Driver Scheme : ಪ್ರತಿಯೊಬ್ಬ ಆಟೋ ಡ್ರೈವರ್‌ಗೆ ₹15,000 ಸಹಾಯಧನ : ಏನಿದು ಮಾಹಿತಿ? ಇಲ್ಲಿ ನೋಡಿ!

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ “ಪ್ರತಿಯೊಬ್ಬ ಆಟೋ ಡ್ರೈವರ್‌ಗೆ ₹15,000 ಸಹಾಯಧನ” ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಕರ್ನಾಟಕ ಸರ್ಕಾರದಿಂದ ಎಲ್ಲಾ ಆಟೋ ಚಾಲಕರಿಗೂ ನೇರವಾಗಿ ₹15,000 ನೀಡುವ ಅಧಿಕೃತ ಯೋಜನೆ ಇನ್ನೂ ಘೋಷಣೆ ಮಾಡಿಲ್ಲ . ಆದರೆ ₹15,000 ಸಹಾಯಧನ ಯೋಜನೆ ಬೇರೆ ರಾಜ್ಯದಲ್ಲಿ ಜಾರಿಯಲ್ಲಿದೆ ಕರ್ನಾಟಕದಲ್ಲಿ ಇದುವರೆಗೆ ಅಂತಹ ನೇರ ನಗದು ಸಹಾಯಧನಕ್ಕೆ ಅಧಿಕೃತ ಆದೇಶ ಬಂದಿಲ್ಲ.

ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರು ಹೇಳಿದ ಪ್ರಕಾರ ಕರ್ನಾಟಕ ಸರ್ಕಾರ ಪ್ರತಿಯೊಬ್ಬ ಆಟೋ ಚಾಲಕರಿಗೆ ಆರ್ಥಿಕ ಸಹಾಯಧನವನ್ನು ನೀಡಿದರೆ ತುಂಬುವನೇ ಸಕಾರಿ ಆಗಲಿದೆ ಎಂದು ಹೇಳಿದ್ದಾರೆ ಈ ಯೋಜನೆ ಯಾವಾಗ ಜಾರಿಗೆ ಬರುತ್ತದೆಯೋ ಕಾಡು ನೋಡಬೇಕಿದೆ.

ಕರ್ನಾಟಕ ಸರ್ಕಾರ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಸ್ವಯಂ ಉದ್ಯೋಗ ಆರಂಭಿಸಲು ಬಯಸುವವರಿಗೆ ಯಾವ ರೀತಿ ಸಹಾಯಧನವನ್ನು ಸಿಗುತ್ತದೆ!

ಆದರೆ ಕರ್ನಾಟಕ ಸರ್ಕಾರ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಸ್ವಯಂ ಉದ್ಯೋಗ ಆರಂಭಿಸಲು ಬಯಸುವವರಿಗೆ ವಾಹನ ಖರೀದಿಗೆ ವಿವಿಧ ಸಹಾಯಧನ ಯೋಜನೆಗಳನ್ನು ನೀಡುತ್ತಿದೆ. ವಿಶೇಷವಾಗಿ “ಸ್ವಾವಲಂಬಿ ಸಾರಥಿ” ಯೋಜನೆಯಡಿ ಹೊಸ ಆಟೋ ಅಥವಾ ಸರಕು ವಾಹನ ಖರೀದಿಸಲು 50% ರಿಂದ 75% ವರೆಗೆ ಸಹಾಯಧನ ಸಿಗುತ್ತದೆ. ಕೆಲವು ವರ್ಗಗಳಿಗೆ ₹75,000 ರಿಂದ ₹4 ಲಕ್ಷದವರೆಗೆ ಸಹಾಯಧನ ದೊರೆಯಬಹುದು.

ಯೋಜನೆಯ ಉದ್ದೇಶ:

  • ನಿರುದ್ಯೋಗಿ ಯುವಕರು ಮತ್ತು ವಾಹನ ಚಾಲಕರಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ವಾಹನವನ್ನು ಖರೀದಿಸಲು ಭಾರಿ ಮೊತ್ತದ ಸಹಾಯಧನವನ್ನು ಒದಗಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು.
  • ಆಟೋವನ್ನು ಬಾಡಿಗೆಗೆ ಪಡೆದುಕೊಂಡು ಜೀವನವನ್ನು ಸಾಗಿಸುತ್ತಿರುವ ಸಾವಿರಾರು ಆಟೋ ಚಾಲಕರಿಗೆ ತಾವು ದುಡಿಮೆ ಮಾಡಿದ ಅರ್ಧದಷ್ಟು ಹಣವನ್ನು ಬಾಡಿಗೆ ಕಟ್ಟುದಕ್ಕೆ ಸರಿ ಹೊಂದುತ್ತದೆ. ಅಂತಹ ಚಾಲಕರಿಗೆ ಸ್ವಂತವಾಗಿ ವಾಹನವನ್ನು ಖರೀದಿಸಲು ಸಹಾಯಧನವನ್ನು ಒದಗಿಸುವ ಮೂಲಕ ಅವರನ್ನು ಬಾಡಿಗೆದಾರನಿಂದ ಮಾಲೀಕನನ್ನಾಗಿ ಮಾಡುವುದು.

ಯೋಜನೆಯ ಪ್ರಯೋಜನ:

  • ಹೊಸದಾಗಿ ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಇನ್ನಿತರ ವಾಹನವನ್ನು ಖರೀದಿಸಿದವರಿಗೆ ವಾಹನದ ಒಟ್ಟು ಮೊತ್ತದ ಮೇಲೆ 50% ರಿಂದ 75% ವರೆಗಿನ ಸಹಾಯಧನವನ್ನು ಸರ್ಕಾರವೇ ಭರಿಸುತ್ತದೆ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ವರ್ಗಗಳ ಅಭ್ಯರ್ಥಿಗಳಿಗೆ ಸಬ್ಸಿಡಿ ದರವು ಹೆಚ್ಚಿನ ಮಟ್ಟದಲ್ಲಿ ಇರುತ್ತದೆ.
  • ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಯಾರು ಅರ್ಜಿಯನ್ನು ಸಲ್ಲಿಸಬಹುದು!

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಮಾನ್ಯತೆ ಇರುವ ಆಟೋ ರಿಕ್ಷಾ ಚಾಲನಾ ಪರವಾನಗಿ ಹೊಂದಿರಬೇಕು.
  • ಸಾರಿಗೆ ಇಲಾಖೆಯಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಚಾಲಕರಾಗಿರಬೇಕು ಹಾಗೂ ಅಲ್ಲಿ ನೀಡಿರುವ ಚಾಲನಾ ಬ್ಯಾಡ್ಜ್ ಅನ್ನು ಹೊಂದಿರಬೇಕು.
  • ಆಟೋ ರಿಕ್ಷಾ ಅರ್ಜಿದಾರರ ಹೆಸರಿನಲ್ಲಿ ಇರಬೇಕು ಅಥವಾ ಅಧಿಕೃತ ಬಾಡಿಗೆ ಒಪ್ಪಂದ ಇರಬೇಕು.

ಬೇಕಾಗುವ ದಾಖಲೆಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ವಿವರವನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ನಿವಾಸ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್ ನಕಲು
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಡ್ರೈವಿಂಗ್ ಲೈಸೆನ್ಸ್
  • ವಾಹನ ಖರೀದಿ ಕ್ವೋಟೇಶನ್ ಅಥವಾ ಡೀಲರ್ ಅಂದಾಜು ಪತ್ರ

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಜಿಯನ್ನ ಎಲ್ಲಿ ಸಲ್ಲಿಸಬೇಕು ಎನ್ನುವ ವಿವರವನ್ನು ಈ ಕೆಳಗೆ ನೀಡಲಾಗಿದೆ ಎಲ್ಲಾ ಮಾಹಿತಿಯನ್ನು ನೀವು ಕಡ್ಡಾಯವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದ್ದು ಅದನ್ನು ಕೂಡ ಫಾಲೋ ಮಾಡುವ ಮೂಲಕ ಸರಳವಾಗಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು

  • ಆನ್‌ಲೈನ್‌ನಲ್ಲಿ Seva Sindhu ಮೂಲಕ
    ಅಥವಾ ತಾಲೂಕು/ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ನಿಗಮ ಕಚೇರಿಗಳಲ್ಲಿ
    ಹತ್ತಿರದ ಬೆಂಗಳೂರು ಒನ್, ಗ್ರಾಮ ಒನ್ ಅಥವಾ ನಾಗರಿಕ ಸೇವಾ ಕೇಂದ್ರದಲ್ಲಿಯೂ ಸಲ್ಲಿಸಬಹುದು
  • ಅಂತಿಮ ತೀರ್ಮಾನ:
    ಪ್ರತಿಯೊಬ್ಬ ಆಟೋ ಡ್ರೈವರ್‌ಗೆ ₹15,000 ನೇರವಾಗಿ ನೀಡಲಾಗುತ್ತಿದೆ ಎಂಬ ಸುದ್ದಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತವಾಗಿಲ್ಲ. ಆದರೂ ಆಟೋ ಅಥವಾ ವಾಹನ ಖರೀದಿಗೆ ಸರ್ಕಾರದಿಂದ ದೊಡ್ಡ ಪ್ರಮಾಣದ ಸಹಾಯಧನ ಲಭ್ಯವಿದೆ. ಆದ್ದರಿಂದ ಯಾವುದೇ ಅರ್ಜಿ ಹಾಕುವ ಮೊದಲು ಅಧಿಕೃತ ಪೋರ್ಟಲ್ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೃಢೀಕರಿಸಿ. ಸುಳ್ಳು ಲಿಂಕ್‌ಗಳು ಅಥವಾ ಹಣ ಕೇಳುವ ವ್ಯಕ್ತಿಗಳಿಂದ ಎಚ್ಚರಿಕೆಯಿಂದಿರಿ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳನ್ನು ಅನುಸರಿಸುವ ಮೂಲಕ ಆನೆನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

  • ಮೊದಲು Seva Sindhu ಪೋರ್ಟಲ್‌ಗೆ ಭೇಟಿ ನೀಡಿ.
  • “Vehicle Subsidy”, “Swavalambi Sarathi” ಅಥವಾ “Auto Rickshaw Subsidy Scheme” ಹುಡುಕಿ.
  • ನಿಮ್ಮ ವರ್ಗಕ್ಕೆ ಹೊಂದುವ ನಿಗಮವನ್ನು ಆಯ್ಕೆ ಮಾಡಿ, ಉದಾಹರಣೆಗೆ:
  • Karnataka Minorities Development Corporation
  • Dr. B. R. Ambedkar Development Corporation
  • Karnataka Backward Classes Development Corporation
  • ಅರ್ಜಿ ಫಾರ್ಮ್ ಭರ್ತಿ ಮಾಡಿ.
  • ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಸಲ್ಲಿಸಿದ ನಂತರ ರೆಫರೆನ್ಸ್ ನಂಬರ್‌ನ್ನು ಉಳಿಸಿಕೊಳ್ಳಿ.

ವಿಶೇಷ ಸೂಚನೆ:

ಈ ಯೋಜನೆಗೆ ಅರ್ಜಿ ಸಲ್ಲಿಸಿ 15000 ಹಣವನ್ನ ಪಡೆದುಕೊಳ್ಳುವಂತಹ ಯಾವುದೇ ಯೋಜನೆಯು ಕರ್ನಾಟಕ ಸರ್ಕಾರ ಜಾರಿಗೆ ತಂದಿಲ್ಲ ಈ ಯೋಜನೆಯು ಬೇರೆ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದು ಈ ಯೋಜನೆಯನ್ನು ಕರ್ನಾಟಕದಲ್ಲಿ ಸಹ ಜಾರಿಗೆ ತಂದು ಆಟೋ ಚಾಲಕರ ಸಹಾಯಕ್ಕೆ ಮುಂದಾಗಬೇಕು ಎನ್ನುವಂಥದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಮಾತಾಗಿರುವಂಥದ್ದು.

ಅಂತಿಮ ತೀರ್ಮಾನ:

ಆಟೋ ಚಾಲಕರಿಗೆ 15000 ಸಹಾಯಧನವನ್ನ ನೀಡಬೇಕು ಅನ್ನುವಂತಹ ಕೂಗು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಸ್ರೇಲ್ ಅಮೆರಿಕ ಮತ್ತು ಇರನ್ ನಡುವೆ ನಡೆಯುತ್ತಿರುವಂತಹ ಯುದ್ಧದಲ್ಲಿ ಆಟೋ ಚಾಲಕರ ಬದುಕು ಬೀದಿಗೆ ಬರುವಂತಾಗಿದೆ ಎಂದು ಇವರಿಗೆ ಸಹಾಯ ಮಾಡಬೇಕು ಕರ್ನಾಟಕ ಸರ್ಕಾರದಿಂದ ಎನ್ನುವಂತ ಮಾಹಿತಿಯನ್ನು ಹೆಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ.

Leave a Comment