Free Toolkit: ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್! ₹14,000 ಮೌಲ್ಯದ ಟೂಲ್ ಕಿಟ್ ಫ್ರೀ । ಇಂದೇ ಅರ್ಜಿ ಸಲ್ಲಿಸಿ

ಪ್ರತಿ ದಿನ ರಾತ್ರಿ ಹಗಲೆನ್ನದೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರಿಗೆ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರಿಗೆ ಫ್ರೀ ಟೂಲ್ ಕಿಟ್ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.

Free Toolkit for Labour

ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಗುಣಮಟ್ಟದ ಉಪಕರಣಗಳಿಲ್ಲದೆ ಕಷ್ಟಪಡಬಾರದು ಎನ್ನವ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಸುಮಾರು 14,000 ಬೆಲೆಬಾಳುವ ಟೂಲ್ ಕಿಟ್ ಅನ್ನು ವಿತರಿಸಲಾಗುತ್ತಿದೆ.

ಕಾರ್ಮಿಕರು ಫ್ರೀ ಟೂಲ್ ಕಿಟ್ ಪಡೆಯಲು ಹೊಂದಿರಬೇಕಾದ ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಸರ್ಕಾರ ನೀಡುತ್ತಿರುವ ಟೂಲ್ ಕಿಟ್ ನಲ್ಲಿ ಏನೆಲ್ಲಾ ಇದೆ? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

Free Toolkit

ಯೋಜನೆಯ ಅವಲೋಕನ:

ಅನುಷ್ಠಾನ ಗೊಳಿಸಿದ ಸಂಸ್ಥೆ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆಯ ಹೆಸರು ಫ್ರೀ ಟೂಲ್ ಕಿಟ್ ಯೋಜನೆ
ಅರ್ಹ ಫಲಾನುಭವಿಗಳು ನೋಂದಾಯಿತ ಕಾರ್ಮಿಕರು
ಯೋಜನೆಯ ಉದ್ದೇಶ ಕಾರ್ಮಿಕರಿಗೆ ಉಚಿತವಾಗಿ ಗುಣಮಟ್ಟದ ಉಪಕರಣಗಳನ್ನು ಒದಗಿಸುವುದು
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ ಮಾತ್ರ

ಯೋಜನೆಯ ಬಗ್ಗೆ:

ಫ್ರೀ ಟೂಲ್ ಕಿಟ್ ಯೋಜನೆಯು ಕರ್ನಾಟಕ ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಸುಮಾರು 14,000 ದಿಂದ 20,000 ಮೌಲ್ಯದ ಫ್ರೀ ಟೂಲ್ ಕಿಟ್ ಅನ್ನು ವಿತರಿಸಲಾಗುತ್ತದೆ.

ಈ ಯೋಜನೆಯಡಿಯಲ್ಲಿ ಗಾರೆ ಕೆಲಸಗಾರರು, ಎಲೆಕ್ಟ್ರಿಷಿಯನ್, ಪ್ಲಮ್ಬರ್, ಬಡಗಿ, ಪೈಂಟರ್, ಹಾಗೂ ಇನ್ನಿತರ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಯೋಜನೆಯ ಮುಖ್ಯ ಉದ್ದೇಶ ಕಾರ್ಮಿಕರಿಗೆ ಅಗತ್ಯವಾದ ಉಪಕರಣಗಳನ್ನು ಒದಗಿಸುವ ಮೂಲಕ ಅವರ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವುದು.

ಯೋಜನೆಯ ಉದ್ದೇಶ:

  • ಬಡ ಕಾರ್ಮಿಕರಿಗೆ ತಮ್ಮ ಸ್ವಂತ ದುಡ್ಡಿನಲ್ಲಿ ಅಗತ್ಯ ಉಪಕರಣಗಳನ್ನು ಕೊಳ್ಳಲು ಅಸಾಧ್ಯವಾಗಿರುತ್ತದೆ. ಅಂತಹ ಕಾರ್ಮಿಕರಿಗೆ ಉಚಿತವಾಗಿ ಕಿಟ್ ಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  • ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ನೀಡುವ ಫ್ರೀ ಟೂಲ್ ಕಿಟ್ ಹೆಲ್ಮೆಟ್, ಗ್ಲೋಸ್, ಸೇಫ್ಟಿ ಶೂ ಸೇರಿದಂತೆ ಇನ್ನಿತರ ಸುರಕ್ಷತಾ ವಸ್ತುಗಳನ್ನು ಒಳಗೊಂಡಿರುವುದರಿಂದ ಕೆಲಸದ ಸ್ಥಳಗಳಲ್ಲಿ ಆಗುವ ಅಪಘಾತಗಳನ್ನು ತಡೆಗಟ್ಟುವುದು.
  • ಫ್ರೀ ಟೂಲ್ ಕಿಟ್ ಯೋಜನೆಯಡಿಯಲ್ಲಿ ಅಗತ್ಯ ಉಪಕರಣಗಳನ್ನು ಒಳಗೊಂಡ ಕಿಟ್ ಗಳನ್ನು ನೀಡುವ ಮೂಲಕ ಕಾರ್ಮಿಕರು ಒಂದು ಹೊತ್ತಿನ ಕೂಲಿ ಹಣವನ್ನು ಪಡೆದುಕೊಳ್ಳಬೇಕಾದರೆ ಬೇರೆ ಕಾರ್ಮಿಕ ಉಪಕರಣಗಳಿಗಾಗಿ ಕಾಯುವುದನ್ನು ತಡೆಗಟ್ಟುವುದು.
  • ಫ್ರೀ ಟೂಲ್ ಕಿಟ್ ಯೋಜನೆಯಡಿಯಲ್ಲಿ ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ಕೆಲಸದ ಗುಣಮಟ್ಟವನ್ನು ಹಾಗೂ ವೇಗವನ್ನು ಹೆಚ್ಚಿಸುವುದು.

ಯೋಜನೆಯ ಪ್ರಯೋಜನಗಳು:

  • ಫ್ರೀ ಟೂಲ್ ಕಿಟ್ ಯೋಜನೆಯಡಿಯಲ್ಲಿ ಬಡಗಿ, ಮೇಸ್ತ್ರಿ, ಎಲೆಕ್ರಿಷಿಯನ್, ಪ್ಲಮ್ಬರ್, ಪೈಂಟರ್ ಸೇರಿದಂತೆ ಇನ್ನಿತರ ಕಾರ್ಮಿಕರು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
  • ಸರ್ಕಾರ ವಿತರಿಸುವ ಟೂಲ್ ಕಿಟ್ ಅನೇಕ ಸುರಕ್ಷತಾ ಉಪಕರಣಗಳನ್ನು ಹೊಂದಿರುವುದರಿಂದ ಕೆಲಸದ ಸ್ಥಳದಲ್ಲಿ ಆಗುವ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ.
  • ಸರ್ಕಾರವೇ ನಿರ್ಮಾಣ, ಪೇಂಟಿಂಗ್ ಸೇರಿದಂತೆ ಇನ್ನಿತರ ಕೆಲಸಕ್ಕೆ ಅಗತ್ಯವಾಗುವ ಉಪಕರಣಗಳನ್ನು ಉಚಿತವಾಗಿ ನೀಡುವುದರಿಂದ ಕಾರ್ಮಿಕರ ಆರ್ಥಿಕ ಸ್ಥಿತಿ ಹಾಗೂ ಜೀವನಮಟ್ಟ ಗಣನೀಯವಾಗಿ ಸುಧಾರಿಸುತ್ತದೆ.
  • ಕಾರ್ಮಿಕರು ಉಪಕರಣದಿಂದ ಉಳಿಸುವ ಹಣದಿಂದ ತಮ್ಮ ಕುಟುಂಬದ ದಿನನಿತ್ಯದ ಖರ್ಚನ್ನು ನಿಭಾಯಿಸಲು ಅಥವಾ ಮಕ್ಕಳ ಶೈಕ್ಷಣಿಕ ಖರ್ಚನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ಫ್ರೀ ಟೂಲ್ ಕಿಟ್ ನಲ್ಲಿ ಏನೆಲ್ಲಾ ಇದೆ?

  • ಮೇಸ್ತ್ರಿ ಅಥವಾ ಕಟ್ಟಡ ಕೆಲಸದವರಿಗೆ: ಮರಳು ಜರಡಿ, ಗಾರೆ ಟ್ರಾವಲ್, ತೂಕದ ನೂಲು, ಕರಣೆ ಹಾಗೂ ಅಳತೆ ಟೇಪ್ ಗಳನ್ನು ಒಳಗೊಂಡಿರುತ್ತದೆ.
  • ಎಲೆಕ್ಟ್ರಿಷಿಯನ್ ಗಳಿಗೆ: ವೈರ್ ಸ್ಟ್ರಿಪ್ಪರ್, ಟೆಸ್ಟಿಂಗ್, ಕಟಿಂಗ್ ಪ್ಲಾಯರ್, ವಿವಿಧ ಮಾದರಿಯ ಇನ್ಸುಲೇಷನ್ ಟೇಪ್, ಡ್ರಿಲ್ಲಿಂಗ್ ಮಷಿನ್ ಹಾಗೂ ಸ್ಕ್ರೂ ಡ್ರೈವರ್ ಗಳು ಇರುತ್ತದೆ.
  • ಪ್ಲಮ್ಬರ್ ಗಳಿಗೆ: ಹ್ಯಾಕ್ಸಾ ಬ್ಲೇಡೆ, ಪೈಪ್ ರೆಂಚ್ ಗಳು, ಸ್ಪ್ಯಾನರ್ ಸೆಟ್, ಅಡ್ಜಸ್ಟಬಲ್ ಸ್ಪ್ಯಾನರ್ ಹಾಗೂ ಟೆಫ್ಲಾನ್ ಟೇಪ್ ಗಳನ್ನು ನೀಡಲಾಗುತ್ತದೆ.
  • ಬಡಗಿ ಕೆಲಸಗಾರರಿಗೆ: ಕೈ ಗರಗಸ, ಉಳಿಗಳ ಸೆಟ್, ಕೈ ರಾಂಪ, ಕಟಿಂಗ್ ಪ್ಲೇಯರ್, ಮೂಲೆ ಮಟ್ಟ, ಮೇಷರಿಂಗ್ ಕಿಟ್, ಕಾರ್ಪೆನ್ಟರ್ ಪೆನ್ಸಿಲ್ ಹಾಗೂ ಅರಗಳನ್ನು ನೀಡಲಾಗುತ್ತದೆ.
  • ಪೈಂಟರ್: ಪೈಂಟ್ ಬ್ರಷ್ ಗಳ ಸೆಟ್, ರೋಲರ್ ಬ್ರಷ್ ಮತ್ತು ಹ್ಯಾಂಡಲ್, ಪೈಂಟ್ ಟ್ರೈ, ಸ್ಕ್ರಾಪರ್ ವಾಟರ್ ಪ್ರೂಫ್ ಸ್ಯಾಂಡ್ ಪೇಪರ್ ಗಳನ್ನು ನೀಡಲಾಗುತ್ತದೆ.

ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು?

  • ಅರ್ಜಿದಾರರು ಕರ್ನಾಟಕ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿತರಾಗಿರಬೇಕು.
  • ಅರ್ಜಿದಾರರು ಹೊಂದಿರುವ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು.
  • ಕಾರ್ಮಿಕರು ಕನಿಷ್ಠ 18 ವರ್ಷದಿಂದ ಗರಿಷ್ಟ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಕಾರ್ಮಿಕರು ಕಳೆದ 1 ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿರಬೇಕು.
  • ಅರ್ಜಿದಾರರು ಅರ್ಜಿಯಲ್ಲಿ ತಿಳಿಸಿರುವ ಟೂಲ್ ಕಿಟ್ ವಿವರಕ್ಕೆ ಅವರ ಹೊಂದಿರುವ ಲೇಬರ್ ಕಾರ್ಡ್ ನಲ್ಲಿರುವ ವೃತ್ತಿಗೆ ಹೊಂದಾಣಿಕೆ ಆಗಿರಬೇಕು.
  • ಒಬ್ಬ ಫಲಾನುಭವಿಗಳು ಒಂದು ಯೋಜನೆಯಡಿಯಲ್ಲಿ ಕೇವಲ ಒಂದು ಬಾರಿಗೆ ಮಾತ್ರ ಪ್ರಯೋಜನ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು?

  • ಲೇಬರ್ ಕಾರ್ಡ್
  • ಕಾರ್ಮಿಕರ ಆಧಾರ್ ಕಾರ್ಡ್
  • ಉದ್ಯೋಗ ಪ್ರಮಾಣಪತ್ರ
  • ರೇಷನ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಟೂಲ್ ಕಿಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನೋಂದಾಯಿತ ಕಾರ್ಮಿಕರು ಶೈಕ್ಷಣಿಕ ಕಿಟ್ ಯೋಜನೆಯೆಗೆ ಅರ್ಜಿಯನ್ನು ಎರಡು ವಿಧಾನಗಳ ಮೂಲಕ ಸಲ್ಲಿಸಬಹುದಾಗಿದ್ದು, ಕಾರ್ಮಿಕರು ಈ ಕೆಳಗೆ ನೀಡಿರುವ ಹಂತವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

  • ಆನ್ಲೈನ್ ಮೂಲಕ:
    • ಅರ್ಹ ಫಲಾನುಭವಿಗಳು ಮೊದಲು ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ https://kbocwwb.karnataka.gov.in/u/login ಗೆ ಭೇಟಿ ನೀಡಿ.
    • ನಂತರ ಫ್ರೀ ಟೂಲ್ ಕಿಟ್ ಯೋಜನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
    • ಅಲ್ಲಿ ಕೇಳಲಾಗುವ ಲೇಬರ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
    • ಆಧಾರ್ ಕಾರ್ಡ್ ಪ್ರತಿ, ಉದ್ಯೋಗ ಪ್ರಮಾಣಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
  • ಆಫ್ಲೈನ್ ಮೂಲಕ:
    • ನೋಂದಾಯಿತ ಕಾರ್ಮಿಕರು ತಮ್ಮ ತಾಲ್ಲೂಕಿನ ಕಾರ್ಮಿಕ ಇಲಾಖಾ ಕಚೇರಿಗೆ ಅಥವಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ.
    • ಅಲ್ಲಿ ಫ್ರೀ ಟೂಲ್ ಕಿಟ್ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆದುಕೊಂಡು.
    • ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
    • ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ ಕಚೇರಿಗೆ ಸಲ್ಲಿಸಿ.

ಅಂತಿಮ ಮಾತು:

ಕಾರ್ಮಿಕರ ಕೆಲಸದ ಗುಣಮಟ್ಟತೆಯನ್ನು ಹೆಚ್ಚಿಸಲು ಹಾಗೂ ದಕ್ಷತೆಯಿಂದ ಕೆಲಸವನ್ನು ಮಾಡುವುದನ್ನು ಪ್ರರೇಪಿಸಲು ಸರ್ಕಾರವು ಕಾರ್ಮಿಕರಿಗೆ ಉಚಿತವಾಗಿ ಟೂಲ್ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದು, ಸೀಮಿತ ಸ್ಟಾಕ್ ಗಳು ಲಭ್ಯವಿದ್ದು ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಾಗಾಗಿ ಅರ್ಹ ಕಾರ್ಮಿಕರು ಬೇಗ ಅರ್ಜಿ ಸಲ್ಲಿಸಿ ಟೂಲ್ ಕಿಟ್ ಅನ್ನು ಪಡೆದುಕೊಂಡು ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Comment