ನಮಸ್ಕಾರ ಸ್ನೇಹಿತರೆ, ಹಾವೇರಿ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿಯಲ್ಲಿ ಖಾಲಿ ಇರುವ 73 ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
BBMP Recruitment in Kannada
ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ದಿನಾಂಕ 1-04-2026 ರಿಂದಲೇ ಪ್ರಾರಂಭಗೊಂಡಿದ್ದು, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕ 30-04-2026 ರ ವರೆಗೂ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಈ ಒಂದು ಲೇಖನದಲ್ಲಿ ಹುದ್ದೆಗೆ ಸಂಬಂಧಿಸಿದ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ, ಅರ್ಜಿ ಶುಲ್ಕ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.

ಹುದ್ದೆಯ ವಿವರಣಾತ್ಮಕ ನೋಟ:
| ನೇಮಕಾತಿ ಸಂಸ್ಥೆ | ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿ, ಹಾವೇರಿ |
| ಹುದ್ದೆಯ ಹೆಸರು | ಪೌರಕಾರ್ಮಿಕರು |
| ಹುದ್ದೆಯ ಸಂಖ್ಯೆ | ಒಟ್ಟು 73 ಹುದ್ದೆಗಳು |
| ಉದ್ಯೋಗ ಸ್ಥಳ | ಹಾವೇರಿ ಜಿಲ್ಲೆ – ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
ಹುದ್ದೆಯ ಕಿರು ಪರಿಚಯ:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿ ಹಾವೇರಿಯೂ ಒಟ್ಟು 73 ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಅಥವಾ ಶೈಕ್ಷಣಿಕ ಅರ್ಹತೆ ಹೊಂದಿರುವ ಅಗತ್ಯ ಇರುವುದಿಲ್ಲ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಹಾವೇರಿ ಜಿಲ್ಲೆಯ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಈ ಒಂದು ಕ್ಷೇತ್ರದಲ್ಲಿ ಉದ್ಯೋಗ ಪ್ರಾರಂಭಿಸಲು ಒಂದೊಂದು ಅತ್ಯುತ್ತಮ ಅವಕಾಶವಾಗಿದೆ.
ಹುದ್ದೆಯ ಸಂಕ್ಷಿಪ್ತ ವಿವರ:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿಯು ಒಟ್ಟು 73 ಪೌರಕಾರ್ಮಿಕ ಹುದ್ದೆಗಳನ್ನು ಎರಡು ನಗರಸಭೆಗೆ ಹಂಚಿಕೆ ಮಾಡಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.
| ನಗರ ಸಭೆಗಳು | ಹುದ್ದೆಯ ಸಂಖ್ಯೆ |
| ರಾಣೆಬೆನ್ನೂರು ನಗರಸಭೆ | 33 ಹುದ್ದೆಗಳು |
| ಹಾವೇರಿ ನಗರಸಭೆ | 40 ಹುದ್ದೆಗಳು |
ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು:
- ಶೈಕ್ಷಣಿಕ ಅರ್ಹತೆ:
ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಗತ್ಯ ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡವನ್ನು ಮಾತನಾಡಲು ತಿಳಿದಿರಬೇಕು.
- ಅನುಭವ:
ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಾವೇರಿ ಹಾಗೂ ರಾಣೆಬೆನ್ನೂರು ನಗರಸಭೆಯಲ್ಲಿ ಈ ಹಿಂದೆ ಹೊರಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ಕನಿಷ್ಠ ಒಂದು ವರ್ಷಗಳ ಕಾಲ ಪೌರಕಾರ್ಮಿಕ, ಲೋಡರ್, ಯು.ಜಿ.ಡಿ ಹೆಲ್ಪರ್ ಅಥವಾ ಕ್ಲೀನರ್ ಆಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.
ವಯೋಮಿತಿ ವಿವರ:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಟ 55 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ ವಿವರ:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿ ಹಾವೇರಿಯ ಕೆಲವು ನಿಯಮಗಳ ಅನ್ವಯ ಕೆಲವು ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ವೇತನ ಶ್ರೇಣಿ:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿಯ ನಿಯಮಾನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ವೇತನವನ್ನು ನೀಡಲಾಗುತ್ತದೆ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಯಸ್ಸಿನ ಪುರಾವೆ
- ಐಡಿ ಪ್ರೂಫ್
- ಅನುಭವ ಪ್ರಮಾಣಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಾಲೆಕ್ಟ್ರಾರ್ ಕಚೇರಿಯ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಳ್ಳಿ.
- ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ, ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ಅರ್ಜಿ ನಮೂನೆಯಲ್ಲಿ ಕೇಳಲಾಗ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ನಂತರ, ಅನುಭವ ಪ್ರಮಾಣಪತ್ರ, ವಯಸ್ಸಿನ ಪುರಾವೆ ಹಾಗೂ ಈ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.
- ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಸಂಬಂಧಪಟ್ಟ ನಗರಸಭೆಯ ಪೌರಾಯುಕ್ತರ ಕಚೇರಿಗೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 01-04-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30-04-2026 |
ಪ್ರಮುಖ ಲಿಂಕುಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ಮಾತು:
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಕಚೇರಿಯಲ್ಲಿ ಒಟ್ಟು 73 ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಒಟ್ಟು ಹುದ್ದೆಗಳಲ್ಲಿ ಹಾವೇರಿ ನಗರಸಭೆಗೆ 40 ಹುದ್ದೆಗಳನ್ನು ಮತ್ತು ರಾಣೆಬೆನ್ನೂರು ನಗರಸಭೆಗಳಿಗೆ 33 ಹುದ್ದೆಗಳನ್ನು ವಿಂಗಡಣೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಾವು ಕಾರ್ಯನಿರ್ವಹಿಸುತ್ತಿರುವ ಅಥವಾ ವಾಸಿಸುತ್ತಿರುವ ನಗರಸಭೆ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕೊದೊಳಗಾಗಿ ಅರ್ಜಿ ಸಲ್ಲಿಸಿ. ಈ ಒಂದು ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- NHM: ₹88,000/- ವೇತನ! ರಾಷ್ಟೀಯ ಆರೋಗ್ಯ ಮಿಷನ್ ಭರ್ಜರಿ ನೇಮಕಾತಿ । ಪರೀಕ್ಷೆ ಇಲ್ಲದೇ ಸರ್ಕಾರಿ ಉದ್ಯೋಗಾವಕಾಶ!
- NIMHANS: ಬೆಂಗಳೂರಿನ ನಿಮ್ಹಾನ್ಸ್ ನೇಮಕಾತಿ 2026! ನೇರ ಸಂದರ್ಶನ + ಅರ್ಜಿ ಶುಲ್ಕ ಇಲ್ಲ
- DCC Bank: ರೂ. 83,700/- ವೇತನ! ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ಭರ್ಜರಿ ನೇಮಕಾತಿ 2026 । ಮೇ 6 ಕೊನೆಯ ದಿನಾಂಕ
- DHFWS: ₹1.30 ಲಕ್ಷ ವೇತನ! ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ನೇಮಕಾತಿ
- ADCL: ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನೇಮಕಾತಿ 2026! ಯಾವುದೇ ಪರೀಕ್ಷೆ ಇಲ್ಲ + ಅರ್ಜಿ ಶುಲ್ಕವಿಲ್ಲ