ಪಿಯುಸಿ ರಿಸಲ್ಟ್ ಅಂತೂ ಬಂದಾಯ್ತು, ಮುಂದೆ ಯಾವ ಕಾಲೇಜು ಗೆ ಸೇರುವುದು? ಅಡ್ಮಿಶನ್ ಆಗಲು ಎಷ್ಟು ಹಣ ಬೇಕಾಗುತ್ತದೆ? ಈ ಖರ್ಚನ್ನು ಹೇಗೆ ನಿಭಾಯಿಸುವುದು? ಎನ್ನುವ ಗೊಂದಲಗಳು ಹಾಗೂ ಚಿಂತೆಗಳು ಪ್ರತಿಯೊಬ್ಬ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಇದ್ದೆ ಇರುತ್ತದೆ. ಇನ್ನು ಈ ಒಂದು ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ.
Education Loan for PUC Students
ನಿಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ ಸರ್ಕಾರವು ವಿವಿಧ ಬ್ಯಾಂಕ್ ಗಳಿಂದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಪಿಯುಸಿ ಮುಗಿಸಿದ ನಂತರ ಸಾಕಷ್ಟು ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಸರ್ಕಾರವು ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಒಂದು ಯೋಜನೆಯಡಿಯಲ್ಲಿ ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಲಾಭವನ್ನು ಪಡೆದುಕೊಂಡಿದ್ದಾರೆ.
ಶೈಕ್ಷಣಿಕ ಸಾಲವನ್ನು ಪಡೆದುಕೊಳ್ಳಲು ಯಾರು ಅರ್ಹರು? ಸಾಲದ ಮಿತಿ ಎಷ್ಟು? ಈ ಒಂದು ಯೋಜನೆಯು ವಿದ್ಯಾರ್ಥಿಗಳಿಗೆ ಏಕೆ ಅಗತ್ಯ? ವಿದ್ಯಾರ್ಥಿಗಳಿಗೆ ಇದರಿಂದಾಗುವ ಪ್ರಯೋಜನಗಳೇನು? ಎಂಬೆಲ್ಲಾ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಹೈಲೈಟ್ಸ್:
| * ಪಿಯುಸಿ ಮುಗಿಸಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸರ್ಕಾರದಿಂದ ಶೈಕ್ಷಣಿಕ ಸಾಲ ಸೌಲಭ್ಯ. * ಕಡಿಮೆ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ಸೌಲಭ್ಯ. * ಗರಿಷ್ಟ 1,00,000 ದ ವರೆಗೆ ಸಾಲ ಪಡೆಯಲು ಅವಕಾಶ. * ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರದಿಂದ ಮಹತ್ವದ ನಿರ್ಧಾರ. |
ಶೈಕ್ಷಣಿಕ ಸಾಲದ ವಿವರ:
ಪಿಯುಸಿ ಪೂರ್ಣಗೊಳಿಸಿದ ಲಕ್ಷಾಂತರ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗುವುದನ್ನು ಗಮನಿಸಿದ ಸರ್ಕಾರವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಈ ಒಂದು ಯೋಜನೆಯಡಿಯಲ್ಲಿ 1 ಲಕ್ಷದ ವರೆಗೆ ಸಾಲವನ್ನು ಪಡೆದುಕೊಳ್ಳಲು ಅವಕಾಶವಿದೆ.
ಆರ್ಥಿಕವಾಗಿ ಹಿಂದುಳಿದ, ಬಡ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೆ ಶಿಕ್ಷಣದ ಮೇಲೆ ತಮ್ಮ ಪೂರ್ಣ ಗಮನವನ್ನು ಕೇಂದ್ರೀಕರಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಶೈಕ್ಷಣಿಕ ಸಾಲವು ವಿದ್ಯಾರ್ಥಿಗಳಿಗೇಕೆ ಅಗತ್ಯ?
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಗಳ ಲಕ್ಷಾಂತರ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದಾಗಿ ಪಿಯುಸಿ ಮುಗಿದ ನಂತರ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಲವೂ ಅವಶ್ಯಕವಾಗಿದೆ. ಇದು ಕೇವಲ ಹಣಕಾಸಿನ ಸಹಾಯ ಮಾತ್ರವಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಪ್ರಮುಖ ಸಾಧನವಾಗಿದೆ.
ಶೈಕ್ಷಣಿಕ ಸಾಲವನ್ನು ಒದಗಿಸುವುದರ ಹಿಂದಿನ ಉದ್ದೇಶವೇನು?
- ಪಿಯುಸಿ ಮುಗಿಸಿದ ನಂತರ ವಿದ್ಯಾರ್ಥಿಗಳು ಅನುಭವಿ ಶಿಕ್ಷಕರನ್ನು ಹೊಂದಿರುವ ಹಾಗೂ ಕ್ಯಾಂಪಸ್ ಆಯ್ಕೆಯಿರುವ ಕಾಲೇಜುಗಳಿಗೆ ಸೇರಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಉತ್ತೇಜನವನ್ನು ನೀಡುವುದು.
- ಬಡ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಪೋಷಕರಿಗಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.
- ಶ್ರೀಮಂತ ವರ್ಗಗಳ ವಿದ್ಯಾರ್ಥಿಗಳಂತೆ ಬಡ ಹಾಗೂ ಮಧ್ಯಮ, ಆರ್ಥಿಕವಾಗಿ ಹಿಂದುಳಿದ ಹಾಗೂ ಎಲ್ಲಾ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸಮಾನ ಶಿಕ್ಷಣ ಅವಕಾಶವನ್ನು ಕಲ್ಪಿಸುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಹಣಕಾಸಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಸಂಖ್ಯೆಯನ್ನು ಕಡಿಮೆ ಮಾಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಶೈಕ್ಷಣಿಕ ಸಾಲವು ವಿದ್ಯಾರ್ಥಿಗಳಿಗೆ ಎಷ್ಟು ನೆರವಾಗಬಲ್ಲದು?
- ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಪದವಿ, ಡಿಪ್ಲೊಮಾ, ಐಟಿಐ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಶಿಕ್ಷಣವನ್ನು ಪಡೆದುಕೊಂಡು ತಮ್ಮ ಕನಸ್ಸಿನ ಉದ್ಯೋಗಕ್ಕೆ ಸೇರಿಕೊಳ್ಳಲು ನೆರವಾಗುತ್ತದೆ.
- ಯಾವುದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕಾದರೆ ಸಾಕಷ್ಟು ವೆಚ್ಚವನ್ನು ಭರಿಸಬೇಕಾಗುತ್ತದೆ. ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದೆ ಈ ಎಲ್ಲಾ ಶೈಕ್ಷಣಿಕ ವೆಚ್ಚಗಳನ್ನು ಶೈಕ್ಷಣಿಕ ಸಾಲ ಸೌಲಭ್ಯವು ನೆರವಾಗುತ್ತದೆ.
- ವಿದ್ಯಾರ್ಥಿಗಳು ಶೈಕ್ಷಣಿಕ ಸಾಲವನ್ನು ಪಡೆದರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರವೇ ಭರಿಸಲು ಅವಕಾಶ ಕಲ್ಪಿಸಿರುವುದರಿಂದ,ಸಾಲ ಮರುಪಾವತಿಯ ಚಿಂತೆ ಇಲ್ಲದೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸಹಾಯವಾಗುತ್ತದೆ.
ಶೈಕ್ಷಣಿಕ ಸಾಲವನ್ನು ಪಡೆದುಕೊಳ್ಳಲು ಯಾರು ಅರ್ಹರು?
- ವಿದ್ಯಾರ್ಥಿಗಳು ಭಾರತದ ಪ್ರಜೆ ಆಗಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
- ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪಿಯುಸಿ ಪೂರ್ಣಗೊಳಿಸಿರಬೇಕು.
- ವಿದ್ಯಾರ್ಥಿಗಳು ಮಾನ್ಯತೆ ಪಡೆಯ ಕಾಲೇಜಿನಲ್ಲಿ ಮುಂದಿನ ಶಿಕ್ಷಣಕ್ಕೆ ಪ್ರವೇಶ ಪಡೆದಿರಬೇಕು.
- ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪಂಗಡ, ಆರ್ಥಿಕವಾಗಿ ಹಿಂದುಳಿದ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಅಗತ್ಯ ದಾಖಲೆಗಳು:
- ಪಿಯುಸಿ ಅಂಕಪಟ್ಟಿ
- ಮುಂದಿನ ಕೋರ್ಸ್ ಗೆ ಪ್ರವೇಶ ಪಡೆದ ದಾಖಲೆ
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ವರ್ಗಾವಣೆ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ವಿವರ
- ಹಾಗೂ ಇನ್ನಿತರ ದಾಖಲೆಗಳು
ಶೈಕ್ಷಣಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ?
- ಪಿಯುಸಿ ಅಲ್ಲಿ ಪಾಸ್ ಆಗಿ ಉನ್ನತ ಶಿಕ್ಷಣಕ್ಕಾಗಿ ಸಾಲವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ.
- ಶೈಕ್ಷಣಿಕ ಸಾಲಕ್ಕಾಗಿ ಅರ್ಜಿಯನ್ನು ಕೇಳಿ ಪಡೆದು.
- ಅಪ್ಲಿಕೇಶನ್ಫಾರ್ಮ್ ನಲ್ಲಿ ಕೇಳಲಾದ ಶೈಕ್ಷಣಿಕ ವಿವರ, ವೈಯಕ್ತಿಕ ವಿವರ, ಉನ್ನತ ಶಿಕ್ಷಣಕ್ಕಾಗಿ ದಾಖಲಾದ ಕಾಲೇಜಿನ ವಿವರಗಳನ್ನು ಭರ್ತಿ ಮಾಡಿ.
- ಆಧಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ ಸೇರಿದಂತೆ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ ಬ್ಯಾಂಕ್ ಗೆ ಸಲ್ಲಿಸಿ.
- ನಂತರ ಬ್ಯಾಂಕ್ ನಿಮ್ಮ ದಾಖಲೆಗಳನ್ನು ಪರಿಶೀಲನೆ ನಡೆಸಿ ಸಾಲವನ್ನು ಮಂಜೂರು ಮಾಡುತ್ತದೆ.
ಸಾಲವನ್ನು ಮರುಪಾವತಿಸುವುದು ಹೇಗೆ?
ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲವನ್ನು ಪಡೆದುಕೊಳ್ಳಬಹುದು ಆದರೆ ಆ ಸಾಲವನ್ನು ಮರುಪಾವತಿಸುವುದು ಹೇಗೆ ಎನ್ನುವ ಗೊಂದಲಗಳು ಎಲ್ಲಾ ವಿದ್ಯಾರ್ಥಿಗಳಿಗೂ ಇರುತ್ತದೆ. ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ಸಾಲವನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರವೇ ಮರುಪಾವತಿಸಬಹುದಾಗಿದೆ.
ವಿದ್ಯಾರ್ಥಿಗಳು ಈ ಒಂದು ಶೈಕ್ಷಣಿಕ ಸಾಲವನ್ನು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಒಂದೇ ಬಾರಿಗೆ ಸಾಲವನ್ನು ಮರುಪಾವತಿಸುವ ಅಗತ್ಯವಿಲ್ಲ. ಪ್ರತಿ ಸಣ್ಣ ಕಂತುಗಳ ಮೂಲಕ ಸಾಲವನ್ನು ಮರುಪಾವತಿಸಬಹುದಾಗಿದೆ.
ಅಂತಿಮ ತೀರ್ಮಾನ:
ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಲು ಶೈಕ್ಷಣಿಕ ಸಾಲವನ್ನು ಪಡೆದುಕೊಳ್ಳಲು ಅವಕಾಶವಿದ್ದು, ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣಕ್ಕೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಸರ್ಕಾರವು ಶೈಕ್ಷಣಿಕ ಸಾಲ ಸೌಲಭ್ಯ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ವಿದ್ಯಾರ್ಥಿಗಳು ನಿಮ್ಮ ಸಮೀಪದ ಬ್ಯಾಂಕ್ ಗೆ ಭೇಟಿ ನೀಡಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಿ.
ಇದನ್ನು ಓದಿ: ಉಚಿತ ಲ್ಯಾಪ್‌ಟಾಪ್ ಯೋಜನೆ 2026 । Free Laptop for students in Karnataka