ಇಂಜಿನಿಯರಿಂಗ್ ಪದವಿ ಮುಗಿಸಿ, ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ BSNL ಸಂಸ್ಥೆಯು ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಭಾರತ್ ಸಂಚಾರ ನಿಗಮ ಲಿಮಿಟೆಡ್ ಒಟ್ಟು 100 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
BSNL JTO Recruitment in Kannada
ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್, ರೇಡಿಯೋ, ಎಲೆಕ್ಟ್ರಿಕಲ್, ಇಂಫಾರ್ಮೇಷನ್ ಟೆಕ್ನಾಲಜಿ, ಇನ್ಸ್ಟ್ರುಮೆಂಟೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಅರ್ಹ ಅಭ್ಯರ್ಥಿಗಳು BSNL ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು 4-06-2026 ರಿಂದ 3-07-2026 ರ ವರೆಗೂ ಅವಕಾಶ ಕಲ್ಪಿಸಲಾಗಿದೆ. ಈ ಒಂದು ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವಯೋಮಿತಿ ವಿವರ ಹಾಗೂ ಇನ್ನಿತರ ಎಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಒಂದಿಕೊಂಡು ನಂತರ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರಣಾತ್ಮಕ ನೋಟ:
| ನೇಮಕಾತಿ ಸಂಸ್ಥೆ | ಭಾರತ್ ಸಂಚಾರ ನಿಗಮ ಲಿಮಿಟೆಡ್ |
| ಹುದ್ದೆಯ ಹೆಸರು | ಜೂನಿಯರ್ ಟೆಲಿಕಾಂ ಆಫೀಸರ್ |
| ಹುದ್ದೆಗಳ ಸಂಖ್ಯೆ | ಒಟ್ಟು 100 ಹುದ್ದೆಗಳು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
| ಉದ್ಯೋಗ ಸ್ಥಳ | ಅಖಿಲ ಭಾರತ |
ಹುದ್ದೆಗಳ ವಿವರ:
ಭಾರತ್ ಸಂಚಾರ ನಿಗಮ ಲಿಮಿಟೆಡ್ ಒಟ್ಟು 100 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಹುದ್ದೆಗಳನ್ನು ಈ ಕೆಳಕಂಡಂತೆ ಹಂಚಿಕೆ ಮಾಡಲಾಗುತ್ತದೆ.
| ಹುದ್ದೆಗಳ ವಿವರ | ಹುದ್ದೆಗಳ ಸಂಖ್ಯೆ |
| ಕರ್ನಾಕಟ | 26 ಹುದ್ದೆಗಳು |
| ಮಹಾರಾಷ್ಟ್ರ | 16 ಹುದ್ದೆಗಳು |
| ಕೇರಳ | 15 ಹುದ್ದೆಗಳು |
| ಮಧ್ಯಪ್ರದೇಶ | 10 ಹುದ್ದೆಗಳು |
| ಒಡಿಶಾ | 06 ಹುದ್ದೆಗಳು |
| ಚೆನೈ ಟೆಲಿಕಾಂ ಡಿಸ್ಟ್ರಿಕ್ಟ್ | 05 ಹುದ್ದೆಗಳು |
| ಗುಜರಾತ್ | 03 ಹುದ್ದೆಗಳು |
| ಈಶಾನ್ಯ ವಲಯ | 03 ಹುದ್ದೆಗಳು |
| ತೆಲಂಗಾಣ | 02 ಹುದ್ದೆಗಳು |
| ಅಸ್ಸಾಂ | 02 ಹುದ್ದೆಗಳು |
| ಕೋಲ್ಕತ್ತಾ ಟೆಲಿಕಾಂ ಡಿಸ್ಟ್ರಿಕ್ಟ್ | 02 ಹುದ್ದೆಗಳು |
| ಅಂಡಮಾನ್ ಮತ್ತು ನಿಕೋಬಾರ್ | 01 ಹುದ್ದೆ |
| ಆಂಧ್ರಪ್ರದೇಶ | 01 ಹುದ್ದೆ |
| ಛತ್ತೀಸ್ ಗಡ | 01 ಹುದ್ದೆ |
| ಹರಿಯಾಣ | 01 ಹುದ್ದೆ |
| ಜಮ್ಮು ಮತ್ತು ಕಾಶ್ಮೀರ | 01 ಹುದ್ದೆ |
| ರಾಜಸ್ಥಾನ | 01 ಹುದ್ದೆ |
| ಸಿಕ್ಕಿಂ | 01 ಹುದ್ದೆ |
| ತಮಿಳುನಾಡು | 01 ಹುದ್ದೆ |
| ಉತ್ತರ ಪ್ರದೇಶ ಪಶ್ಚಿಮ | 01 ಹುದ್ದೆ |
| ಉತ್ತರಾಖಂಡ | 01 ಹುದ್ದೆ |
ಶೈಕ್ಷಣಿಕ ಅರ್ಹತೆ:
- ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್, ರೇಡಿಯೋ, ಎಲೆಕ್ಟ್ರಿಕಲ್, ಇಂಫಾರ್ಮೇಷನ್ ಟೆಕ್ನಾಲಜಿ, ಇನ್ಸ್ಟ್ರುಮೆಂಟೇಷನ್ ಹಾಗೂ ಟೆಲಿಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನೀರಿಂಗ್ ಪದವಿ ಪೂರ್ಣಗೊಳಿಸಿರಬೇಕು.
- ಈ ಮೇಲೆ ನೀಡಲಾದ ವಿಭಾಗಗಳಲ್ಲಿ ಎಂ.ಟೆಕ್ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
- ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಎಸ್ಸಿ ಪದವಿ ಮುಗಿಸಿರಬೇಕು.
ವಯೋಮಿತಿ ವಿವರ:
ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಕನಿಷ್ಠ 20 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
ಭಾರತ ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ಈ ಕೆಳಗೆ ತಿಳಿಸಿರುವಂತೆ ವಯೋಮಿತಿ ಸಡಿಲಿಕೆ ಇರುತ್ತದೆ.
- ಒಬಿಸಿ (NCL) ಅಭ್ಯರ್ಥಿಗಳಿಗೆ: 3 ವರ್ಷ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
- PwBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
- PwBD (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷ
- PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
- ಒಬಿಸಿ (CL), ಇ.ಡಬ್ಲ್ಯೂ.ಎಸ್ ವರ್ಗಕ್ಕೆ ಸೇರಿದ BSNL ಉದ್ಯೋಗಿಗಳಿಗೆ: 5 ವರ್ಷ
- ಒಬಿಸಿ (NCL) ವರ್ಗಕ್ಕೆ ಸೇರಿದ BSNL ಉದ್ಯೋಗಿಗಳಿಗೆ: 8 ವರ್ಷ
- SC /ST ವರ್ಗಕ್ಕೆ ಸೇರಿದ BSNL ಉದ್ಯೋಗಿಗಳಿಗೆ: 10 ವರ್ಷ
- PwBD (ಒಬಿಸಿ) ವರ್ಗಕ್ಕೆ ಸೇರಿದ BSNL ಉದ್ಯೋಗಿಗಳಿಗೆ: 18 ವರ್ಷ
- PwBD (SC/ST) ವರ್ಗಕ್ಕೆ ಸೇರಿದ BSNL ಉದ್ಯೋಗಿಗಳಿಗೆ: 20 ವರ್ಷ
ಅರ್ಜಿ ಶುಲ್ಕ:
ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ವರ್ಗಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗಿದಿಪಡಿಸಿದ್ದು, ಅಭ್ಯರ್ಥಿಗಳು ಈ ಅರ್ಜಿ ಶುಲ್ಕವನ್ನು ಆನ್ಲೈನ್ ಮೋಡ್ ಮೂಲಕ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗುತ್ತದೆ.
| ವಿವಿಧ ವರ್ಗಗಳು | ಅರ್ಜಿ ಶುಲ್ಕ |
| ಒಬಿಸಿ ಹಾಗೂ ಇ.ಡಬ್ಲ್ಯೂ.ಎಸ್ ಅಭ್ಯರ್ಥಿಗಳು | ರೂ. 2000/- |
| ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ PwBD ಅಭ್ಯರ್ಥಿಗಳಿಗೆ | ರೂ. 1000/- |
ವೇತನ ಶ್ರೇಣಿ:
BSNL ಸಂಸ್ಥೆಯಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 16,400 ರಿಂದ ರೂ. 40,500 ವರಗೆ ವೇತನವನ್ನು ನೀಡಲಾಗುತ್ತದೆ. ಇವುಗಳ ಜೊತೆಗೆ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ ಸೇರಿದಂತೆ ಇನ್ನಿತರ ಭತ್ಯೆಗಳು ಸಿಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು BSNL ಅಧಿಕೃತ ಪರೀಕ್ಷಾ ಪೋರ್ಟಲ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ರಿಕ್ರೂಟ್ಮೆಂಟ್ 2026 ಲಿಂಕ್ ಕ್ಲಿಕ್ ಮಾಡಿ ರೆಜಿಸ್ಟ್ರೇಷನ್ ಪ್ರೋಸೆಸ್ ಪೂರ್ಣಗೊಳಿಸಿ.
- ನಂತರ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬಳಸಿ ಲಾಗಿನ್ ಆಗಿ.
- ನಂತರ ಅಫ್ಲಿಕೇಷನ್ ಫಾರ್ಮ್ ನಲ್ಲಿ ಶೈಕ್ಷಣಿಕ ವಿವರ, ವಯೋಮಿತಿ ವಿವರ, ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ನಂತರ ಅಭ್ಯರ್ಥಿಗಳ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಅಭ್ಯರ್ಥಿಗಳ ಸಹಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಸೇರಿದಂತೆ ಇನ್ನಿತರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ:
ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಮೂರು ಗಂಟೆಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಒಂದು ಪರೀಕ್ಷೆಯು ಒಟ್ಟು 480 ಅಂಕಗಳನ್ನು ಹೊಂದಿದ್ದು, ಪ್ರತಿ ಸರಿ ಉತ್ತರಕ್ಕೆ 4 ಅಂಕಗಳನ್ನು ನೀಡಲಾಗುತ್ತದೆ ಹಾಗೂ ಪ್ರತಿ ತಪ್ಪು ಉತ್ತರಕ್ಕೆ 1 ಅಂಕವನ್ನು ಕಳೆಯಲಾಗುತ್ತದೆ.
- ದಾಖಲಾತಿ ಪರೀಶೀಲನೆ:
ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ, ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರಿಯಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ:
ಆಯ್ಕೆಯಾದ ಅಭ್ಯರ್ಥಿಗಳಿಗೆ BSNL ನೇಮಕಾತಿ ನಿಯಮಗಳ ಪ್ರಕಾರ, BSNL ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಪ್ರಮುಖ ದಿನಾಂಕಗಳು:
| ಪ್ರಮುಖ ಈವೆಂಟ್ | ದಿನಾಂಕ |
|---|---|
| ನೇಮಕಾತಿ ಅಧಿಸೂಚನೆ ಪ್ರಕಟಿಸಿದ ದಿನಾಂಕ | 26-05-2026 |
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 04-06-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 03-07-2026 |
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಭಾರತೀಯ ಸಂಚಾರ ನಿಗಮ ಲಿಮಿಟೆಡ್ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 100 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಟೆಲಿಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಹಾಗೂ ಇನ್ನಿತರ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ, ನಿಗದಿತ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:.
BSNL ನಲ್ಲಿ ಜೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದೆ.
BSNL ನಲ್ಲಿ ಒಟ್ಟು 100 ಹುದ್ದೆಗಳು ಖಾಲಿ ಇದೆ.
03-07-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಇತರೆ ಪ್ರಮುಖ ಲಿಂಕುಗಳು:
- KMF GUMUL ನೇಮಕಾತಿ : ಕಲಬುರಗಿ ಹಾಲು ಒಕ್ಕೂಟದಲ್ಲಿ 50 ಹುದ್ದೆಗಳಿಗೆ ಅರ್ಜಿಸಲ್ಲಿಕೆ ಪ್ರಾರಂಭ! KMF GUMUL Recruitment 2026
- Drivers Job: ಕೊಚ್ಚಿನ್ ಶಿಪ್ಯಾರ್ಡ್ ನಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ! SSLC ಪಾಸ್ ಆದವರಿಗೆ ಸರ್ಕಾರಿ ಉದ್ಯೋಗಾವಕಾಶ
- GramPanchayat: ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2026! ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳು
- DC Office: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಭರ್ಜರಿ ನೇಮಕಾತಿ! ಯಾವುದೇ ಅರ್ಜಿ ಶುಲ್ಕವಿಲ್ಲ + ಲಿಖಿತ ಪರೀಕ್ಷೆ ಇಲ್ಲ
- KSRLPS: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ಬೃಹತ್ ನೇಮಕಾತಿ 2026! ಮೇ 31 ಕೊನೆಯ ದಿನಾಂಕ