ನಮಸ್ಕಾರ ಸ್ನೇಹಿತರೆ, ಇಂಧನಗಳ ದರ ದುಬಾರಿಯಾಗುತ್ತಿರುವುದರಿಂದ ನೀವು ಖರೀದಿಸಿದ ಬೈಕ್ ಗೆ ಪ್ರತಿದಿನ ಪೆಟ್ರೋಲ್ ಹಾಕಿಸುವುದು ದುಬಾರಿ ಅನ್ನಿಸುತ್ತಿದೀಯಾ? ಹಾಗಿದ್ದರೆ, ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್ ಒಪ್ಶನ್ ಆಗಿದೆ.
Bajaj Chetak C3503
ಈ ಒಂದು ಸ್ಕೂಟರ್ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿದ್ದು, ಯಾವುದೇ ಇಂಧನಗಳ ಅಗತ್ಯ ಇರುವುದಿಲ್ಲ. ಈಗೆಲ್ಲ ಇಂಧನಗಳ ದರ ಹೆಚ್ಚುತ್ತಿರುವ ಬೆನ್ನಲ್ಲೇ ಎಲ್ಲರು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಗಿಬಿದ್ದಿದ್ದು, ಇದರ ಹಿನ್ನಲೆಯಲ್ಲಿ ಬಜಾಜ್ ಆಟೋ ಕಂಪನಿಯು ಹೊಸ ತಂತ್ರಜ್ಞಾನವನ್ನು ಅಳವಡಿಸಿ ಬಜಾಜ್ ಚೇತಕ್ C3503 ಸ್ಕೂಟರ್ ಅನ್ನು ಪರಿಚಯಿಸಿದೆ. ಎಲ್ಲ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ ಬಜಾಜ್ ಚೇತಕ್ ಉತ್ತಮ ಗುಣಮಟ್ಟ, ಪ್ರೀಮಿಯಂ ವಿನ್ಯಾಸದಿಂದ ಮುಂಚೂಣಿಯಲ್ಲಿದೆ.
ಬಜೆಟ್ ಫ್ರೆಂಡ್ಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಬಜಾಜ್ ಚೇತಕ್ C3503 ಇದೀಗ ಕರ್ನಾಟಕದ ವಿವಿಧ ಬೈಕ್ ಶೋರೂಮ್ ಗಳಲ್ಲಿ ಲಭ್ಯವಿದ್ದು, ಎಲ್ಲೆಲ್ಲಿ ಈ ಒಂದು ಸ್ಕೂಟರ್ ಲಭ್ಯವಿದೆ? ಈ ಒಂದು ಬೈಕ್ ನ ಪ್ರೈಸ್ ಎಷ್ಟು? ಇದರ ವಿನ್ಯಾಸ ಹೇಗಿದೆ? ಎಂಬೆಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರಮುಖ ಹೈಲೈಟ್ ಪಾಯಿಂಟ್ಸ್:
| * ಜೀರೋ ಎಂಜಿನ್ ವೆಚ್ಚ ಹಾಗೂ ಹೆಚ್ಚಿನ ಹಣ ಉಳಿತಾಯದ ಬಜಾಜ್ ಚೇತಕ್ C3503 ಇದೀಗ ಮಾರುಕಟ್ಟೆಗೆ ಎಂಟ್ರಿ. * ಪ್ರೀಮಿಯಂ ಮೆಟಲ್ ಬಾಡಿ ಹಾಗೂ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವ ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್. * ಕಾಲೇಜು, ಆಫೀಸ್, ಶಾಪಿಂಗ್ ಅಥವಾ ದೂರದ ಪಯಣಕ್ಕೆ ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್ ಆಯ್ಕೆ. |
ಸ್ಕೂಟರ್ ವಿಶ್ಲೇಷಣೆ:
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಹಿನ್ನಲೆಯಲ್ಲಿ ಬಜಾಜ್ ಆಟೋ ಕಂಪನಿ ವಿಶೇಷ ವಿನ್ಯಾಸ, ವಿಶ್ವಾಸಾರ್ಹ ಕಾರ್ಯಕ್ಷಮತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವ ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಒಂದು ಸ್ಕೂಟರ್ ನ ಮಾಡ್ರನ್ ಲುಕ್ ಹಾಗೂ ಪವರ್ಫುಲ್ ಬ್ಯಾಟರಿಗೆ ಸಾಕಷ್ಟು ಗ್ರಾಹಕರು ಅತ್ಯಾಕರ್ಷಕರಾಗಿದ್ದಾರೆ.
ಈ ಒಂದು ಸ್ಕೂಟರ್ ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಬಜೆಟ್ ಫ್ರೆಂಡ್ಲಿ ಕೂಡ ಆಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೂ ಕೂಡ ಈ ಒಂದು ಸ್ಕೂಟರ್ ಖರೀದಿಸಲು ಅತ್ಯಂತ ಹೊರೆ ಎನಿಸುವುದಿಲ್ಲ.
ಸ್ಕೂಟರ್ ವಿನ್ಯಾಸ:
ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೋ- ಮಾಡ್ರನ್ ವಿನ್ಯಾಸವನ್ನು ಹೊಂದಿದ್ದು, ಸಾಕಷ್ಟು ಗ್ರಾಹಕರನ್ನು ಆಕರ್ಷಿತರನ್ನಾಗಿ ಮಾಡಿದೆ. ಜೊತೆಗೆ ಈ ಒಂದು ಸ್ಕೂಟರ್ ಇಂಡಿಗೋ ಮೆಟಾಲಿಕ್ ಬಣ್ಣವನ್ನು ಹೊಂದಿದ್ದು, ಈ ಒಂದು ಸ್ಕೂಟರ್ ಗೆ ಇನ್ನಷ್ಟು ಮಾಡ್ರನ್ ಲುಕ್ ನೀಡಿದೆ.
ಜೊತೆಗೆ ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣವಾಗಿ ಮೆಟಲ್ ಬಾಡಿಯನ್ನು ಹೊಂದಿರುವುದರಿಂದ ದೀರ್ಘಕಾಲದ ಬಾಳಿಕೆಗೆ ಇದು ಸೂಕ್ತವಾಗಿದೆ ಜೊತೆಗೆ ಸ್ಕೂಟರ್ ಗೆ ಪ್ರೀಮಿಯಂ ಲುಕ್ ಕೂಡ ನೀಡುತ್ತದೆ. ಇದರಿಂದಾಗಿ ಈ ಒಂದು ಸ್ಕೂಟರ್ ಅನ್ನು ಯಂಗ್ಸ್ಟರ್ಸ್ ನಿಂದ ಹಿಡಿದು ಸೀನಿಯರ್ ಸಿಟಿಝನ್ ಕೂಡ ಇಷ್ಟ ಪಡುತ್ತಾರೆ.
ಪವರ್ಫುಲ್ ಬ್ಯಾಟರಿ ಹಾಗೂ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್:
ಬಜಾಜ್ ಚೇತಕ್ ಸ್ಕೂಟರ್ 3.5kWh ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, 150 ಕಿ. ಮೀ ವರೆಗೂ ನಿಷ್ಚಿಂತೆಯಿಂದ ಪ್ರಯಾಣಿಸಬಹುದಾಗಿದೆ.
ಹಲವಾರು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬ್ಯಾಟರಿಯನ್ನು ಸೀಟ್ ನ ಕೆಳಗೆ ಅಳವಡಿಸಲಾಗಿರುತ್ತದೆ. ಆದರೆ, ಬಜಾಜ್ ಸ್ಕೂಟರ್ ನಲ್ಲಿ ಬ್ಯಾಟರಿಯನ್ನು ಫ್ಲೋರ್ ಬೋರ್ಡ್ ಕೆಳಭಾಗದಲ್ಲಿ ಅತ್ಯಂತ ನೀಟ್ ಆಗಿ ಅಳವಡಿಸಲಾಗಿರುತ್ತದೆ. ಇದರಿಂದಾಗಿ, ಟ್ರಾಫಿಕ್ ನಲ್ಲಿ ಸುಲಭವಾಗಿ ಬ್ಯಾಲೆನ್ಸ್ ಮಾಡಬಹುದು ಹಾಗೆಯೆ ಸ್ಕೂಟರ್ ಅನ್ನು ಓಡಿಸುವ ಹಗುರವಾದ ಅನುಭವವನ್ನು ಸಹ ನೀಡುತ್ತದೆ.
ಸ್ಕೂಟರ್ ನ ಸ್ಪೀಡ್ ಮತ್ತು ಪರ್ಫಾರ್ಮೆನ್ಸ್:
ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ನ ಸ್ಪೀಡ್ ಮತ್ತು ಪರ್ಫಾರ್ಮೆನ್ಸ್ ಸಿಟಿ ರಸ್ತೆಗೆ ಅತ್ಯಂತ ಸೂಕ್ತವಾಗಿ ಹಾಗೂ ಸುಗಮವಾಗಿರುವಂತೆ ರಚಿಸಲಾಗಿದ್ದು, ಈ ಒಂದು ಸ್ಕೂಟರ್ ನ ವೇಗವೂ ಪ್ರತಿ ಕಿಲೋಮೀಟರ್ ಗೆ ಎಷ್ಟಿದೆ ಇನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಒಳ್ಳೆಯ ಮೇಂಟೆನೆನ್ಸ್ ಬ್ಯಾಟರಿಯನ್ನು ಹೊಂದಿದ್ದು, ಈ ಸ್ಕೂಟರ್ ನ ಸ್ಪೀಡ್ ಪ್ರತಿ ಗಂಟೆಗೆ 73 kmph ಇರುತ್ತದೆ. ಇದರಿಂದಾಗಿ ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ಗಳಲ್ಲಿ ಹಾಗೂ ಫ್ಲೈ ಓವರ್ ಗಳಲ್ಲಿ ಸುರಕ್ಷಿತವಾಗಿ ಹಾಗೂ ನಿಷ್ಚಿಂತೆಯಿಂದ ಚಲಿಸಲು ನೆರವಾಗುತ್ತದೆ.
ಚಾರ್ಜಿಂಗ್ ಸಾಮರ್ಥ್ಯ:
ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ನ ಇನ್ನೊಂದು ವಿಶೇಷತೆಯೆಂದರೆ, ಸ್ಕೂಟರ್ ನ ಚಾರ್ಜಿಂಗ್ ಸಾಮರ್ಥ್ಯ. ಕೇವಲ 3 ಗಂಟೆ 25 ನಿಮಿಷಕ್ಕೆ ಬ್ಯಾಟರಿ 80% ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದರ ವಿಶೇಷತೆಯೇನೆಂದರೆ ಸಾಮಾನ್ಯ 5A ಸಾಕೇತ್ ಬಳಸಿ ಚಾರ್ಜ್ ಮಾಡಬಹುದಾಗಿದೆ.
ಬಜಾಜ್ ಚೇತಕ್ C3503 ನ ಬೆಲೆ:
ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಪ್ರತಿ ಮಾರುಕಟ್ಟೆಗೆ ಸಂಬಂಧಿಸಿದಂತೆ ವಿಭಿನ್ನವಾಗಿರುತ್ತದೆ. ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ಮೂಲ ಬೆಲೆ ರೂ. 79,500 ನಿಗದಿಪಡಿಸಲಾಗಿದ್ದು, ಡಿಸ್ಕೌಂಟ್ ,ನಂತರ ರೂ. 73000/- ಲಭ್ಯವಾಗುತ್ತದೆ. ಇದರ ಜೊತೆಗೆ ಇನ್ನಿತರ ಆಫರ್ ಗಳು ಕೂಡ ಲಭ್ಯವಾಗಿರುತ್ತದೆ
- ಮೊದಲು ಬಂದ ಕಸ್ಟರ್ಮರ್ ಗಳಿಗೆ ಲಕ್ಕಿ ಡ್ರಾ ವ್ಯವಸ್ಥೆಗಳು ಇರುತ್ತದೆ.
- ಕಡಿಮೆ ಡೌನ್ ಪೇಮೆಂಟ್ ಮೂಲಕ ಎಎಂಐ ಸೌಲಭ್ಯವನ್ನು ಒದಗಿಸಲಾಗುತ್ತದೆ.
- ಮೊದಲ 1000 ಕಸ್ಟಮರ್ ಗಳಿಗೆ ಫ್ರೀ ಆಕ್ಸೆಸರೀಸ್ ಸೌಲಭ್ಯವನ್ನು ಒದಗಿಸಲಾಗುತ್ತದೆ.
- ಕೆಲವೊಂದು ಶೋರೂಂ ಗಳಲ್ಲಿ ಕೂಡ ಎಕ್ಸ್ಚೇಂಜ್ ಆಫರ್ ಗಳನ್ನ ಕೂಡ ನೀಡಲಾಗುತ್ತದೆ.
- ಹಾಗೂ ಇನ್ನಿತರ ಅತ್ಯಾಕರ್ಷಕ ಆಫರ್ ಗಳನ್ನೂ ನೀಡಲಾಗುತ್ತದೆ.
ಈ ಸ್ಕೂಟರ್ ಎಲ್ಲೆಲ್ಲಿ ಲಭ್ಯವಿದೆ?
ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಹಾಗೂ ಉಡುಪಿ ಸೇರಿದಂತೆ ಹಲವು ಡೀಲರ್ ಶಿಪ್ ಗಳಲ್ಲಿ ಲಭ್ಯವಿರುತ್ತದೆ. ಈ ಒಂದು ಸ್ಕೂಟರ್ ಆಧುನಿಕ ಫೀಚರ್ ಹೊಂದಿರುವುದರಿಂದ ಸ್ಕೂಟರ್ ಖರೀದಿಸುವ ಗ್ರಾಹಕರ ಸಂಖ್ಯೆಯು ಹೆಚ್ಚಿದ್ದು, ನಿಮಗೂ ಕೊಡ ಈ ಸ್ಕೂಟರ್ ಬೇಕು ಅಂದ್ರೆ ಈಗಲೇ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಬುಕಿಂಗ್ ಮಾಡಿಕೊಳ್ಳಿ.
ಸ್ಕೂಟರ್ ನ ಪ್ಲಸ್ ಪಾಯಿಂಟ್:
- ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಪ್ರೀಮಿಯಂ ಮೆಟಲ್ ಬಾಡಿಯನ್ನು ಹೊಂದಿದೆ.
- ಈ ಸ್ಕೂಟರ್ ಖರೀದಿಸುವುದರಿಂದ ಪೆಟ್ರೋಲ್ ವೆಚ್ಚ ಸಂಪೂರ್ಣ ಉಳಿತಾಯವಾಗುತ್ತದೆ.
- ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ
- ಆಧುನಿಕ ಫೀಚರ್ಸ್ ಮೂಲಕ ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ರೀಚ್ ಲಕ್ ನೀಡುತ್ತದೆ.
- ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ.
ಅಂತಿಮ ತೀರ್ಮಾನ:
ಒಟ್ಟಿನಲ್ಲಿ ಹೇಳುವುದಾದರೆ, ಇಂದಿನ ಇಂಧನ ದರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಮಯದಲ್ಲಿ ಬಜಾಜ್ ಚೇತಕ್ C3503 ಎಲೆಕ್ಟ್ರಿಕ್ ಸ್ಕೂಟರ್ ಒಂದು ಉತ್ತಮ ಮತ್ತು ಆರ್ಥಿಕ ಆಯ್ಕೆಯಾಗಿದೆ. ನಗರ ಪ್ರಯಾಣ, ಕಚೇರಿ ಕೆಲಸ, ಕಾಲೇಜು ಹೋಗುವುದು ಮತ್ತು ದಿನನಿತ್ಯದ ಚಿಕ್ಕ-ಚಿಕ್ಕ ಪ್ರಯಾಣಗಳಿಗೆ ಇದು ಅತ್ಯಂತ ಅನುಕೂಲಕರವಾಗಿದೆ.
ಪೆಟ್ರೋಲ್ ವೆಚ್ಚವನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಪರಿಸರ ಸ್ನೇಹಿ ಮತ್ತು ಆಧುನಿಕ ಪ್ರಯಾಣದ ಅನುಭವವನ್ನು ಪಡೆಯಲು ಬಯಸುವವರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ನಿಜವಾಗಿಯೂ ಒಂದು ಉತ್ತಮ ಆಯ್ಕೆಯಾಗಿದೆ. ಇಂದಿನ ಕಾಲದಲ್ಲಿ ಸ್ಟೈಲ್, ಸೇವಿಂಗ್ ಮತ್ತು ಸ್ಮಾರ್ಟ್ ಟೆಕ್ನಾಲಜಿ ಬೇಕಾದರೆ, ಇದು ಸರಿಯಾದ ಆಯ್ಕೆ ಎಂದು ಹೇಳಬಹುದು.