ಕರ್ನಾಟಕ ಸರ್ಕಾರದ ಸಂಸ್ಥೆಯ ಅಡಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟೀಯ ಆರೋಗ್ಯ ಮಿಷನ್ 2026 ನೇ ಸಾಲಿನ ನೇಮಕಾತಿ ಅಧಿಸೂಚನೆಯಲ್ಲಿ ಖಾಲಿ ಇರುವ ವಿವಿಧ 35 ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಆರೋಗ್ಯ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕೆಂದಿರುವವರಿಗೆ ಸುವರ್ಣಾವಕಾಶವಾಗಿದೆ.
NHM Recruitment in Kannada
ಈ ಒಂದು ನೇಮಕಾತಿಯು ಗುತ್ತಿಗೆಯ ಅಧರದ ಮೇಲೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಒಂದು ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಹುದ್ದೆಯ ಕಿರು ವಿಮರ್ಶೆ:
| ನೇಮಕಾತಿ ಸಂಸ್ಥೆಯ ಹೆಸರು | ರಾಷ್ಟೀಯ ಆರೋಗ್ಯ ಮಿಷನ್ ಕರ್ನಾಟಕ (NHM) |
| ಹುದ್ದೆಯ ಹೆಸರು | ವ್ಯಾಕ್ಸೀನ್ ಕೋಲ್ಡ್ ಚೈನ್ ಮ್ಯಾನೇಜರ್, ಕಾನ್ಸಲ್ಟೆಂಟ್ ಹಾಗೂ ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆಗಳು |
| ಹುದ್ದೆಗಳ ಸಂಖ್ಯೆ | ಒಟ್ಟು 35 ಹುದ್ದೆಗಳು |
| ಉದ್ಯೋಗ ಸ್ಥಳ | ಕರ್ನಾಟಕ |
| ಸಂದರ್ಶನ ನಡೆಯುವ ದಿನಾಂಕ | 13-04-2026 |
ಹುದ್ದೆಯ ಸಂಕ್ಷಿಪ್ತ ವಿವರ:
ರಾಷ್ಟೀಯ ಆರೋಗ್ಯ ಮಿಷನ್ (NHM) 2026 ನೇ ಸಾಲಿನ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 35 ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ಯಾವ ಯಾವ ವಿಭಾಗಕ್ಕೆ ಎಷ್ಟೆಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎನ್ನವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳಬಹುದಾಗಿದೆ.
| ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
| NUHM ಕನ್ಸಲ್ಟೆಂಟ್ | 1 ಹುದ್ದೆ |
| ಪ್ರೋಗ್ರಾಮ್ ಅಸಿಸ್ಟೆಂಟ್ | 2 ಹುದ್ದೆಗಳು |
| ವ್ಯಾಕ್ಸೀನ್ ಕೋಲ್ಡ್ ಚೈನ್ ಮ್ಯಾನೇಜರ್ | 32 ಹುದ್ದೆಗಳು |
ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:
- NUHM ಕನ್ಸಲ್ಟೆಂಟ್:
ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು MBBS, ಎಂ.ಪಿ.ಹೆಚ್, ಡಿ.ಪಿ.ಹೆಚ್, ಬಿ.ಡಿ.ಎಸ್, ಎಂ.ಡಿ (ಕಮ್ಯುನಿಟಿ ಮೆಡಿಸಿನ್), ಅಥವಾ ಬಿ.ಎ.ಎಂ.ಎಸ್ ಪೂರ್ಣಗೊಳಿಸಿರಬೇಕು.
- ಪ್ರೋಗ್ರಾಮ್ ಅಸಿಸ್ಟೆಂಟ್:
ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ವ್ಯಾಕ್ಸೀನ್ ಕೋಲ್ಡ್ ಚೈನ್ ಮ್ಯಾನೇಜರ್:
ಸೋಷಿಯಾಲಜಿ, ಸೋಷಿಯಲ್ ಸೈನ್ಸ್, ಹಾಸ್ಪಿಟಲ್ ಮ್ಯಾನೇಜ್ಮೆಂಟ್, ಸೋಷಿಯಲ್ ವರ್ಕ್, ಗ್ರಾಜುಯೇಷನ್ ಡಿಗ್ರಿ ಇನ್ ಪಬ್ಲಿಕ್ ಹೆಲ್ತ್ ಅಥವಾ ಡಿ.ಫಾರ್ಮ್, ಬಿ.ಫಾರ್ಮ್ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ:
ರಾಷ್ಟೀಯ ಆರೋಗ್ಯ ಮಿಷನ್ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಒಂದು ಸಂಸ್ಥೆಯಲ್ಲಿ ಖಾಲಿ ಇರುವ NUHM ಕನ್ಸಲ್ಟೆಂಟ್, ಪ್ರೋಗ್ರಾಮ್ ಅಸಿಸ್ಟೆಂಟ್ ಹಾಗೂ ವ್ಯಾಕ್ಸೀನ್ ಕೋಲ್ಡ್ ಚೈನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
ರಾಷ್ಟೀಯ ಆರೋಗ್ಯ ಮಿಷನ್ ಕರ್ನಾಟಕದ ಕೆಲವು ಮಾನದಂಡಗಳ ಪ್ರಕಾರ ಕೆಲವು ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ರಾಷ್ಟೀಯ ಆರೋಗ್ಯ ಮಿಷನ್ ಕರ್ನಾಟಕವು ನೇಮಕಾತಿ ಅಧಿಸೂಚನೆಯಲ್ಲಿ ಯಾವುದೇ ಅರ್ಜಿ ಶುಲ್ಕದ ಬಗ್ಗೆ ಉಲ್ಲೇಖಿಸಿಲ್ಲ, ಹಾಗಾಗಿ ಅಭ್ಯರ್ಥಿಗಳು ಉಚಿತವಾಗಿ ಸಂಬಂಧಿತ ಕಚೇರಿಗೆ ಭೇಟಿ ನೀಡಿ ನೇರ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ.
ವೇತನ ಶ್ರೇಣಿ:
ರಾಷ್ಟೀಯ ಆರೋಗ್ಯ ಮಿಷನ್ ಕರ್ನಾಟಕವು ಹುದ್ದೆಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.
| ಹುದ್ದೆಯ ಹೆಸರು | ವೇತನ ಶ್ರೇಣಿ |
| NUHM ಕನ್ಸಲ್ಟೆಂಟ್ | ₹55,000/- ದಿಂದ ₹88,000/- |
| ಪ್ರೋಗ್ರಾಮ್ ಅಸಿಸ್ಟೆಂಟ್ | ₹25,000/- |
| ವ್ಯಾಕ್ಸೀನ್ ಕೋಲ್ಡ್ ಚೈನ್ ಮ್ಯಾನೇಜರ್ | ₹32,100/- |
ಅರ್ಜಿ ಸಲ್ಲಿಸುವ ವಿಧಾನ:
- ರಾಷ್ಟ್ರಿಯ ಆರೋಗ್ಯ ಮಿಷನ್ ಕರ್ನಾಟಕದ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಳ್ಳಿ.
- ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದರೆ, ನಿಮ್ಮ ನವೀಕೃತ ರೆಸೂಮ್ ಅನ್ನು ಸಿದ್ಧಪಡಿಸಿಕೊಳ್ಳಿ.
- ನಂತರ, ಶೈಕ್ಷಣಿಕ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ವಯಸ್ಸಿನ ಪುರಾವೆ ಹಾಗೂ ಈ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
- ನಂತರ ನೇರ ಸಂದರ್ಶನ ನಡೆಯುವ ದಿನದಂದು ಸಮಯಕ್ಕೆ ಸರಿಯಾಗಿ ಈ ಎಲ್ಲ ದಾಖಲೆಗಳೊಂದಿಗೆ ಭಾಗವಹಿಸಿ.
- ಮುಖ್ಯವಾಗಿ, ಸಂದರ್ಶನ ನಡೆಯುವ 30 ನಿಮಿಷದ ಒಳಗೆ ನಿಮ್ಮ ಹೆಸರನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಿ.
ಸಂದರ್ಶನ ನಡೆಯುವ ಸ್ಥಳ:
ಮುಖ್ಯ ಆಡಳಿತಾಧಿಕಾರಿ ಕಚೇರಿ,
ರಾಷ್ಟೀಯ ಆರೋಗ್ಯ ಅಭಿಯಾನ,
1 ನೇ ಮಹಡಿ, ಪಶ್ಚಿಮ ವಿಭಾಗ,
ಆರೋಗ್ಯ ಸೌಧ, ಮಾಗಡಿ ರಸ್ತೆ,
1 ನೇ ಕ್ರಾಸ್, ಬೆಂಗಳೂರು – 560 023
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿಶೇಷವೆಂದರೆ, ಈ ಒಂದು ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಹಾಗೂ ಸಂದರ್ಶನದಲ್ಲಿ ಅಭ್ಯರ್ಥಿಗಳ ಭಾಗವಹಿಸುವಿಕೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂದರ್ಶದ ನಡೆಯುವ ದಿನಾಂಕ:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ನೇರ ಸಂದರ್ಶನ ನಡೆಯುವ ದಿನಾಂಕ | 13-04-2026 |
| ಸಂದರ್ಶನ ನಡೆಯುವ ಸಮಯ | ಬೆಳಿಗ್ಗೆ 11:00 ಗಂಟೆ |
ಪ್ರಮುಖ ಲಿಂಕುಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್‌ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ಮಾತು:
ರಾಷ್ಟೀಯ ಆರೋಗ್ಯ ಮಿಷನ್ 2026 ರ ನೇಮಕಾತಿ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ, ಹುದ್ದೆಗೆ ಸಂಬಂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೆವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಸಂದರ್ಶನ ನಡೆಯುವ ದಿನಾಂಕದನ್ನು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಕಚೇರಿಗೆ ಭೇಟಿ ನೀಡಿ ಸಂದರ್ಶನದಲ್ಲಿ ಭಾಗವಹಿಸಿ.
ಇತರೆ ಪ್ರಮುಖ ಲಿಂಕುಗಳು:
- NIMHANS: ಬೆಂಗಳೂರಿನ ನಿಮ್ಹಾನ್ಸ್ ನೇಮಕಾತಿ 2026! ನೇರ ಸಂದರ್ಶನ + ಅರ್ಜಿ ಶುಲ್ಕ ಇಲ್ಲ
- DCC Bank: ರೂ. 83,700/- ವೇತನ! ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ಭರ್ಜರಿ ನೇಮಕಾತಿ 2026 । ಮೇ 6 ಕೊನೆಯ ದಿನಾಂಕ
- DHFWS: ₹1.30 ಲಕ್ಷ ವೇತನ! ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ನೇಮಕಾತಿ
- ADCL: ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನೇಮಕಾತಿ 2026! ಯಾವುದೇ ಪರೀಕ್ಷೆ ಇಲ್ಲ + ಅರ್ಜಿ ಶುಲ್ಕವಿಲ್ಲ
- CPCRI: ₹42,000/- ವೇತನ! ಕೇಂದ್ರ ತೋಟಗಾರಿಕೆ ಸಂಸ್ಥೆಯಲ್ಲಿ ಯಂಗ್ ಪ್ರೊಫೆಷನಲ್ ಹುದ್ದೆಗಳ ಭರ್ಜರಿ ನೇಮಕಾತಿ!