Aadhaar Operator: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಧಾರ್ ಆಪರೇಟರ್ ಹುದ್ದೆಗಳ ನೇಮಕಾತಿ 2026! ಜಸ್ಟ್ PUC ಪಾಸ್ ಸಾಕು । 20 ಆಗಸ್ಟ್ ಕೊನೆಯ ದಿನ

ನಮಸ್ಕಾರ ಸ್ನೇಹಿತರೆ, ನೀವೇನಾದರೂ ನಿಮ್ಮ ಸ್ವಂತ ಜಿಲ್ಲೆಯಲ್ಲಿಯೇ ವೃತ್ತ ಜೀವನವನ್ನು ಪ್ರಾರಂಭಿಸಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ! CSC- ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಆಧಾರ್ ಸೇವಾ ಕೇಂದ್ರಗಳಲ್ಲಿ ಖಾಲಿ ಇರುವ ಆಧಾರ್ ಆಪರೇಟರ್/ ಸೂಪರ್ವೈಸರ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದೆ.

Aadhaar Operator Recruitment 2026


CSC- ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 317 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಕರ್ನಾಟಕಕ್ಕೆ ಒಟ್ಟು 157 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಇಲ್ಲಿ ಖಾಲಿ ಇರುವ ಆಧಾರ್ ಸೂಪರ್ವೈಸರ್/ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

ಆಧಾರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ UIDAI ಆಧಾರ್ ಮೇಲ್ವಿಚಾರಕ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

Aadhaar Operator

ಹುದ್ದೆಯ ಅವಲೋಕನ:

ನೇಮಕಾತಿ ಸಂಸ್ಥೆ CSC- ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ಹೆಸರು ಆಧಾರ್ ಆಪರೇಟರ್/ ಸೂಪರ್ವೈಸರ್
ಹುದ್ದೆಗಳ ಸಂಖ್ಯೆ ಒಟ್ಟು 157 ಹುದ್ದೆಗಳು
ಉದ್ಯೋಗ ಸ್ಥಳ ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-08-2026

ಹುದ್ದೆಯ ಸಂಕ್ಷಿಪ್ತ ಮಾಹಿತಿ:

CSC- ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕರ್ನಾಟಕದ ಆಧಾರ್ ಸೇವಾ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು157 ಆಧಾರ್ ಆಪರೇಟರ್/ ಸೂಪರ್ವೈಸರ್ ಹುದ್ದೆಗಳ ಭರ್ತಿಗೆ ಜೂನ್ 29, 2026 ರಿಂದ ಜುಲೈ 20, 2026 ವರೆಗೆ ಅವಕಾಶ ಕಲ್ಪಿಸಿದ್ದು, ದ್ವಿತೀಯ PUC ಪಾಸ್ ಆಗಿರುವ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಯ ವಿವರ:

CSC- ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾದ ಆಧಾರ್ ಸೂಪರ್ವೈಸರ್/ ಆಪರೇಟರ್ ಹುದ್ದೆಗಳ ವಿವರ ಈ ಕೆಳಕಂಡಂತಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳು ಜಿಲ್ಲಾವಾರು ಹಂಚಿಕೆ ಮಾಡಲಾದ ಹುದ್ದೆಗಳ ಸಂಖ್ಯೆ
ಉತ್ತರ ಕನ್ನಡ 2 ಹುದ್ದೆಗಳು
ಕೊಡಗು 3 ಹುದ್ದೆಗಳು
ಉಡುಪಿ 3 ಹುದ್ದೆಗಳು
ರಾಮನಗರ 3 ಹುದ್ದೆಗಳು
ಗದಗ 3 ಹುದ್ದೆಗಳು
ಧಾರವಾಡ 3 ಹುದ್ದೆಗಳು
ಚಾಮರಾಜನಗರ 4 ಹುದ್ದೆಗಳು
ಚಿತ್ರದುರ್ಗ 4 ಹುದ್ದೆಗಳು
ಹಾಸನ 4 ಹುದ್ದೆಗಳು
ಕೋಲಾರ 4 ಹುದ್ದೆಗಳು
ಶಿವಮೊಗ್ಗ 4 ಹುದ್ದೆಗಳು
ಯಾದಗಿರಿ 4 ಹುದ್ದೆಗಳು
ವಿಜಯಪುರ 5 ಹುದ್ದೆಗಳು
ರಾಯಚೂರು 5 ಹುದ್ದೆಗಳು
ಮಂಡ್ಯ 5 ಹುದ್ದೆಗಳು
ಕೊಪ್ಪಳ 5 ಹುದ್ದೆಗಳು
ಹಾವೇರಿ 5 ಹುದ್ದೆಗಳು
ಬೀದರ್ 5 ಹುದ್ದೆಗಳು
ಬೆಂಗಳೂರು ನಗರ 5 ಹುದ್ದೆಗಳು
ಬೆಳಗಾವಿ 5 ಹುದ್ದೆಗಳು
ಬೆಂಗಳೂರು ಗ್ರಾಮಾಂತರ 6 ಹುದ್ದೆಗಳು
ಬಾಗಲಕೋಟೆ 6 ಹುದ್ದೆಗಳು
ಚಿಕ್ಕಬಳ್ಳಾಪುರ 6 ಹುದ್ದೆಗಳು
ಚಿಕ್ಕಮಗಳೂರು 6 ಹುದ್ದೆಗಳು
ದಾವಣಗೆರೆ 6 ಹುದ್ದೆಗಳು
ಕಲ್ಬುರ್ಗಿ 6 ಹುದ್ದೆಗಳು
ವಿಜಯನಗರ 6 ಹುದ್ದೆಗಳು
ತುಮಕೂರು 7 ಹುದ್ದೆಗಳು
ದಕ್ಷಿಣ ಕನ್ನಡ 7 ಹುದ್ದೆಗಳು
ಮೈಸೂರ್ 8 ಹುದ್ದೆಗಳು
ಬಳ್ಳಾರಿ 12 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಆಧಾರ್ ಆಪರೇಟರ್/ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

  • ಅಭ್ಯರ್ಥಿಗಳು ದ್ವಿತೀಯ ಪಿಯೂಸಿ ಅಲ್ಲಿ ಪಾಸ್ ಆಗಿರಬೇಕು ಅಥವಾ ಮೆಟ್ರಿಕ್ಯುಲೇಷನ್ ಜೊತೆಗೆ ಎರಡು ವರ್ಷಗಳ ಐಟಿಐ ಪೂರ್ಣಗೊಳಿಸಿರಬೇಕು ಅಥವಾ ಮೆಟ್ರಿಕ್ಯುಲೇಷನ್ ಜೊತೆಗೆ ಮೂರು ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ:

CSC ಇ- ಗವರ್ನನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳ ಗರಿಷ್ಟ ವಯೋಮಿತಿಯನ್ನು ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖ ಮಾಡಿಲ್ಲ.

ಅರ್ಜಿ ಶುಲ್ಕ:

CSC ಇ- ಗವರ್ನನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನೇಮಕಾತಿ ನಿಯಮಾವಳಿಗಳ ಪ್ರಕಾರ, ಆಧಾರ್ ಆಪರೇಟರ್ ಅಥವಾ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಯಾವುದೇ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಎಲ್ಲ ಅಭ್ಯರ್ಥಿಗಳು ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ:

ನೇಮಕಾತಿ ಸಂಸ್ಥೆಯು ಆಯ್ಕೆದ ಅಭ್ಯರ್ಥಿಗಳಿಗೆ ಯಾವುದೇ ಸ್ಥಿರ ಮೂಲ ವೇತನವನ್ನು ನಿಗದಿಪಡಿಸಿಲ್ಲ. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಅರೆ ಕುಶಲ ಮಾನವಶಕ್ತಿಗೆ ನಿಗದಿಪಡಿಸಿರುವ ಕನಿಷ್ಠ ವೇತನ ಶ್ರೇಣಿ ನಿಯಮಗಳ ಪ್ರಕಾರ ಮಾಸಿಕ ವೇತನವನ್ನು ನೀಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಅಭ್ಯರ್ಥಿಗಳು ಮೊದಲು CSC ಸಂಸ್ಥೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಲಭ್ಯವಿರುವ ಉದ್ಯೋಗ ಪಟ್ಟಿಯಲ್ಲಿ ಆಧಾರ್ ಆಪರೇಟರ್/ ಸೂಪರ್ವೈಸರ್ -ಡಿಸ್ಟ್ರಿಕ್ಟ್ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಸರಿಯಾಗಿ ಪರಿಶೀಲಿಸಿ.
  • ನಂತರ ಹುದ್ದೆಗಳ ಪಕ್ಕದಲ್ಲಿ ಇರುವ ಅಪ್ಲೈ ನೌ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಹೆಸರು, ವಿಳಾಸ, ಅನುಭವ ವಿವರ, ಶೈಕ್ಷಣಿಕ ವಿವರ ಸೇರಿದಂತೆ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ನಂತರ ನವೀಕರಿಸಿದ ರೆಸೂಮ್ ಮತ್ತು ಆಧಾರ್ ಸೂಪರ್ವೈಸರ್ ಸರ್ಟಿಫಿಕೇಟ್ ಅನ್ನು ನಿಗದಿತ ಸೈಜ್ ನಲ್ಲಿ ಅಪ್ಲೋಡ್ ಮಾಡಿ.
  • ನಂತರ ಕ್ಯಾಪ್ಚವನ್ನು ಎಂಟರ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ:

ಶಾರ್ಟ್ ಲಿಸ್ಟ್:

ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ಮತ್ತು ದಾಖಲೆಗಳನ್ನು CSC ಸಮೀತಿಯು ಪರಿಶೀಲಿಸಿ. ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕಾದ ಆಧಾರ್ ಸೂಪರ್ವೈಸರ್ ಸರ್ಟಿಫಿಕೇಟ್ ಹಾಗೂ ಅವರು ದ್ವಿತೀಯ PUC ಅಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

ಸಂದರ್ಶನ:

ಶಾರ್ಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಹಂತದಲ್ಲಿ ಅಭ್ಯರ್ಥಿಗಳ ಕಂಪ್ಯೂಟರ್ ಜ್ಞಾನ, ಆಧಾರ್ ನೋಂದಣಿ ಪ್ರಕ್ರಿಯೆಯ ನಿಯಮಗಳ ತಿಳುವಳಿಕೆ ಹಾಗೂ ಅವರ ಸಂವಹನ ಕೌಶಲ್ಯವನ್ನು ಅಳೆಯಲಾಗುತ್ತದೆ.

ದಾಖಲೆಗಳ ಪರಿಶೀಲನೆ:

ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ. ಈ ಹಂತದಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ, ಆಧಾರ್ ಸೂಪರ್ವೈಸರ್ ಸರ್ಟಿಫಿಕೇಟ್, ಗುರುತಿನ ದಾಖಲೆಗಳು ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ.

ಅಂತಿಮವಾಗಿ ಈ ಮೂರು ಹಂತದಲ್ಲಿ ಅಭ್ಯರ್ಥಿಗಳ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಅರ್ಹ ಅಭ್ಯರ್ಥಿಗಳನ್ನು ಒಂದು ವರ್ಷಗಳ ಒಪ್ಪಂದದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕ 29-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ20-08-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

CSC- ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕರ್ನಾಟಕದ ಆಧಾರ್ ಸೇವಾ ಕೇಂದ್ರಗಳಲ್ಲಿ ಖಾಲಿ ಇರುವ ಆಧಾರ್ ಸೂಪರ್ವೈಸರ್ ಅಥವಾ ಆಪರೇಟರ್ ಹುದ್ದೆಗಳಿಗೆ ಅರ್ಜಿ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, PUC ಪೂರ್ಣಗೊಳಿಸಿ UIDAI ಆಧಾರ್ ಮೇಲ್ವಿಚಾರಕ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಧಾರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.


ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment