RRB: ರೈಲ್ವೆ ಇಲಾಖೆಯಲ್ಲಿ 6565 ಟೆಕ್ನಿಷಿಯನ್ ಹುದ್ದೆಗಳ ಬೃಹತ್ ನೇಮಕಾತಿ 2026! ITI, ಡಿಪ್ಲೊಮಾ ಅಭ್ಯರ್ಥಿಗಳಿಗೆ ಸುವರ್ಣಾವಕಾಶ

ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ರೈಲ್ವೆ ನೇಮಕಾತಿ ಮಂಡಳಿಯು ಪ್ರಸ್ತುತ ಸಾಲಿನ ನೇಮಕಾತಿ ಅಧಿಸೂಚನೆಯಲ್ಲಿ ಬರೋಬ್ಬರಿ 6565 ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್ ಹಾಗೂ ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

RRB Recruitment 2026


ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಶಿಕ್ಷಣವನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಒಂದು ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಅರ್ಹರಾಗಿದ್ದು, ಸ್ಥಿರ ವೇತನದೊಂದಿಗೆ, ಉದ್ಯೋಗ ಭದ್ರತೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡು ದೇಶದ ಅತಿ ದೊಡ್ಡ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗವನ್ನು ಕಂಡುಕೊಳ್ಳಬೇಕೆಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಪ್ರಸ್ತುತ ಲೇಖನದಲ್ಲಿ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಗಳೇನು? ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಶುಲ್ಕವೇಷ್ಟು? ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ವೇತನವೆಷ್ಟು? ಎಂಬೆಲ್ಲ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ RRB ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

RRB

ಹುದ್ದೆಯ ವಿಶ್ಲೇಷಣೆ:

ನೇಮಕಾತಿ ಸಂಸ್ಥೆರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆಯ ಹೆಸರು ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್, ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳು
ಹುದ್ದೆಯ ಸಂಖ್ಯೆ ಒಟ್ಟು 6565 ಹುದ್ದೆಗಳು
ಉದ್ಯೋಗ ಸ್ಥಳ ಅಖಿಲ ಭಾರತ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-07-2026

ಹುದ್ದೆಯ ಸಂಕ್ಷಿಪ್ತ ವಿವರ:

ರೈಲ್ವೆ ನೇಮಕಾತಿ ಮಂಡಳಿಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 6565 ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್, ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ 18 ರಿಂದ 36 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಅನ್ವಯ ವೇತನವನ್ನು ನಿಗದಿಪಡಿಸಲಾಗಿದ್ದು, ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ ಹಾಗೂ ಇವುಗಳ ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಸೌಲಭ್ಯಗಳನ್ನು ನೀಡಲಾಗುತ್ತದೆ.

ಹುದ್ದೆಯ ವಿವರ:

ರೈಲ್ವೆ ನೇಮಕಾತಿ ಮಂಡಳಿಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಹುದ್ದೆಗಳ ವಿವರ ಈ ಕೆಳಕಂಡಂತಿದೆ,

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್ ಹುದ್ದೆಗಳು 323 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳು 6242 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್ ಹುದ್ದೆಗಳು:

ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಭೌತಶಾಸ್ತ್ರ, ಐಟಿ ಹಾಗೂ ಇನ್ಸ್ಟ್ರುಮೆಂಟೇಷನ್ ವಿಭಾಗದಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು ಅಥವಾ ಮೇಲಿನ ಯಾವುದೇ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿರಬೇಕು ಅಥವಾ ಇಂಜಿನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

  • ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳು:

ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಲ್ಲಿ ಅಥವಾ ಮೆಟ್ರಿಕ್ಯುಲೇಷನ್ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಇದರ ಜೊತೆಗೆ NCVT ಅಥವಾ SCVT ಇನ್ಸ್ಟಿಟ್ಯೂಟ್ ನಿಂದ ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್, ವೆಲ್ಡರ್ ಹಾಗೂ ಇನ್ನಿತರ ಸಂಬಂಧಿತ ಟ್ರೇಡ್ ಗಳಲ್ಲಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.

ವಯೋಮಿತಿ ವಿವರ:

ರೈಲ್ವೆ ನೇಮಕಾತಿ ಮಂಡಳಿ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ಹೊಂದಿರಬೇಕು. ಅವುಗಳ ವಿವರ ಈ ಕೆಳಕಂಡಂತಿದೆ.

  • ಟೆಕ್ನಿಷಿಯನ್ ಗ್ರೇಡ್ -I ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 36 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 33 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:

RRB ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೆಲವು ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ವಿಧಾನಗಳನ್ನು ಬಳಸಿ ಆನ್ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ

ವಿವಿಧ ವರ್ಗಗಳು ಅರ್ಜಿ ಶುಲ್ಕಗಳ ವಿವರ
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗಗಳ ಅಭ್ಯರ್ಥಿಗಳಿಗೆ ರೂ. 500
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, PwBD ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ. 250/-

ಕೆಲವು ವರ್ಗಗಳ ಅಭ್ಯರ್ಥಿಗಳು ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಿಗೆ ಹಾಜರಾದ ನಂತರ ಅವರ ಬ್ಯಾಂಕ್ ಖಾತೆಗೆ ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

ವೇತನ ಶ್ರೇಣಿ:

RRB ಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ವೇತನ ಆಯೋಗದ ಅನ್ವಯ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.

  • ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್ 5 ರ ಅಡಿಯಲ್ಲಿ ರೂ. 29,200/- ವೇತನವನ್ನು ನೀಡಲಾಗುತ್ತದೆ.
  • ಟೆಕ್ನಿಷಿಯನ್ ಗ್ರೇಡ್ -III ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್ 2 ರ ಅಡಿಯಲ್ಲಿ ರೂ. 19,900/- ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRB ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • RRB ಟೆಕ್ನಿಷಿಯನ್ ರಿಕ್ರೂಟ್ಮೆಂಟ್ 2026 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಹೊಸ ಬಳಕೆದಾರರಾಗಿದ್ದರೆ, ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ನಂತರ ಹುದ್ದೆಗೆ ಸಂಬಂಧಿಸಿದ ಅಫ್ಲಿಕೇಷನ್ ಫಾರ್ಮ್ ನಲ್ಲಿ ಶೈಕ್ಷಣಿಕ ವಿವರ, ವಯೋಮಿತಿ ವಿವರ, ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ನಂತರ ಅಭ್ಯರ್ಥಿಗಳ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಅಭ್ಯರ್ಥಿಗಳ ಸಹಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಸೇರಿದಂತೆ ಇನ್ನಿತರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ:

ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು ರೀಸನಿಂಗ್, ಮಾಥ್ಸ್, ಜೆನರಲ್ ನಾಲೆಜ್, ಸಾಮಾನ್ಯ ವಿಜ್ಞಾನ ಹಾಗೂ ತಾಂತ್ರಿಕ ವಿಷಯಗಳ ಕುರಿತು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

  • ದಾಖಲಾತಿ ಪರೀಶೀಲನೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಕರೆಯಲಾಗುತ್ತದೆ.

  • ವೈದ್ಯಕೀಯ ಪರೀಕ್ಷೆ:

ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದ ನಂತರ, ರೈಲ್ವೆ ಆಸ್ಪತ್ರೆಗಳಲ್ಲಿ ಉಚಿತವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅಧಿಕೃತ ಅಧಿಸೂಚನೆ ಹೊರಡಿಸಿದ ದಿನಾಂಕ 18-05-2026
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 30-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-07-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ರೈಲ್ವೆ ನೇಮಕಾತಿ ಮಂಡಳಿಯು ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗಳಿಗೆ ಅರ್ಜಿ ಆಲಿಸುವ ಪ್ರಕ್ರಿಯೆಯು 30-06-2026 ರಿಂದ ಆರಂಭಗೊಳ್ಳುತ್ತದೆ ಹಾಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಮಯವನ್ನು ವ್ಯರ್ಥಮಾಡದೆ ಪರೀಕ್ಷೆಗೆ ತಯಾರಿ ಮಾಡಿಕೊಂಡು ನಿಗದಿತ ದಿನಾಂಕದಂದು ಈ ಹುದ್ದೆಗೆ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment