ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,, 2025-26ನೇ ಸಾಲಿನ ಉಚಿತ ಹೋಲಿಗೆ ಯಂತ್ರ ವಿತರಣೆಗೆ ಆನ್ಲೈನ್ ಅರ್ಜಿ ಇಂದಿಂದ ಸರ್ಕಾರ ಆರಂಭಿಸಿದ್ದು, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಜೀವನವನ್ನು ನಡೆಸಬೇಕೆನ್ನುವ ದೃಷ್ಟಿಯಿಂದ ಈ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರದ ಅತ್ಯುತ್ತಮ ಈ ಯೋಜನೆ ಅಡಿಯಲಿ ಕೇವಲ ಮಹಿಳೆಯರಿಗೆ ಉಚಿತವಾಗಿ ಹೋಲಿಕೆ ಯಂತ್ರವನ್ನು ಕೊಡುವುದಲ್ಲದೆ ಒಂದು ತಿಂಗಳ ತರಬೇತಿಯನ್ನು ನೀಡುತ್ತದೆ.
ಈ ಒಂದು ಯೋಜನೆಯು ಮನೆಯಲ್ಲಿ ಕುಳಿತು ಮಹಿಳೆಯರು ಆದಾಯವನ್ನು ಸುಲಭವಾಗಿ ಗಳಿಸುವ ಅವಕಾಶವನ್ನು ಒದಗಿಸುವ ಪ್ರಮುಖ ಯೋಚನೆಯಾಗಿದೆ. ಹೋಲಿಗೆ ಕೌಶಲ್ಯವನ್ನ ಕಲಿತು ಸ್ವಂತ ಉದ್ಯಮ ಆರಂಭಿಸುವ ಮೂಲಕ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನ ಸುಧಾರಿಸಬಹುದು.
ಯೋಜನೆಯ ಪ್ರಮುಖ ಉದ್ದೇಶ:

ಈ ಯೋಚನೆಯ ಮುಖ್ಯ ಉದ್ದೇಶ ಏನಿದೆ? ಎನ್ನುವುದನ್ನ ನೀವು ತಿಳಿಯಲು ಬಯಸಿದರೆ ಇಲ್ಲೇ ನೀವು ಸಂಪೂರ್ಣವಾಗಿ ತಿಳಿಯಬಹುದು. ಮಹಿಳೆಯರನ್ನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಸರ್ಕಾರದ ಮತ್ತು ಈ ಯೋಜನೆಯ ಬಹುಮುಖ್ಯ ಉದ್ದೇಶವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ವಂತ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ಇರುವುದನ್ನು ನಾವು ನೀವೆಲ್ಲರೂ ಗಮನಿಸುತ್ತಿದ್ದೇವೆ ತಮ್ಮದೇ ಆದ ಆದಾಯದ ಮೂಲವನ್ನ ಸೃಷ್ಟಿಸಿಕೊಳ್ಳಲು ಈ ಯೋಜನೆ ಬಹಳಷ್ಟು ಸಹಾಯವನ್ನು ಮಾಡುತ್ತದೆ.
ಸರ್ಕಾರವು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದರ ಜೊತೆಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ಮುಂದಾಗಿದೆ. ಒಬ್ಬ ಸಾದಾರಣ ಮಹಿಳೆಯಲ್ಲಿ ಸ್ವಂತ ಉದ್ಯಮ ಆರಂಭಿಸುವ ಮನೋಭಾವನೆಯನ್ನು ಬೆಳೆಸುವುದು ಪ್ರಮುಖ ಗುರಿಯಾಗಿದೆ. ಅಷ್ಟೇ ಅಲ್ಲದೆ ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಮನೆಯಲ್ಲಿಯೇ ಉದ್ಯೋಗ ಅವಕಾಶವನ್ನ ಒದಗಿಸಿ ನಿರುದ್ಯೋಗಿಗಳನ್ನ ಕಡಿಮೆ ಮಾಡುವುದು.
ಅಷ್ಟೇ ಅಲ್ಲದೆ ಮಹಿಳೆಯರ ಆತ್ಮವಿಶ್ವಾಸ ಮತ್ತು ಸಮಾಜದಲ್ಲಿ ಸ್ಥಾನಮಾನ, ಗೌರವ ಇವೆಲ್ಲವನ್ನ ಹೆಚ್ಚಿಸುವುದು ಅಷ್ಟೇ ಅಲ್ಲದೆ ಸಣ್ಣ ಮಟ್ಟದ ವ್ಯವಹಾರಗಳನ್ನ ಉತ್ತೇಜಿಸುವ ಮೂಲಕ ಮೈಕ್ರೋ ಉದ್ಯಮಗಳನ್ನ ಬೆಳೆಸುವುದು ಮತ್ತು ಮಹಿಳಾ ಗುಂಪುಗಳ ಮೂಲಕ ಸಾಮೂಹಿಕ ಅಭಿವೃದ್ಧಿಗೆ ಸಹಕಾರಿ ನೀಡುವುದರ ಜೊತೆಗೆ ಮಹಿಳೆಯರನ್ನು ದೀರ್ಘಕಾಲಿಕವಾಗಿ ಆರ್ಥಿಕವಾಗಿ ಸ್ಥಿರಗೊಳಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ತಪ್ಪಾಗುವುದಿಲ್ಲ.
ಯೋಜನೆಯ ಪ್ರಮುಖ ಲಾಭ:
ಈ ಯೋಜನೆಯಡಿಯಲ್ಲಿ ಈ ಸಾರಿ ಬಹಳಷ್ಟು ಮಹಿಳೆಯರು ಹೆಚ್ಚಿನ ಲಾಭವನ್ನ ಪಡಿಸೆಯಲಿದ್ದಾರೆ. ಯಾಕೆಂದರೆ ಸರ್ಕಾರ ಅಂತ ಒಂದು ಚಿಂತನೆಯನ್ನ ನಡೆಸಿ ಮಾರ್ಚ್ ತಿಂಗಳ ಕೊನೆಯಲ್ಲಿ ಆನ್ಲೈನ್ BPL ಕಾರ್ಡ್ ಹೊಂದಿಸುವ ಮಹಿಳೆಯರು ಆನ್ಲೈನ್ ಅರ್ಜಿ ಸಲ್ಲಿಸಬೇಕೆಂದು ತನ್ನ ಮನವಿಯನ್ನ ಮುಂದಿಟ್ಟಿದೆ. ಹಾಗಿದ್ದರೆ ಈ ಯೋಜನೆಯಿಂದ ಒಬ್ಬ ಮಹಿಳೆಯರಿಗೆ ಯಾವ ರೀತಿ ಪ್ರಯೋಜನ ಆಗುತ್ತೆ ಈ ಕೆಳಗೆ ತಿಳಿಯೋಣ.
- ರಾಜ್ಯದ ಮಹಿಳೆಯರಿಗೆ ಒಂದು ರೂಪಾಯಿ ಹಣವನ್ನು ಖರ್ಚು ಮಾಡದೆ ಸರಕಾರದಿಂದಲೇ ಫ್ರೀಯಾಗಿ ಒಂದು ಹೊಲಿಗೆ ಯಂತ್ರವಲ್ಲ ಪಡೆಯಬಹುದು.
- ತಜ್ಞರಿಂದ ಉಚಿತವಾಗಿ ಅರ್ಜಿ ಹಾಕಿದ ಮಹಿಳೆಯರೆಲ್ಲರಿಗೂ ಒಂದು ತಿಂಗಳ ತರಬೇತಿ ಸಿಗುತ್ತದೆ ಇತರ ಭೇಟಿಗೂ ಮಹಿಳೆಯರು ಹಣವನ್ನ ಪಾವತಿ ಮಾಡುವುದು ಬೇಡ.
- ಆರ್ಥಿಕವಾಗಿ ಹಿಂದುಳಿದ ಮಹಿಳೆ ತನ್ನ ಮನೆಯಲ್ಲಿಯೇ ಸ್ವಂತವಾಗಿ ಒಂದು ಹೊಸ ಉದ್ಯೋಗವನ್ನು ಆರಂಭಿಸಲು ಸರ್ಕಾರದ ಯೋಜನೆ ಬಹಳಷ್ಟು ನೆರವಾಗುತ್ತದೆ.
- ಮನೆಯ ಇತರೆ ಕೆಲಸದ ಜೊತೆಗೆ ಆದಾಯ ಪಡೆಯುವ ಕೆಲಸವನ್ನ ಒಬ್ಬ ಸಾಧಾರಣ ಮಹಿಳೆ ಕೂಡ ಮಾಡಬಹುದು.
- ಈ ಒಂದು ಯೋಜನೆಯಿಂದ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯ ಮಹಿಳೆಯರಿಗೆ ಸಿಕ್ಕಂತಾಗುತ್ತದೆ.

ನನಗೆ ಈ ಯೋಜನೆಯ ಲಾಭ ಸಿಗುತ್ತಾ ?
ಆತ್ಮೀಯ ಮಿತ್ರರೇ,,, ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆಗೆ ಆನ್ಲೈನ್ ಅರ್ಜಿ ಆರಂಭವಾಗಿರುವ ವಿಷಯವನ್ನು ನೀವು ತಿಳಿದ ನಂತರ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಅದೇ ನೋಡಿ ನಾನು ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಬಹುದಾ ? ಎನ್ನುವ ಪ್ರಶ್ನೆ ಈ ನಿನ್ನ ಪ್ರಶ್ನೆಗೆ ಉತ್ತರ ಈ ಕೆಳಗೆ ಸಂಪೂರ್ಣವಾಗಿ ನಾನು ನಿಮಗಾಗಿ ನೀಡಿದ್ದೇನೆ. ಇದನ್ನ ತಿಳಿದು ನೀವು ಅರ್ಹರಾಗಿದ್ದರೆ ಅಂತಿಮ ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸುವುದು ಬಹಳಷ್ಟು ಉತ್ತಮ.
- ನೀವು ಕರ್ನಾಟಕ ರಾಜ್ಯದ ಮಹಿಳೆಯರಾಗಿದ್ದಲ್ಲಿ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ.
- ನಿಮ್ಮ ವಯಸ್ಸು 18 ವರ್ಷದಿಂದ 55 ವರ್ಷದೊಳಗಿರಬೇಕು.
- ನಿಮ್ಮತ್ರ ಬಿಪಿಎಲ್ ಕಾರ್ಡ್ ಇರಬೇಕು ಅಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಾತ್ರ ಈ ಒಂದು ಯೋಜನೆಯ ಲಾಭ.
- ಹೊಲಿಗೆ ಕಲಿಯುವ ಆಸಕ್ತಿ ಅರ್ಜಿ ಸಲ್ಲಿಸುವ ಮಹಿಳೆಯರಲ್ಲಿ ಇರಬೇಕು.
ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ಪ್ರಮುಖ ದಾಖಲೆಗಳು:
ಸರ್ಕಾರದಿಂದ ಯಾವುದೇ ಯೋಜನೆಗಳು ಜಾರಿ ಬಂದರು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ತಮ್ಮ ಅಗತ್ಯ ದಾಖಲೆಗಳನ್ನ ಸಾಮನ್ಯವಾಗಿ ಯಾವುದೇ ವ್ಯಕ್ತಿ ಆದರೂ ಕೊಡಲೇಬೇಕು. ಅದೇ ರೀತಿ ಮಹಿಳೆಯರಿಗೆ ವಿತರಣೆ ಮಾಡುವ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳನ್ನ ಕೊಡಲೇಬೇಕು. ಹಾಗಿದ್ದರೆ ಯಾವ ರೀತಿ ದಾಖಲೆಗಳು ಈ ಕೆಯೊಳಗೆ ತಿಳಿಯೋಣ.
- ವಿಳಾಸ ದೃಢೀಕರಣ ಪತ್ರ
- ಪಾಸ್‌ಪೋರ್ಟ್ ಸೈಸ್ ಫೋಟೋ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
ತರಬೇತಿ ಬಗ್ಗೆ ವಿವರ:
“ಸರ್ಕಾರದ ನಿರ್ಧಾರದ ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಕೇವಲ ಹೊಲಿಗೆ ಯಂತ್ರ ಸಿಗುವುದಿಲ್ಲ, ಒಂದು ತಿಂಗಳ ಉಚಿತವಾಗಿ ತರಬೇತಿ ಕೂಡ ಸಿಗುತ್ತದೆ”. ನೀವು ಇತರ ಭೇಟಿಯಲ್ಲಿ ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವಂತಿಲ್ಲ ಇದನ್ನು ನೀವು ನಿಮ್ಮ ಗಮನದಲ್ಲಿ ಮುಖ್ಯವಾಗಿ ಇಟ್ಟುಕೊಳ್ಳಿ ಹಾಗೆಯೇ ಮಹಿಳೆಯರು ಕೇವಲ ಹೊಲಿಗೆ ಕಲಿಯುವುದಲ್ಲ, ಅದನ್ನ ತಮ್ಮ ವೃತ್ತಿಯಾಗಿಯೂ ರೂಪಿಸಿಕೊಳ್ಳುವಂತೆ ಸೃಷ್ಟಿಸಲಾಗುತ್ತದೆ. ಪ್ರಾಯೋಗಿಕ ಮತ್ತು ಉಪಯುಕ್ತ ತರಬೇತಿ ಮೂಲಕ ಅವರು ಮನೆಯಲ್ಲಿಯೇ ಆದಾಯ ಗಳಿಸುವ ಮಟ್ಟಕ್ಕೆ ತಲುಪುವಂತೆ ಮಹಿಳೆ ನುರಿತ ಮಾರ್ಗದರ್ಶನವು ಸಿಗುತ್ತದೆ.
ಯಾವ ರೀತಿಯ ಬಟ್ಟೆ ಹೊಲಿಯುವ ವಿನ್ಯಾಸವನ್ನು ಕಲಿತು ಕೊಳ್ಳಬಹುದು ಗೊತ್ತ?
- ಮೆಷಿನ್ ಬಳಕೆ ತರಬೇತಿ
- ಡ್ರೆಸ್ ಡಿಸೈನ್ ಕಲಿಕೆ
- ಬೇಸಿಕ್ ಹೊಲಿಗೆ
- ತರಬೇತಿ ಬ್ಲೌಸ್
- ಚುಡಿದಾರ್
- ಸಣ್ಣ ಉದ್ಯಮ ಆರಂಭಿಸುವ ಮಾರ್ಗದರ್ಶನ
ಮುಖ್ಯ ಸೂಚನೆ:
ಅರ್ಜಿ ಸಲ್ಲಿಸುವ ವಿಧಾನ:
ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆಗೆ ಮಹಿಳೆಯರು ಆಫ್ಲೈನ್ ಮತ್ತು ಆನ್ಲೈನ್ ಎರಡು ವಿಭಾಗದಲ್ಲೂ ಅರ್ಜಿಯನ್ನು ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಮೊದಲು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ ನಂತರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ.
ಆಫ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ
- ಸ್ಥಳೀಯ ಗ್ರಾಮ ಪಂಚಾಯತ್ / ನಗರಸಭೆ ಕಚೇರಿಗೆ ಭೇಟಿ ನೀಡಿ
- ಅರ್ಜಿ ಫಾರ್ಮ್ ಕಚೇರಿಯಿಂದ ಪಡೆಯಿರಿ
- ಅರ್ಜಿ ಫಾರ್ಮ್‌ನಲ್ಲಿ ಆವಶ್ಯಕ ಮಾಹಿತಿಗಳನ್ನು ಸರಿಯಾಗಿ ತುಂಬಿ
- ಕೆಳಗಿನ ದಾಖಲೆಗಳನ್ನು ಅರ್ಜಿ ಜೊತೆಗೆ ಲಗತ್ತಿಸಿ:
- ಆಧಾರ್ ಕಾರ್ಡ್ ಪ್ರತಿಗಳು
- ವಿಳಾಸ ದೃಢೀಕರಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು
- ಪಾಸ್‌ಪೋರ್ಟ್ ಸೈಸ್ ಫೋಟೋ
- ಅರ್ಜಿ ಸಲ್ಲಿಸಿದ ನಂತರ ಅಧಿಕಾರಿ ದೃಢೀಕರಣ ನಡೆಸುತ್ತಾರೆ
- ಆಯ್ಕೆ ಮಾಡಿದ ಮಹಿಳೆಯರಿಗೆ ಯಂತ್ರ ವಿತರಣೆ ಮತ್ತು ತರಬೇತಿ ವೇಳಾಪಟ್ಟಿ ಮಾಹಿತಿ ನೀಡಲಾಗುತ್ತದೆ
ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (ಸರ್ಕಾರದ ಸಬಲೀಕರಣ/ಉದ್ಯಮ ಪ್ರೋತ್ಸಾಹ ಪೋರ್ಟ್‌ಲ್) “ಉಚಿತ ಹೊಲಿಗೆ ಯಂತ್ರ ಯೋಜನೆ” ಅಥವಾ “ಮಹಿಳಾ ತರಬೇತಿ ಯೋಜನೆ” ವಿಭಾಗವನ್ನು ತೆರೆಯಿರಿ ನೀವು ಅರ್ಹರಾ ಎಂಬುದನ್ನು ಪರಿಶೀಲಿಸಿ (ವಯಸ್ಸು, ವಾರ್ಡ್, ಆರ್ಥಿಕ ಸ್ಥಾನಮಾನ) ಅರ್ಜಿ ಫಾರ್ಮ್‌ನಲ್ಲಿ ವೈಯಕ್ತಿಕ ಮಾಹಿತಿ ಸರಿಯಾಗಿ ತುಂಬಿ ಕೆಳಗಿನ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
- ಆಧಾರ್ ಕಾರ್ಡ್
- ವಿಳಾಸ ದೃಢೀಕರಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್‌ಬುಕ್/ಖಾತೆ ವಿವರ
- ಪಾಸ್‌ಪೋರ್ಟ್ ಸೈಸ್ ಫೋಟೋ
ಅರ್ಜಿ ಸಲ್ಲಿಸಿದ ನಂತರ Confirmation message / Acknowledgement ಪಡೆಯಿರಿ ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ಯಂತ್ರ ವಿತರಣೆ ಮತ್ತು ತರಬೇತಿ ವಿವರಗಳು ಅಂತರ್ಜಾಲ ಅಥವಾ SMS ಮೂಲಕ ತಿಳಿಸಲಾಗುತ್ತದೆ
ಸಮಾಪ್ತಿ:-
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿ ಆಗಲೆಂದು ಸರ್ಕಾರ ಇದೀಗ ಉಚಿತವಾಗಿ ಟೈಲರಿಂಗ್ ಮಷೀನ್ ಕೊಡೋದಕ್ಕೆ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೇಲೆ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ, ಈ ಯೋಜನೆಯ ಲಾಭವನ್ನು ಪಡೆಯಬಹುದು.
Housewife
ಕುಷ್ಟಗಿ ತಾಲೂಕು
Housewife
Tailor mission
Application for tailor mission