾಗರಿಕರಿಗೆ ನೀಡಲಾಗುವ ವಿಶೇಷ ಪರಾವಣಗಿಯಾಗಿದೆ.

  • ವಾಣಿಜ್ಯ ಡ್ರೈವಿಂಗ್ ಲೈಸನ್ಸ್:

ಶಾಲಾ ವಾಹನ, ಬಸ್, ಟ್ರಕ್, ಟ್ಯಾಕ್ಸಿ ಹಾಗೂ ಇನ್ನಿತರ ವಾಣಿಜ್ಯ ಉದ್ದೇಶದ ವಾಹನಗಳನ್ನು ಚಾಲನೆ ಮಾಡಲು ವಾಣಿಜ್ಯ ಡ್ರೈವಿಂಗ್ ಲೈಸನ್ಸ್ ಹೊಂದುವುದು ಅಗತ್ಯವಾಗಿದೆ.

ಡ್ರೈವಿಂಗ್ ಲೈಸನ್ಸ್ ಪಡೆಯುವುದು ಅಗತ್ಯವೇ?

ಹೌದು, ಒಬ್ಬ ವ್ಯಕ್ತಿ ಯಾವುದೇ ವಾಹನವನ್ನು ಚಾಲನೆ ಮಾಡಬೇಕಾದರೆ, ಅವನು ಡ್ರೈವಿಂಗ್ ಲೈಸನ್ಸ್ ಹೊಂದುವುದು ಅಗತ್ಯವಾಗುರುತ್ತದೆ.

  • ಡ್ರೈವಿಂಗ್ ಲೈಸನ್ಸ್ ಹೊಂದಿರುವ ವ್ಯಕ್ತಿಗಳು ರಸ್ತೆ ನಿಯಮಗಳನ್ನು, ಸಂಚಾರ ಚಿಹ್ನೆಗಳನ್ನು ಹಾಗೂ ಸುರಕ್ಷತೆ ಚಾಲನೆ ಬಗ್ಗೆ ಜ್ಞಾನವನ್ನು ಹೊಂದಿದ್ದಾರೆ ಎಂದು ದೃಡೀಕರಿಸಲಾಗುತ್ತದೆ.
  • ಡ್ರೈವಿಂಗ್ ಲೈಸನ್ಸ್ ಅನ್ನುವುದು ಸರ್ಕಾರವು ವಾಹನ ಚಲನೆಗೆ ಅವಕಾಶ ಕಲ್ಪಿಸುವ ಅಧಿಕೃತ ಪರವಾನಗಿ ಪಾತ್ರವಾಗಿರುತ್ತದೆ. ಒಂದು ವೇಳೆ ಡ್ರೈವಿಂಗ್ ಲೈಸನ್ಸ್ ಇಲ್ಲದಿದ್ದರೆ, ಅವರು ದಂಡವನ್ನು ಹಾಗೂ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.
  • ವಾಹನ ಅಪಘಾತ ಅಥವಾ ಪಾಲಿಸಿ ಕ್ಲೈಮ್ ಸಂದರ್ಭದಲ್ಲಿ ಮಾನ್ಯ ಡ್ರೈವಿಂಗ್ ಲೈಸನ್ಸ್ ಹೊಂದುವುದು ಅತ್ಯಂತ ಮುಖ್ಯವಾಗಿರುತ್ತದೆ.
  • ಸಾರಿಗೆ ಸೇವೆಗಳು, ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಗಳಿಗೆ ಹಾಗೂ ಚಾಲಕ ವೃತ್ತಿ ಪಡೆದುಕೊಳ್ಳುವವರಿಗೆ ಡ್ರೈವಿಂಗ್ ಲೈಸನ್ಸ್ ಕಡ್ಡಾಯ ದಾಖಲೆಗಳಾಗಿರುತ್ತದೆ.

ಡ್ರೈವಿಂಗ್ ಲೈಸನ್ಸ್ ಪಡೆಯಲು ಅರ್ಹರು ಯಾರು?

  • ಗೇರ್ ಇಲ್ಲದ ದ್ವಿಚಕ್ರ ವಾಹನವನ್ನು ಚಲಾಯಿಸಲು 16 ವರ್ಷ ಮೇಲ್ಪಟ್ಟವರು ಅರ್ಹರಾಗಿರುತ್ತಾರೆ. ಆದರೆ ಈ ಒಂದು ಲೈಸನ್ಸ್ ಪಡೆಯುವಾಗ ಪೋಷಕರ ಒಪ್ಪಿಗೆ ಸಹಿ ಕಡ್ಡಾಯವಾಗಿರುತ್ತದೆ.
  • ಗೇರ್ ಇರುವ ದ್ವಿಚಕ್ರ ವಾಹನಗಳನ್ನು ಹಾಗೂ ಲಘು ಮೋಟಾರ್ ವಾಹನಗಳನ್ನು ಚಲಾಯಿಸಲು 18 ವರ್ಷ ಮೇಲ್ಪಟ್ಟರವರು ಅರ್ಹರಾಗಿರುತ್ತಾರೆ.
  • ವಾಣಿಜ್ಯ ವಾಹನಗಳನ್ನು ಹಾಗೂ ಸಾರಿಗೆ ವಾಹನಗಳನ್ನು ಚಲಾಯಿಸಲು 20 ವರ್ಷ ಮೇಲ್ಪಟ್ಟವರು ಅರ್ಹರಾಗಿರುತ್ತಾರೆ.
  • ಪರ್ಮನೆಂಟ್ ಡ್ರೈವಿಂಗ್ ಲೈಸನ್ಸ್ ಪಡೆಯುವ ಮೊದಲು ಲರ್ನರ್ ಲೈಸನ್ಸ್ ಪಡೆಯುವುದು ಕಡ್ಡಾಯ
  • ಲರ್ನರ್ ಲೈಸನ್ಸ್ ಪಡೆದ 30 ದಿನಗಳ ಅಥವಾ 180 ದಿನಗಳ ಒಳಗೆ ಕಾಯಂ ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
  • ಡ್ರೈವಿಂಗ್ ಲೈಸನ್ಸ್ ಪಡೆಯಲು ಅಭ್ಯರ್ಥಿಗಳು 8 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವುದು ಕಡ್ಡಾಯವಾಗಿದೆ.
  • ಡ್ರೈವಿಂಗ್ ಲೈಸನ್ಸ್ ಪಡೆಯಲು RTO ಆಫೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿರುತ್ತದೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜನನ ಪ್ರಮಾಣಪತ್ರ
  • ಮತದಾರರ ಗುರುತಿನ ಚೀಟಿ
  • ರೇಷನ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಮಾನ್ಯತೆ ಇರುವ ಲರ್ನರ್ ಲೈಸನ್ಸ್
  • ಫಾರ್ಮ್ 1 ಮತ್ತು ಫಾರ್ಮ್ 1A
  • ಇತರೆ ದಾಖಲೆಗಳು

ಲೈಸನ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಡ್ರೈವಿಂಗ್ ಲೈಸನ್ಸ್ ಪಡೆಯಲು ಅರ್ಹರಾದವರು ಮೊದಲು ಸಾರಥಿ ಪರಿವಾಹನ್ ವೆಬ್ಸೈಟ್ ಗೆ ಭೇಟಿ ನೀಡಿ.
  • ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ
  • ನಂತರ, ಅಲ್ಲಿ ಕಾಣುವ ಅಪ್ಲೈ ಫಾರ್ ಲರ್ನರ್ ಲೈಸನ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ನಂತರ ಲರ್ನರ್ ಲೈಸನ್ಸ್ ಪಡೆದ 30 ದಿನಗಳ ನಂತರ ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
  • ಕಾಯಂ ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸಲು ಸಾರಥಿ ವೆಬ್ಸೈಟ್ ಗೆ ಭೇಟಿ ನೀಡಿ.
  • ಅಪ್ಲೈ ಫಾರ್ ಡ್ರೈವಿಂಗ್ ಲೈಸನ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಲರ್ನರ್ ಲೈಸನ್ಸ್ ನಂಬರ್ ಹಾಗೂ ಜನ್ಮ ದಿನಾಂಕವನ್ನು ಸರಿಯಾಗಿ ನಮೂದಿಸಿ.
  • ಲರ್ನರ್ ಲೈಸನ್ಸ್ ಫೋಟೋ ಪ್ರತಿಯನ್ನು ಅಪ್ಲೋಡ್ ಮಾಡಿ.
  • ಚಾಲನಾ ಪರೀಕ್ಷೆಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
  • ನಂತರ ಡ್ರೈವಿಂಗ್ ಟೆಸ್ಟ್ ಗೆ ಭಾಗವಾಗಿಹಿಸಿ ಉತ್ತೀರ್ಣರಾಗಿ ಡ್ರೈವಿಂಗ್ ಲೈಸನ್ಸ್ ಪಡೆದುಕೊಳ್ಳಿ.

ಅಂತಿಮ ತೀರ್ಮಾನ:

ನೀವೇನಾದರೂ ಡ್ರೈವಿಂಗ್ ಲೈಸನ್ಸ್ ಮಾಡಿಸಬೇಕೆಂದಿದ್ದರೆ, ಇದೊಂದು ಸುವರ್ಣಾವಕಾಶವಾಗಿದೆ. ಏಕೆಂದರೆ, ಈಗ ಡ್ರೈವಿಂಗ್ ಲೈಸನ್ಸ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸುವ ಮೊದಲು ಈ ಮೇಲೆ ನೀಡಲಾದ ಎಲ್ಲ ಅರ್ಹತೆಯನ್ನು ಪೂರೈಸುತ್ತೀರೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ನಂತರ ಆನ್ಲೈನ್ ಮೂಲಕ ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸಿ. ಕಾನೂನುಬದ್ಧವಾಗಿ ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಚಲಾಯಿಸಿ.


ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment