KVAFSU: ಪಶು ವೈದ್ಯಕೀಯ & ಮೀನುಗಾರಿಕೆ ಕ್ಷೇತ್ರದಲ್ಲಿ ನೇಮಕಾತಿ! ಯಾವುದೇ ಲಿಖಿತ ಪರೀಕ್ಷೆ + ಅರ್ಜಿ ಶುಲ್ಕವಿಲ್ಲ

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಪಶು ವೈದ್ಯಕೀಯ ಅಥವಾ ಮೀನುಗಾರಿಕೆ ವಿಜ್ಞಾನಗಳ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಪಾಲಿಗೆ ಒಂದು ಸುವರ್ಣಾವಕಾಶ ಬಂದೊದಗಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2026 ನೇ ಸಾಲಿನ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

KVAFSU Recruitment in Kannada

ವಿಶೇಷವಾಗಿ, ತಾಂತ್ರಿಕ ಸಹಾಯಕ, ಸಹಾಯಕ ಸಂಶೋಧನಾ ಅಧಿಕಾರಿ ಹಾಗೂ ಕ್ಷೇತ್ರ ಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ, ವೇತನ ಶ್ರೇಣಿ, ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಕನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದೆ ರೀತಿಯ ಇನ್ನಷ್ಟು ಹುದ್ದೆಗಳ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಪಬ್ಲಿಕ್.ಸಲಹೆ.ಇನ್ ಗೆ ಭೇಟಿ ನೀಡಿ.

KVAFSU

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆಗಳ ಹೆಸರು ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
ಹುದ್ದೆಗಳ ಹೆಸರು ತಾಂತ್ರಿಕ ಸಹಾಯಕ, ಸಹಾಯಕ ಸಂಶೋಧನಾ ಅಧಿಕಾರಿ ಹಾಗೂ ಕ್ಷೇತ್ರ ಕಾರ್ಮಿಕ ಹುದ್ದೆಗಳು
ಹುದ್ದೆಗಳ ಸಂಖ್ಯೆ ಒಟ್ಟು 3 ಹುದ್ದೆಗಳು
ಉದ್ಯೋಗ ಸ್ಥಳ ಹೆಬ್ಬಾಳ – ಬೆಂಗಳೂರು
ಅರ್ಜಿ ಸಲ್ಲಿಸುವ ವಿಧಾನ ಇಮೇಲ್ ಮೂಲಕ ಮತ್ತು ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ

ಹುದ್ದೆಯ ವಿವರ:

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ತಮ್ಮ ವಿವಿಧ ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸಹಾಯಕ ಸಂಶೋಧನಾ ಅಧಿಕಾರಿ 1 ಹುದ್ದೆ
ತಾಂತ್ರಿಕ ಸಹಾಯಕ 1 ಹುದ್ದೆ
ಕ್ಷೇತ್ರ ಕಾರ್ಮಿಕ 1 ಹುದ್ದೆ

ತಾಂತ್ರಿಕ ಸಹಾಯಕ ಮತ್ತು ಕ್ಷೇತ್ರ ಕಾರ್ಮಿಕ ಹುದ್ದೆಗಳು ವಿರ್ ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಾಯೋಗಿಕ ಯೋಜನೆಯಡಿಯಲ್ಲಿ ಬರುತ್ತದೆ. ಹಾಗೂ ಸಹಾಯಕ ಸಂಶೋಧನಾ ಅಧಿಕಾರಿ ಹುದ್ದೆಯು ರಾಷ್ಟೀಯ ಒನ್ ಹೆಲ್ತ್ ಯೋಜನೆಯ ಅಡಿಯಲ್ಲಿ ಬರುತ್ತದೆ.

ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:

  • ಸಹಾಯಕ ಸಂಶೋಧನಾ ಅಧಿಕಾರಿ:
    • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶು ವೈದ್ಯಕೀಯ ವಿಜ್ಞಾನ ಅಥವಾ ಸಾಮಾನ್ಯ ಮೈಕ್ರೋಬಯಾಲಾಜಿ, ವೈರಾಲಜಿ, ಜೆನೆಟಿಕ್ಸ್, ಮಾಲಿಕ್ಯೂಲರ್ ಬಯಾಲಜಿ, ಲೈಫ್ ಸೈನ್ಸಸ್ ಅಥವಾ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
    • ರೇಬೀಸ್ ರೋಗನಿರ್ಣಯ, ಕಂಪ್ಯೂಟರ್ ಕೌಶಲ್ಯ ಹಾಗೂ ಪಿಸಿಆರ್ ತಂತ್ರಗಳನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
    • ಅಭ್ಯರ್ಥಿಗಳು ಕಡ್ಡಾಯವಾಗಿ ಕನಿಷ್ಠ 3 ವರ್ಷಗಳ ಸಂಶೋಧನಾ ಅನುಭವ ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ:
    • ಅಭ್ಯರ್ಥಿಗಳು ಮೀನುಗಾರಿಕೆ ವಿಜ್ಞಾನದಲ್ಲಿ (ಮೈಕ್ರೋಬಯಾಲಜಿ, ಬೈಯೋಟೆಕ್ನಾಲಜಿ ಹಾಗೂ ಅಕ್ವಾಕಲ್ಚರ್) ಅಥವಾ ಪ್ರಾಣಿ ಶಾಸ್ತ್ರ, ಬೈಯೋಟೆಕ್ನಾಲಜಿ ಅಥವಾ ಅನಾಲಿಟಿಕಲ್ ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಪದವಿ ಹೊಂದಿರಬೇಕು.
    • ಕಂಪ್ಯೂಟರ್ ಅಪ್ಲಿಕೇಶನ್ ಕ್ಷೇತ್ರ, ಮೀನು ರೋಗ ನಿರೋಧಕ ಶಾಸ್ತ್ರ ದಲ್ಲಿ ಜ್ಞಾನವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಕ್ಷೇತ್ರ ಕಾರ್ಮಿಕ:
    • ಯಾವುದೇ ಕನಿಷ್ಠ ಶೈಕ್ಷಣಿಕ ಅರ್ಹತೆ ಅಗತ್ಯ ಇರುವುದಿಲ್ಲ.
    • ಆದರೆ, ಮೀನುಗಾರಿಕೆ ಚಟುವಟಿಗೆ ಅಥವಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ವಿವರ:

ಸಹಾಯಕ ಸಂಶೋಧನಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಹಾಗೂ ಇತರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ನಿಗದಿಪಡಿಸಲಾಗುತ್ತದೆ.

ವಯೋಮಿತಿ ಸಡಿಲಿಕೆ ವಿವರ:

ಸರ್ಕಾರದ ನಿಯಮಗಳ ಪ್ರಕಾರ, ಹುದ್ದೆಗಳಿಗೆ ಸಂಬಂಧಿಸಿದಂತೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡುವುದರಿಂದ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸದೆ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ:

  • ಸಹಾಯಕ ಸಂಶೋಧನಾ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 47,250/- ಸಂಚಿತ ವೇತನವನ್ನು ನೀಡಲಾಗುತ್ತದೆ.
  • ತಾಂತ್ರಿಕ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 25,000/- ಸಂಚಿತ ವೇತನವನ್ನು ನೀಡಲಾಗುತ್ತದೆ.
  • ಕ್ಷೇತ್ರ ಕಾರ್ಮಿಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,000/- ಸಂಚಿತ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅವುಗಳ ವಿವರ ಈ ಕೆಳಕಂಡಂತಿದೆ.

  • ಸಹಾಯಕ ಸಂಶೋಧನಾ ಅಧಿಕಾರಿ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯ ಸಾಫ್ಟ್ ಕಾಪಿಯನ್ನು ಅನುಭವ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ [email protected] ಇಮೇಲ್ ವಿಳಾಸಕ್ಕೆ ಸಲ್ಲಿಸಿ.

  • ತಾಂತ್ರಿಕ ಸಹಾಯಕ ಮತ್ತು ಕ್ಷೇತ್ರ ಕಾರ್ಮಿಕ ಹುದ್ದೆಗಳು:

ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾದ ಅನುಬಂಧ – 1 ರ ಪ್ರಕಾರ ಅರ್ಜಿಯ ಮೂರು ಪ್ರತಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಇದನ್ನು ಭರ್ತಿ ಮಾಡಿ ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ಅನುಭವದ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂದರ್ಶನ ದಿನ ಬೆಳಿಗ್ಗೆ 9:30 ಕ್ಕೆ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ:

ಅಭ್ಯರ್ಥಿಗಳ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ ಹಾಗೆಯೆ

  • ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ, ಕೆಲಸದ ಅಗತ್ಯತೆ ಹಾಗೂ ಅನುಭವದ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:

ಪ್ರಮುಖ ಈವೆಂಟ್ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ24-04-2026
ಸಹಾಯಕ ಸಂಶೋಧನಾ ಅಧಿಕಾರಿ ಹುದ್ದೆಗೆ ಸಂದರ್ಶನ ನಡೆಯುವ ದಿನಾಂಕ 27-04-2026
ತಾಂತ್ರಿಕ ಸಹಾಯಕ ಹಾಗೂ ಕ್ಷೇತ್ರ ಕಾರ್ಮಿಕ ಹುದ್ದೆಗಳಿಗೆ ಸಂದರ್ಶನ ನಡೆಯುವ ದಿನಾಂಕ 28-04-2026
ಸಂದರ್ಶನ ನಡೆಯುವ ಸಮಯ ಬೆಳಿಗ್ಗೆ 10:00 ಗಂಟೆ ಅಥವಾ 11:00 ಗಂಟೆ

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಫಾರ್ಮ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ಮಾತು:

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸಹಾಯಕ ಸಂಶೋಧನಾ ಅಧಿಕಾರಿ, ತಾಂತ್ರಿಕ ಸಹಾಯಕ ಹಾಗೂ ಕ್ಷೇತ್ರ ಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇಮತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತಪಡಿಸಿಕೊಂಡು ದಿನಾಂಕ 24-04-2026 ರಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಿ ಅಥವಾ ನೇರದಂದರ್ಶನಕ್ಕೆ ಭಾಗವಹಿಸಿ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಇನ್ನು ಮೂರೇ ದಿನಗಳು ಬಾಕಿ ಇದೆ.ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕೆಂದಿರುವವರಿಗೆ ಇದೊಂದು ಸುವರ್ಣಾವಕಾಶ.


ಇತರೆ ಪ್ರಮುಖ ಲಿಂಕುಗಳು:

Leave a Comment